ಎಲ್ಐಸಿಯ 'ಜೀವನ್ ಉಮಂಗ್' ಬಗ್ಗೆ ನಿಮಗೆಷ್ಟು ಗೊತ್ತು?
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯಾವುದೇ ಅನುಮಾನ ಮತ್ತು ಸಂಶಯಕ್ಕೆ ಎಡೆ ಮಾಡಿಕೊಡದೆ ಸಾರ್ವಜನಿಕರಿಗೆ ಜೀವನ ಭದ್ರತೆ ಒದಗಿಸುತ್ತಿರುವ ಭಾರತದ ಅತಿದೊಡ್ಡ ಸಂಸ್ಥೆ ಆಗಿದೆ. ಸಾಕಷ್ಟು ಗ್ರಾಹಕರು ಇಂದು ಎಲ್‌ಐಸಿ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಗ್ರಾಹಕರ ವಿವಿಧ ಬೇಡಿಕೆಗಳನ್ನು ಪೂರೈಸುವ ಜೊತೆಗೆ ನಾನಾ ನಮೂನೆಯ ವಿಮಾ ಸೌಲಭ್ಯಗಳನ್ನು ಇದು ಒದಗಿಸುತ್ತಿದೆ. ಎಲ್ಐಸಿಯು ಸರ್ಕಾರಿ ಸ್ವಾಮ್ಯದ ವಿಮೆ ಮತ್ತು ಹೂಡಿಕೆ ಸಂಸ್ಥೆಯಾಗಿದ್ದು, ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಬೃಹತ್ ವ್ಯಾಪ್ತಿಯನ್ನು ಹೊಂದಿದೆ.
ಎಲ್ಐಸಿ ನೀಡುವ ಪಾಲಿಸಿಗಳು ವೈವಿಧ್ಯತೆಯಿಂದ ಕೂಡಿರುತ್ತವೆ. ಗ್ರಾಹಕರ ಆಶಯ ಹಾಗೂ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದಲೇ ಹಲವು ಪಾಲಿಸಿಗಳನ್ನು ವಿನ್ಯಾಸಗೊಳಿಸಲಾಗಿದೆ. ಕೆಲವು ಪಾಲಿಸಿಗಳು ಟರ್ಮ್ ರಿಟರ್ನ್ಸ್ ಮತ್ತು ಒಟ್ಟು ಮೊತ್ತದ ಆದಾಯವನ್ನು ನೀಡುತ್ತವೆ. ಸದ್ಯ ಜೀವನ್ ಉಮಂಗ್ ಎಲ್ಐಸಿ ಪಾಲಿಸಿಯು ಚಂದಾದಾರರಿಗೆ ಮತ್ತು ಅವರ ಕುಟುಂಬಕ್ಕೆ ಉಳಿತಾಯ ಹಾಗೂ ಆದಾಯ ಲಾ' ಎರಡನ್ನೂ ಒದಗಿಸುತ್ತದೆ. ಸರಳವಾಗಿ ಹೇಳುವುದಾದರೆ, ಈ ಪಾಲಿಸಿಯು ಪಾಲಿಸಿದಾರನ ಕುಟುಂಬಕ್ಕೆ ಆದಾಯ ಮತ್ತು ರಕ್ಷಣೆಯ ಎರಡನ್ನೂ ನೀಡುತ್ತದೆ. ಪ್ರೀಮಿಯಂ ಅನ್ನು ಪಾಲಿಸಿದಾರರು ಮುಂಚಿತವಾಗಿಯೂ ಪಾವತಿಸಬಹುದು. ಇಲ್ಲದಿದ್ದರೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿಯೂ ಕಂತು ರೂಪದಲ್ಲಿ ಕಟ್ಟಬಹುದು.
ಜೀವನ್ ಉಮಂಗ್ ಯೋಜನೆಯು ಪ್ರೀಮಿಯಂ ಪಾವತಿ ಅವಯ ಅಂತ್ಯದಿಂದ ಮೆಚ್ಯೂರಿಟಿ ತನಕ ವಾರ್ಷಿಕ ಪ್ರಯೋಜನಗಳನ್ನು ನೀಡುತ್ತದೆ. ಮೆಚ್ಯೂರಿಟಿ ಆಗುವಾಗ ಅಥವಾ ಪಾಲಿಸಿದಾರರ ಮರಣದ ಸಮಯದಲ್ಲಿ ಇಡಿಗಂಟನ್ನು ಒದಗಿಸುತ್ತದೆ. ಈ ಪಾಲಿಸಿಯು ಇತರ ಪ್ರಯೋಜನಗಳನ್ನೂ ಒಳಗೊಂಡಿದ್ದು, ಪಾಲಿಸಿ ಮೇಲೆ ಸಾಲ ಸೌಲಭ್ಯವನ್ನು ಪಡೆಯಬಹುದು.

