For Quick Alerts
ALLOW NOTIFICATIONS  
For Daily Alerts

ಹಣ ಮಾಡುವ ಅವಕಾಶ! ನಿಮ್ಮ ಆಯ್ಕೆ ಹೀಗಿರಲಿ..

|

ಭಾರತವು 73ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂಭ್ರಮದ ಸಮಯದಲ್ಲಿ ಹಣ ಮಾಡುವ ಅವಕಾಶಗಳ ಬಗ್ಗೆ ಉಪಯುಕ್ತವಾದ ವಿಷಯಗಳನ್ನು ತಿಳಿಸುತ್ತಿದ್ದೇವೆ. ಜಾಗತಿಕವಾಗಿ ಬೃಹತ್ ಆರ್ಥಿಕತೆಯಾಗಿ ಬೆಳೆಯುತ್ತಿರುವ ಭಾರತದಲ್ಲಿ ಹೂಡಿಕೆ ಮಾಡಲು ಸಾಕಷ್ಟು ವಿಭಿನ್ನ ಅವಕಾಶಗಳು ಹಾಗೂ ಯೋಜನೆಗಳು ಲಭ್ಯವಿವೆ. ಆದರೆ ಅವುಗಳಲ್ಲಿ ಯಾವ ರೀತಿ ಸೂಕ್ತವಾಗಿ ಹೂಡಿಕೆ ಮಾಡಬೇಕು ಹಾಗೂ ಯಾವ ಯೋಜನೆ ನಿಮಗೆ ಸರಿಹೊಂದುತ್ತದೆ ಎಂಬ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ ನೋಡಿ.

ಹೂಡಿಕೆ ವೈವಿಧ್ಯತೆಗೆ ಪ್ರಾಮುಖ್ಯತೆ ನೀಡಿ
 

ಹೂಡಿಕೆ ವೈವಿಧ್ಯತೆಗೆ ಪ್ರಾಮುಖ್ಯತೆ ನೀಡಿ

ಎಲ್ಲ ಮೊತ್ತವನ್ನು ಯಾವುದೋ ಒಂದೇ ಯೋಜನೆಯಲ್ಲಿ ಹೂಡಿಕೆ ಮಾಡದೆ ಹಲವಾರು ವಿಭಿನ್ನ ರೀತಿಗಳಲ್ಲಿ ಹೂಡಿಕೆ ಮಾಡಿ ಎಂಬುದು ಹಣಕಾಸು ತಜ್ಞರ ಪ್ರಥಮ ಹಾಗೂ ಅತಿ ಪ್ರಮುಖ ಸಲಹೆಯಾಗಿದೆ. ಇದಕ್ಕಾಗಿ ಇಕ್ವಿಟಿ ಹಾಗೂ ಡೆಬ್ಟ್ ಎರಡೂ ರೀತಿಯ ಯೋಜನೆಗಳಲ್ಲಿ ಸಮರ್ಪಕವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಇಕ್ವಿಟಿಗಳಿಗಾಗಿ ಜನ ನೇರವಾಗಿ ಶೇರು ಮಾರುಕಟ್ಟೆಗೆ ಪ್ರವೇಶ ಪಡೆದು ಶೇರುಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಒಂದು ವೇಳೆ ಶೇರು ಮಾರುಕಟ್ಟೆಯ ಕಾರ್ಯವಿಧಾನ ಹಾಗೂ ತಂತ್ರಗಳ ಬಗ್ಗೆ ಸಾಕಷ್ಟು ನಿಪುಣತೆ ಇರದಿದ್ದರೆ ಅಂಥವರು ಇಕ್ವಿಟಿ ಮ್ಯೂಚುವಲ್ ಫಂಡ್ ಅಥವಾ ಇಎಲ್ಎಸ್ಎಸ್ ಗಳ ಮೂಲಕ ಹೂಡಿಕೆ ಮಾಡಬಹುದು. ಆದರೆ ಈ ವಿಧಾನಗಳು ದೀರ್ಘಾವಧಿಯ ಹೂಡಿಕೆ ಯೋಜನೆಗಳು ಎಂಬುದು ನೆನಪಿರಲಿ. ಇವೆಲ್ಲವುಗಳ ಜೊತೆಗೆ ನಿಶ್ಚಿತ ಹಾಗೂ ಖಾತರಿದಾಯಕ ಆದಾಯ ನೀಡುವ ಪಿಪಿಎಫ್, ವಿಮೆ, ಎನ್ಪಿಎಸ್ ಮುಂತಾದ ಯೋಜನೆಗಳಲ್ಲಿ ಸಹ ಕೆಲ ಮೊತ್ತವನ್ನು ತೊಡಗಿಸಿ ಹೂಡಿಕೆಯಲ್ಲಿ ವೈವಿಧ್ಯತೆಯನ್ನು ಕಾಯ್ದುಕೊಳ್ಳಬೇಕೆಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ಮ್ಯೂಚುವಲ್ ಫಂಡ್ ಬಗ್ಗೆ ತಿಳಿಯಿರಿ

ಮ್ಯೂಚುವಲ್ ಫಂಡ್ ಬಗ್ಗೆ ತಿಳಿಯಿರಿ

ಹೂಡಿಕೆ ಮಾಡುವುದು ಹಾಗೂ ಅದರಿಂದ ಯಾವ ರೀತಿ ಪ್ರತಿಫಲಗಳನ್ನು ಪಡೆಯಬಹುದು ಎಂಬ ಬಗ್ಗೆ ಗ್ರೋ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಓಓ ಹರ್ಷ ಜೈನ್ ಹೇಳುವುದು ಹೀಗೆ-

ಇಡೀ ಜೀವನ ನಿಮ್ಮ ಮುಂದೆ ಇದೆ ಎಂದುಕೊಂಡಾಗ, ಪ್ರತಿ ತಿಂಗಳು ಉತ್ತಮ ಸಂಬಳ ಕೈಗೆ ಸಿಗಬೇಕು ಹಾಗೂ ಅದನ್ನು ಮನಸೋ ಇಚ್ಛೆ ಖರ್ಚು ಮಾಡಬೇಕು ಎಂಬುದು ಬಹುತೇಕರ ಮನದಲ್ಲಿ ಸುಳಿದು ಹೋಗುವ ಸಹಜ ಭಾವನೆಯಾಗಿದೆ. ಆದರೆ ಇದಷ್ಟೇ ಜೀವನವಲ್ಲ. ಹಾಗೆ ಕಷ್ಟಪಟ್ಟು ದುಡಿದ ಹಣದ ಪ್ರಮುಖ ಭಾಗವನ್ನು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸಹ ಅತಿ ಪ್ರಮುಖವಾಗಿದೆ. ಇದಕ್ಕಾಗಿ ಡೆಬ್ಟ್ ಹಾಗೂ ಇಕ್ವಿಟಿ ಎರಡರ ಮಿಶ್ರಣದಲ್ಲಿ ಹೂಡಿಕೆ ಮಾಡುವುದು ಸೂಕ್ತ. ಆದರೆ ಕಡಿಮೆ ಅಪಾಯದ ಹೂಡಿಕೆ ಬಯಸುವವರಿಗಾಗಿ ಇಕ್ವಿಟಿ ಆಧರಿತ ಮ್ಯೂಚುವಲ್ ಫಂಡ್ಗಳು ಅತ್ಯಂತ ಸೂಕ್ತವಾಗಿವೆ. ಇದರಿಂದ ಹೂಡಿಕೆಯಲ್ಲಿ ವೈವಿಧ್ಯತೆಯನ್ನು ಸಹ ತರಬಹುದಾಗಿದೆ.

