ಇನ್ನೇನು ಡಿಸೆಂಬರ್ ತಿಂಗಳು ಬಂತು. ಜನಸಾಮಾನ್ಯರ ಜೀವನದಲ್ಲಿ ಮಹತ್ತರವಾದ ಬದಲಾವಣೆ ತರುವಂಥ ಕೆಲವು ಅಂಶಗಳು ಇಲ್ಲಿವೆ. ಈ ವರದಿಯಲ್ಲಿನ ಅಂಶಗಳು ಭಾರತದಲ್ಲಿನ ಬಹುಪಾಲು ನಾಗರಿಕರ ಮೇಲೆ ಪ್ರಭಾವ ಬೀರಲಿವೆ. ಯಾವುವು ಆ ಅಂಶಗಳು ಎಂಬ ವಿವರಣೆ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.
1 LPG ದರದಲ್ಲಿ ಬದಲಾವಣೆ ಆಗಬಹುದು
ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ತಿಂಗಳು ಎಲ್ ಪಿಜಿ ದರದ ಪರಿಷ್ಕರಣೆ ಮಾಡಬೇಕು. ಡಿಸೆಂಬರ್ ನಲ್ಲಿ ಅಡುಗೆ ಅನಿಲ ದರದಲ್ಲಿ ಬದಲಾವಣೆ ಆಗಲಿದೆ. ದೇಶದಲ್ಲಿ ಬಹುಪಾಲು ಕುಟುಂಬಗಳು ಎಲ್ ಪಿಜಿ ಸಂಪರ್ಕವನ್ನು ಹೊಂದಿವೆ. ಅದರಲ್ಲೂ ಅಡುಗೆ ಅನಿಲ ಸಿಲಿಂಡರ್ ಗಳ ಬಳಕೆ ವ್ಯಾಪಕ. ಈ ತಿಂಗಳು ಎಲ್ ಪಿಜಿ ದರ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಗ್ರಾಹಕರಿಗೆ ಹೊರೆ ಆಗದಿರಲಿ ಎಂಬ ಕಾರಣಕ್ಕೆ ಎಲ್ ಪಿಜಿ ದರದಲ್ಲಿ ಯಾವ ಬದಲಾವಣೆಯನ್ನೂ ಮಾಡಿರಲಿಲ್ಲ. ಎಲ್ ಪಿಜಿ ದರದ ಏರಿಕೆ ಮಾಡಿದಲ್ಲಿ ಅದರ ಪರಿಣಾಮ ಖಂಡಿತವಾಗಿಯೂ ಜನಸಾಮಾನ್ಯರ ಮೇಲಾಗುತ್ತದೆ.
2. ಇನ್ಷೂರೆನ್ಸ್ ಪ್ರೀಮಿಯಂ ಮೊತ್ತ ಬದಲಾವಣೆ ಆಗಬಹುದು
ಇನ್ಷೂರೆನ್ಸ್ ಮೊತ್ತದ ಪ್ರೀಮಿಯಂ ಅನ್ನು ಶೇಕಡಾ ಐವತ್ತರಷ್ಟು ಇಳಿಕೆ ಮಾಡಿಕೊಳ್ಳಬಹುದು. ಆದ್ದರಿಂದ ಇನ್ಷೂರೆನ್ಸ್ ದಾರರು ಅರ್ಧದಷ್ಟು ಕಂತನ್ನು ಮಾತ್ರ ಪಾವತಿಸುವ ಮೂಲಕ ಪಾಲಿಸಿ ಉಳಿಸಿಕೊಳ್ಳಬಹುದು.
3. ಡಿಸೆಂಬರ್ ನಲ್ಲಿ ಹೊಸ ರೈಲು ಸಂಚಾರ ಆರಂಭವಾಗುತ್ತದೆ
ಡಿಸೆಂಬರ್ ಒಂದನೇ ತಾರೀಕಿನಿಂದ ಸಾಮಾನ್ಯ ವಿಭಾಗದಲ್ಲಿ ಬರುವ ರೈಲುಗಳ ಸಂಚಾರವೇ ಆರಂಭವಾಗುತ್ತದೆ. ಇನ್ನು ವಿಶೇಷ ರೈಲುಗಳ ಸಂಚಾರ ಪ್ರತಿ ನಿತ್ಯವೂ ಇರುತ್ತದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲ ಸಮಯ ರೈಲು ಸಂಚಾರ ನಿಂತಿತ್ತು. ಸದ್ಯಕ್ಕೆ ದೇಶದಲ್ಲಿ ನಿರ್ಬಂಧಗಳ ತೆರವಾಗುತ್ತಿದೆ. ಆದ್ದರಿಂದ ಮಾಮೂಲಿ ವೇಳಾಪಟ್ಟಿಯಂತೆಯೇ ರೈಲು ಸಂಚಾರ ಆಗಲಿದೆ.

4 ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್ (RTGS) ಬದಲಾವಣೆ
ಡಿಸೆಂಬರ್ ನಿಂದ ದಿನದ ಎಲ್ಲ ಸಮಯದಲ್ಲೂ RTGS ವ್ಯವಸ್ಥೆ ದೊರೆಯುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಅಕ್ಟೋಬರ್ ನಲ್ಲಿ ಹೇಳಿದೆ. ದ್ವೈಮಾಸಿಕ ಹಣಕಾಸು ನೀತಿ ಘೋಷಣೆ ಸಂದರ್ಭದಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಬಗ್ಗೆ ಹೇಳಿದ್ದರು. ಆರ್ ಟಿಜಿಎಸ್ ಎಂಬುದು ಹಣಕಾಸು ವರ್ಗಾವಣೆ ವ್ಯವಹಾರ. ನಿರಂತರವಾಗಿ ಹಾಗೂ ಆಗಿಂದಾಗಲೇ ಮತ್ತೊಂದು ಖಾತೆಗೆ ಹಣವನ್ನು ವರ್ಗಾಯಿಸುವುದಕ್ಕೆ ಇರುವ ವ್ಯವಸ್ಥೆ. ಇನ್ನು ಮುಂದೆ ವರ್ಗಾವಣೆಯ ಮೊತ್ತಕ್ಕೂ ಯಾವುದೇ ಮಿತಿ ಇರುವುದಿಲ್ಲ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications