ದೇಶದ ಐಟಿ ರಾಜಧಾನಿಯಾದ ಬೆಂಗಳೂರಿನಲ್ಲಿ ದೇಶದ ಬೇರೆ ಬೇರೆ ರಾಜ್ಯಗಳಿಂದ ಜನರು ಬಂದು ನೆಲೆಸುತ್ತಾರೆ. ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರುವ ಲಕ್ಷಾಂತರ ಮಂದಿ ಇದ್ದಾರೆ. ಬೆಳವಣಿಗೆ ಅಧಿಕವಾಗುತ್ತಾ ಸಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಜೀವನ ವೆಚ್ಚವು ಕೂಡಾ ಹೆಚ್ಚಳವಾಗಿದೆ. ಆದರೆ ಈ ನಡುವೆ ಬಾಡಿಗೆ ದರವು ಕೂಡಾ ಅಧಿಕವಾಗುತ್ತಾ ಸಾಗುತ್ತಿದೆ.
ಆದರೂ ಕೂಡಾ ಬೆಂಗಳೂರಿನಲ್ಲಿ ಇನ್ನು ಕೂಡಾ ಪ್ರಮುಖವಾಗಿ 7 ಪ್ರದೇಶಗಳು ಅತೀ ಕಡಿಮೆ ಬಾಡಿಗೆಗೆ ಮನೆಗಳನ್ನು ಹೊಂದಿದೆ. ಈ ಲೇಖನದಲ್ಲಿ ಬೆಂಗಳೂರಿನಲ್ಲಿ ಕಡಿಮೆ ದರದಲ್ಲಿ ಬಾಡಿಗೆಗೆ ಮನೆಗಳು ಲಭ್ಯವಾಗುವ ಪ್ರದೇಶಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

1. ಎಲೆಕ್ಟ್ರಾನಿಕ್ ಸಿಟಿ ಬಾಡಿಗೆ ದರ
ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಅತೀ ಕಡಿಮೆ ದರದಲ್ಲಿ ಬಾಡಿಗೆಗೆ ಮನೆಗಳನ್ನು ನೀಡುವ ಪ್ರದೇಶವಾಗಿದೆ. ಹಲವಾರು ಐಟಿ ಕಂಪನಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದು, ಐಟಿ ಉದ್ಯೋಗಿಗಳು ಇಲ್ಲಿ ಬಾಡಿಗೆಗೆ ಮನೆಯನ್ನು ಹುಡುಕುತ್ತಾರೆ. ಇತರೆ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ದರವು ಕಡಿಮೆಯಾಗಿದೆ. ಶೇಕಡ 34 ರಷ್ಟು ಆಸ್ತಿಗಳು ಐದರಿಂದ ಹತ್ತು ಸಾವಿರ ರೂಪಾಯಿ ಬಾಡಿಗೆಗೆ ಲಭ್ಯವಿದೆ.
2. ಕನಕಪುರ ರಸ್ತೆ ಬಾಡಿಗೆ ದರ
ಕನಕಪುರ ರಸ್ತೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ವಾಣಿಜ್ಯ ಪ್ರದೇಶವಾಗಿದೆ. ಇಲ್ಲಿ ಅತೀ ವೇಗವಾಗಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಬೆಳೆವಣಿಗೆ ಕಾಣುತ್ತಿದೆ. ಇಲ್ಲಿ ಶೇಕಡ 15 ರಷ್ಟು ಬಾಡಿಗೆ ಮನೆಗಳು ಐದರಿಂದ 10 ಸಾವಿರ ರೂಪಾಯಿ ರೇಂಜ್‌ನಲ್ಲಿದೆ. ಶೇಕಡ 13 ರಷ್ಟು ಬಾಡಿಗೆ ಮನೆಗಳು 10ರಿಂದ 15 ಸಾವಿರ ರೇಂಜ್‌ನಲ್ಲಿದೆ.
3. ಹೊಸಕೋಟೆ ಬಾಡಿಗೆ ದರ
ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಹೊಸಕೋಟೆ ಬೆಂಗಳೂರು ನಗರದಿಂದ ದೂರದಲ್ಲಿರುವ ಪ್ರದೇಶ. ಈ ನಗರವು ರಿಂಗ್ ರೋಡ್‌ಗೆ ಹತ್ತಿರವಾಗಿದೆ. ಹೊಸಕೋಟೆ ವೈಟ್‌ಫೀಲ್ಡ್‌ಗೂ ಸಮೀಪವಾಗಿದೆ. ಶೇಕಡ 46 ರಷ್ಟು ಬಾಡಿಗೆ ಮನೆಗಳು ಹೊಸಕೋಟೆಯಲ್ಲಿ ಐದರಿಂದ ಹತ್ತು ಸಾವಿರ ರೂಪಾಯಿಗೆ ಲಭ್ಯವಾಗುತ್ತದೆ. ಇನ್ನು ಶೇಕಡ 36 ರಷ್ಟು ಮನೆಗಳು ಹತ್ತರಿಂದ 15 ಸಾವಿರ ರೂಪಾಯಿಗೆ ಲಭ್ಯವಾಗುತ್ತದೆ.
4. ಬಿಟಿಎಂ ಲೇಔಟ್ ಬಾಡಿಗೆ ದರ
ಬಿಟಿಎಂ ಲೇಔಟ್ ಬಸವೇಶ್ವರ ನಗರಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಶೇಕಡ 34 ರಷ್ಟು ಬಾಡಿಗೆ ಮನೆಗಳು ಇಲ್ಲಿ 10ರಿಂದ 15 ಸಾವಿರ ರೂಪಾಯಿಗೆ ಲಭ್ಯವಿದೆ. ಶೇಕಡ 21 ರಷ್ಟು ಬಾಡಿಗೆ ಪ್ರದೇಶಗಳು 5ರಿಂದ 10 ಸಾವಿರ ರೂಪಾಯಿ ಬಾಡಿಗೆಗೆ ಲಭ್ಯವಿದೆ.
5. ಹೆಬ್ಬಾಳದಲ್ಲಿ ಬಾಡಿಗೆ ಮನೆ
ಹೆಬ್ಬಾಳವು ಬಳ್ಳಾರಿ ರಸ್ತೆ, ಒಆರ್‌ಆರ್, ಹೆಬ್ಬಾಳ ಫ್ಲೈ ಓವರ್‌ಗೆ ಕನೆಕ್ಟ್ ಆಗಿದೆ. ಶೇಕಡ 16 ರಷ್ಟು ಪ್ರದೇಶಗಳಲ್ಲಿ ಇಲ್ಲಿ 10ರಿಂದ 15 ಸಾವಿರ ರೂಪಾಯಿಗೆ ಬಾಡಿಗೆಗೆ ಮನೆಗಳು ಲಭಿಸುತ್ತದೆ. ಶೇಕಡ 14ರಷ್ಟು ಪ್ರದೇಶದಲ್ಲಿ 5ರಿಂದ 10 ಸಾವಿರ ರೂಪಾಯಿಗೆ ಬಾಡಿಗೆಗೆ ಮನೆ ಲಭ್ಯವಾಗುತ್ತದೆ.
6. ಚಂದಾಪುರದಲ್ಲಿ ಬಾಡಿಗೆ ಮನೆ
ಚಂದಾಪುರದಲ್ಲಿಯೂ ಅತೀ ಕಡಿಮೆ ಮೊತ್ತಕ್ಕೆ ಬಾಡಿಗೆಗೆ ಮನೆ ಲಭ್ಯವಾಗುತ್ತದೆ. ಇದು ಎಲೆಕ್ಟ್ರಾನಿಕ್ ಸಿಟಿಯಂತೆಯೇ ಪ್ರಮುಖ ಉದ್ಯೋಗ ಹಬ್ ಆಗಿದೆ. ಇಲ್ಲಿ ಶೇಕಡ 36 ರಷ್ಟು ಮನೆಗಳು 5ರಿಂದ 10 ಸಾವಿರ ರೂಪಾಯಿ ಬಾಡಿಗೆಗೆ ಲಭ್ಯವಿದೆ. ಉಳಿದಂತೆ ಶೇಕಡ 36 ರಷ್ಟು ಮನೆಗಳು 10ರಿಂದ 15 ಸಾವಿರ ರೂಪಾಯಿಗೆ ಲಭ್ಯವಿದೆ.
7. ಕೆಂಗೇರಿಯಲ್ಲಿ ಬಾಡಿಗೆ ಮನೆ
ಕೆಂಗೇರಿಯಲ್ಲಿ ಬಜೆಟ್ ಸ್ನೇಹಿ ಬಾಡಿಗೆ ಮನೆಗಳು ಲಭ್ಯವಾಗುತ್ತದೆ. ಕೆಂಗೇರಿಯು ಬೆಂಗಳೂರಿನ ಸೆಟೆಲೈಟ್ ಟೌನ್ ಎಂದು ಕೂಡಾ ಹೆಸರುವಾಸಿಯಾಗಿದೆ. ಶೇಕಡ 39 ರಷ್ಟು ಪ್ರದೇಶಗಳಲ್ಲಿ ಇಲ್ಲಿ 5ರಿಂದ 10 ಸಾವಿರ ರೂಪಾಯಿಗೆ ಬಾಡಿಗೆಗೆ ಮನೆಗಳು ಸಿಗುತ್ತದೆ. ಶೇಕಡ 22ರಷ್ಟು ಪ್ರದೇಶದಲ್ಲಿ 10ರಿಂದ 15 ಸಾವಿರ ರೂಪಾಯಿಗೆ ಬಾಡಿಗೆಗೆ ಮನೆಗಳು ಕೆಂಗೇರಿಯಲ್ಲಿ ಲಭ್ಯವಾಗುತ್ತದೆ.


Click it and Unblock the Notifications