ದಂಪತಿಗಳಿಗೆ ಹಾಗು ಮದುವೆ ಆಗುವವರಿಗಾಗಿ ಈ ಲೇಖನ. ತಪ್ಪದೇ ಓದಿ..

Posted By: Siddu
Subscribe to GoodReturns Kannada

ಹಣಕಾಸಿನ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಲೋಚನೆಗಳಿರುತ್ತೆ. ಕೆಲವೊಂದು ಸಂದರ್ಭದಲ್ಲಿ ಈ ಹಣಕಾಸು ಲೆಕ್ಕಾಚಾರವೇ ಗಂಡ ಹೆಂಡತಿಯ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿ ಬಿಡುತ್ತದೆ. ಇದಕ್ಕೆ ಕಾರಣ ಇಬ್ಬರ ನಡುವಿನ ವ್ಯವಹಾರಿಕ ಮಾತುಕತೆಯಲ್ಲಿನ ವ್ಯತ್ಯಾಸ ಅಥವಾ ಹಣಕಾಸು ವಿಚಾರದಲ್ಲಿ ಯಾವುದಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಅನ್ನುವ ವಿಚಾರದಲ್ಲಿ ಇಬ್ಬರ ಆಲೋಚನೆಯೂ ಭಿನ್ನವಾಗಿರುವುದು. ಆದರೆ ಕೆಲವೊಂದು ಕುಟುಂಬದಲ್ಲಿ ಈ ಹಣಕಾಸು ವಿಚಾರವೇ ಡೈವೋರ್ಸ್ ಹಂತಕ್ಕೂ ತಲುಪುವ ಸಾಧ್ಯತೆಗಳಿರುತ್ತದೆ.

ಈ ಭಿನ್ನಾಭಿಪ್ರಾಯವನ್ನು ಸುಲಭದಲ್ಲೆ ಗಂಡ ಹೆಂಡತಿಯೇ ಕುಳಿತು ಬಗೆಹರಿಸಿಕೊಳ್ಳಬಹುದು. ಇಬ್ಬರೂ ಹಣಕಾಸು ವಿಚಾರವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಇಬ್ಬರೂ ಒಟ್ಟಿಗೆ ಕೆಲಸ ನಿರ್ವಹಿಸುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು.

ದಂಪತಿಗಳಿಗಾಗಿ ಹಾಗು ಮದುವೆ ಆಗೊರಿಗೆ ಇಲ್ಲಿ ಕೆಲವು ಸಿಂಪಲ್ ಹಣಕಾಸು ಸಲಹೆಗಳು ನೀಡಲಾಗಿದೆ. ಮುಂದೆ ಓದಿ..

ಮದುವೆ ಆಗದವರಿಗೆ

1. ಇಬ್ಬರ ನಡುವೆ ಸಾಮ್ಯತೆ ಮುಖ್ಯ

ಹೆಚ್ಚಿನವರು ಮದುವೆ ಸಂದರ್ಭದಲ್ಲಿ ಜಾತಕ ಹೊಂದಾಣಿಕೆಯಾಗುತ್ತಾ ಎಂದು ಪರಿಶೀಲಿಸುತ್ತಾರೆಯೇ ಹೊರತು ಬದುಕಿಗೆ ಮುಖ್ಯವಾಗಿ ಬೇಕಾಗುವ ಭವಿಷ್ಯದ ಕನಸುಗಳು, ಗುರಿ, ಪ್ರಾಮುಖ್ಯತೆಗಳು, ಆಲೋಚನೆಗಳು ಇಬ್ಬರಲ್ಲೂ ಹೊಂದಾಣಿಕೆಯಾಗುತ್ತಾ ಎಂದು ಪರಿಶೀಲಿಸುವುದೇ ಇಲ್ಲ. ಆದರೆ ನೆನಪಿರಲಿ ನಿಮ್ಮ ಜೀವನದ ಪ್ರತಿ ಹಂತದಲ್ಲೂ ದುಡ್ಡು ನಿಮಗೆ ಬೇಕೇ ಬೇಕಾಗುತ್ತದೆ. ಹಾಗಾಗಿ ಹಣಕಾಸು ವಿಚಾರದಲ್ಲಿ ನಿಮ್ಮಿಬ್ಬರ ನಡುವೆ ಸಾಮ್ಯತೆ ಇದೆ ಅನ್ನುವುದನ್ನು ಮದುವೆಗೂ ಮೊದಲು ಪರಿಶೀಲಿಸಿಕೊಳ್ಳುವುದನ್ನು ಮರೆಯಬೇಡಿ. ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?

