ಈಗ ಹೆಚ್ಚು ಜನರಲ್ಲಿ ಆತಂಕಕ್ಕೆ ಸೃಷ್ಟಿಯಾಗಿರುವುದು ಎಟಿಎಂ ಸಂಬಂಧಿತ ವಂಚನೆ ಪ್ರಕರಣಗಳಾಗಿದೆ. ವಂಚಕರು ನಿರಂತರವಾಗಿ ಒಂದಲ್ಲ ಒಂದು ಮಾರ್ಗಗಳ ಮೂಲಕ ಜನರನ್ನು ವಂಚನೆ ಮಾಡಲು ಕಾಯುತ್ತಿದ್ದಾರೆ. ಹೊಸ ಹೊಸ ಮಾರ್ಗಗಳನ್ನು ಕೂಡಾ ಕಂಡುಕೊಂಡಿದ್ದಾರೆ. ವಂಚಕರಿಗೆ ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಟ್ರ್ಯಾಪಿಂಗ್, ಕ್ಯಾಶ್ ಟ್ರ್ಯಾಪಿಂಗ್, ಶೋಲ್ಡರ್ ಸರ್ಫಿಂಗ್ ಮತ್ತು ಫಿಶಿಂಗ್‌ಗಳು ಹೀಗೆ ಹಲವಾರು ಮಾರ್ಗಗಳಿವೆ.
ಈ ತಂತ್ರಗಳನ್ನು ಬಳಸಿಕೊಂಡು ಎಟಿಎಂ ಕಾರ್ಡ್ ವಿವರಗಳು, ಪಿನ್ ಅಥವಾ ಎಟಿಎಂನಿಂದ ವಿತ್‌ಡ್ರಾ ಮಾಡಲಾಗುವ ಹಣವನ್ನು ಕದಿಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅನೇಕ ಬಳಕೆದಾರರು ಎಲ್ಲಿ ಕ್ಯಾಮೆರಾ ಕಣ್ಗಾವಲು ಇಲ್ಲವೋ ಅಲ್ಲಿನ ಎಟಿಎಂನಲ್ಲಿ ಡೆಬಿಟ್ ಕಾರ್ಡ್ ವಿತ್‌ಡ್ರಾ ಮಾಡಲು ಹೋದಾಗ ಈ ವಂಚನೆಗೆ ಒಳಗಾಗಿದ್ದಾರೆ. ಕಾರ್ಡ್ ಯಂತ್ರದಲ್ಲಿನ ಸಿಕ್ಕಿ ಹಾಕಿಕೊಂಡು ಸಂದಿಗ್ಧ ಸ್ಥಿತಿಗೆ ಒಳಗಾಗಿದ್ದಾರೆ.

ಎಟಿಎಂ ವಂಚಕರ ಕಾರ್ಯವಿಧಾನಗಳು
ಎಟಿಎಂ ಕಾರ್ಡ್ ವಂಚಕರು ಹಲವಾರು ವಿಧಾನಗಳನ್ನು ಹೊಂದಿದ್ದಾರೆ. ನಿಮ್ಮ ಕಾರ್ಡ್ ಅನ್ನು ವಂಚಕರು ಬದಲಿಸಿದ ಕೆಲವೇ ಕ್ಷಣಗಳಲ್ಲಿ, ಹಲವಾರು ಮಂದಿಯ ಖಾತೆಗಳಿಗೆ ನಿಮ್ಮ ಖಾತೆಯಿಂದ ಹಣ ಹೋಗಿರುವ ಬಗ್ಗೆ ಎಸ್‌ಎಂಎಸ್ ಕೂಡಾ ಬರುವುದು ಆರಂಭವಾಗಿದೆ. ನೀವು ಮೋಸ ಹೋಗುತ್ತಿದ್ದೀರಿ ಎಂದು ಅರ್ಥ ಮಾಡಿಕೊಳ್ಳುವುದಕ್ಕೂ ಮುನ್ನವೇ ನಿಮ್ಮ ಸಾವಿರಾರು ರೂಪಾಯಿಗಳು ಮಂಗಮಾಯವಾಗಿರುತ್ತದೆ.
