ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ ಏರಿಸಿದ ಬಜಾಜ್ ಫಿನ್‌ಸರ್ವ್, ನೂತನ ದರ ತಿಳಿಯಿರಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಹಿಂದೆ ಡಿಸೆಂಬರ್ 7ರಂದು ರೆಪೋ ದರವನ್ನು ಹೆಚ್ಚಳ ಮಾಡಿದೆ. ಇದಾದ ಬೆನ್ನಲ್ಲೇ ಹಲವಾರು ಬ್ಯಾಂಕ್‌ಗಳು ಹಾಗೂ ಕಾಪೋರೇಟಿವ್ ಸಂಸ್ಥೆಗಳು ಫಿಕ್ಸಿಡ್ ಡೆಪಾಸಿಟ್‌ ಅಥವಾ ಎಫ್‌ಡಿ ಮೇಲಿನ ಬಡ್ಡಿದರ ಏರಿಕೆ ಮಾಡಿದೆ. ಈಗ ಬಜಾಜ್ ಫಿನ್‌ಸರ್ವ್ ಕೂಡಾ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.

ದೇಶದ ಅತೀ ದೊಡ್ಡ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಾಪೋರೇಷನ್ ಆದ ಬಜಾಜ್ ಫಿನ್‌ಸರ್ವ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. 15,000 ರೂಪಾಯಿಯಿಂದ 5 ಕೋಟಿ ರೂಪಾಯಿವರೆಗಿನ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ. 2022ರ ಡಿಸೆಂಬರ್ 22ರಿಂದ ಜಾರಿಗೆ ಬರುವಂತೆ ದರವನ್ನು ಏರಿಸಲಾಗಿದೆ.

ಆದರೆ ಹಿರಿಯ ನಾಗರಿಕರ ಎಫ್‌ಡಿ ಬಡ್ಡಿ ದರವನ್ನು ಮಾತ್ರ ಹೆಚ್ಚಳ ಮಾಡಲಾಗಿದೆ. ಇನ್ನು ಹಿರಿಯ ನಾಗರಿಕರಲ್ಲದ ಸಾಮಾನ್ಯ ಜನರಿಗೆ ಬಜಾಜ್ ಫಿನ್‌ಸರ್ವ್‌ನಲ್ಲಿ ಗರಿಷ್ಠ ಬಡ್ಡಿದರ ಶೇಕಡ 7.70ರಷ್ಟಾಗಿದೆ. ಇನ್ನು ಹಿರಿಯ ನಾಗರಿಕರು ಈ ಬಡ್ಡಿದರ ಪರಿಷ್ಕರಣೆಯ ಬಳಿಕ ಗರಿಷ್ಠ ಶೇಕಡ 7.95ರಷ್ಟು ಎಫ್‌ಡಿ ಬಡ್ಡಿದರವನ್ನು ಪಡೆಯಲು ಸಾಧ್ಯವಾಗಲಿದೆ. ಬಡ್ಡಿದರದ ಬಗ್ಗೆ ಈ ಕೆಳಗಿದೆ ವಿವರ ಮುಂದೆ ಓದಿ....

 ಎಫ್‌ಡಿ ಬಡ್ಡಿದರ ಏರಿಸಿದ ಬಜಾಜ್ ಫಿನ್‌ಸರ್ವ್, ನೂತನ ದರ ತಿಳಿಯಿರಿ

60 ವರ್ಷಕ್ಕಿಂತ ಕೆಳಗಿನವರ ಎಫ್‌ಡಿ ಬಡ್ಡಿದರ (ವಾರ್ಷಿಕ ಲೆಕ್ಕಾಚಾರ)