2. ಖರ್ಚು ವೆಚ್ಚ ನಿರ್ವಹಣೆ ತಿಳಿಯಿರಿ

ಸಾಧ್ಯವಾದರೆ ನಿಮ್ಮ ಸಂಗಾತಿಯ ಖರ್ಚು ವೆಚ್ಚಗಳ ಅಭ್ಯಾಸ ಮತ್ತು ಅದರ ನಿರ್ವಹಣೆ ಹೇಗಿದೆ ಅನ್ನುವುದನ್ನು ಮೊದಲೇ ಪರೀಕ್ಷಿಸಿಕೊಳ್ಳಿ.  ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ? ಈ 10 ಸಂಗತಿ ಮರಿಬೇಡಿ..

3. ಮದುವೆಗೆ ಮುನ್ನ ಉಳಿತಾಯ

ಮದುವೆಗೂ ಮುನ್ನವೇ ಆದಷ್ಟು ಹಣವನ್ನು ಉಳಿತಾಯ ಮಾಡುವುದನ್ನು ಕಲಿತುಕೊಳ್ಳಿ. ಯಾಕಂದರೆ ಮದುವೆ ಅನ್ನುವುದು ಜೀವನದ ಒಂದು ಟರ್ನಿಂಗ್ ಪಾಯಿಂಟ್. ಮದುವೆಯ ನಂತರ ಮತ್ತು ಮದುವೆಯ ಸಂದರ್ಭದಲ್ಲಿ ನಿಮಗೆ ಯಾವ ರೀತಿಯ ಖರ್ಚುಗಳು ಬರಬಹುದೆಂದು ಊಹಿಸಲು ಸಾಧ್ಯವಿಲ್ಲ.

4. ಸಾಲ ಮಾಡದೆ ಮದುವೆ ಆಗಿ

ನೀವೇ ನಿಮ್ಮ ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೀರಾದರೆ ಖಂಡಿತ ದುಬಾರಿ ವೆಚ್ಚದ ಮದುವೆಯನ್ನು ಮಾಡಿಕೊಳ್ಳಬೇಡಿ. ನಿಮ್ಮ ಬಜೆಟ್ ಗೆ ಮೀರಿದ ಮದುವೆ ಬೇಡ. ಸಾಧ್ಯವಾದಷ್ಟು ಸಾಲ ಮಾಡದೆ ಮದುವೆ ಮಾಡಿಕೊಳ್ಳಲು ಪ್ರಯತ್ನಿಸಿ. ಸಿಂಪಲ್ ಮದುವೆಯಿಂದ ಖಂಡಿತ ನಷ್ಟವಿಲ್ಲ.

ದಂಪತಿಗಳಿಗೆ ಸಲಹೆ

1. ಉಡುಗೊರೆ ಮೊತ್ತ
ನಿಮಗೆ ಮದುವೆಯಲ್ಲಿ ಬಂದ ಉಡುಗೊರೆ ಮೊತ್ತವನ್ನು ಹನಿಮೂನ್ ಹಾಗೇ ಹೀಗೆ ಖರ್ಚು ಮಾಡಿ ವೆಚ್ಚ ಮಾಡಬೇಡಿ. ಬದಲಾಗಿ ಮದುವೆಯ ಹಣ ಎಂದು ಅದನ್ನು ಉಳಿತಾಯ ಮಾಡಿಕೊಳ್ಳಿ. ಅದನ್ನು ಇಬ್ಬರ ಹೆಸರಿನಲ್ಲಿ ಜಾಯಿಂಟ್ ಅಕೌಂಟ್ ಮಾಡಿ ಫಿಕ್ಸ್ಡ್ ಡೆಪಾಸಿಟ್ ಮಾಡಬಹುದು. ಇಲ್ಲವೇ ಮನೆ, ಮಕ್ಕಳು ಹೀಗೆ ಇತರೆ ಯಾವುದೋ ಕಾರಣಕ್ಕಾಗಿ ಭವಿಷ್ಯದಲ್ಲಿ ಉಪಯೋಗಿಸಿಕೊಳ್ಳಲು ಅನುಕೂಲವಾಗುವಂತೆ ಬಳಸಿ.

