ಉದ್ಯೋಗವಕಾಶವನ್ನು ಹುಡಿಕಿಕೊಂಡು ಹಲವಾರು ಯುವಕರು ಬೆಂಗಳೂರು ನಗರಕ್ಕೆ ಆಗಮಿಸುತ್ತಾರೆ. ಮೈಸೂರು, ಮಂಗಳೂರು, ಹುಬ್ಬಳ್ಳಿ, ದಾರಾವಾಡ, ಹುಬ್ಬಳ್ಳಿ ಹೀಗೆ ನಮ್ಮ ಕರ್ನಾಟಕದ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸುತ್ತಾರೆ.
ಇನ್ನು ಕೇರಳ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಂದ ಕೂಡಾ ಬಂದು ನೆಲೆಸುವ ಸಾವಿರಾರು ಜನರು ಇದ್ದಾರೆ. ಹಾಗಿರುವಾಗ ಬಾಡಿಗೆ ಮನೆ ಹುಡುಕಾಟ ಸಾಮಾನ್ಯವಲ್ಲವೇ?. ನೀವು ಯಶವಂತಪುರಂನಲ್ಲಿ ಬಾಡಿಗೆ ಮನೆಯ ಹುಡುಕಾಟದಲ್ಲಿದ್ದರೆ, ಕಡಿಮೆ ದರದಲ್ಲಿ ಲಭ್ಯವಾಗುವ ಬಾಡಿಗೆ ಮನೆ ವಿವರ ಇಲ್ಲಿದೆ ಮುಂದೆ ಓದಿ...

ಎಷ್ಟು ಬಾಡಿಗೆಗೆ ಈ ಮನೆ?
ಒಂದು ಒಂದು ಬಿಎಚ್‌ಕೆ ಮನೆಯನ್ನು ಬಾಡಿಗೆಗೆ ಪಡೆಯಬೇಕಾದರೆ 5-10 ಸಾವಿರ ಇರುವಾಗ ಯಶವಂತಪುರದಲ್ಲಿ ಬಾಡಿಗೆ ಮನೆಯೊಂದಕ್ಕೆ 2,500 ರೂಪಾಯಿ ಆಗಿದೆ. 150 ಸ್ಕ್ವೇರ್ ಫೀಟ್‌ನ ಒಂದು ಬಿಎಚ್‌ಕೆ ಮನೆ ಇದಾಗಿದೆ.
ಒಂದು ಬೆಡ್ ರೂಮ್ ಹಾಗೂ ಒಂದು ಸ್ನಾನದ ಮನೆ ಇದರಲ್ಲಿದೆ. ಗ್ರೌಂಡ್ ಫ್ಲೋರ್‌ನಲ್ಲಿಯೇ ಈ ಮನೆಯಿದೆ. ಇನ್ನು 2500 ರೂಪಾಯಿ ಬಾಡಿಗೆಯಾದರೆ 15 ಸಾವಿರ ರೂಪಾಯಿ ಅಡ್ವಾನ್ಸ್ ಆಗಿದೆ.
ಯಶವಂತಪುರವು ಬೆಂಗಳೂರಿನ ವಾಯವ್ಯ ಭಾಗದಲ್ಲಿದೆ. ರಾಜಾಜಿನಗರ, ಮಲ್ಲೇಶ್ವರಂ, ಮತ್ತಿಕೆರೆ, ಜಾಲಹಳ್ಳಿ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್ ಮತ್ತು ಸದಾಶಿವನಗರದ ಯಶವಂತಪುರದ ಸುತ್ತಮುತ್ತಲಿನ ಪ್ರದೇಶವಾಗಿದೆ.
ಇದು ಯಶವಂತಪುರ ಎಪಿಎಂಸಿ ಯಾರ್ಡ್ ಎಂದು ಕರೆಯಲ್ಪಡುವ ನಗರದಲ್ಲಿ ಕೃಷಿ ಉತ್ಪನ್ನಗಳ ಪ್ರಮುಖ ಸಗಟು ಮಾರುಕಟ್ಟೆಯನ್ನು ಹೊಂದಿದೆ. ಈ ಪ್ರದೇಶವು ಇತರ ಪ್ರದೇಶಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ ಮತ್ತು ಸಾಕಷ್ಟು ಸೌಕರ್ಯಗಳನ್ನು ಹೊಂದಿದೆ.
ಯಶವಂತಪುರವು ವಸತಿ ಮತ್ತು ಕೈಗಾರಿಕಾ ಘಟಕಗಳನ್ನು ಹೊಂದಿದೆ. ಕೇಂದ್ರೀಯ ವಿದ್ಯಾಲಯ ಐಐಎಸ್, ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಆಂಡ್ ಕಂಪ್ಯೂಟರ್ ಎಜುಕೇಷನ್, ನ್ಯೂ ಕಾರ್ಮೆಲ್ ಇಂಗ್ಲಿಷ್ ಸ್ಕೂಲ್, ಬಾಪು ಗ್ರೂಪ್ ಆಫ್ ಎಜುಕೇಶನ್ ಇನ್ಸ್ಟಿಟ್ಯೂಟ್ ಈ ರೂಮ್‌ಗೆ ಸಮೀಪವಾಗಿದೆ.
ಯಶವಂತಪುರಂ ರೈಲ್ವೆ ನಿಲ್ದಾಣ ಕೂಡಾ ಸಮೀಪವಾಗಿದೆ. ಓರಿಯನ್ ಮಾಲ್, ವೈಷ್ಣವಿ ಸಫಿರೆ, ವರ್ಲ್ಡ್ ಟ್ರೇಡ್ ಸೆಂಟರ್ ಕೂಡಾ ಸಮೀಪದಲ್ಲಿದೆ.


Click it and Unblock the Notifications