ಹಣದುಬ್ಬರವು ಪ್ರಸ್ತುತ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ನಡುವೆ ಹೂಡಿಕೆಗೆ ನಮಗೆ ಉತ್ತಮ ಆಯ್ಕೆ ಚಿನ್ನ ಎಂದು ಪರಿಗಣಿಸಲಾಗುತ್ತದೆ. ಜಾಕ್ಸನ್ ಹೋಲ್ ಸಭೆಯಲ್ಲಿ ನೂತನ ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಭಾಷಣವನ್ನು ಮಾಡಿದ್ದಾರೆ. ಇದಾದ ಬಳಿಕ ಚಿನ್ನದ ಬೆಲೆಗಳು ಪ್ರತಿ ಔನ್ಸ್‌ಗೆ 1,950 ಡಾಲರ್‌ಗಿಂತ ಕಡಿಮೆಯಾಗಿಯೇ ಉಳಿದಿದೆ.
ಭಾರತದಲ್ಲಿ ಚಿನ್ನದ ಬೆಲೆಯು ಶನಿವಾರದಂದು 22 ಕ್ಯಾರಟ್ ಚಿನ್ನ 10 ಗ್ರಾಂಗೆ 54,500 ರೂಪಾಯಿ ಮತ್ತು 24 ಕ್ಯಾರಟ್‌ನ 10 ಗ್ರಾಂಗೆ 59,450 ರೂಪಾಯಿ ಆಗಿದೆ. ಬಹುಪಾಲು ನಗರಗಳಲ್ಲಿ, 22-ಕ್ಯಾರಟ್ ಚಿನ್ನದ ಬೆಲೆಗಳು 54,000 ರೂಪಾಯಿ ಆಗಿದೆ. 24-ಕ್ಯಾರಟ್ 10 ಗ್ರಾಂಗೆ 59,000 ರೂಪಾಯಿ ಆಗಿದೆ.

ಜಾಗತಿಕವಾಗಿ ಪ್ರಸ್ತುತ ಪರಿಸ್ಥಿತಿಯು ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಸಿಲುಕಿದೆ. ಹಣದುಬ್ಬರ ಏರಿಕೆಯಾಗಿದೆ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಆದರೆ ಇಂಚು ಕೊಂಚ ಚಿನ್ನದ ಬೆಲೆ ಸುಧಾರಿಸಿದೆ. ಯುಎಸ್ ದರ ಏರಿಕೆಯು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಹಣದುಬ್ಬರದ ಸಂದರ್ಭದಲ್ಲಿ ಚಿನ್ನವನ್ನು ಸಾಮಾನ್ಯವಾಗಿ ಕಷ್ಟದ ಸಮಯದಲ್ಲಿ ಆದಾಯವನ್ನು ರಕ್ಷಿಸಲು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ.
ಶುಕ್ರವಾರ ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ ಶೇಕಡ 4ರಷ್ಟು ಕುಸಿದು 1,910.31 ಡಾಲರ್‌ಗೆ ತಲುಪಿದೆ. ಯುಎಸ್ ಗೋಲ್ಡ್ ಫ್ಯೂಚರ್ಸ್ ಶೇಕಡ 4ರಷ್ಟು ಇಳಿಕೆಯಾಗಿ, ಔನ್ಸ್‌ಗೆ 1,939.90 ಡಾಲರ್ ಆಗಿದೆ. ಡಾಲರ್ ಮತ್ತು 10-ವರ್ಷದ ಬೇಂಚ್‌ಮಾರ್ಕ್ ವೇಗವನ್ನು ಪಡೆದುಕೊಂಡಿದೆ. ಎಂಸಿಎಕ್ಸ್‌ನಲ್ಲಿ ಅಕ್ಟೋಬರ್‌ನಲ್ಲಿ ಕೊನೆಯಾಗುವ ಗೋಲ್ಡ್ ಫ್ಯೂಚರ್ಸ್ 171 ರೂಪಾಯಿ ಅಥವಾ ಶೇಕಡ 0.29 ರಷ್ಟು ಕುಸಿದು ಪ್ರತಿ ಗ್ರಾಂಗೆ 58,640 ರೂಪಾಯಿ ಆಗಿದೆ.
ಹಳದಿ ಲೋಹದ ಮೇಲೆ ಹೂಡಿಕೆ ಮಾಡುವುದು ಹೇಗೆ?
ಈ ಬಗ್ಗೆ ಮಾಹಿತಿ ನೀಡಿದ ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಮುಖ್ಯಸ್ಥ ಹರೀಶ್ ವಿ, "ಹಣದುಬ್ಬರ ಏರಿಕೆ, ಚೀನಾ ಆರ್ಥಿಕ ಬಿಕ್ಕಟ್ಟುಗಳು, ರಷ್ಯಾ-ಉಕ್ರೇನ್ ನಡುವಿನ ಯುದ್ಧ, ಕೊರೊನಾ ಸಾಂಕ್ರಾಮಿಕ ಮೊದಲಾದ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಗಳ ನಡುವೆ ಚಿನ್ನವು ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಮುಂದುವರಿದಿದೆ," ಎಂದು ತಿಳಿಸಿದ್ದಾರೆ.
ಈ ನಡುವೆ ಎಲ್‌ಕೆಪಿ ಸೆಕ್ಯುರಿಟೀಸ್‌ನ ವಿಪಿ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ, "ಜಾಗತಿಕ ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಮನಿಸಿದರೆ ಮತ್ತು ಅನಿಶ್ಚಿತ ಜಾಗತಿಕ ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ, ಚಿನ್ನದ ಬೆಲೆಗಳು ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ. ಆದರೆ ಪರಿಸ್ಥಿತಿಯು ಬದಲಾವಣೆಯಾಗಬಹುದು. ಫೆಡರಲ್ ರಿಸರ್ವ್ ತನ್ನ ದರ ಏರಿಕೆಗಳಲ್ಲಿ ಸಂಭಾವ್ಯ ವಿರಾಮ ಅಥವಾ ಬಡ್ಡಿದರ ಕಡಿತದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ ಕ್ಷಣ, ಚಿನ್ನದ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ," ಎಂದು ಹೇಳಿದ್ದಾರೆ.
ಗಮನಿಸಿ: ಈ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವಂತೆ ಲೇಖಕರು ಅಥವಾ ಗ್ರೇನಿಯಮ್ ಮಾಹಿತಿ ತಂತ್ರಜ್ಞಾನಗಳು ಸಲಹೆ ನೀಡುವುದಿಲ್ಲ. ಲೇಖಕರು, ಅಥವಾ ಬ್ರೋಕರೇಜ್ ಸಂಸ್ಥೆ ಅಥವಾ ಗ್ರೇನಿಯಮ್‌ನ ಈ ಬರಹದ ಆಧಾರದ ಮೇಲೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರಿಂದಾಗುವ ನಷ್ಟಕ್ಕೆ ಗುಡ್‌ರಿಟರ್ನ್ಸ್ ಆಗಲಿ ಅಥವಾ ಲೇಖಕರಾಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಜ್ಞರೊಂದಿಗೆ ಸಮಾಲೋಚಿಸುವುದು ಅಗತ್ಯ.


Click it and Unblock the Notifications