ದೀರ್ಘಾವಧಿಗಾಗಿ ಹೂಡಿಕೆ ಮಾಡಲು 5 ಪ್ರಮುಖ ಯೋಜನೆಗಳು

1. ಸ್ಟಾಕ್ ಮಾರ್ಕೆಟ್ ಹಾಗೂ ಇಕ್ವಿಟಿ ಮ್ಯೂಚುವಲ್ ಫಂಡ್
 

1. ಸ್ಟಾಕ್ ಮಾರ್ಕೆಟ್ ಹಾಗೂ ಇಕ್ವಿಟಿ ಮ್ಯೂಚುವಲ್ ಫಂಡ್

ದೀರ್ಘಾವಧಿಗೆ ಪರಿಗಣಿಸಿದಲ್ಲಿ ಭಾರತೀಯ ಶೇರು ಮಾರುಕಟ್ಟೆಯು ಹೂಡಿಕೆಯ ಮೇಲೆ ಉತ್ತಮ ಪ್ರತಿಫಲ ನೀಡುವ ವೇದಿಕೆಯಾಗಿದೆ. ಭಾರತೀಯ ಶೇರು ಮಾರಿಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ, ಬ್ಯಾಂಕ್ ನಿಫ್ಟಿ ಮುಂತಾದುವು ಕಳೆದ 10 ವರ್ಷಗಳ ಅವಧಿಯಲ್ಲಿ ಶೇ 16 ಕ್ಕಿಂತಲೂ ಅಧಿಕ ಆದಾಯ ನೀಡಿವೆ. ಅಂದರೆ ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರತಿ ತಿಂಗಳು ಶೇರು ಮಾರುಕಟ್ಟೆಯಲ್ಲಿ ರೂ. 10 ಸಾವಿರ ಹೂಡಿಕೆ ಮಾಡುತ್ತ ಬಂದಿದ್ದಲ್ಲಿ ಈಗ ನಿಮ್ಮ ಬಳಿ 29 ಲಕ್ಷ ರೂ.ಗಳಷ್ಟು ಮೊತ್ತ ಸಂಗ್ರಹವಾಗಿರುತ್ತಿತ್ತು. ಇದನ್ನೇ ಇನ್ನೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ- ಬರುವ ದಿನಗಳಲ್ಲಿ ಭಾರತೀಯ ಶೇರು ಮಾರುಕಟ್ಟೆ ಶೇ. 10 ರ ದರದಲ್ಲಿ ಆದಾಯ ನೀಡುತ್ತದೆ ಎಂಬ ಬಹುತೇಕ ವಾಸ್ತವಿಕ ನಿರೀಕ್ಷೆ ಇಟ್ಟುಕೊಂಡಲ್ಲಿ ಹಾಗೂ ಮುಂದಿನ 10 ವರ್ಷಗಳ ಅವಧಿಗೆ ಪ್ರತಿತಿಂಗಳು ರೂ. 10 ಸಾವಿರ ಹೂಡಿಕೆ ಮಾಡಿದಲ್ಲಿ ನೀವು ರೂ. 2 ಕೋಟಿಗಳ ಒಡೆಯರಾಗಬಹುದು.

