For Quick Alerts
ALLOW NOTIFICATIONS  
For Daily Alerts

ಯಾವ ಉಳಿತಾಯ ಸೇಫ್ ಮತ್ತು ಬೆಸ್ಟ್? ಇಲ್ಲಿವೆ 6 ಆಯ್ಕೆಗಳು

|

ಉಳಿತಾಯ ಮಾಡುವ ಆಲೋಚನೆ ಬಹಳ ಚಿಕ್ಕ ವಯಸ್ಸಿನಿಂದ ಆರಂಭಿಸುವುದು ತುಂಬ ಒಳ್ಳೆಯದು. ಐವತ್ತು- ನೂರು ರುಪಾಯಿಯೇ ಆಗಲಿ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವಾಗಿ ಪರಿವರ್ತನೆ ಆಗುತ್ತದೆ. ಅಷ್ಟೇ ಅಲ್ಲ, ಹೂಡಿಕೆ ಮನೋಭಾವ ಬೆಳೆಯುತ್ತದೆ. ಆದರೆ ಯಾವ ಉಳಿತಾಯ ಯೋಜನೆಯಲ್ಲಿ ಏನೆಲ್ಲ ಅಪಾಯ ಇದೆಯೋ ಏನೋ ಆತಂಕ ಕಾಡಬಹುದು.

ಆದ್ದರಿಂದ ಅಪಾಯ ಇಲ್ಲದ ಹೂಡಿಕೆಗಳನ್ನು ಮೊದಲಿಗೆ ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ಸರಳವಾಗಿರಬೇಕು. ಹೂಡಿಕೆ ಮಾಡುತ್ತಾ ಅನುಭವ ಬೆಳೆಯುತ್ತಾ ಹೋದ ಹಾಗೆ ಆರ್ಥಿಕ ಜ್ಞಾನ- ತಿಳಿವಳಿಕೆ ಹೆಚ್ಚಿಸಿಕೊಂಡು, ಸಂಕೀರ್ಣವಾದ ಹಾಗೂ ಕಷ್ಟವೆನಿಸಿದ ಹೂಡಿಕೆಗಳನ್ನು ಆರಿಸಿಕೊಳ್ಳಬಹುದು.

ಪರ್ಸನಲ್ ಲೋನ್ ಗಿಂತಲೂ ಕಡಿಮೆ ಬಡ್ಡಿಗೆ ಸಿಗುವ 6 ಸಾಲಗಳಿವುಪರ್ಸನಲ್ ಲೋನ್ ಗಿಂತಲೂ ಕಡಿಮೆ ಬಡ್ಡಿಗೆ ಸಿಗುವ 6 ಸಾಲಗಳಿವು

ಹೂಡಿಕೆ ಮಾಡಲು ಆರಂಭಿಸುವವರು ಅಥವಾ ಆರಂಭಿಕ ಹಂತದ ಹೂಡಿಕೆದಾರರಿಗೆ ಅತ್ಯುತ್ತಮವಾದ ಆಯ್ಕೆಗಳು ಇಲ್ಲಿವೆ.

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್ ಎಸ್ ಸಿ)

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್ ಎಸ್ ಸಿ)

