ಅದೆಷ್ಟೋ ಜನರಿಗೆ ಉದ್ಯೋಗವಕಾಶವನ್ನು ನೀಡುವ ನಗರವೇ ನಮ್ಮ ಬೆಂಗಳೂರು ಆಗಿದೆ. ಮಂಗಳೂರು, ಹುಬ್ಬಳ್ಳಿ, ದಾರಾವಾಡ, ಗದಗ ಹೀಗೆ ನಮ್ಮ ಕರ್ನಾಟಕದ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸುವವರ ಜೊತೆಗೆ ಬೇರೆ ರಾಜ್ಯಗಳಿಂದ ಕೂಡಾ ಬಂದು ನೆಲೆಸುವ ಸಾವಿರಾರು ಜನರು ಇದ್ದಾರೆ. ಹಾಗಿರುವಾಗ ಬಾಡಿಗೆ ಮನೆ ಹುಡುಕಾಟ ಸಾಮಾನ್ಯವಲ್ಲವೇ?
ನೀವು ನಂದಿ ಲೇಔಟ್ ಸಮೀಪದಲ್ಲಿ ಕಡಿಮೆ ಬಾಡಿಗೆಗೆ ಸಿಂಪಲ್ ಆಗಿರುವ ಮನೆಯನ್ನು ಹುಡುಕುತ್ತಿದ್ದರೆ, ನಿಮಗೆ ಅದರ ವಿವರವನ್ನು ನಾವಿಲ್ಲಿ ನೀಡುತ್ತೇವೆ. ಈಗ ಮನೆ ಬಾಡಿಗೆ ಎಂದಾಗ 5- 10 ಸಾವಿರ ಹೇಳುವಾಗ ಬರೀ 1800 ರೂಪಾಯಿಗೆ ಇಲ್ಲಿ ಮನೆಯೊಂದು ಬಾಡಿಗೆಗೆ ಇದೆ. ಈ ಬಗ್ಗೆ ಹೆಚ್ಚಿನ ವಿವರ ಈ ಕೆಳಗಿದೆ ಮುಂದೆ ಓದಿ...

ನಂದಿನಿ ಲೇಔಟ್ ಬಾಡಿಗೆ ಮನೆ ವಿವರ
ನಂದಿನಿ ಲೇಔಟ್‌ನಲ್ಲಿ ಸುಮಾರು 1800 ರೂಪಾಯಿಗೆ ಮನೆಯೊಂದು ಬಾಡಿಗೆಯಿದೆ. ಇದು ಒಂದು ಬೆಡ್‌ರೂಮ್ ಇರುವ ಮನೆಯಾಗಿದೆ. ಸುಮಾರು 300 ಸ್ಕ್ವೇರ್ ಫೀಟ್ ವಿಸ್ತಾರ ಹೊಂದಿದೆ. ಕೆಳಮಹಡಿಯಲ್ಲಿದ್ದು, ಯಾವುದೇ ಫರ್ನಿಶಿಂಗ್ ಮಾತ್ರ ಈ ಮನೆಯಲ್ಲಿಲ್ಲ. 12000 ರೂಪಾಯಿ ಅಡ್ವಾನ್ಸ್ ಪಾವತಿ ಮಾಡಬೇಕಾಗುತ್ತದೆ. ನೀವು ಮ್ಯಾಜಿಲ್ ಬ್ರಿಕ್ಸ್ ಸೈಟ್ ಮೂಲಕ ಮಾಲೀಕರ ಸಂಪರ್ಕ ಮಾಡಬಹುದು.