ಮಾರುಕಟ್ಟೆಯ ಅಪಾಯಗಳನ್ನು ತಡೆಯುವ ಸಾಮರ್ಥ್ಯ ನಿಮ್ಮಲ್ಲಿದ್ದರೆ ಶೇರುಗಳಲ್ಲಿ ಹೂಡಿಕೆ ಮಾಡಿ ಮುಂದಿನ 20 ರಿಂದ 25 ವರ್ಷಗಳ ಅವಧಿಯಲ್ಲಿ ಅವು ಬೆಳೆಯುವುದನ್ನು ನೀವು ನೋಡಬಹುದು. ಸಾಧ್ಯವಿದ್ದಲ್ಲಿ ಒಂದೇ ಬಾರಿಗೆ ಹೂಡಿಕೆ ಮಾಡಬಹುದು ಅಥವಾ ಆಗಾಗ ಚಿಕ್ಕ ಚಿಕ್ಕ ಮೊತ್ತ ಹೂಡಿಕೆ ಮಾಡುತ್ತ ಸಾಗಬಹುದು. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಆದರೆ ರಿಸ್ಕ್ ಕಡಿಮೆ ಇರಬೇಕು ಎಂಬ ಧೋರಣೆ ನಿಮ್ಮದಾಗಿದ್ದಲ್ಲಿ ಮ್ಯೂಚುವಲ್ ಫಂಡ್ ಆಧರಿತ ವ್ಯವಸ್ಥಿತ ಯೋಜನಾ ಬದ್ಧ ಹೂಡಿಕೆ (ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್-ಸಿಪ್) ಯೋಜನೆಯ ಕಡೆಗೆ ಗಮನಹರಿಸಬಹುದು ಎಂದು ಹರ್ಷ ಜೈನ್ ಹೇಳುತ್ತಾರೆ.

2. ಪಿಪಿಎಫ್

2. ಪಿಪಿಎಫ್

ಹೂಡಿಕೆಯಲ್ಲಿ ವೈವಿಧ್ಯತೆ ಇರಬೇಕು ಅಂದಾಗ ಕೆಲ ಹೂಡಿಕೆಗಳು ನಿಶ್ಚಿತ ಹಾಗೂ ಖಾತರಿದಾಯಕ ಆದಾಯಗಳನ್ನು ತಂದು ಕೊಡುವಂತಿರಬೇಕಾಗುತ್ತದೆ. ಯಾವುದೇ ಅಪಾಯವಿಲ್ಲದೆ ಸುನಿಶ್ಚಿತ ಆದಾಯ ಪಡೆಯಬೇಕಾದರೆ ಹೂಡಿಕೆಯ ಕೆಲ ಭಾಗವನ್ನು ಪಿಪಿಎಫ್ನಲ್ಲಿ ತೊಡಗಿಸುವುದು ಸೂಕ್ತ.

ಪಿಪಿಎಫ್ ಎಂಬುದು 15 ವರ್ಷಗಳ ಯೋಜನೆಯಾಗಿದ್ದು, 5 ವರ್ಷಗಳ ಅವಧಿಗೆ ವಿಸ್ತರಿಸಬಹುದಾಗಿದೆ. ವಾರ್ಷಿಕ ಅತಿ ಕನಿಷ್ಠ 500 ರೂ,ಗಳಿಂದ 1,50,000 ರೂ. ಗಳವರೆಗೆ ಪಿಪಿಎಫ್ನಲ್ಲಿ ಹೂಡಿಕೆ ಮಾಡಬಹುದು. ಯೋಜನೆಯಲ್ಲಿ ಅವಕಾಶವಿರುವಷ್ಟು ಗರಿಷ್ಠ ಮಟ್ಟದ ಹೂಡಿಕೆಯನ್ನು ನೀವು ಮಾಡುತ್ತ ಸಾಗಿದಲ್ಲಿ 15 ವರ್ಷಗಳ ಮ್ಯಾಚುರಿಟಿ ಅವಧಿಯ ನಂತರ ನಿಮ್ಮ ಖಾತೆಯಲ್ಲಿ 44 ಲಕ್ಷ ರೂ. ಸಂಗ್ರಹವಾಗಿರುತ್ತವೆ. ಪಿಪಿಎಫ್ ಹೂಡಿಕೆಯು ಸಂಪೂರ್ಣ ಸುರಕ್ಷಿತವಾಗಿದ್ದು, ಇದರಿಂದ ದೊರಕುವ ಆದಾಯ ತೆರಿಗೆ ಮುಕ್ತವಾಗಿರುತ್ತದೆ ಹಾಗೂ 1.5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಸಹ ಇರುತ್ತದೆ. ಹೀಗಾಗಿ ಉತ್ತಮ ಆದಾಯ ನೀಡುವ ಹಾಗೂ ತೆರಿಗೆ ಉಳಿತಾಯವನ್ನು ಸಹ ಮಾಡುವ ಪಿಪಿಎಫ್ ಉತ್ತಮ ಹೂಡಿಕೆ ಯೋಜನೆಯಾಗಿದೆ. ಎಂಬುದು ಟ್ರಾನ್ಸೆಂಟ್ ಕನ್ಸಲ್ಟಂಟ್ ಸಂಸ್ಥೆಯ ವೆಲ್ಥ್ ಮ್ಯಾನೇಜರ್ ಕಾರ್ತಿಕ್ ಝವೇರಿ ಅವರ ಅಭಿಪ್ರಾಯವಾಗಿದೆ.

3. ಇನ್ಸೂರೆನ್ಸ್‌

3. ಇನ್ಸೂರೆನ್ಸ್‌

ವಾಸ್ತವಿಕವಾಗಿ ನೋಡಿದಲ್ಲಿ ವಿಮೆ ಎಂಬುದು ಯಾವಾಗಲೂ ಸುರಕ್ಷತಾ ಕವಚ ನೀಡುವ ಯೋಜನೆಯೇ ಹೊರತು ಆದಾಯ ತರಬಲ್ಲ ಹೂಡಿಕೆ ಯೋಜನೆಯಲ್ಲ. ಆದರೂ ಇದರಲ್ಲಿನ ಕೆಲವು ಎಂಡೋಮೆಂಟ್ ಯೋಜನೆಗಳು ದೀರ್ಘಾವಧಿಯಲ್ಲಿ ಅಂದರೆ 25 ರಿಂದ 30 ವರ್ಷಗಳ ಅವಧಿಯಲ್ಲಿ ಸಾಕಷ್ಟು ಮೊತ್ತವನ್ನು ಸಂಗ್ರಹಿಸಬಲ್ಲವು. ಇನ್ನು ಯುನಿಟ್ ಲಿಂಕ್ಡ್ ಇನ್ಸೂರೆನ್ಸ್ ಯೋಜನೆಗಳು ವಿಮಾ ಸುರಕ್ಷತೆ ಹಾಗೂ ಹೂಡಿಕೆ ಹೀಗೆ ಎರಡೂ ರೀತಿಯಲ್ಲಿ ಕೆಲಸ ಮಾಡುತ್ತವೆ. ಈ ಯೋಜನೆಗಳನ್ನು ಆನ್ಲೈನ್ ಮೂಲಕ ಪರಿಶೀಲಿಸಿ ಮತ್ತಷ್ಟು ತಿಳಿದುಕೊಳ್ಳಿ.

4. ಆಸ್ತಿಗಳಲ್ಲಿ ಹೂಡಿಕೆ

4. ಆಸ್ತಿಗಳಲ್ಲಿ ಹೂಡಿಕೆ

ಮನೆಯೊಂದನ್ನು ಖರೀದಿಸುವುದು ಜೀವನದಲ್ಲಿ ಹಲವಾರು ಅನುಕೂಲತೆಗಳನ್ನು ತರುತ್ತದೆ. ಮನೆ ಖರೀದಿಗೆ ಪಡೆಯಲಾದ ಸಾಲದ ಮುಖಾಂತರ ಅದರ ಅಸಲು ಹಾಗೂ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಈಗ ನೀವು ಮನೆ ಬಾಡಿಗೆ ಪಾವತಿಸುವಷ್ಟು ಇಎಂಐ ಲೆಕ್ಕದಲ್ಲಿ ಸಾಲ ಪಡೆದು ಸ್ವಂತ ಮನೆಯನ್ನೇ ಖರೀದಿಸಬಹುದಾಗಿದೆ. ಹೀಗೆ ಖರೀದಿಸಿದ ಆಸ್ತಿಯ ಮೊತ್ತವು ಕಾಲಾವಧಿಯಲ್ಲಿ ದ್ವಿಗುಣಗೊಳ್ಳುತ್ತ ಸಾಗುತ್ತದೆ. ಅಲ್ಲದೆ ನಿಮ್ಮ ಮಕ್ಕಳಿಗೆ ಸಹ ಇದರಿಂದ ಅನುಕೂಲವಾಗುತ್ತದೆ.