ಎನ್ ಎಸ್ ಸಿ ಅಥವಾ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಬಹಳ ಸರಳ ಹಾಗೂ ಸುರಕ್ಷಿತವಾದ ಆಯ್ಕೆ. ನೀವು ಎನ್ ಎಸ್ ಯಲ್ಲಿ 100 ರುಪಾಯಿ ಹೂಡಿಕೆ ಮಾಡಿದರೆ 5 ವರ್ಷದ ನಂತರ 146.25 ರುಪಾಯಿ ಸಿಗುತ್ತದೆ. ಒಂದು ವೇಳೆ 1,00,000 ರುಪಾಯಿ ಹೂಡಿದರೆ 5 ವರ್ಷದ ನಂತರ 1,46,250 ರುಪಾಯಿ ದೊರೆಯುತ್ತದೆ. ಇದು ಖಂಡಿತಾ ಕಡಿಮೆ ಏನಲ್ಲ. ಸದ್ಯಕ್ಕೆ ಎನ್ ಎಸ್ ಸಿ ಬಡ್ಡಿ ದರ 7.9 ಪರ್ಸೆಂಟ್ ಇದ್ದು, ಅದು ಪ್ರತಿ ವರ್ಷ ಸೇರಿಕೊಳ್ಳುತ್ತದೆ. ಇಷ್ಟು ಒಳ್ಳೆ ಬಡ್ಡಿ ದರವನ್ನು ಸರ್ಕಾರಿ ಸ್ವಾಮ್ಯದ ಬೇರೆ ಯಾವ ಬ್ಯಾಂಕ್ ಕೂಡ ಕೊಡುವುದಿಲ್ಲ. ಎನ್ ಎಸ್ ಸಿಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಇದೆ. 1.5 ಲಕ್ಷ ತನಕದ ಹೂಡಿಕೆಗೆ ತೆರಿಗೆ ವಿನಾಯಿತಿ ಸಹ ಇದೆ. ಆರಂಭದ ಹಂತದ ಹೂಡಿಕೆದಾರರು ಇದನ್ನು ಅರ್ಥ ಮಾಡಿಕೊಳ್ಳುವುದು ಸಹ ಕಷ್ಟ ಅಲ್ಲ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ಪಿಪಿಎಫ್ ನಿಂದ ಎರಡು ಬಗೆಯ ತೆರಿಗೆ ಅನುಕೂಲ ಇದೆ. 80C ಅಡಿಯಲ್ಲಿ ತೆರಿಗೆ ವಿನಾಯಿತಿ ಹಾಗೂ ಪಿಪಿಎಫ್ ನಿಂದ ಸಿಗುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಬ್ಯಾಂಕ್ ಗಳು ಹಾಗೂ ಅಂಚೆ ಕಚೇರಿಯಲ್ಲಿ ಈ ಖಾತೆ ತೆಗೆಯಬಹುದು. ಈ ಹೂಡಿಕೆಯನ್ನು ಅರ್ಥ ಮಾಡಿಕೊಳ್ಳುವುದು ಸಹ ಬಲು ಸಲೀಸು. ಖಾತೆ ತೆರೆಯುವುದು, ನಿಮ್ಮ ಆಯ್ಕೆಗೆ ತಕ್ಕಂತೆ ಹಾಗೂ ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಸಲ ದುಡ್ಡು ಹಾಕುವುದು. ಬಡ್ಡಿ ದರ ಪ್ರತಿ ವರ್ಷ ಬದಲಾಗುತ್ತಿರುತ್ತದೆ. ಆದರೆ ಆ ಬಡ್ಡಿ ಖಂಡಿತಾ ಬ್ಯಾಂಕ್ ಠೇವಣಿಗಳಿಗಿಂತ ಜಾಸ್ತಿ ಇರುತ್ತದೆ. ಈ ಯೋಜನೆಗೆ ಸರ್ಕಾರದ ಬೆಂಬಲ ಇದೆ. ಆದ್ದರಿಂದ ಹೂಡಿಕೆ ಕೂಡ ಬಹಳ ಸುರಕ್ಷಿತ.

ಬ್ಯಾಂಕ್ ರೆಕರಿಂಗ್ ಡೆಪಾಸಿಟ್

ಬ್ಯಾಂಕ್ ರೆಕರಿಂಗ್ ಡೆಪಾಸಿಟ್

ವೇತನದಾರರಾಗಿದ್ದು, ಪ್ರತಿ ತಿಂಗಳು ಇಷ್ಟಿಷ್ಟು ಹಣವನ್ನು ಉಳಿತಾಯ ಮಾಡಿಕೊಂಡು ಬರಬಹುದು. ಪ್ರತಿ ತಿಂಗಳು ಅಥವಾ ನಿರ್ದಿಷ್ಟ ಅವಧಿಗೆ ಹಣ ತುಂಬುತ್ತಾ ಬರಬಹುದು. ಇದು ಬಹಳ ಸುರಕ್ಷಿತ ಮತ್ತು ಅರ್ಥ ಆಗುವುದು ಸಹ ಸಲೀಸು. ಆದರೆ ಪಿಪಿಎಫ್ ನ ಒಂದು ಅನುಕೂಲ ಇಲ್ಲಿಲ್ಲ. ಅದೇನೆಂದರೆ ರೆಕರಿಂಗ್ ಡೆಪಾಸಿಟ್ ಮೇಲೆ ಪಡೆಯುವ ಬಡ್ಡಿಗೆ ತೆರಿಗೆ ಬೀಳುತ್ತದೆ. ಆದ್ದರಿಂದ ಎಷ್ಟು ತೆರಿಗೆ ಬರಬಹುದು ಎಂಬುದನ್ನು ಹೂಡಿಕೆಗೆ ಮುಂಚೆಯೇ ಲೆಕ್ಕ ಹಾಕಬೇಕು.

ಕಿಸಾನ್ ವಿಕಾಸ್ ಪತ್ರ (ಕೆವಿಪಿ)

ಕಿಸಾನ್ ವಿಕಾಸ್ ಪತ್ರ (ಕೆವಿಪಿ)

ಆರಂಭಿಕ ಹೂಡಿಕೆದಾರರ ಪಾಲಿಗೆ ಮತ್ತೊಂದು ಅತ್ಯುತ್ತಮ ಆಯ್ಕೆ ಇದು. ನೀವು ಹೂಡಿಕೆ ಮಾಡಿದ ಹಣ 113 ತಿಂಗಳಲ್ಲಿ ಅಂದರೆ 9 ವರ್ಷ 5 ತಿಂಗಳಿಗೆ ಡಬಲ್ ಆಗುತ್ತದೆ. ಉದಾಹರಣೆಗೆ: ನೀವು 1 ಲಕ್ಷ ರುಪಾಯಿ ಹೂಡಿಕೆ ಮಾಡಿದರೆ 9 ವರ್ಷ 5 ತಿಂಗಳ ನಂತರ 2 ಲಕ್ಷ ರುಪಾಯಿ ಆಗುತ್ತದೆ. ಅಂದ ಹಾಗೆ ಒಂದು ವೇಳೆ ಹಣದ ಅಗತ್ಯ ಇದ್ದಲ್ಲಿ ಪೂರ್ಣಾವಧಿಗೂ ಮುನ್ನವೇ ವಿಥ್ ಡ್ರಾ ಮಾಡಬಹುದು. ಆದರೆ ಕನಿಷ್ಠ ಎರಡೂವರೆ ವರ್ಷ ಪೂರ್ಣಗೊಂಡಿರಬೇಕು. ಯಾವುದೇ ಅಂಚೆ ಇಲಾಖೆಯ ಕಚೇರಿಯಲ್ಲಿ ಕಿಸಾನ್ ವಿಕಾಸ್ ಪತ್ರವನ್ನು ಖರೀದಿಸಬಹುದು.

ಸೇಫ್ ಕಂಪೆನಿ ಫಿಕ್ಸೆಡ್ ಡೆಪಾಸಿಟ್ಸ್

ಸೇಫ್ ಕಂಪೆನಿ ಫಿಕ್ಸೆಡ್ ಡೆಪಾಸಿಟ್ಸ್

ಬ್ಯಾಂಕ್ ನ ಠೇವಣಿಗಳಿಗಿಂದ ಕಂಪೆನಿ ಫಿಕ್ಸೆಡ್ ಡೆಪಾಸಿಟ್ ಗಳಿಗೆ ಹೆಚ್ಚಿನ ಬಡ್ಡಿ ದರ ದೊರೆಯುತ್ತದೆ. ಆದ್ದರಿಂದ ಇದನ್ನು ಪರಿಗಣಿಸಬಹುದು. ಆದರೆ ಸುರಕ್ಷಿತವಾದ ಫಿಕ್ಸೆಡ್ ಡೆಪಾಸಿಟ್ ಮೇಲೆ ಮಾತ್ರ ಹೂಡಿಕೆ ಮಾಡಬೇಕು. ಮಹೀಂದ್ರಾ ಫೈನಾನ್ಸ್, ಎಲ್ ಐಸಿ ಹೌಸಿಂಗ್ ಫೈನಾನ್ಸ್, ಪಿಎನ್ ಬಿ ಹೌಸಿಂಗ್ಗ್ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್ ಇಂಥವನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ಸುರಕ್ಷಿತವಲ್ಲದ ಡೆಪಾಸಿಟ್ ನಿಂದ ಹೂಡಿಕೆದಾರರು ದೂರವಿರಬೇಕು. ಯಾವ ಕಂಪೆನಿಗೆ ಪ್ರಬಲವಾದ ಗ್ರೂಪ್ ನ ಬೆಂಬಲ ಇರುತ್ತದೋ ಅವುಗಳನ್ನು ಗಮನಿಸಬೇಕು. ಉದಾಹರಣೆಗೆ ಬಜಾಜ್ ಗ್ರೂಪ್ ಅಥವಾ ಮಹೀಂದ್ರಾ ಫೈನಾನ್ಸ್, ಎಚ್ ಡಿಎಫ್ ಸಿ ಮುಂತಾದವನ್ನು ಪರಿಗಣಿಸಬೇಕು.

ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್

ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್

ಭಾರತ ಸರ್ಕಾರದ ಬೆಂಬಲದಿಂದ ನಡೆಯುವ ಈ ಠೇವಣಿ ಸುರಕ್ಷಿತವಾದುದು. ಐದು ವರ್ಷದ ಠೇವಣಿಗೆ ವಾರ್ಷಿಕ ಬಡ್ಡಿ ದರ 6.9 ಪರ್ಸೆಂಟ್ ಸಿಗುತ್ತದೆ. 1, 2 ಅಥವಾ 3 ವರ್ಷದ ಠೇವಣಿಗೂ 6.9 ಪರ್ಸೆಂಟ್ ಬಡ್ಡಿ ದೊರೆಯುತ್ತದೆ. ದೀರ್ಘಾವಧಿ ಹೂಡಿಕೆ ಮಾಡಬೇಕು ಅಂದುಕೊಳ್ಳುವವರು ಇದನ್ನು ಪರಿಗಣಿಸಬಹುದು. ಜತೆಗೆ ಇದು ಬಹಳ ಸುರಕ್ಷಿತ ಹೂಡಿಕೆ. ಇನ್ನೊಂದು ಅಂಶ ಗಮನದಲ್ಲಿ ಇರಲಿ, ಈ ಠೇವಣಿಗಳ ಮೇಲಿನ ಬಡ್ಡಿಗೆ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ. ಆದ್ದರಿಂದ ಹೂಡಿಕೆ ಮಾಡುವ ಮುಂಚೆಯೇ ಹೂಡಿಕೆದಾರರು ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು.

English summary

6 Best And Safe Investment Options For Beginners

Beginners to investing in India, should keep two things in mind in the initial stages of their investment. simplicity and safety. Here is the 6 best options.
Story first published: Thursday, November 7, 2019, 12:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X