ಹಿರಿಯ ನಾಗರಿಕರು ಸಾಮಾನ್ಯವಾಗಿ ಹಣ ಉಳಿತಾಯ ಮಾಡುವತ್ತ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ, ಈ ಹಂತದಲ್ಲಿ ಹೆಚ್ಚಿನವರು ಸಾಂಪ್ರದಾಯಿಕ ಮಾದರಿಯಲ್ಲಿ ಸಣ್ಣ ಯೋಜನೆಗಳು ಹಾಗೂ ಎಫ್‌ಡಿ ರೂಪದಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಅಂಥಹ ಹೂಡಿಕೆಗಳ ಪೈಕಿ ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಒಂದಾಗಿದೆ.
ಇದನ್ನು ಹಿರಿಯ ನಾಗರಿಕರಿಗಾಗಿಯೇ ಪರಿಚಯಿಸಲಾಗಿದೆ. 2023ರ ಜುಲೈನಿಂದ ಸೆಪ್ಟಂಬರ್ ಅವಧಿಯಲ್ಲಿ ಶೇ.8.2ರಷ್ಟು ಬಡ್ಡಿ ದರವನ್ನು ಘೋಷಿಸಲಾಗಿದೆ. ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿಈ ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ ಎನ್ನುವುದು ಗಮನಾರ್ಹ.

ಬ್ಯಾಂಕ್ ಬಜಾರ್ ಡಾಟ್‌ಕಾಂ ಮಾಹಿತಿ ಪ್ರಕಾರ, ಹಲವು ಬ್ಯಾಂಕ್‌ಗಳು ಹಿರಿಯ ನಾಗರಿಕರ ಎಫ್‌ಡಿ ಮೇಲೆ ಎಸ್‌ಸಿಎಸ್‌ಎಸ್‌ನ್ನು ಮೀರಿಸುವ ರೀತಿಯಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ರಿಟರ್ನ್ಸ್‌ನ್ನು ಆಫರ್ ಮಾಡುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ ಪ್ರಮುಖಾಂಶಗಳು:
ಸರ್ಕಾರ ಬೆಂಬಲಿತ ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಈ ಯೋಜನೆಯಡಿ ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ ಶೇ.8.2ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ. ಈ ಯೋಜನೆಯಡಿ 1000 ರೂಪಾಯಿಯಿಂದ ಹಿಡಿದು 30 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು.
ಅದಕ್ಕಿಂತ ಹೆಚ್ಚಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ದೊರೆಯುತ್ತದೆ. ಹಾಗಾದರೆ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಯಾವ ರೀತಿಯ ಬಡ್ಡಿ ದರವನ್ನು ನೀಡುತ್ತದೆ ಎಂಬುದನ್ನು ನೋಡೋಣ.
ಬ್ಯಾಂಕ್‌ನ ಬಡ್ಡಿದರ ವಿವರ
ಬಂಧನ್ ಬ್ಯಾಂಕ್: ಬಂಧನ್ ಬ್ಯಾಂಕ್ 60 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಶೇಕಡ 8.35 ಬಡ್ಡಿಯನ್ನು ಆಫರ್ ಮಾಡುತ್ತದೆ.
ಉಜ್ವಲ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಹಿರಿಯ ನಾಗರಿಕರಿಗೆ ಸರ್ವೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಹಿರಿಯ ಗ್ರಾಹಕರಿಗೆ ಶೇಕಡ 9ರಷ್ಟು ಎಫ್‌ಡಿ ಮೇಲೆ ಬಡ್ಡಿ ನೀಡುತ್ತದೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಜನ ಸ್ಮಾಲ್ ಫೈನಾನ್ಸ್ ಹಿರಿಯ ನಾಗರಿಕ ಗ್ರಾಹಕರಿಗೆ ಶೇ.9ರಷ್ಟು ಎಫ್‌ಡಿ ಮೇಲೆ ಬಡ್ಡಿ ನೀಡುತ್ತದೆ.
ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಗ್ರಾಹಕರು ಹಿರಿಯ ನಾಗರಿಕರ ಎಫ್‌ಡಿಗೆ ಶೇಕಡ 9ರಷ್ಟು ಬಡ್ಡಿ ದರವನ್ನು ನೀಡುತ್ತದೆ.
ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ಗ್ರಾಹಕರಿಗೆ ಶೇಕಡ 8.6ರಷ್ಟು ಬಡ್ಡಿಯನ್ನು ಒದಗಿಸುತ್ತದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ ಮೇಲೆ ಶೇಕಡ 9.5ರಷ್ಟು ಬಡ್ಡಿಯನ್ನು ನೀಡುತ್ತದೆ. ಈ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಎಸ್‌ಸಿಎಸ್‌ಎಸ್ ಯೋಜನೆಗಿಂತಲೂ ಅಧಿಕ ಬಡ್ಡಿ ದರವನ್ನು ಎಫ್‌ಡಿ ಮೇಲೆ ನೀಡುವ ಮೂಲಕ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ.


Click it and Unblock the Notifications