2. ಯೋಜನೆ ರೂಪಿಸಿ

ಸದ್ಯದ ಬಂಡವಾಳದ ಬಗ್ಗೆ ಇಬ್ಬರೂ ಕುಳಿತು ಚರ್ಚಿಸಿ. ನಿಮ್ಮ ಗುರಿ ತಲುಪಲು ಇನ್ನೇನು ಮಾಡಬಹುದು ಅನ್ನುವುದನ್ನು ಆಲೋಚಿಸಿ. ಇಬ್ಬರೂ ನಿಮ್ಮ ಬಂಡವಾಳ ಹಾಕುವ ಜವಾಬ್ದಾರಿಯನ್ನು ಹಂಚಿಕೊಳ್ಳಿ. ಉದಾಹರಣೆಗೆ ಬಿಲ್ ಪಾವತಿಸುವುದು, ಖರ್ಚುಗಳನ್ನು ಲೆಕ್ಕ ಇಡುವುದು, ಬ್ಯಾಂಕಿನ ವ್ಯವಹಾರವನ್ನು ನೋಡಿಕೊಳ್ಳುವುದು ಇತ್ಯಾದಿ.

ಮನೆ, ಮಡದಿ, ಮಕ್ಕಳಿಗಾಗಿ ವ್ಯವಹಾರಿಕ ಸಲಹೆ

1. ಸಂಗಾತಿ, ಮಕ್ಕಳ ಜೊತೆ ಚರ್ಚಿಸಿ

ಸಂಗಾತಿ ಹಾಗು ಮಕ್ಕಳ ಜೊತೆ ಚರ್ಚಿಸಿ ಸರಿಯಾದ ಬಜೆಟ್ ತಯಾರಿಸಿ. ಬಜೆಟ್ ಮೀರಿ ಯಾವತ್ತೂ ಖರ್ಚು ಮಾಡಬೇಡಿ. ಯಾವುದೇ ಹಣಕಾಸು ವ್ಯವಹಾರ ನಡೆಸುವಾಗ ಸಂಗಾತಿಯ ಜೊತೆ ಚರ್ಚಿಸಿ.

2. ಯಾರು ಉತ್ತಮರು

ನಿಮ್ಮ ಸಂಗಾತಿ ಎಲ್ಲಿ ಉತ್ಕೃಷ್ಟರು ಅನ್ನುವುದು ಪರಿಶೀಲಿಸಿ ನಡೆಯಿರಿ. ಉದಾಹರಣೆಗೆ ಅವರು ಯಾವುದೋ ಅಂಗಡಿಯಲ್ಲಿ ಖರೀದಿಸುವಾಗ ಬಾರ್ಗೈನ್ ಮಾಡಲು ಉತ್ತಮರಾಗಿದ್ದಲ್ಲಿ ಅಲ್ಲಿ ಅವರೇ ಮುಂದೆ ನಿಲ್ಲಲಿ. ಇನ್ವೆಸ್ಟ್ಮೆಂಟ್ ವಿಚಾರದಲ್ಲಿ ಯಾರು ಬೆಸ್ಟ್ ಅನ್ನುವುದನ್ನು ನೀವು ನಿರ್ಧರಿಸಿ ಮುನ್ನಡೆಯಿರಿ.

3. ಚರ್ಚೆ ಮತ್ತು ಪರಿಹಾರ

ನಿಮ್ಮ ಗುರಿ ಮತ್ತು ಆದ್ಯತೆಗಳ ಪಟ್ಟಿಯನ್ನು ತಯಾರಿಸಿ ಅದರ ಸಾಧನೆಗಾಗಿ ಶ್ರಮಿಸಿ. ಒಂದು ವೇಳೆ ಈ ವಿಚಾರದಲ್ಲಿ ನಿಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಜಗಳವಾಡಬೇಡಿ. ಬದಲಾಗಿ ಅದರ ಪರಿಹಾರಕ್ಕಾಗಿ ಇಬ್ಬರೂ ಚರ್ಚಿಸಿ.

