FD Rates May Fall: ರೆಪೋ ದರ ಸ್ಥಿರವಾಗಿದ್ದರೂ ಎಫ್‌ಡಿ ಬಡ್ಡಿ ಇಳಿಕೆಯಾಗಬಹುದು, ಯಾಕೆ?

ಇಂದು ಬೆಳಿಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದಾರೆ. ದ್ವೈಮಾಸಿಕ ಎಂಪಿಸಿ ಸಭೆಯ ನಿರ್ಧಾರವನ್ನು ಪ್ರಕಟಿಸಿದ ಗವರ್ನರ್ ರೆಪೋ ದರವನ್ನು ಸ್ಥಿರವಾಗಿರಿಸುವ ನಿರ್ಧಾರವನ್ನು ತಿಳಿಸಿದ್ದಾರೆ. ಎಂಪಿಸಿ ಸಭೆಯು ಅಕ್ಟೋಬರ್ 4 ರಿಂದ 6 ರವರೆಗೆ ನಡೆದಿದ್ದು ಈ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಆರ್‌ಬಿಐ ಈ ವರ್ಷ ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು ಸ್ಥಿರವಾಗಿರಿಸಿದ್ದು, ಪ್ರಸ್ತುತ ದರವು ಶೇಕಡ 6.5 ರಷ್ಟಿದೆ. ಕಳೆದ ವರ್ಷದಿಂದ ಆರ್‌ಬಿಐ ಸತತ ಆರು ಬಾರಿ ರೆಪೋ ದರವನ್ನು ಹೆಚ್ಚಿಸಿದೆ. ಅದಾದ ಬಳಿಕ ಈಗ ಸ್ಥಿರವಾಗಿರಿಸಿದ್ದು, ಇದು ಸಾಲದ ಬಡ್ಡಿದರ, ಫಿಕ್ಸಿಡ್ ಡೆಪಾಸಿಟ್ ಬಡ್ಡಿದರದ ಮೇಲೆಯೂ ಪ್ರಭಾವ ಬೀರಲಿದೆ.

 ರೆಪೋ ದರ ಸ್ಥಿರವಾಗಿದ್ದರೂ ಎಫ್‌ಡಿ ಬಡ್ಡಿ ಇಳಿಕೆಯಾಗಬಹುದು, ಯಾಕೆ?

ರೆಪೋ ದರವನ್ನು ಮೇ 2022 ರಿಂದ ಫೆಬ್ರವರಿ 2023 ರವರೆಗೆ ಆರು ಬಾರಿ ಹೆಚ್ಚಿಸಲಾಗಿದೆ. ಒಟ್ಟಾಗಿ 250 ಬೇಸಿಕ್ ಪಾಯಿಂಟ್‌ನಷ್ಟು ರೆಪೋ ದರವನ್ನು ಹೆಚ್ಚಳ ಮಾಡಲಾಗಿದೆ. ನಂತರ ಆರ್‌ಬಿಐ ಈ ವರ್ಷದ ಏಪ್ರಿಲ್, ಜೂನ್ ಮತ್ತು ಆಗಸ್ಟ್ ಸಭೆಗಳಲ್ಲಿ ದರವನ್ನು ಬದಲಾಯಿಸದೆ ಇರಿಸಿದೆ. ಅಕ್ಟೋಬರ್‌ನಲ್ಲಿಯೂ ದರ ಸ್ಥಿರವಾಗಿರಿಸಿದೆ.

ಬ್ಯಾಂಕ್ ಎಫ್‌ಡಿ ಮೇಲೆ ರೆಪೋ ದರದ ಪ್ರಭಾವ?

ನಾವು ಕಳೆದ ವರ್ಷದಲ್ಲಿ ಎಫ್‌ಡಿ ಬಡ್ಡಿದರ ಎಷ್ಟಿತ್ತು ಎಂದು ನೋಡಿದಾಗ ಈಗ ಎಫ್‌ಡಿ ಬಡ್ಡಿದರವನ್ನು ಭಾರೀ ಪ್ರಮಾಣವಾಗಿ ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಆರ್‌ಬಿಐ ರೆಪೊ ದರವನ್ನು ಕೇವಲ 10 ತಿಂಗಳಲ್ಲಿ 250 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಹೆಚ್ಚಿಸಿರುವುದು ಆಗಿದೆ. ಆದರೆ ಬಡ್ಡಿದರ ಹೆಚ್ಚಳ ಅವಧಿಯು ಬಹುತೇಕ ಮುಗಿದಿದೆ ಎಂದು ತೋರುತ್ತದೆ.

ರೆಪೋ ದರ ಏರಿಕೆಯನ್ನು ಈಗ ಮಾಡಲಾಗುತ್ತಿಲ್ಲ. ಹಾಗೆಯೇ ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿದೆ. ಈ ನಡುವೆ ಬ್ಯಾಂಕ್ ಎಫ್‌ಡಿ ಬಡ್ಡಿದರಗಳನ್ನು ಹೆಚ್ಚಿಸುವುದನ್ನು ಬ್ಯಾಂಕುಗಳು ತಾತ್ಕಾಲಿಕವಾಗಿ ತಡೆಹಿಡಿದಿವೆ. ಇದಲ್ಲದೆ ಕೆಲವು ಪ್ರಮುಖ ಬ್ಯಾಂಕ್‌ಗಳು ಈಗಾಗಲೇ ಬ್ಯಾಂಕ್ ಎಫ್‌ಡಿ ದರಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿವೆ.

ಉದಾಹರಣೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತೀಚೆಗೆ ಎರಡು ವಿಶೇಷ ಎಫ್‌ಡಿ ಯೋಜನೆಗಳ ಬಡ್ಡಿದರಗಳನ್ನು ಕಡಿಮೆ ಮಾಡಿದೆ. ಇದು ಅಕ್ಟೋಬರ್ 1, 2023 ರಿಂದ ಜಾರಿಗೆ ಬಂದಿದೆ. ಆಕ್ಸಿಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಡಿಸಿಬಿ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಕೂಡಾ ಇತ್ತೀಚೆಗೆ ಎಫ್‌ಡಿ ಬಡ್ಡಿದರವನ್ನು ಕಡಿತಗೊಳಿಸಿದೆ.

ಬ್ಯಾಂಕ್ ಎಫ್‌ಡಿ ದರಗಳು ಏಕೆ ಕುಸಿಯುತ್ತಿವೆ?

ಬ್ಯಾಂಕ್ ಎಫ್‌ಡಿ ಬಡ್ಡಿದರಗಳನ್ನು ಕಡಿಮೆ ಮಾಡುವ ಹಿಂದಿನ ಕಾರಣಗಳನ್ನು ಉದ್ಯಮ ತಜ್ಞರು ವಿವರಿಸುತ್ತಿದ್ದಾರೆ. ಅನೇಕ ಬ್ಯಾಂಕುಗಳು ನಿರ್ದಿಷ್ಟ ಮೆಚ್ಯೂರಿಟಿ ಅವಧಿಗಳಲ್ಲಿ ಎಫ್‌ಡಿ ಬಡ್ಡಿದರವನ್ನು ಕಡಿಮೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿದ ಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಕೋವಿಡ್-19 ನಂತರ ಬ್ಯಾಂಕ್‌ ಬಡ್ಡಿದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದು ಬ್ಯಾಂಕ್‌ಗಳ ಫಂಡ್ ವೆಚ್ಚಗಳನ್ನು ಹೆಚ್ಚಿಸಿದೆ. ಅವುಗಳ ನಿವ್ವಳ ಬಡ್ಡಿ ಮಾರ್ಜಿನ್‌ಗಳ (NIM) ಮೇಲೆ ಪರಿಣಾಮ ಬೀರುತ್ತದೆ. ಎನ್‌ಐಎಂ ಎನ್ನುವುದು ಸಾಲದ ಬಡ್ಡಿಯ ಮೇಲೆ ಬ್ಯಾಂಕ್ ಗಳಿಸುವ ಮತ್ತು ಡೆಪಾಸಿಟ್‌ಗಳ ಮೇಲೆ ಮಾಡುವ ಪಾವತಿ ನಡುವಿನ ವ್ಯತ್ಯಾಸವಾಗಿದೆ.

ಹೆಚ್ಚುವರಿಯಾಗಿ, ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟಿಗಳನ್ನು ಆರ್‌ಬಿಐ ಹಿಂಪಡೆದಿರುವ ಕಾರಣ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಲಿಕ್ವಿಡಿಟಿ ಅಧಿಕವಾಗಿದೆ. ವರದಿಯ ಪ್ರಕಾರ ಸಾಂಪ್ರದಾಯಿಕ ಡೆಪಾಸಿಟ್‌ಗಳಿಗೆ ತಕ್ಷಣವೇ ಬೇಡಿಕೆ ಕಡಿಮೆಯಾಗಿದೆ. ರೆಪೋ ದರ ಸ್ಥಿರವಾಗಿರುವಾಗ ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಇಳಿಸಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಎಫ್‌ಡಿ ಹೂಡಿಕೆದಾರರು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡಿದರೆ, ಪ್ರಸ್ತುತ ದರಗಳಿಗಿಂತ ಕಡಿಮೆ ಬಡ್ಡಿದರ ಲಭ್ಯವಾಗಬಹುದು.

ಬ್ಯಾಂಕ್ ಎಫ್‌ಡಿ ಹೂಡಿಕೆದಾರರು ಮಾಡುವುದೇನು?

ಬ್ಯಾಂಕ್ ಎಫ್‌ಡಿ ದರಗಳು ಕುಸಿಯುವ ನಿರೀಕ್ಷೆಯಿರುವುದರಿಂದ, ಹೂಡಿಕೆದಾರರು ತಮ್ಮ ಹಣವನ್ನು ಪ್ರಸ್ತುತ ಹೆಚ್ಚಿನ ಬಡ್ಡಿದರಕ್ಕೆ ದೀರ್ಘಾವಧಿಯ ಎಫ್‌ಡಿ ಮಾಡಿಸಬೇಕು. ಸ್ಥಿರ ಬಡ್ಡಿದರದ ಮೇಲೆ ಎಫ್‌ಡಿ ಹೂಡಿಕೆ ಮಾಡಿದರೆ, ಎಫ್‌ಡಿ ಬಡ್ಡಿದರ ಕಡಿಮೆಯಾದರೂ ನಿಮ್ಮ ಹೂಡಿಕೆ ಎಫ್‌ಡಿ ದರ ಸ್ಥಿರವಾಗಿರುವುದರಿಂದ ನಿಮಗೆ ಅಧಿಕ ರಿಟರ್ನ್ ಲಭ್ಯವಾಗಲಿದೆ.

ಮತ್ತೊಂದೆಡೆ, ಈಗಾಗಲೇ ಬ್ಯಾಂಕ್ ಎಫ್‌ಡಿಗಳಲ್ಲಿ ಹೂಡಿಕೆ ಮಾಡಿದವರಿಗೆ, ಆಯ್ಕೆ ಮಾಡಿದ ಅವಧಿಗೆ ಬಡ್ಡಿದರಗಳು ಬದಲಾಗದೆ ಉಳಿಯುತ್ತವೆ. ಅವರು ಪ್ರಸ್ತುತ ದರ ಕುಸಿತದ ಯಾವುದೇ ಪರಿಣಾಮದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+