12-14 ತಿಂಗಳು: ಶೇಕಡ 7.05 ಬಡ್ಡಿದರ
15 ತಿಂಗಳು: ಶೇಕಡ 7.20 ಬಡ್ಡಿದರ
16-17 ತಿಂಗಳು: ಶೇಕಡ 7.05 ಬಡ್ಡಿದರ
18 ತಿಂಗಳು: ಶೇಕಡ 7.25 ಬಡ್ಡಿದರ
19-21 ತಿಂಗಳು: ಶೇಕಡ 7.05 ಬಡ್ಡಿದರ
22 ತಿಂಗಳು: ಶೇಕಡ 7.35 ಬಡ್ಡಿದರ
23 ತಿಂಗಳು: ಶೇಕಡ 7.05 ಬಡ್ಡಿದರ
24 ತಿಂಗಳು: ಶೇಕಡ 7.50 ಬಡ್ಡಿದರ
25-29 ತಿಂಗಳು: ಶೇಕಡ 7.25 ಬಡ್ಡಿದರ
30 ತಿಂಗಳು: ಶೇಕಡ 7.30 ಬಡ್ಡಿದರ
31-32 ತಿಂಗಳು: ಶೇಕಡ 7.25 ಬಡ್ಡಿದರ
33 ತಿಂಗಳು: ಶೇಕಡ 7.30 ಬಡ್ಡಿದರ
34-35 ತಿಂಗಳು: ಶೇಕಡ 7.25 ಬಡ್ಡಿದರ
36-38 ತಿಂಗಳು: ಶೇಕಡ 7.50 ಬಡ್ಡಿದರ
39 ತಿಂಗಳು: ಶೇಕಡ 7.60 ಬಡ್ಡಿದರ
40-43 ತಿಂಗಳು: ಶೇಕಡ 7.50 ಬಡ್ಡಿದರ
44 ತಿಂಗಳು: ಶೇಕಡ 7.70 ಬಡ್ಡಿದರ
45-60 ತಿಂಗಳು: ಶೇಕಡ 7.50 ಬಡ್ಡಿದರ

 ಎಫ್‌ಡಿ ಬಡ್ಡಿದರ ಏರಿಸಿದ ಬಜಾಜ್ ಫಿನ್‌ಸರ್ವ್, ನೂತನ ದರ ತಿಳಿಯಿರಿ

ಹಿರಿಯ ನಾಗರಿಕರ ಎಫ್‌ಡಿ ಬಡ್ಡಿದರ (ವಾರ್ಷಿಕ ಲೆಕ್ಕಾಚಾರ)

12-14 ತಿಂಗಳು: ಶೇಕಡ 7.30 ಬಡ್ಡಿದರ
15 ತಿಂಗಳು: ಶೇಕಡ 7.45 ಬಡ್ಡಿದರ
16-17 ತಿಂಗಳು: ಶೇಕಡ 7.30 ಬಡ್ಡಿದರ
18 ತಿಂಗಳು: ಶೇಕಡ 7.50 ಬಡ್ಡಿದರ
19-21 ತಿಂಗಳು: ಶೇಕಡ 7.30 ಬಡ್ಡಿದರ
22 ತಿಂಗಳು: ಶೇಕಡ 7.60 ಬಡ್ಡಿದರ
23 ತಿಂಗಳು: ಶೇಕಡ 7.30 ಬಡ್ಡಿದರ
24 ತಿಂಗಳು: ಶೇಕಡ 7.75 ಬಡ್ಡಿದರ
25-29 ತಿಂಗಳು: ಶೇಕಡ 7.50 ಬಡ್ಡಿದರ
30 ತಿಂಗಳು: ಶೇಕಡ 7.55 ಬಡ್ಡಿದರ
31-32 ತಿಂಗಳು: ಶೇಕಡ 7.50 ಬಡ್ಡಿದರ
33 ತಿಂಗಳು: ಶೇಕಡ 7.55 ಬಡ್ಡಿದರ
34-35 ತಿಂಗಳು: ಶೇಕಡ 7.50 ಬಡ್ಡಿದರ
36-38 ತಿಂಗಳು: ಶೇಕಡ 7.75 ಬಡ್ಡಿದರ
39 ತಿಂಗಳು: ಶೇಕಡ 7.85 ಬಡ್ಡಿದರ
40-43 ತಿಂಗಳು: ಶೇಕಡ 7.75 ಬಡ್ಡಿದರ
44 ತಿಂಗಳು: ಶೇಕಡ 7.95 ಬಡ್ಡಿದರ
45-60 ತಿಂಗಳು: ಶೇಕಡ 7.95 ಬಡ್ಡಿದರ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+