For Quick Alerts
ALLOW NOTIFICATIONS  
For Daily Alerts

ನಿಮ್ಮ ಸಂಗಾತಿಗೆ ಯಾವ ಗಿಫ್ಟ್ ನೀಡಿದರೆ ಉತ್ತಮ ಗೊತ್ತೆ?

ಪ್ರೇಮಿಗಳು, ದಂಪತಿಗಳು ತಮ್ಮ ಸಂಗಾತಿಗೆ ವಿವಿಧ ಗಿಫ್ಟ್ ಗಳನ್ನು ಕೊಡುವುದು ಸರ್ವೇಸಾಮಾನ್ಯ. ಒಂದಿಲ್ಲೊಂದು ಸಂದರ್ಭದಲ್ಲಿ ನಿಮ್ಮ ಪ್ರಿಯತಮ/ಪ್ರಿಯತಮೆಗೆ ಗಿಫ್ಟ್ ಕೊಟ್ಟಿರುತ್ತಿರಿ ಅಲ್ಲವೆ?

|

ಪ್ರೇಮಿಗಳು, ದಂಪತಿಗಳು ತಮ್ಮ ಸಂಗಾತಿಗೆ ವಿವಿಧ ಗಿಫ್ಟ್ ಗಳನ್ನು ಕೊಡುವುದು ಸರ್ವೇಸಾಮಾನ್ಯ. ಒಂದಿಲ್ಲೊಂದು ಸಂದರ್ಭದಲ್ಲಿ ನಿಮ್ಮ ಪ್ರಿಯತಮ/ಪ್ರಿಯತಮೆಗೆ ಗಿಫ್ಟ್ ಕೊಟ್ಟಿರುತ್ತಿರಿ ಅಲ್ಲವೆ? ಹಬ್ಬ ಹರಿದಿನ, ಹುಟ್ಟಿದ ಹಬ್ಬ, ಪ್ರೇಮಿಗಳ ದಿನ ಹೀಗೆ ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ನೀಡಿ ತಮ್ಮವರಿಗೆ ಸರ್ಪ್ರೈಸ್ ನೀಡಲು ಬಯಸುತ್ತಾರೆ!

ಸಂಗಾತಿಯನ್ನು ಸದಾ ಸಂತಸದಿಂದ ಇಡಲು ಯಾವುದಾದರೊಂದು ಅಮೂಲ್ಯ ಗಿಫ್ಟ್ ನೀಡಬೇಕಾಗುತ್ತದೆ. ಕೆಲವೊಮ್ಮೆ ನೀವು ನೀಡುವ ಉಡುಗೊರೆಗಳು ಉಪಯೋಗಕ್ಕೆ ಬಾರದಂತವು ಆಗಬಹುದು. ಇದು ನಿಮ್ಮ ಸಂಗಾತಿಯ ಮನಸ್ತಾಪಕ್ಕೂ ಕಾರಣವಾಗಬಹುದು.
ಏನೇನೋ ಗಿಫ್ಟ್ ಗಳನ್ನು ನೀಡುವುದರ ಬದಲಾಗಿ ಉತ್ತಮ ರಿಟರ್ನ್ಸ್ ನೀಡಬಲ್ಲ ಹಣಕಾಸು ಯೋಜನೆಯನ್ನು ಸಂಗಾತಿಗೆ ಕೊಡುಗೆಯಾಗಿ ನೀಡಿದರೆ ಮುಂದಿನ ಭವಿಷ್ಯತ್ತು ಉತ್ತಮವಾಗಿರುತ್ತದೆ ಅಲ್ಲವೆ? ಇದು ನಿಮ್ಮನ್ನು ಆರ್ಥಿಕವಾಗಿ ಸಬಲಗೊಳಿಸುವುದರೊಂದಿಗೆ ಬಾಂಧವ್ಯವನ್ನು ಮತ್ತಷ್ಟು ವೃದ್ಧಿ ಮಾಡುವುದರಲ್ಲಿ ಸಂಶಯವಿಲ್ಲ.
ಹಾಗಿದ್ದರೆ ನೀವು ಯಾವ ಉಡುಗೊರೆಗಳನ್ನು ನೀಡಬಹುದು ಎಂಬುದನ್ನು ನೋಡೋಣ ಬನ್ನಿ.. ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?

