ಬಜಾಜ್ ಫಿನ್‌ಸರ್ವ್‌ನ ಹೂಡಿಕೆಗೆ ಅವಕಾಶ ನೀಡುವ ಹಾಗೂ ಸಾಲ ಸೌಲಭ್ಯವನ್ನು ಒದಗಿಸುವ ಹಣಕಾಸು ಸಂಸ್ಥೆಯಾದ ಬಜಾಜ್ ಫೈನಾನ್ಸ್ ತನ್ನ ಫಿಕ್ಸಿಡ್ ಡೆಪಾಸಿಟ್ ಅಥವಾ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಮತ್ತೆ ಹೆಚ್ಚಳ ಮಾಡಿದೆ. ಬಡ್ಡಿದರವನ್ನು 35 ಮೂಲಾಂಕ ಏರಿಸಲಾಗಿದೆ. 15 ತಿಂಗಳಿನಿಂದ 23 ತಿಂಗಳ ಅವಧಿಯ ಎಫ್‌ಡಿ ಬಡ್ಡಿದರವನ್ನು ಮಾರ್ಚ್ 4ರಿಂದ ಜಾರಿಗೆ ಬರುವಂತೆ ಏರಿಸಲಾಗಿದೆ. ಪರಿಷ್ಕರಣೆ ಬಳೀಕ ಹಿರಿಯ ನಾಗರಿಕರು ಗರಿಷ್ಠ 8.20ರಷ್ಟು ಬಡ್ಡಿದರ ಪಡೆಯಬಹುದು.
60 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ಗರಿಷ್ಠ ಶೇಕಡ 7.95ರಷ್ಟು ವಾರ್ಷಿಕ ಬಡ್ಡಿದರ ಪಡೆಯಬಹುದು. 33 ತಿಂಗಳುಗಳ ವಿಶೇಷ ಅವಧಿಗೆ ಬಜಾಜ್ ಫೈನಾನ್ಸ್‌ನಲ್ಲಿ ಸಾಮಾನ್ಯ ಜನರು ಶೇಕಡ 7.75ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಹಿರಿಯ ನಾಗರಿಕರು ಇದೆ ಅವಧಿಯ ಅಂದರೆ 33 ತಿಂಗಳುಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 8.00ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿದೆ ಬಡ್ಡಿದರ ಮುಂದೆ ಓದಿ...

ಈ ಬಗ್ಗೆ ಮಾಹಿತಿ ನೀಡಿದ ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ಕಾರ್ಯಕಾರಿ ಉಪಾಧ್ಯಕ್ಷ ಸಚಿನ್ ಸಿಕ್ಕ, "ಪ್ರಸ್ತುತ ಜಾರಿಗೆ ತಂದಿರುವ ಬಡ್ಡಿದರವು ಜನರಿಗೆ ಹೆಚ್ಚಿನ ಹೂಡಿಕೆ ಮಾಡಲು ಸಹಾಯಕವಾಗಿದೆ. 44-ತಿಂಗಳ ಎಫ್‌ಡಿಯಲ್ಲಿ ನಮ್ಮ ಪರಿಷ್ಕೃತ ಬಡ್ಡಿದರಗಳು ಶೇಕಡಾ 8.20 ರಷ್ಟಿದ್ದು, ಹೂಡಿಕೆದಾರರು ಹಣದುಬ್ಬರದ ಸಂದರ್ಭದಲ್ಲಿ ಲಾಭ ಪಡೆಯಲು ಅನುವು ಮಾಡಿಕೊಡುತ್ತದೆ. ಬಜಾಜ್ ಫೈನಾನ್ಸ್‌ನೊಂದಿಗೆ ಎಫ್‌ಡಿ ಹೂಡಿಕೆ ಮಾಡುವುದು ಡಿಜಿಟಲ್ ಆಗಿದೆ ಮತ್ತು ಪೇಪರ್‌ಲೆಸ್ ಆಗಿದೆ. ಹೂಡಿಕೆದಾರರಿಗೆ ಸುರಕ್ಷಿತ," ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸೂರ್ಯೋಧಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಎಸ್‌ಎಸ್‌ಎಫ್‌ಬಿ) ಮತ್ತು ಈಕ್ವಿಟೀಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಇಎಸ್‌ಎಫ್‌ಬಿ) ಎಫ್‌ಡಿ ಬಡ್ಡಿದರವನ್ನು ಮಾರ್ಚ್ 1ರಿಂದ ಜಾರಿಗೆ ಬರುವಂತೆ ಏರಿಸಿದೆ. 10 ವರ್ಷದ ಅವಧಿಯ ಎಫ್‌ಡಿಗೆ ಸೂರ್ಯೋಧಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 200 ಪಾಯಿಂಟ್ ಏರಿಸಿದೆ. 888 ದಿನಗಳ ಎಫ್‌ಡಿ ಮೇಲೆ ಈಕ್ವಿಟೀಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ ಗ್ರಾಹಕರು ಶೇಕಡ 8.20ರಷ್ಟು ಬಡ್ಡಿದರ ನೀಡುತ್ತದೆ.
ರೆಪೋ ದರ ಏರಿಸಿದ ಆರ್‌ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸತತ ಆರನೇ ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದೆ. ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಆ ಬಳಿಕ ಆರ್‌ಬಿಐ ಜೂನ್ ತಿಂಗಳಿನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಿದೆ. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ, ಸೆಪ್ಟೆಂಬರ್‌ನಲ್ಲಿ 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಅದಾದ ಬಳಿಕ ಡಿಸೆಂಬರ್‌ನಲ್ಲಿ 35 ಮೂಲಾಂಕ ಹೆಚ್ಚಿಸಲಾಗಿದೆ. ಫೆಬ್ರವರಿಯಲ್ಲಿ 25 ಮೂಲಾಂಕ ಏರಿಸಲಾಗಿದೆ.


Click it and Unblock the Notifications