ಹಲವು ಅನುಕೂಲ
ಜೀವನ್ ಉಮಂಗ್ ಪಾಲಿಸಿಯು ಮೇಲೆ ವಿವರಿಸಿದಂತೆ ಹಲವಾರು ಅನುಕೂಲಗಳನ್ನು ಪಡೆಯಬಹುದು. 3 ಪ್ರಕರಣಗಳ ವಿವರಣೆ ನೀಡುವ ಜೊತೆಗೆ ಪಾವತಿ ಸಮಯದಲ್ಲಿನ ಕೆಲವೊಂದು ಷರತ್ತುಗಳನ್ನು ಇಲ್ಲಿ ತಿಳಿಸಲಾಗಿದೆ.
ಮರಣದ ವಿಮಾ ಪಾವತಿ:
ಮರಣ ವಿಮಾ ಮೊತ್ತವು ವಾರ್ಷಿಕ ಪ್ರೀಮಿಯಂನ 10 ಪಟ್ಟಿಗೆ ಸಮನಾಗಿರುತ್ತದೆ. ಮೆಚ್ಯೂರಿಟಿಯಲ್ಲಿನ ವಿಮಾ ಮೊತ್ತ ಅಥವಾ ಮರಣದ ನಂತರ ಪಾವತಿಸಬೇಕಾದ ಸಂಪೂರ್ಣ ಮೊತ್ತ... ಅಂದರೆ ಪಾಲಿಸಿದಾರರ ಕುಟುಂಬಕ್ಕೆ ಮೂಲ ವಿಮಾ ಮೊತ್ತದ ಶೇ. 110% ರಷ್ಟು ಹಣ ಲಭಿಸುತ್ತದೆ. ಮರಣದ ದಿನಾಂಕದಿಂದ ಪಾವತಿಸಿದ ಎಲ್ಲಾ ಪ್ರೀಮಿಯಂಗಳಲ್ಲಿ ಕನಿಷ್ಠ 105% ಆಗಿರಬೇಕು. ಪಾಲಿಸಿ ಮೊತ್ತ, ಹೆಚ್ಚುವರಿ ಮೊತ್ತಗಳು ಮತ್ತು ರೈಡರ್ ಪ್ರೀಮಿಯಂಗಳು ಸೇರಿದಂತೆ ಯಾವುದಕ್ಕೂ ಪಾಲಿಸಿದಾರ ತೆರಿಗೆಗಳನ್ನು ಕಟ್ಟುವ ಅವಶ್ಯಕತೆ ಇಲ್ಲ. ಮರಣ ಪ್ರಕರಣದಲ್ಲಿ ಪಾಲಿಸಿದಾರರ ಕುಟುಂಬಕ್ಕೆ ಎಲ್ಲಾ ಪ್ರಯೋಜನಗಳನ್ನು ವರ್ಗಾಯಿಸಲಾಗುತ್ತದೆ.

ಬದುಕುಳಿಯುವ ಲಾಭ
ಪ್ರೀಮಿಯಂ-ಪಾವತಿಯ ಅಂತ್ಯದವರೆಗೆ ಪಾಲಿಸಿದಾರರು ಉಳಿದುಕೊಂಡರೆ ಮತ್ತು ಎಲ್ಲಾ ಬಾಕಿ ಪ್ರೀಮಿಯಂಗಳನ್ನು ಸರಿಯಾಗಿ ಪಾವತಿಸಿದ್ದರೆ, ಪಾಲಿಸಿದಾರರಿಗೆ ಪ್ರತಿ ವರ್ಷ ಮೂಲ ವಿಮಾ ಮೊತ್ತದ 8% ಗೆ ಸಮನಾದ ಬದುಕುಳಿಯುವ ಲಾಭ (ಸರ್ವೈವಲ್) ಪ್ರಯೋಜನವನ್ನು ನೀಡಲಾಗುತ್ತದೆ. ಈ ಲಾಭದ ಮೊದಲ ಪಾವತಿಯನ್ನು ಪ್ರೀಮಿಯಂ ಪಾವತಿಸುವ ಅವಧಿಯ ಕೊನೆಯಲ್ಲಿ ನೀಡಲಾಗುತ್ತದೆ. ನಂತರ ಲೈಫ್ ಅಶ್ಯೂರ್ಡ್ ಉಳಿದುಕೊಳ್ಳುವವರೆಗೆ ಅಥವಾ ಪಾಲಿಸಿ ವಾರ್ಷಿಕೋತ್ಸವದವರೆಗೆ ಯಾವುದು ಮೊದಲು ಬರುತ್ತದೋ ಅಷ್ಟು ಪಾವತಿಗಳನ್ನು ಮಾಡಲಾಗುತ್ತದೆ.
ಏನೆಲ್ಲಾ ಲಾಭ:
ಪಾಲಿಸಿದಾರನು ಪಾಲಿಸಿ ಅವಯ ಅಂತ್ಯದವರೆಗೆ ಉಳಿದುಕೊಂಡಿದ್ದರೆ ಮತ್ತು ಅಗತ್ಯವಿರುವ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದ್ದರೆ ಮೂರು ಲಾಭಗಳು ಸಿಗುತ್ತವೆ. ಮೂಲ ವಿಮಾ ಮೊತ್ತ, ಸರಳ ರಿವರ್ಷನರಿ ಬೋನಸ್ ಮತ್ತು ಘೋಷಣೆ ವೇಳೆ ಅಂತಿಮ ಸೇರ್ಪಡೆ ಬೋನಸ್ ನೀಡಲಾಗುತ್ತದೆ.

