For Quick Alerts
ALLOW NOTIFICATIONS  
For Daily Alerts

ನಿಮ್ಮ ವಯಸ್ಸು 30ರೊಳಗಿದೆಯೇ? ನೀವು ತೆಗೆದುಕೊಳ್ಳಲೇಬೇಕಾದ 5 ಹಣಕಾಸಿನ ನಿರ್ಧಾರಗಳು ಇಲ್ಲಿವೆ

|

ಯುವ ಜನತೆ ಜೀವನದಲ್ಲಿ ಬೇಗನೆ ಸೆಟಲ್ ಆಗಬೇಕು ಎಂದು ಬಯಸುವುದು ಸಾಮಾನ್ಯ. ಅದರಲ್ಲೂ 30 ರಿಂದ 40ನೇ ವಯಸ್ಸಿನೊಳಗೆ ಹೇಗಾದರೂ ಮನೆ, ಆಸ್ತಿ ಮಾಡಿ ಕೈ ತುಂಬ ಸಂಬಳ ಬರುವ ಕೆಲಸ ಸಿಗಬೇಕು ಎಂದು ಗುರಿಯನ್ನಿಟ್ಟುಕೊಂಡಿರುತ್ತಾರೆ. ಆದರೆ ಈ ಕನಸನ್ನು ನನಸು ಮಾಡಿಕೊಳ್ಳುವುದು ತೆಗೆದುಕೊಳ್ಳುವ ನಿರ್ಧಾರ, ಹಣಕಾಸಿನ ನಿರ್ವಹಣೆ, ಹಣದ ಸಮರ್ಪಕ ಬಳಕೆ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಜೀವನದಲ್ಲಿ ನೀವು ತೆಗೆದುಕೊಳ್ಳುವ ಹಣಕಾಸಿನ ನಿರ್ಧಾರಗಳು ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯಬಲ್ಲದು ಇಲ್ಲವೇ ಯೋಚಿಸದೆ, ಅಂದಾಜಿಸದೆ ತೆಗೆದುಕೊಳ್ಳುವ ಕಾರ್ಯಗಳು ಪಾತಾಳಕ್ಕೆ ನೂಕಬಹುದು. ಹೀಗಾಗಿ ಜೀವನದ ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಯಾವ ಸಮಯದಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತೀರ ಎಂಬುದರ ಆಧಾರದ ಮೇಲೆ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ.

ಹೀಗೆ ನೀವು 30ರ ವಯಸ್ಸಿನೊಳಗಿದ್ದರೆ ಹಣಕಾಸಿನ ನಿರ್ಧಾರಗಳನ್ನು ಕೈಗೊಳ್ಳುವ ಸಮಯ ಬಂದಿದೆ. ಭವಿಷ್ಯದ ದೃಷ್ಟಿಯಿಂದ ಸರಿಯಾದ ದಾರಿ ಆಯ್ದುಕೊಳ್ಳಬೇಕಿದೆ. ಹಾಗಿದ್ದರೆ ಯಾವ ರೀತಿಯ ಹಣಕಾಸಿನ ಕಾರ್ಯಗನ್ನು ಕೈಗೆತ್ತಿಕೊಳ್ಳಬೇಕು ಎಂಬುದಕ್ಕೆ ಈ ಲೇಖನದಲ್ಲಿ ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ ಓದಿ.

ಸಾಲದ ಬಲೆಗೆ ಬೀಳುವುದನ್ನು ತಪ್ಪಿಸಿ

ಸಾಲದ ಬಲೆಗೆ ಬೀಳುವುದನ್ನು ತಪ್ಪಿಸಿ

ನಿಮ್ಮ ಪರ್ಸ್‌ನಲ್ಲಿ ಅನೇಕ ಕ್ರೆಡಿಟ್‌ಗಳ ಇರಬೇಕಾ ಎಂದು ಮೊದಲು ಯೋಚಿಸಿ. ಪ್ರತಿಯೊಂದು ಕಾರ್ಡ್‌ಗಳು ಅದರದೇ ಆದ ಬಿಲ್ಲಿಂಗ್ ದಿನಾಂಕ, ಪಾವತಿಗೆ ಕಡೇ ದಿನಾಂಕವನ್ನು ಹೊಂದಿರುತ್ತವೆ. ನೀವು ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಇಟ್ಟುಕೊಳ್ಳುತ್ತಾ ಹೋದಂತೆ ನಿಮ್ಮ ಬಯಕೆಯ ಮಿತಿಯು ವಿಸ್ತಾರಗೊಳ್ಳುತ್ತ ತೆರಳುತ್ತದೆ. ಜೊತೆಗೆ ಹಣಕಾಸಿನ ಹೊರೆಯ ಜೊತೆಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಹೆಚ್ಚು.

ಹೀಗೆ ಕ್ರೆಡಿಟ್ ಕಾರ್ಡ್ ಅಷ್ಟೇ ಅಲ್ಲದೆ ಇತರೇ ಸಾಲದ ಬಲೆಯಲ್ಲಿ ಬೀಳುವುದಕ್ಕೂ ಮುನ್ನ ಯೋಚಿಸಿ. ನೀವು ಗಳಿಸುವ ಆದಾಯದ ಶಕ್ತಿಯನ್ನು ಬರೀ ತಿಂಗಳು ಕಂತುಗಳ ಮೂಲಕ ಕಟ್ಟತ್ತಾ ವ್ಯಯ ಮಾಡದಿರಿ. ನೀವು ಉತ್ತಮವಾಗಿ ಹಣಕಾಸನ್ನು ನಿರ್ವಹಿಸಿ ಯೋಜನೆ ಮಾಡಿಕೊಂಡರೆ ಈ ರೀತಿಯ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬಹುದು. ಸಾಲ ಮಾಡುವುದು ಸಾಮಾನ್ಯ ಆದರೆ ಜೀವನವೇ ಸಾಲದಿಂದ ತುಂಬಿರಬಾರದು.

 

ಮೊದಲೇ ಹೂಡಿಕೆ ಮಾಡಲು ಪ್ರಾರಂಭಿಸಿ

ಮೊದಲೇ ಹೂಡಿಕೆ ಮಾಡಲು ಪ್ರಾರಂಭಿಸಿ

ಕೇವಲ ಉಳಿತಾಯ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಸುಲಭವಲ್ಲ. ಬೇಗನೆ ತಲುಪಲು ಸಾಧ್ಯವಿಲ್ಲ. ಉಳಿತಾಯದ ಜೊತೆಗೆ ಹಣವನ್ನು ಹೂಡಿಕೆ ಮಾಡಬೇಕು. ಅಂದರೆ ಹಣದಿಂದಲೇ ಹಣವನ್ನು ಸಂಪಾದಿಸಬೇಕು. ಜೀವನದಲ್ಲಿ ಕೆಲವೊಮ್ಮೆ ರಿಸ್ಕ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಈಕ್ವಿಟಿಗಳಲ್ಲಿನ ಹೂಡಿಕೆಯೊಂದಿಗೆ ಪ್ರಾರಂಭಿಸುವುದು ಉತ್ತಮ ಮಾರ್ಗವಾಗಿದೆ. ಆದರೆ ನೀವು ನೇರವಾಗಿ ಷೇರುಗಳನ್ನು ಖರೀದಿಸಬೇಕೇ? ಅಥವಾ ಎಲ್ಲಿ ಹಣ ಹೂಡಬೇಕು ಎಂಬುದನ್ನು ವ್ಯಾಪಕವಾದ ಸಂಶೋಧನೆ ಮತ್ತು ಸಲಹೆ ಮೂಲಕ ಈಕ್ವಿಟಿ ಪೋರ್ಟ್‌ಪೊಲಿಯೊ ರಚಿಸಿ. ಇದಲ್ಲದೆ, ಯಾವುದೇ ವಿಳಂಬವಿಲ್ಲದೆ, ಮ್ಯೂಚುಯಲ್ ಫಂಡ್‌ಗಳೊಂದಿಗೆ ನಿಮ್ಮ ಸ್ವಂತ ಈಕ್ವಿಟಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪೋರ್ಟ್‌ಪೊಲಿಯೊ ರಚಿಸಿ.