ನೀವು ನಂಬಲು ಸಾಧ್ಯವಾಗದ ರೀತಿಯಲ್ಲಿ ಎಟಿಎಂ ವಂಚನೆಗಳು ಪ್ರಸ್ತುತ ನಡೆಯುತ್ತಿದೆ. ಅನೇಕ ಗ್ಯಾಂಗ್‌ಗಳು ದೇಶದ ಹಲವಾರು ಭಾಗಗಳಲ್ಲಿ ಎಟಿಎಂಗಳ ಹೊರಗೆ ನಿಂತು ಹೊಂಚು ಹಾಕುವವರು ಇದ್ದಾರೆ. ಯಾರಿಗೆ ಡೆಬಿಟ್ ಕಾರ್ಡ್ ಬಳಕೆ ಮಾಡಿ ಹಣ ತೆಗೆಯಲು ಬರುವುದಿಲ್ಲವೋ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಹಣ ಎಗರಿಸಿಕೊಳ್ಳುತ್ತಿದ್ದಾರೆ. ನೀವು ಎಟಿಎಂ ಕಾರ್ಡ್‌ನಲ್ಲಿ ಕಾರ್ಡ್ ಹಾಕಿದ ಬಳಿಕ ನಿಮ್ಮ ಕಾರ್ಡ್ ಸ್ಟ್ರಕ್ ಆಗಲಿದೆ.
ಹಾಗೆಯೇ ನೀವು ಎಟಿಎಂ ಮಿಷನ್‌ನಲ್ಲಿ ಏನೋ ತೊಂದರೆಯಾಗಿದೆ ಎಂದು ತಿಳಿಯುವಷ್ಟರಲ್ಲಿ ಇಬ್ಬರು- ಮೂವರು ಎಟಿಎಂ ಒಳಗೆ ಬಂದು, ಆ ಪೈಕಿ ಒಬ್ಬರು ನಿಮ್ಮ ಬಳಿ ಮಾತನಾಡುತ್ತಾರೆ. ಈ ಸಂದರ್ಭದಲ್ಲಿ ಇನ್ನೋರ್ವ ವ್ಯಕ್ತಿಯು ನಿಮ್ಮ ಕಾರ್ಡ್ ಅನ್ನು ಬೇರೆ ಕಾರ್ಡ್‌ನೊಂದಿಗೆ ಬದಲಾವಣೆ ಮಾಡಿಕೊಂಡು ವಂಚನೆಗೆ ಎಟಿಎಂ ಕಾರ್ಡ್ ಬಳಸುತ್ತಾರೆ.
ಇದಾದ ಕೆಲವೇ ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಾಡಲಾಗಿರುವ ಮೆಸೇಜ್‌ಗಳು ಬರಲು ಆರಂಭವಾಗಲಿದೆ. ಇನ್ನು ಆರ್‌ಬಿಐ ಪ್ರಕಾರ 2021-22ರಲ್ಲಿ ಇಂತಹ 65,893 ವಂಚನೆ ಪ್ರಕರಣಗಳು ನಡೆದಿದೆ. ಒಟ್ಟಾಗಿ 258.61 ಕೋಟಿ ರೂಪಾಯಿಯ ವಂಚನೆ ನಡೆದಿದೆ.
ಬ್ಯಾಂಕ್ ವಿರುದ್ಧ ದೂರು ನೀಡಿ
ಬ್ಯಾಂಕಿಂಗ್ ಸೇವೆಗಳನ್ನು ಬಳಸುವ ಗ್ರಾಹಕರು ಕೆಲವೊಮ್ಮೆ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅವರು ಎತ್ತಿರುವ ದೂರುಗಳ ತ್ವರಿತ ಪರಿಹಾರದ ಅಗತ್ಯವಿದೆ. ಎಟಿಎಂ ವಿತ್‌ಡ್ರಾ, ಚೆಕ್ ಬೌನ್ಸ್, ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಇತ್ಯಾದಿಗಳಂತಹ ವಿವಿಧ ಸೇವೆಗಳಿಗೆ ಬ್ಯಾಂಕ್‌ಗಳು ವಿಧಿಸುವ ಹೆಚ್ಚಿನ ಶುಲ್ಕಗಳು ಅನೇಕ ಗ್ರಾಹಕರು ಹೈಲೈಟ್ ಮಾಡುವ ಕೆಲವು ಸಾಮಾನ್ಯ ದೂರುಗಳಾಗಿದೆ.
ಆದಾಗ್ಯೂ, ನಿರ್ದಿಷ್ಟ ಬ್ಯಾಂಕ್‌ಗೆ ಆಂತರಿಕವಾಗಿರುವ ಕೆಲವು ದೂರುಗಳಿವೆ. ಗ್ರಾಹಕನಿಗೆ ಅದರ ಪರಿಹಾರದ ಅಗತ್ಯವಿದೆ. ಇದು ಕಳಪೆ ಗ್ರಾಹಕ ಸೇವೆಯೂ ಆಗಿರಬಹುದು. ಗ್ರಾಹಕರು ಸಾಮಾನ್ಯವಾಗಿ ಬ್ಯಾಂಕ್‌ಗಳು ಒದಗಿಸುವ ಕಳಪೆ ಗ್ರಾಹಕ ಸೇವೆಯ ಬಗ್ಗೆ ದೂರು ನೀಡುತ್ತಾರೆ.


Click it and Unblock the Notifications