ಪಾಲಿಸಿ ನಷ್ಟ ತಪ್ಪಿಸಿ
ಒಂದು ವೇಳೆ ಪಾಲಿಸಿದಾರರು ನಿಗದಿತ ಪ್ರೀಮಿಯಂ ಮೊತ್ತವನ್ನು ಕಟ್ಟದಿದ್ದರೆ ಪಾಲಿಸಿ ನಷ್ಟವಾಗುತ್ತದೆ. ಆದಾಗ್ಯೂ, ಈ ಪಾಲಿಸಿಯನ್ನು ಪ್ರೀಮಿಯಂ ಕಟ್ಟದ ದಿನಾಂಕದಿಂದ 5 ವರ್ಷಗಳ ಕಾಲ ಮಿತಿಯೊಳಗೆ ಮತ್ತೆ ಪಡೆಯಬಹುದು. ಬಡ್ಡಿ ಜೊತೆ ನಿಗದಿತ ಪ್ರೀಮಿಯಂ ಮೊತ್ತವನ್ನು ಪುನಃ ಕಟ್ಟಿ ಪಾಲಿಸಿ ನಷ್ಟವಾಗುವುದನ್ನು ತಡೆಯಬಹುದು.
ಅರ್ಹತೆ ಮಾನದಂಡ ಮತ್ತು ಇತರ ಷರತ್ತುಗಳೇನು?ಮಾನದಂಡ | ಅರ್ಹತೆ |
ಕನಿಷ್ಠ ಮೂಲ ವಿಮಾ ಮೊತ್ತ ಖಾತ್ರಿ | ರೂ. 2 ಲಕ್ಷ |
ಗರಿಷ್ಠ ಮೂಲ ವಿಮಾ ಮೊತ್ತ ಖಾತ್ರಿ | ಯಾವುದೇ ಮಿತಿ ಇಲ್ಲ |
ಪ್ರೀಮಿಯಂ ಪಾವತಿಸುವ ಅವಧಿ | 15, 20, 25 ಮತ್ತು 30 ವರ್ಷಗಳು |
ಪಾಲಿಸಿಯ ಅವಧಿ | 100 ವರ್ಷಗಳು |
ಎಂಟ್ರಿ ಪಡೆಯಲು ಕನಿಷ್ಠ ವಯಸ್ಸು | 90 ದಿನಗಳು (ಪೂರ್ಣಗೊಂಡಿರಬೇಕು) |
ಗರಿಷ್ಠ ವಯಸ್ಸು | 55 ವರ್ಷಗಳು |
ಪ್ರೀಮಿಯಂ ಪಾವತಿಸುವ ಅವಧಿಯ ಕನಿಷ್ಠ ವಯಸ್ಸು | 30 ವರ್ಷಗಳು |
ಪ್ರೀಮಿಯಂ ಪಾವತಿಸುವ ಅವಧಿಯ ಗರಿಷ್ಠ ವಯಸ್ಸು | 70 ವರ್ಷಗಳು |
ಪಾಲಿಸಿ ಮೆಚ್ಯೂರಿಟಿ ವಯಸ್ಸು | 100 ವರ್ಷಗಳು |

ಉಪಸಂಹಾರ
ಪಾಲಿಸಿದಾರರಿಗೆ ಎಲ್ಐಸಿಯ ಜೀವನ್ ಉಮಂಗ್ ಡಬ್ಬಲ್ ಪ್ರಯೋಜನವನ್ನು ನೀಡುತ್ತದೆ. ಇದು ದೀರ್ಘಾವಧಿಯ ಎಂಡೋಮೆಂಟ್ ಪಾಲಿಸಿ ಆಗಿದೆ. ಯಾವುದೇ ವ್ಯಕ್ತಿ ತನಗೆ ಜೀವಮಾನದ ಕವರೇಜ್ ಬೇಕಾದರೆ ಜೀವನ್ ಉಮಂಗ್ ಯೋಗ್ಯವಾದ ಹೂಡಿಕೆ ಆಯ್ಕೆ. ಆದಾಗ್ಯೂ, ವಿಮರ್ಶೆಗಳ ಆಧಾರದ ಮೇಲೆ ಜೀವ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಬಾರದು. ಯಾವುದೇ ಪಾಲಿಸಿಗೆ ಚಂದಾದಾರರಾಗುವ ಮೊದಲು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕು. ಪ್ರತಿಯೊಂದು ನೀತಿಯು ಎಲ್ಲರಿಗೂ ಸರಿಹೊಂದುವುದಿಲ್ಲ ಎಂದು ಅರ್ಥಮಾಡಿಕೊಳ್ಳುವುದು. ಒಬ್ಬರ ಅವಶ್ಯಕತೆ ಆದರೂ ಜೀವ ವಿಮಾ ಕವರೇಜ್ ಹಲವು ಪ್ರಯೋಜನಗಳೊಂದಿಗೆ ಬರುತ್ತದೆ.