ಎಫ್ಡಿ ಖಾತೆ ತೆರೆಯಿರಿ

ಎಫ್ಡಿ ಖಾತೆ ತೆರೆಯಿರಿ

ನಿಮ್ಮ ಸಂಗಾತಿ ಉಡುಗೊರೆ ನೀಡಲು ಬಯಸಿದಲ್ಲಿ ಸುರಕ್ಷಿತ ಮತ್ತು ಅಗತ್ಯ ಕಾಲಕ್ಕೆ ನೆರವಾಗುವಂಥ ಫಿಕ್ಸೆಡ್ ಡಿಪಾಸಿಟ್ ಖಾತೆಯನ್ನು ಸಂಗಾತಿ ಹೆಸರಿನಲ್ಲಿ ತೆರೆಯುವುದು ಬೆಸ್ಟ್. ಇದು ತೆರಿಗೆ ವಿನಾಯಿತಿಯನ್ನು ನೀಡುತ್ತದೆ.
ಬ್ಯಾಂಕು ಸ್ಥಿರ ಠೇವಣಿಗಳು ಹೆಚ್ಚು ಸುರಕ್ಷಿತ ಮತ್ತು ಸುಭದ್ರವಾಗಿರುತ್ತವೆ. ಹೂಡಿಕೆ ಮಾಡಿದ ಹಣ ಹಿಂಪಡೆಯುವಲ್ಲಿ ಯಾವುದೇ ತೊಂದರೆಗಳಿರುವುದಿಲ್ಲ. ಆದರೆ ಕಂಪನಿ ಎಫ್ಡಿಗಳ ವಿಷಯದಲ್ಲಿ ಜಾಗೂರಕರಾಗಿರರಬೇಕು. ಕಂಪನಿಗಳು ದಿವಾಳಿತನಕ್ಕೆ ಅಥವಾ ನಷ್ಟಕ್ಕೆ ಒಳಗಾದರೆ ಹೂಡಿಕೆ ಮಾಡಿದ ಹಣ ಸಿಗುವ ನಂಬಿಕೆ ಇರುವುದಿಲ್ಲ. ಕಂಪನಿಗಳು ಕೊಡುವ ಆಫರ್ ಗಳು ಆಕರ್ಷಕವಾಗಿದ್ದರೂ ಎಚ್ಚರಿಕೆಯಿಂದ ಇರುವುದು ಉತ್ತಮ.

ಪಿಪಿಎಫ್ ಖಾತೆ

ಪಿಪಿಎಫ್ ಖಾತೆ

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಯೂ ಸಹ ನಿಮಗೆ ಹಣಕಾಸು ಭದ್ರತೆ ಒದಗಿಸಬಲ್ಲದು. ನಿವೃತ್ತಿ ಕಾಲಕ್ಕೆ ಈ ಹಣ ನೆರವಾಗುವುದರಲ್ಲಿ ಅನಮಾನವಿಲ್ಲ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿದರವನ್ನು ಪರಿಷ್ಕರಿಸುತ್ತದೆ. ಪಿಪಿಎಫ್ ಬಡ್ಡಿದರವು ಬ್ಯಾಂಕುಗಳ ಬಡ್ಡಿದರಗಳಿಗಿಂತ ಹೆಚ್ಚಿರುವುದು ಖಚಿತವಾಗಿದೆ. ಬ್ಯಾಂಕುಗಳು ಪ್ರಸ್ತುತ ಶೇ. 6-8ರ ಮಿತಿಯಲ್ಲಿ ಬಡ್ಡಿದರ ನೀಡುತ್ತಿವೆ.

ಮ್ಯೂಚುವಲ್ ಫಂಡ್

ಮ್ಯೂಚುವಲ್ ಫಂಡ್

ನಿಮ್ಮ ಸಂಗಾತಿಯ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ನ ಉತ್ತಮ ವಿಧಾನದಲ್ಲಿ ಹಣ ಹೂಡುವುದು ಉತ್ತಮ ಉಪಾಯ. ಮಾರುಕಟ್ಟೆಯ ಆಳ-ಅಗಲಗಳನ್ನು ಅರಿತು ಮುಂದುವರಿಯಬೇಕು. ನಿರ್ದಿಷ್ಟ ಫಂಡ್ ಈ ಮುನ್ನ ಯಾವ ರೀತಿ ಪ್ರದರ್ಶನ ನೀಡಿದೆ ಎಂಬುದನ್ನು ಅಧ್ಯಯನ ಮಾಡಬೇಕಾದುದು ಅತಿ ಅಗತ್ಯ. ಯಾವುದೇ ಮ್ಯೂಚುವಲ್ ಫಂಡ್ ಅನ್ನು ಅಳೆಯಬೇಕಾದರೆ ಹಿಂದಿನ ಪ್ರದರ್ಶನವೇ ಪ್ರಮುಖ ಮಾನದಂಡವಾಗಿರುತ್ತದೆ. ದಂಪತಿಗಳಿಗೆ ಹಾಗು ಮದುವೆ ಆಗುವವರಿಗಾಗಿ ಈ ಲೇಖನ. ತಪ್ಪದೇ ಓದಿ.

ಚಿನ್ನದ ಮೇಲೆ ಹೂಡಿಕೆ

ಚಿನ್ನದ ಮೇಲೆ ಹೂಡಿಕೆ

ಭಾರತೀಯರು ಚಿನ್ನಾಭರಣಪ್ರಿಯರು. ಚಿನ್ನದ ಬಗ್ಗೆ ಮೊದಲಿನಿಂದಲೂ ವ್ಯಾಮೋಹವಿದೆ. ಚಿನ್ನ ಖರೀದಿಯಲ್ಲೂ ಅನೇಕ ವಿಧಗಳಿವೆ. ನೀವು ಚಿನ್ನದ ನಾಣ್ಯಗಳು, ಆಭರಣ ಯಾವುದನ್ನೇ ಖರೀದಿ ಮಾಡಿದರೂ ಸಂಗಾತಿಯನ್ನು ಸಂತೋಷವಾಗಿಡುವುದು ಮುಖ್ಯ.

ಗಿಫ್ಟ್ ಕಾರ್ಡ್

ಗಿಫ್ಟ್ ಕಾರ್ಡ್

30 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು30 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು

Read more about: money savings investments
English summary

Best gift ideas for Your partner?

Want to know more about the unusual but practical gifting ideas, read on. Here are a few options that could help you financially secure and this could be the day to start investing on these plans.
Story first published: Saturday, June 8, 2019, 10:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X