5. ನ್ಯಾಷನಲ್ ಪೆನ್ಷನ್ ಸಿಸ್ಟಂ (ಎನ್ಪಿಎಸ್)

5. ನ್ಯಾಷನಲ್ ಪೆನ್ಷನ್ ಸಿಸ್ಟಂ (ಎನ್ಪಿಎಸ್)

ಕೇಂದ್ರ ಸರಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಕಡ್ಡಾಯವಾಗಿದೆ. ಇತರರು ಸಹ ಸ್ವಯಂ ಪ್ರೇರಣೆಯಿಂದ ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಕಳೆದ 10 ವರ್ಷಗಳ ಅವಧಿಯಲ್ಲಿ ವಾರ್ಷಿಕವಾಗಿ ಎನ್ಪಿಎಸ್ ಶೇ. 8 ರಿಂದ 10 ರಷ್ಟು ಆದಾಯವನ್ನು ನೀಡಿದೆ. ಶೇ. 10 ರಷ್ಟು ಪ್ರತಿಫಲ ಸಿಗುತ್ತದೆ ಎಂದಿಟ್ಟುಕೊಂಡಲ್ಲಿ, ವಾರ್ಷಿಕವಾಗಿ 10,000 ರೂ.ಗಳನ್ನು ಹೂಡಿಕೆ ಮಾಡಿದ್ದಲ್ಲಿ ೩೫ ವರ್ಷಗಳ ನಂತರ ನೀವು 3.8 ಕೋಟಿ ರೂ.ಗಳಷ್ಟು ಸಂಗ್ರಹಿತ ಮೊತ್ತದ ಒಡೆಯರಾಗಬಹುದು. ಇನ್ನು ನಿವೃತ್ತಿಯ ನಂತರ ಇದರಲ್ಲಿನ ಶೇ. 60 ರಷ್ಟು ಮೊತ್ತವನ್ನು ಯಾವುದೇ ತೆರಿಗೆ ಇಲ್ಲದೆ ನೀವು ಹಿಂಪಡೆಯಬಹುದು ಹಾಗೂ ಇನ್ನುಳಿದ ಶೇ. 40 ರಷ್ಟು ಮೊತ್ತದಿಂದ ನಿಮಗೆ ಸಂಪೂರ್ಣ ಜೀವಿತಾವಧಿಗೆ ಪಿಂಚಣಿ ನೀಡಲಾಗುತ್ತದೆ. ಮೇಲೆ ತಿಳಿಸಿದ ಲೆಕ್ಕಾಚಾರವನ್ನೇ ಪರಿಗಣಿಸಿದಲ್ಲಿ ನೀವು ಮಾಸಿಕ 75,600 ಆದಾಯ ಪಡೆಯಬಹುದು. ಇದಕ್ಕೂ ಹೆಚ್ಚು ಆದಾಯ ಬೇಕಿದ್ದಲ್ಲಿ ಮಾಸಿಕ ಹೂಡಿಕೆಯನ್ನು ಹೆಚ್ಚಿಸಿಕೊಳ್ಳಬಹುದು.

ಈ ಯೋಜನೆಯಲ್ಲಿ ಆದಾಯ ತೆರಿಗೆ ಕಾಯ್ದೆ 80ಸಿ ಅಡಿ 1.5 ಲಕ್ಷ ಹಾಗೂ 80ಸಿಸಿಡಿ ಪ್ರಕಾರ ಇನ್ನೂ 50 ಸಾವಿರ ರೂ. ತೆರಿಗೆ ವಿನಾಯಿತಿ ಲಭಿಸುತ್ತದೆ.

6. ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಸ್ಕೀಂಗಳು

6. ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಸ್ಕೀಂಗಳು

ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಇವು ಇಕ್ವಿಟಿ ಆಧರಿತ ಮ್ಯೂಚುವಲ್ ಫಂಡ್ ಹೂಡಿಕೆ ಯೋಜನೆಗಳಾಗಿವೆ. ಇವುಗಳಲ್ಲಿ ಸಂಗ್ರಹಿತ ಕನಿಷ್ಠ ಶೇ 80 ರಷ್ಟು ಮೊತ್ತವನ್ನು ಸಣ್ಣ ಕಂಪನಿಯ ಶೇರುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಲಿಸ್ಟಿಂಗ್ನಲ್ಲಿ ಇರುವ 250 ದೊಡ್ಡ ಕಂಪನಿಗಳನ್ನು ಹೊರತುಪಡಿಸಿ ಇನ್ನುಳಿದ ಕಂಪನಿಗಳನ್ನು ಸೆಬಿ ಸ್ಮಾಲ್ ಕ್ಯಾಪ್ ಕಂಪನಿಗಳೆಂದು ಪರಿಗಣಿಸುತ್ತದೆ. ಹೀಗಾಗಿ ತನ್ನಲ್ಲಿನ ಕನಿಷ್ಠ ಶೇ 80ರಷ್ಟು ಮೊತ್ತವನ್ನು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ಸ್ಮಾಲ್ ಕ್ಯಾಪ್ ಫಂಡ್ಗಳು ಇನ್ನುಳಿದ ಶೇ 20 ರಷ್ಟು ಮೊತ್ತವನ್ನು ಬೇರಾವುದೇ ರೀತಿಯಲ್ಲಿ ಹೂಡಿಕೆ ಮಾಡಲು ಸ್ವತಂತ್ರವಾಗಿವೆ. ಅಂದರೆ ಟಾಪ್ 250 ಕಂಪನಿಯ ಶೇರುಗಳು ಅಥವಾ ಡೆಬ್ಟ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.

ಕೊನೆ ಮಾತು

ಕೊನೆ ಮಾತು

ಪ್ರತಿಯೊಬ್ಬರೂ ಹೂಡಿಕೆ ಮಾಡಿ, ನಿಮ್ಮ ಭವಿಷ್ಯ ಸುಂದರವಾಗಿಸಿ. ನಾವೇಲ್ಲಾ 73ನೇ ಸ್ವಾತಂತ್ರ್ಯ ದಿನೋತ್ಸವದ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಮನುಷ್ಯನಿಗೆ ಹಣಕಾಸು ಸ್ವಾತಂತ್ರ್ಯ ಕೂಡ ಮುಖ್ಯವಾಗಿದೆ. ಇದರೊಂದಿಗೆ ಮತ್ತಷ್ಟು ಶುಭ ಕೆಲಸಗಳನ್ನು ಆರಂಭಿಸಲು ಸಮಯ ಸೂಕ್ತವಾಗಿದೆ. ಹೀಗಾಗಿ ಈ ಶುಭ ಘಳಿಗೆಯಲ್ಲಿ ಉತ್ತಮ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸಲು ಆರಂಭಿಸಿ ಹಾಗೂ ಉಜ್ವಲ ಭವಿಷ್ಯವನ್ನು ನಿಮ್ಮದಾಗಿಸಿಕೊಳ್ಳಲು ಸಜ್ಜಾಗಿ.

English summary

Money making opportunity! Should you go for this options

India celebrating its 73rd independence day, investment experts are advising investors to diversify their portfolio and allocate funds in such a way that the money invested can be maximised.
Story first published: Saturday, August 17, 2019, 12:28 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more