 

ನಿಮಗೆ ಮೊದಲ ಕೆಲಸ ಸಿಕ್ಕಿದೆಯೇ? ಹಣವನ್ನು ಮ್ಯಾನೇಜ್ ಮಾಡಲು ಈ ಸೂತ್ರಗಳನ್ನು ಅನುಸರಿಸಿನಿಮಗೆ ಮೊದಲ ಕೆಲಸ ಸಿಕ್ಕಿದೆಯೇ? ಹಣವನ್ನು ಮ್ಯಾನೇಜ್ ಮಾಡಲು ಈ ಸೂತ್ರಗಳನ್ನು ಅನುಸರಿಸಿ

ಉತ್ತಮ ನಿವೃತ್ತಿ ಯೋಜನೆಯನ್ನು ಹೊಂದಿರಿ

ಉತ್ತಮ ನಿವೃತ್ತಿ ಯೋಜನೆಯನ್ನು ಹೊಂದಿರಿ

ಭವಿಷ್ಯದ ದೃಷ್ಟಿಯಿಂದ ಉತ್ತಮ ನಿವೃತ್ತಿ ಯೋಜನೆಗಳನ್ನು ಹೊಂದುವುದು ಉತ್ತಮ ನಿರ್ಧಾರವಾಗಿದೆ. ನೀವು ಮ್ಯೂಚುಯಲ್ ಫಂಡ್‌ಗಳ ನೇರ ಷೇರುಗಳು ಮತ್ತು ಎಸ್‌ಐಪಿಗಳ ಮೂಲಕ ಹೂಡಿಕೆ ಮಾಡಲು ಪ್ರಾರಂಭಿಸಿದಾಗ, ನಿವೃತ್ತಿ ಯೋಜನೆಯನ್ನು ನಿಮ್ಮ ದೊಡ್ಡ ಯೋಜನೆಗಳಲ್ಲಿ ಪರಿಗಣಿಸಿ.

ನಿಮ್ಮ ಎಸ್‌ಐಪಿಗಳು ಒಂದು ಅವಧಿಯಲ್ಲಿ ಸಾಕಷ್ಟು ಸಂಪತ್ತನ್ನು ಸೃಷ್ಟಿಸುತ್ತದೆಯಾದರೂ, ನಾವು ಕಾರ್ಪಸ್ ಅನ್ನು ಸರಳವಾಗಿ ಪರಿವರ್ತಿಸಬಹುದು. ಮಾಸಿಕ ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ ಮತ್ತು ದಕ್ಷ ಪಿಂಚಣಿ ಯೋಜನೆಯಾಗಿ. ಅಲ್ಲದೆ, ಪ್ರಸ್ತುತ ಪ್ರಸ್ತಾಪದಲ್ಲಿರುವ ಕೆಲವು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಹೆಜ್ಜೆಯಾಗಿದೆ. ನಿಮ್ಮ ಆದಾಯ ಮಟ್ಟದಲ್ಲಿನ ಏರಿಕೆಗೆ ಅನುಗುಣವಾಗಿ ನಮ್ಮ ಎಸ್‌ಐಪಿಗಳನ್ನು ಪ್ರಮಾಣಾನುಗುಣವಾಗಿ ಕ್ರಮೇಣ ಹೆಚ್ಚಿಸುವುದು ಪರಿಗಣಿಸಬೇಕಾದ ಪ್ರಮುಖ ಅಂಶ.

 

ಎಷ್ಟೇ ಪ್ರಯತ್ನಿಸಿದ್ರೂ ಹಣ ಉಳಿತಾಯವಾಗದಿದ್ರೆ ಇದನ್ನೊಮ್ಮೆ ಓದಿ ಸಾಕುಎಷ್ಟೇ ಪ್ರಯತ್ನಿಸಿದ್ರೂ ಹಣ ಉಳಿತಾಯವಾಗದಿದ್ರೆ ಇದನ್ನೊಮ್ಮೆ ಓದಿ ಸಾಕು