4. ಜೀವ ವಿಮೆ

ಒಂದು ವೇಳೆ ನೀವು ಮಾತ್ರ ದುಡಿಯುವವರಾಗಿದ್ದು, ನಿಮ್ಮ ಹೆಂಡತಿ ಮನೆಯಲ್ಲೇ ಇದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗುತ್ತಾರಾದರೆ ಖಂಡಿತ ನೀವು ಸಾಧ್ಯವಾದಷ್ಟು ಲೈಫ್ ಇನ್ಸುರೆನ್ಸ್ ಮಾಡುವುದನ್ನು ಮರೆಯಬೇಡಿ.

5. ತುರ್ತು ನಿಧಿ

ಪ್ರತಿ ತಿಂಗಳು ನಿಮ್ಮ ಸಂಬಳದ ಸ್ವಲ್ಪ ಹಣವನ್ನು ಎರ್ಮಜೆನ್ಸಿ ಫಂಡ್ ಗಾಗಿ ಇನ್ವೆಸ್ಟ್ ಮಾಡುವುದನ್ನು ಮರೆಯಬೇಡಿ. ಕೆಲವೊಂದು ಅಗತ್ಯತೆ ಯಾವಾಗ ಹೇಗೆ ಬರುತ್ತೆ ಹೇಳಲಸಾಧ್ಯ. ಅದಕ್ಕೆ ನೀವು ತಯಾರಾಗಿರಬೇಕಾಗುತ್ತದೆ.

6. ಫ್ಯಾಮಿಲಿ ಹೆಲ್ತ್ ಇನ್ಸುರೆನ್ಸ್

ನಿಮ್ಮ ಆರೋಗ್ಯ ಸರಿ ಇದ್ದರೆ ಎಲ್ಲವೂ ಸರಿ ಇದ್ದಂತೆ. ಹಾಗಾಗಿ ಫ್ಯಾಮಿಲಿ ಹೆಲ್ತ್ ಇನ್ಸುರೆನ್ಸ್ ಮಾಡುವುದನ್ನು ಮರೆಯಬೇಡಿ. ಒಂದು ವೇಳೆ ಆರೋಗ್ಯ ಸಮಸ್ಯೆ ಕಾಡಿದಾಗ ಹಣದ ಸಮಸ್ಯೆಯಿಂದ ಅಲೆದಾಡುವುದು ಇದರಿಂದ ತಪ್ಪುತ್ತದೆ.

7. ಮುಕ್ತ ಚರ್ಚೆ

ಯಾವುದೇ ವಿಚಾರವನ್ನು ನಿಮ್ಮ ಸಂಗಾತಿಯೊಡನೆ ಮುಚ್ಚಿಡಬೇಡಿ. ಹಣಕಾಸು ಸಮಸ್ಯೆಯನ್ನು ನಿಮ್ಮಲ್ಲೇ ಗುಟ್ಟು ಮಾಡಿಕೊಂಡಿರುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಅಂತಹ ಸಮಸ್ಯೆ ಇದ್ದಲ್ಲಿ ನಿಮ್ಮ ಸಂಗಾತಿಯೊಡನೆ ಚರ್ಚಿಸಿ, ಅದರ ಪರಿಹಾರಕ್ಕಾಗಿ ಆಕೆ ಅಥವಾ ಆತ ಏನು ಮಾಡಬಲ್ಲರು ಅನ್ನುವುದರ ಬಗ್ಗೆ ಇಬ್ಬರೂ ಆಲೋಚಿಸಿ.

8. ಆಸ್ತಿ ವಿವರ ಇಬ್ಬರಿಗೂ ತಿಳಿದಿರಲಿ

ನಿಮ್ಮದಾಗಿರುವ ಆಸ್ತಿ ಲೆಕ್ಕಾದಾರದ ವಿವರ ನಿಮ್ಮ ಸಂಗಾತಿಗೂ ತಿಳಿದಿರಲಿ. ಎಲ್ಲೆಲ್ಲಿ ಯಾವ್ಯಾವ ವಸ್ತುಗಳು ನಿಮ್ಮದಾಗಿವೆ ಅನ್ನುವ ವಿವರ ಇಬ್ಬರಿಗೂ ಇರಲಿ.

