ಭಾರತೀಯ ಅಂಚೆ ಇಲಾಖೆಯು ಆಕರ್ಷಕ ಬಡ್ಡಿ ದರದೊಂದಿಗೆ ಸುರಕ್ಷಿತ ಹಾಗೂ ಗ್ಯಾರಂಟಿಯ ಹೂಡಿಕೆ ಯೋಜನೆಗಳನ್ನು ಪರಿಚಯಿಸಿದೆ. ಅಂಚೆ ಇಲಾಖೆಯ ಠೇವಣಿ ಯೋಜನೆಗಳ ಮೇಲೆ ಭಾರತ ಸರ್ಕಾರವು ಕಾಲಕಾಲಕ್ಕೆ ಬಡ್ಡಿ ದರವನ್ನು ನಿಗದಿಪಡಿಸುವುದರಿಂದ ಹೂಡಿಕೆಯಲ್ಲಿ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಬಹುದು.ಹಣಕಾಸು ವ್ಯವಹಾರಗಳ ಇಲಾಖೆಗೆ ಒಳಪಟ್ಟು ರಾಷ್ಟ್ರೀಯ ಉಳಿತಾಯ ಸಂಸ್ಥೆಯ ಆಡಳಿತ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ರಿಟರ್ನ್ ನೀಡುವ ಮೂಲಕ ಯಾವುದೇ ರಿಸ್ಕ್ ಕೂಡ ಇರುವುದಿಲ್ಲ.
ಈ ಎಲ್ಲ ಅಂಚೆ ಇಲಾಖೆ ಠೇವಣಿ ಯೋಜನೆಗಳು ಹೂಡಿಕೆದಾರರಿಗೆ ವೈವಿಧ್ಯಮಯ ಹಾಗೂ ಸುರಕ್ಷಿತ ಆಯ್ಕೆಗಳನ್ನು ಒದಗಿಸುತ್ತವೆ. ರಿಸ್ಕ್ ಇಲ್ಲದೆ ವಿವಿಧ ಹಣಕಾಸಿನ ಗುರಿಗಳನ್ನು ತಲುಪುವುದಕ್ಕೆ ನೆರವಾಗುತ್ತವೆ. ಹೂಡಿಕೆದಾರರು ತಮ್ಮ ಆರ್ಥಿಕ ಇತಿ-ಮಿತಿಗಳಿಗೆ ಅನುಗುಣವಾಗಿ ಸೂಕ್ತ ಉಳಿತಾಯ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಜತೆಗೆ ಗ್ಯಾರಂಟಿಯ ರಿಟರ್ನ್ಸ್ ಅನ್ನು ಪಡೆದುಕೊಳ್ಳಬಹುದು.

ಹಾಗಾದರೆ ಯಾವೆಲ್ಲ ರೀತಿಯ ಹೂಡಿಕೆ ಅವಕಾಶಗಳಿವೆ ಎಂಬುದನ್ನು ನೋಡೋಣ
1) ಪೋಸ್ಟ್ ಆಫೀಸ್ ಉಳಿತಾಯ ಖಾತೆ: ವಾರ್ಷಿಕ 4% ಬಡ್ಡಿ ದರದೊಂದಿಗೆ ಪೂರ್ಣ ತೆರಿಗೆ ಆಧಾರಿತ ಬಡ್ಡಿ ಜತೆ ಯಾವುದೇ ಟಿಡಿಎಸ್ ಕಡಿತವಿಲ್ಲದ ಯೋಜನೆಯಾಗಿದೆ.
2) 5 ವರ್ಷದ ಅಂಚೆ ಕಚೇರಿ ರಿಟರ್ನಿಂಗ್ ಡೆಪಾಸಿಟ್ ಅಕೌಂಟ್(ಆರ್‌ಡಿ): ಇದು ತಿಂಗಳಿಗೆ 100 ರೂ.ಗಳ ಅತ್ಯಂತ ಕಡಿಮೆ ಠೇವಣಿಯೊಂದಿಗೆ ವಾರ್ಷಿಕ 6.5% ಬಡ್ಡಿಯನ್ನು ನೀಡುತ್ತದೆ.
3) ಪೋಸ್ಟ್ ಆಫೀಸ್ ಅವಧಿ ಠೇವಣಿ ಖಾತೆ(ಟಿಡಿ): ಇದು ಬ್ಯಾಂಕ್ ನಿಶ್ಚಿತ ಠೇವಣಿ ರೀತಿಯ ಉಳಿತಾಯ ಯೋಜನೆಯಾಗಿದ್ದು, ಅವಧಿಯು ಒಂದು ವರ್ಷಗಳಿಂದ ಐದು ವರ್ಷಗಳದ್ದು. ಇದಕ್ಕೆ ಬಡ್ಡಿಯು ತ್ರೈಮಾಸಿಕವಾಗಿ ಲೆಕ್ಕಾಚಾರ ಹಾಕಲಾಗುತ್ತಿದ್ದು, ವಾರ್ಷಿಕವಾಗಿ ನೀಡಲಾಗುತ್ತದೆ. 2023-24 ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕಕ್ಕೆ ಬಡ್ಡಿ ದರಗಳು ಒಂದು ವರ್ಷದ ಖಾತೆಗೆ 6.9%, ಎರಡು ಮತ್ತು ಮೂರು ವರ್ಷಗಳ ಖಾತೆಗಳಿಗೆ 7% ಮತ್ತು ಐದು ವರ್ಷಗಳ ಖಾತೆಗೆ 7.5%. ನಿಗದಿಪಡಿಸಲಾಗಿದೆ.
4) ಅಂಚೆ ಕಚೇರಿ ವಾರ್ಷಿಕ ಆದಾಯ ಯೋಜನೆ ಖಾತೆ(ಎಂಐಎಸ್): ಇದು ಅತ್ಯಂತ ಕಡಿಮೆ ರಿಸ್ಕ್‌ನ ಹೂಡಿಕೆಯಾಗಿದ್ದು, ವಾರ್ಷಿಕ 7.40% ಬಡ್ಡಿಯೊಂದಿಗೆ ಮಾಸಿಕ ಆದಾಯ ಪಡೆಯಬಹುದು. ಈ ಯೋಜನೆಯು ಐದು ವರ್ಷಗಳ ಲಾಕಿಂಗ್ ಅವಧಿಯನ್ನು ಹೊಂದಿರುತ್ತದೆ.
5) ಹಿರಿಯ ನಾಗರಿಕರ ಉಳಿತಾಯ ಯೋಜನೆ(ಎಸ್‌ಸಿಎಸ್‌ಎಸ್): ಹಿರಿಯ ನಾಗರಿಕರಿಗೆ ಪರಿಚಯಿಸಿರುವ ಜನಪ್ರಿಯ ಯೋಜನೆಯಾಗಿದೆ. ಇದು ಸರ್ಕಾರ ಬೆಂಬಲಿತ ನಿವೃತ್ತಿ ಯೋಜನೆಯಾಗಿದ್ದು, ನಿರ್ದಿಷ್ಟ ಮೊತ್ತದ ಹೂಡಿಕೆ ಮೇಲೆ 8.2% ಬಡ್ಡಿ ದರವನ್ನು ತ್ರೈಮಾಸಿಕವಾಗಿ ನೀಡುತ್ತದೆ.
6) 15 ವರ್ಷದ ಪಬ್ಲಿಕ್ ಫ್ರಾವಿಡೆಂಟ್ ಫಂಡ್ ಅಕೌಂಟ್(ಪಿಪಿಎಫ್): ಇದು ಅತ್ಯಂತ ಜನಪ್ರಿಯ ಹೂಡಿಕೆಯಾಗಿದ್ದು, 1.5 ಲಕ್ಷ ರೂ. ಆದಾಯ ತೆರಿಗೆ ರಿಯಾಯಿತಿಯೊಂದಿಗೆ 7.1% ವಾರ್ಷಿಕ ಬಡ್ಡಿ ನೀಡುವ ನಿವೃತ್ತಿ ಯೋಜನೆಯಾಗಿದೆ.
7) ನ್ಯಾಷನಲ್ ಸೇವಿಂಗ್ಸ್ ಸ್ಕೀಮ್(ಎನ್‌ಎಸ್‌ಸಿ): ಐದು ವರ್ಷಗಳ ಅವಧಿಯೊಂದಿಗೆ, ಎನ್‌ಎಸ್‌ಸಿ 7.7% ವಾರ್ಷಿಕ ಬಡ್ಡಿಯನ್ನು ನೀಡುತ್ತದೆ. ಜತೆಗೆ ಇದನ್ನು ಮೆಚ್ಯುರಿಟಿ ಅವಧಿಯಲ್ಲಿ ಪಾವತಿಸಲಾಗುತ್ತದೆ.
8) ಕಿಸಾನ್ ವಿಕಾಸ್ ಪತ್ರ:(ಕೆವಿಪಿ): ನೀವು ಕೆವಿಪಿಯಲ್ಲಿ ಹೂಡಿಕೆ ಮಾಡಿದರೆ ಅದು 123 ತಿಂಗಳಲ್ಲಿ 7% ಬಡ್ಡಿಯೊಂದಿಗೆ ದ್ವಿಗುಣಗೊಳ್ಳುತ್ತದೆ.
9) ಸುಕನ್ಯ ಸಮೃದ್ಧಿ ಖಾತೆ(ಎಸ್‌ಎಸ್‌ಎ): 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಈ ಯೋಜನೆಯನ್ನು ಪರಿಚಯಿಸಲಾಗಿದ್ದು, ಇದು ಅತ್ಯಂತ ಆಕರ್ಷಕವಾದ ಅಂದರೆ ವಾರ್ಷಿಕ 8% ಬಡ್ಡಿಯನ್ನು ಒದಗಿಸುತ್ತದೆ.


Click it and Unblock the Notifications