ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಸಿದ ಬಳಿಕ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಪ್ರಮುಖವಾಗಿ ಬ್ಯಾಂಕುಗಳಿಗಿಂತ ಹೆಚ್ಚಾಗಿ ಹಣಕಾಸು ಸಂಸ್ಥೆಗಳು ಅಧಿಕ ಬಡ್ಡಿದರವನ್ನು ನೀಡುತ್ತದೆ. ಭಾರತದ ಅತೀ ದೊಡ್ಡ ಮತ್ತು ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿರುವ ಬಜಾಜ್ ಫೈನಾನ್ಸ್ ತನ್ನ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಿದೆ. ಇದರಿಂದಾಗಿ 44 ತಿಂಗಳುಗಳ ಅವಧಿಯ ಹಿರಿಯ ನಾಗರಿಕರ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಶೇಕಡ 8.20ರಷ್ಟು ಏರಿಕೆಯಾಗಿದೆ.
ಮಾರ್ಚ್ 4, 2023ರಿಂದ ಜಾರಿಗೆ ಬರುವಂತೆ ಬಜಾಜ್ ಫೈನಾನ್ಸ್ ತನ್ನ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ. 15 ತಿಂಗಳಿನಿಂದ 23 ತಿಂಗಳುಗಳ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು 35 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ನಾಗರಿಕರು ಶೇಕಡ 7.95ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. 33 ತಿಂಗಳುಗಳ ವಿಶೇಷ ಎಫ್‌ಡಿ ಮೇಲೆ ಬಜಾಜ್ ಫೈನಾನ್ಸ್‌ನಲ್ಲಿ ಶೇಕಡ 7.75ರಷ್ಟು ಬಡ್ಡಿದರ ಪಡೆಯಬಹುದಾಗಿದೆ. ಇನ್ನು ಹಿರಿಯ ನಾಗರಿಕರು ಶೇಕಡ 8ರವರೆಗೆ ಬಡ್ಡಿದರವನ್ನು ಪಡೆಯಲು ಸಾಧ್ಯವಿದೆ. ಬಜಾಜ್ ಫೈನಾನ್ಸ್ ಎಫ್‌ಡಿಯಲ್ಲಿ ನೀವು ಹೂಡಿಕೆ ಮಾಡಿ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ...

ಬಜಾಜ್ ಫೈನಾನ್ಸ್ ಎಫ್‌ಡಿ ಬಡ್ಡಿದರ
12-14 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.15, ನೂತನ ಬಡ್ಡಿದರ ಶೇಕಡ 7.40
15 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.30, ನೂತನ ಬಡ್ಡಿದರ ಶೇಕಡ 7.45
15ಕ್ಕಿಂತ ಹೆಚ್ಚಿಗೆ 23 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.15, ನೂತನ ಬಡ್ಡಿದರ ಶೇಕಡ 7.50
18 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.15, ನೂತನ ಬಡ್ಡಿದರ ಶೇಕಡ 7.40
22 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.45, ನೂತನ ಬಡ್ಡಿದರ ಶೇಕಡ 7.50
24 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.50, ನೂತನ ಬಡ್ಡಿದರ ಶೇಕಡ 7.55
25-35 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.30, ನೂತನ ಬಡ್ಡಿದರ ಶೇಕಡ 7.35
30 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.40, ನೂತನ ಬಡ್ಡಿದರ ಶೇಕಡ 7.45
33 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.70, ನೂತನ ಬಡ್ಡಿದರ ಶೇಕಡ 7.75
36-60 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.60, ನೂತನ ಬಡ್ಡಿದರ ಶೇಕಡ 7.65
44 ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.85, ನೂತನ ಬಡ್ಡಿದರ ಶೇಕಡ 7.95
ಆಯ್ಕೆ ಮಾಡಿದ ಅವಧಿಗೆ ವಿಶೇಷ ಬಡ್ಡಿದರ ಲಭ್ಯ
ಗ್ರಾಹಕರು ವಿಶೇಷ ಅವಧಿಯ ಫಿಕ್ಸಿಡ್ ಡೆಪಾಸಿಟ್ ಅನ್ನು ಕೂಡಾ ಬಜಾಜ್ ಫೈನಾನ್ಸ್ ಗ್ರಾಹಕರು ಖರೀದಿ ಮಾಡಬಹುದು. 15, 18, 22, 30, 33, 34 ತಿಂಗಳ ವಿಶೇಷ ಅವಧಿ ಎಫ್‌ಡಿಯಲ್ಲಿ ಅಧಿಕ ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪೈಕಿ 44 ತಿಂಗಳ ಅವಧಿಯ ಎಫ್‌ಡಿಗೆ ಅಧಿಕ ಬಡ್ಡಿದರ ಲಭ್ಯವಾಗುತ್ತದೆ. ಗ್ರಾಹಕರು ವಾರ್ಷಿಕವಾಗಿ ಶೇಕಡ 8.20ರಷ್ಟು ಮತ್ತು ಹಿರಿಯ ನಾಗರಿಕರು ಶೇಕಡ 7.95ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ.


Click it and Unblock the Notifications