ಒಳ್ಳೆಯ ವಿಮೆ ಮಾಡಿಸಿ

ಒಳ್ಳೆಯ ವಿಮೆ ಮಾಡಿಸಿ

ಬಹುತೇಕ ಜನರು ತೆರಿಗೆ ಉಳಿತಾಯಕ್ಕಾಗಿ ವಿಮೆಯನ್ನು ಖರೀದಿಸಬಹುದು. ಆದರೆ ಪ್ರಶ್ನೆಯೆಂದರೆ ಮರಣದ ವೇಳೆ ಮತ್ತು ಆರೋಗ್ಯ ಅಗತ್ಯಗಳಿಗಾಗಿ ನೀವು ಸಾಕಷ್ಟು ವಿಮೆ ಮಾಡಿದ್ದೀರಾ? ನನಗೇನಾಗುತ್ತೆ ಮತ್ತು ನಮ್ಮ ಆರೋಗ್ಯವು ಯಾವಾಗಲೂ ಉತ್ತಮವಾಗಿರುತ್ತದೆ ಎಂದು ಭಾವಿಸುವುದು ಮೂರ್ಖತನ. ಆದ್ದರಿಂದ, ನಿಮ್ಮ ವಿಮಾ ಬಜೆಟ್ ಅನ್ನು ಯೋಜಿಸಿ, ಏಕೆಂದರೆ ಜೀವನವು ಹೆಚ್ಚು ಅನಿಶ್ಚಿತವಾಗಿರುತ್ತದೆ ಮತ್ತು ನೀವು ನಿರೀಕ್ಷಿಸದೇ ಇರುವಾಗ ಅಪಾಯ ಸಂಭವಿಸಬಹುದು.

 

40 ವಯಸ್ಸಿನೊಳಗೆ ಲೈಫ್‌ನಲ್ಲಿ ಸೆಟಲ್ ಆಗಲು ಇಷ್ಟು ಮಾಡಿ ಸಾಕು!40 ವಯಸ್ಸಿನೊಳಗೆ ಲೈಫ್‌ನಲ್ಲಿ ಸೆಟಲ್ ಆಗಲು ಇಷ್ಟು ಮಾಡಿ ಸಾಕು!

ಉತ್ತಮ ಬಜೆಟ್ ಹೊಂದಿರಿ

ಉತ್ತಮ ಬಜೆಟ್ ಹೊಂದಿರಿ

ಪ್ರತಿಯೊಬ್ಬರು ಉತ್ತಮ ಹಣಕಾಸಿನ ನಿರ್ವಹಣೆಗಾಗಿ ಅನ್ವೇಷಣೆ ಮತ್ತು ಸಾಮಾಜೀಕರಣ ಅಗತ್ಯ. ಮಾಸಿಕ ಬಜೆಟ್‌ ಅನ್ನು ರಚಿಸಿಕೊಂಡಿ ಅದಕ್ಕೆ ಅಂಟಿಕೊಳ್ಳವುದಾಗಿ ಪ್ರತಿಜ್ಞೆ ಮಾಡಬೇಕು. ಇಲ್ಲದಿದ್ದರೆ, ಖರ್ಚಿನ ಆಕರ್ಷಣೆಗಳು ನಿಮ್ಮನ್ನು ಸೆಳೆಯುತ್ತಿರುತ್ತದೆ. ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಹಾಳುಮಾಡಿಬಿಡಬಹುದು.

ಇದೇ ರೀತಿಯ ಧಾಟಿಯಲ್ಲಿ, ಅನುಭವ ಮತ್ತು ಕೌಶಲ್ಯ ಬಜೆಟ್ ರಚಿಸಿ. ನಿಮ್ಮ ಬಜೆಟ್ ಕಾರ್ಯಸೂಚಿಯಲ್ಲಿ, ನಿಮ್ಮ ಬುದ್ಧಿಶಕ್ತಿ, ಕೌಶಲ್ಯಗಳನ್ನು ನವೀಕರಿಸಲು ಮತ್ತು ಹವ್ಯಾಸಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುವ ಅನುಭವ ಮತ್ತು ಕೌಶಲ್ಯ ಬಜೆಟ್ ಅನ್ನು ಸೇರಿಸುವುದು ಉತ್ತಮವಾಗಿರುತ್ತದೆ. ಇದಕ್ಕಿಂತ ಹೆಚ್ಚಾಗಿ, ಅಂತಹ ಸಾಧನೆಗಳಿಗಾಗಿ ನಿಮಗೆ ವೈಯಕ್ತಿಕ ಸಾಲ ಅಗತ್ಯವಿಲ್ಲ. ಹಾಗಿದ್ದರೆ ತಡ ಏಕೆ ಈಗಿನಿಂದಲೇ ನಿಮ್ಮದೇ ಆದ ಉತ್ತಮ ಬಜೆಟ್ ರಚಿಸಿ, ಹಣಕಾಸಿನ ಹೆಜ್ಜೆಗಳನ್ನು ಯಶಸ್ವಿಯಾಗಿಡಿ.

 

English summary

Are You In 30 Take These 5 Financial Steps to Success

If you are below 30 age. Here are the 5 Financial steps you must take
Story first published: Monday, January 20, 2020, 17:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X