ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಗ್ರಾಹಕರಿಗೆ ಪ್ರಮುಖ ಅಲರ್ಟ್ ಅನ್ನು ನೀಡಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರು ಕೇಂದ್ರ ಕೆವೈಸಿಯನ್ನು (ಸಿ-ಕೆವೈಸಿ) ಮಾರ್ಚ್ 24, 2023ಕ್ಕೂ ಮುನ್ನವೇ ನಡೆಸಬೇಕು ಎಂದು ಘೋಷಣೆ ಮಾಡಿದೆ. ಕೆವೈಸಿ ಮಾಡದಿದ್ದರೆ ನಿಮಗೆ ಭಾರೀ ತೊಂದರೆ ಉಂಟಾಗಲಿದೆ ಎಂದು ಬ್ಯಾಂಕ್ ಹೇಳಿದೆ. ಕೇಂದ್ರ ಕೆವೈಸಿಯನ್ನು ಮಾಡದಿದ್ದರೆ, ಖಾತೆ ನಿಷ್ಕ್ರೀಯವಾಗಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ನೋಟಿಸ್, ಎಸ್‌ಎಂಎಸ್ ಮೂಲಕ ಈ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.
ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ತಮ್ಮ ಸಮೀಪದ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಕೇಂದ್ರ ಕೆವೈಸಿಯನ್ನು ಸಂಪೂರ್ಣಗೊಳಿಸಬೇಕು ಎಂದು ಬ್ಯಾಂಕ್ ತಿಳಿಸಿದೆ. ಗ್ರಾಹಕರು ತಮ್ಮ ಕೇಂದ್ರ ಕೆವೈಸಿಯನ್ನು ಸಂಪೂರ್ಣಗೊಳಿಸಿದ ಬಳಿಕ, ಹೊಸ ಖಾತೆಗಳನ್ನು ತೆರೆಯುವುದು, ಜೀವ ವಿಮೆಯನ್ನು ಖರೀದಿಸುವುದು ಅಥವಾ ಡಿಮ್ಯಾಟ್ ಖಾತೆಯನ್ನು ತೆರೆಯುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಮತ್ತೊಮ್ಮೆ ಪ್ರಕ್ರಿಯೆಗೆ ಒಳಗಾಗಬೇಕಾದ ಅವಶ್ಯಕತೆ ಇರುವುದಿಲ್ಲ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ.

ಕೇಂದ್ರ ಕೆವೈಸಿ ಬಗ್ಗೆ ಅಧಿಕ ಮಾಹಿತಿ
ಕೇಂದ್ರ ಕೆವೈಸಿ ಒಂದು ದಿನದ ಪ್ರಕ್ರಿಯೆಯಾಗಿದೆ. ಒಂದು ಬಾರಿ ಕೇಂದ್ರ ಕೆವೈಸಿಯನ್ನು ನೀವು ನಡೆಸಿದರೆ, ಹಲವಾರು ಹಣಕಾಸು ಸೇವೆಗಳಿಗಾಗಿ ಗ್ರಾಹಕರು ಪದೇ ಪದೇ ಕೆವೈಸಿಯನ್ನು ಮಾಡಬೇಕಾದ ಅವಶ್ಯಕತೆ ಉಂಟಾಗುವುದಿಲ್ಲ. ಬ್ಯಾಂಕ್ ಆಫ್ ಬರೋಡಾ ಡಿಜಿಟಲ್ ಫಾರ್ಮಟ್‌ನಲ್ಲಿ ಕೇಂದ್ರ ಕೆವೈಸಿ ಅಥವಾ ಸಿಕೆವೈಸಿಯನ್ನು ಸಲ್ಲಿಸುತ್ತದೆ. ಹಾಗೆಯೇ ಕೇಂದ್ರದ ಕೆವೈಸಿಯೊಂದಿಗೆ ಮಾಹಿತಿಯನ್ನು ಹೋಲಿಕೆ ಮಾಡಲಿದೆ.
ಕೆವೈಸಿ ನಿಯಮವನ್ನು ಸರಿಯಾಗಿ ಪಾಲಿಸಲಾಗಿದೆಯೇ ಇಲ್ಲವೇ ಎಂಬುವುದನ್ನು ಪರಿಶೀಲಿಸಲು ಬ್ಯಾಂಕ್ ಹಾಗೂ ಇತರೆ ಸಂಸ್ಥೆಗಳಿಗೆ ಕೇಂದ್ರ ಕೆವೈಸಿಯು ಸಹಾಯಕವಾಗಿದೆ. ಸೆಂಟ್ರಲ್ ರಿಜಿಸ್ಟ್ರಿ ಆಫ್ ಸೆಕ್ಯುರಿಟೈಸೇಶನ್ ಅಸೆಟ್ ರೀಕನ್‌ಸ್ಟ್ರಕ್ಷನ್ ಮತ್ತು ಸೆಕ್ಯುರಿಟಿ ಇಂಟರೆಸ್ಟ್ ಆಫ್ ಇಂಡಿಯಾ (ಸಿಇಆರ್‌ಎಸ್‌ಎಐ) ಕೇಂದ್ರ ಕೆವೈಸಿಯನ್ನು ನಿರ್ವಹಣೆ ಮಾಡುತ್ತದೆ. ಇದರ ಮೂಲಕ ