ಈಗಾಗಲೇ ನವೆಂಬರ್ ತಿಂಗಳು ಕೊನೆಯಾಗುತ್ತಾ ಬಂದಿದೆ. ಡಿಸೆಂಬರ್ ತಿಂಗಳು ಆರಂಭವಾಗಲು ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ನಡುವೆ ನೀವು ಡಿಸೆಂಬರ್‌ಗೂ ಮುನ್ನ ಮಾಡಿಮುಗಿಸಬೇಕಾದ ಕಾರ್ಯಗಳನ್ನು ತಿಳಿದಿರಬೇಕಾಗುತ್ತದೆ.
ಹೌದು, ಉಚಿತವಾಗಿ ಆಧಾರ್ ಅಪ್‌ಗ್ರೇಡ್, ಬ್ಯಾಂಕ್ ಲಾಕರ್ ಒಪ್ಪಂದ ನವೀಕರಣ, ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಯ ನಾಮಿನೇಷನ್ ಗಡುವು ಕೊನೆಯಾಗಲಿದೆ. ಹಾಗೆಯೇ ಹಲವಾರು ಬದಲಾವಣೆಗಳಿಗೆ ಗಡುವು ಮುಗಿಯಲಿದೆ, ಇಲ್ಲಿದೆ ವಿವರ ಮುಂದೆ ಓದಿ....

ಉಚಿತ ಆಧಾರ್ ಅಪ್‌ಡೇಟ್
ನಿಮ್ಮ ಆಧಾರ್ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 14 ಆಗಿದೆ. ರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಥವಾ ಯುಐಡಿಎಐ ಹತ್ತು ವರ್ಷಕ್ಕಿಂತ ಹಳೆಯದಾದ ಆಧಾರ್ ಕಾರ್ಡ್‌ಗಳನ್ನು ಅಪ್‌ಡೇಟ್ ಮಾಡುವಂತೆ ಈಗಾಗಲೇ ತಿಳಿಸಿದೆ. ಈ ಹಿಂದೆ ಹಲವಾರು ಬಾರಿ ಈ ಗಡುವನ್ನು ವಿಸ್ತರಣೆ ಮಾಡುತ್ತಾ ಬರಲಾಗಿದೆ. ಆದರೆ ಇದು ಕೊನೆಯ ಅವಕಾಶವಾಗಿರುವ ಸಾಧ್ಯತೆಯಿದೆ.
ನಿಮ್ಮ ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡಲು ನೀವು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಕಿಸಾನ್ ಫೋಟೋ ಪಾಸ್‌ಬುಕ್, ಭಾರತೀಯ ಪಾಸ್‌ಪೋರ್ಟ್ ಅಥವಾ ಯಾವುದೇ ಇತರ ಸರ್ಕಾರ ನೀಡಿದ ಗುರುತಿನ ಚೀಟಿ/ಪ್ರಮಾಣಪತ್ರದಂತಹ ದಾಖಲೆಗಳನ್ನು ಮೈಆಧಾರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ನೀವು ಆಧಾರ್ ಕೇಂದ್ರದಲ್ಲಿ ದಾಖಲೆಗಳನ್ನು ಸಲ್ಲಿಸಲು, ಅನ್ವಯವಾಗುವ ಶುಲ್ಕ 50 ರೂಪಾಯಿ ಆಗಿದೆ.
ಲಾಕರ್ ಅಪ್‌ಡೇಟ್ ಪರಿಷ್ಕರಣೆ
ಸುರಕ್ಷಿತ ಠೇವಣಿ ಲಾಕರ್ ಹೊಂದಿರುವವರ ಜೊತೆಗೆ ಪರಿಷ್ಕೃತ ಒಪ್ಪಂದಕ್ಕೆ ಸಹಿ ಹಾಕಲು ಬ್ಯಾಂಕ್‌ಗಳಿಗೆ ಗಡುವು ಡಿಸೆಂಬರ್ 31, 2023 ಆಗಿದೆ. ಜನವರಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡಿಸೆಂಬರ್ ಅಂತ್ಯದವರೆಗೆ ಗಡುವನ್ನು ವಿಸ್ತರಿಸಿದೆ.
ಎಂಎಫ್, ಡಿಮ್ಯಾಟ್ ನಾಮಿನಿಗೆ ಅಂತಿಮ ದಿನಾಂಕ
ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆದಾರರು ಮತ್ತು ಮ್ಯೂಚುವಲ್ ಫಂಡ್ ಯೂನಿಟ್ ಹೊಂದಿರುವವರು ನಾಮಿನಿಗಳ ಆಯ್ಕೆಯನ್ನು ಮಾಡಲು ಡಿಸೆಂಬರ್ 31, 2023 ಕೊನೆಯ ಅವಕಾಶವಾಗಿದೆ. ಈ ಹಿಂದೆ ಈ ಗಡುವು ಸೆಪ್ಟೆಂಬರ್ 30, 2023 ಆಗಿತ್ತು. ಇದನ್ನು ಸೆಬಿಯು ಡಿಸೆಂಬರ್ 31, 2023 ರವರೆಗೆ ವಿಸ್ತರಿಸಿದೆ. ಹಾಗೆಯೇ ಈ ಗಡುವು ಕೊನೆಯಾದರೆ ನಿಮ್ಮ ಖಾತೆ ನಿಷ್ಕ್ರೀಯವಾಗಲಿದೆ ಎಂದು ಸೆಬಿ ಹೇಳಿದೆ.
ನಿಷ್ಕ್ರೀಯ ಯುಪಿಐ ಐಡಿ
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಗೂಗಲ್ ಪೇ, ಪೇಟಿಎಂ, ಫೋನ್‌ಪೇ ಮತ್ತು ಬ್ಯಾಂಕ್‌ಗಳಂತಹ ಪಾವತಿ ಅಪ್ಲಿಕೇಶನ್‌ಗಳಿಗೆ ಡಿಸೆಂಬರ್ 31 ರೊಳಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳು ಮತ್ತು ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲು ಸೂಚನೆ ನೀಡಿದೆ.
ಎಸ್‌ಬಿಐ ಅಮೃತ್ ಕಲಶ ಎಫ್‌ಡಿ
ಎಸ್‌ಬಿಐನ ಅಮೃತ ಕಲಶ ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲೆ ಶೇಕಡ 7.60 ಬಡ್ಡಿದರವನ್ನು ನೀಡುತ್ತದೆ. ಈ ಎಫ್‌ಡಿ ಯೋಜನೆ ಏಪ್ರಿಲ್ 12ರಿಂದ ಆರಂಭವಾಗಿದ್ದು, ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತದೆ. ಅಮೃತ್ ಕಲಶ ವಿಶೇಷ ಎಫ್‌ಡಿ ಡೆಪಾಸಿಟ್ (ಎಫ್‌ಡಿ) ದೇಶದ ಅತಿದೊಡ್ಡ ಸಾಲದಾತರು ನೀಡುವ 400 ದಿನಗಳ ಅವಧಿಯ ಡೆಪಾಸಿಟ್ ಆಗಿದೆ.
ಐಡಿಬಿಐ ಉತ್ಸವ ಫಿಕ್ಸಿಡ್ ಡೆಪಾಸಿಟ್
ಐಡಿಬಿಐ ಬ್ಯಾಂಕ್ ತನ್ನ ಉತ್ಸವ ಎಫ್‌ಡಿಗಳ ಕೊನೆಯ ದಿನಾಂಕವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಈ ಹಿಂದೆ ಅಮೃತ್ ಮಹೋತ್ಸವ ಎಫ್‌ಡಿ ಎಂದು 375 ದಿನಗಳು ಮತ್ತು 444 ದಿನಗಳ ಕಾಲಾವಧಿಯ ಬಡ್ಡಿಯನ್ನು ಹೆಚ್ಚಿಸಲಾಗಿದೆ. ಈಗ ಕ್ರಮವಾಗಿ ಶೇಕಡ 7.60 ಮತ್ತು ಶೇಕಡ 7.75 ಬಡ್ಡಿದರ ಲಭ್ಯವಾಗುತ್ತದೆ. ದರಗಳು ನವೆಂಬರ್ 12 ರಿಂದ ಜಾರಿಗೆ ಬರುತ್ತವೆ.
ಇಂಡಿಯನ್ ಬ್ಯಾಂಕ್ ವಿಶೇಷ ಎಫ್‌ಡಿ
ಇಂಡಿಯನ್ ಬ್ಯಾಂಕ್ ತನ್ನ ವಿಶೇಷ ಡೆಪಾಸಿಟ್ ಯೋಜನೆಗಳಾದ "ಇಂಡ್ ಸೂಪರ್ 400" ಮತ್ತು "ಇಂಡ್ ಸುಪ್ರೀಂ 300 ದಿನಗಳು" ಗಡುವನ್ನು ವಿಸ್ತರಿಸಿದೆ. ಇದು ಸುಮಾರು ಶೇಕಡ 8ರವರೆಗೆ ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕಿನ ವೆಬ್‌ಸೈಟ್ ಪ್ರಕಾರ, ಈ ಯೋಜನೆಗಳ ಗಡುವನ್ನು ಹಿಂದಿನ ನವೆಂಬರ್ 3 ಗಡುವಿನಿಂದ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.


Click it and Unblock the Notifications