ನಂದಿನಿ ಲೇಔಟ್ ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಪ್ರಮುಖ ವಸತಿ ಪ್ರದೇಶವಾಗಿದೆ. ಪೀಣ್ಯ, ಕುರುಬರಹಳ್ಳಿ, ಮಹಾಲಕ್ಷ್ಮಿ ಲೇಔಟ್ ಮತ್ತು ಯಶವಂತಪುರ ಪ್ರದೇಶಕ್ಕೆ ಇದು ಸಮೀಪವಾಗಿದೆ. ನಗರ ಕೇಂದ್ರ ಮತ್ತು ವಾಣಿಜ್ಯ ಸ್ಥಳಗಳಾದ ಮಲ್ಲೇಶ್ವರಂ, ಎಂಜಿ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್‌ಗೆ ಸಮೀಪದ ಪ್ರದೇಶ ಇದಾಗಿದೆ. ನಂದಿನಿ ಲೇಔಟ್ ಪಾರ್ಕ್ಸ್, ಕಂಠೀರವ ಸ್ಟುಡಿಯೋ, ಡಾ. ರಾಜ್‌ಕುಮಾರ್ ಸಮಾಧಿಗೆ ಹೆಸರುವಾಸಿಯಾಗಿದೆ.
ಲಭ್ಯವಿರು ಮೂಲಸೌಕರ್ಯಗಳು
ನಗರ ರೈಲು ನಿಲ್ದಾಣ ಮತ್ತು ಕೆಂಪೇಗೌಡ ರೈಲು ನಿಲ್ದಾಣವು ನಂದಿನಿ ಲೇಔಟ್‌ನಿಂದ ಕೇವಲ 8 ಕಿಮೀ ದೂರದಲ್ಲಿದೆ. ಈ ಪ್ರದೇಶದಿಂದ, ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣ (ಹಸಿರು ಮಾರ್ಗ) ಕೇವಲ 2 ಕಿಮೀ ದೂರದಲ್ಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈ ಪ್ರದೇಶದಿಂದ 36 ಕಿಮೀ ದೂರದಲ್ಲಿದೆ ಮತ್ತು ಬಳ್ಳಾರಿ ರಸ್ತೆಯ ಮೂಲಕ ತಲುಪಬಹುದು.
ಸಾಮಾಜಿಕ ಮತ್ತು ರಿಟೇಲ್ ಮೂಲಸೌಕರ್ಯ
ನಂದಿನಿ ಪಬ್ಲಿಕ್ ಸ್ಕೂಲ್, ಜ್ಞಾನವಾಹಿನಿ ಪಬ್ಲಿಕ್ ಸ್ಕೂಲ್, ಇಂಡಿಯನ್ ನ್ಯಾಷನಲ್ ಹೈಸ್ಕೂಲ್, ಎಸ್‌ಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್, ಇತ್ಯಾದಿಗಳು ಸುತ್ತಮುತ್ತಲಿನ ಕೆಲವು ಶಿಕ್ಷಣ ಸಂಸ್ಥೆಗಳಾಗಿದೆ. ಡಾ.ಗಂಗರಾಜು ಬೆನ್ನುಮೂಳೆಯ ಚಿಕಿತ್ಸಾ ಕೇಂದ್ರ, ಶ್ರೀ ವಿಜಯಲಕ್ಷ್ಮಿ ಆಸ್ಪತ್ರೆ, ಸಾಯಿ ದಂತ ಚಿಕಿತ್ಸಾಲಯ, ಲಾಲಿ ಆಸ್ಪತ್ರೆ ಮತ್ತು ಸ್ಪಂದನ ಆಸ್ಪತ್ರೆ ಈ ಬಾಡಿಗೆ ಮನೆ ಇರುವಲ್ಲಿಗೆ ಸಮೀಪವಾಗಿದೆ. ಈ ಪ್ರದೇಶಕ್ಕೆ ಓರಿಯನ್ ಮಾಲ್ (4 ಕಿಮೀ) ಮತ್ತು ವೈಷ್ಣವಿ ಸಫೈರ್ ಮಾಲ್ (5 ಕಿಮೀ) ಸಮೀಪದ ಶಾಪಿಂಗ್ ಮಾಲ್‌ಗಳಾಗಿದೆ.


Click it and Unblock the Notifications