9. ಭವಿಷ್ಯತ್ತಿನ ಯೋಜನೆ

ಪ್ರತಿ ತಿಂಗಳು ಇಲ್ಲವೆ ಆರು ತಿಂಗಳಿಗೊಮ್ಮೆ ನಿಮ್ಮ ಗುರಿ ತಲುಪಲು ಇನ್ನೇನು ಬೇಕು, ಎಷ್ಟು ತಲುಪಿದ್ದೀರಿ, ಇನ್ನೆಷ್ಟು ಬಾಕಿ ಇದೆ ಇದೇಲ್ಲದರ ಲೆಕ್ಕಾಚಾರ ಹಾಕಿ. ಅದಕ್ಕಾಗಿ ಮುಂದೇನು ಮಾಡಬೇಕು ಅನ್ನುವುದರ ಬಗ್ಗೆ ಇಬ್ಬರಲ್ಲೂ ಸರಿಯಾದ ಪ್ಲಾನಿಂಗ್ ಇರಲಿ.

10. ವ್ಯವಹಾರಿಕೆ ಪ್ರಾಧ್ಯಾನ್ಯತೆ

ನೀವು ನಿಮ್ಮ ಸಂಗಾತಿಯೊಡನೆ ಉತ್ತಮ ವ್ಯವಹಾರಿಕ ಸಂಬಂಧ ಹೊಂದಿರಬೇಕು. ಇಬ್ಬರೂ ಕೂಡಲೇ ವ್ಯವಹಾರಿಕ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರಬಹುದು. ಇನ್ನೊಬ್ಬರು ಆಲೋಚಿಸಿ, ತುಂಬಾ ಸಮಯ ತೆಗೆದುಕೊಳ್ಳಬಹುದು. ಹಾಗಂತ ನಿಧಾನವಾಗಿರುವವರು ದಡ್ಡರೆಂದಲ್ಲ. ಅವರ ಆಲೋಚನೆಗಳಿಗೆ ನಿಮ್ಮ ಪ್ರಾಧ್ಯಾನ್ಯತೆ ಇರಲಿ.

11. ಸಂಗಾತಿಯ ಅಗತ್ಯ

ನಿಮ್ಮ ಸಂಗಾತಿ ಅಗತ್ಯಗಳನ್ನು ಕಡೆಗಣಿಸಬೇಡಿ. ಇದು ನಿಮ್ಮ ಸಂಬಂಧದಲ್ಲಿ ಬಹುಮುಖ್ಯವಾಗಿ ಇರಲೇಬೇಕಾಗಿರುವುದು. ಅವರ ಅಗತ್ಯವನ್ನು ಬಹಳ ಪ್ರಾಮುಖ್ಯತೆಯಿಂದ ನೋಡಿಕೊಳ್ಳಿ.

12. ತಜ್ಞರ ಸಲಹೆ ಪಡೆಯಿರಿ

ಒಂದು ವೇಳೆ ನೀವು ನಿಮ್ಮ ಹಣಕಾಸು ಲೆಕ್ಕಾಚಾರದಲ್ಲಿ ಬಹಳ ವೀಕ್ ಆಗಿದ್ದರೆ ತಿಂಗಳಿಗೊಮ್ಮೆ ಬರುವ ಹಣಕಾಸು ಪತ್ರಿಕೆಗಳ ಮೊರೆಹೋಗಿ. ಇಲ್ಲವೇ ಶುಲ್ಕ ಪಡೆದು ಸಲಹೆ ನೀಡುವ ಹಣಕಾಸು ತಜ್ಞರಿಂದ ಅವರ ಸಲಹೆ ಪಡೆಯುವುದು ಸೂಕ್ತ.

English summary

Financial Planning tips for Couples and Unmarried's

Every individual has own principle towards finance. Sometime these financial matters become biggest source of conflict betn married couples.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns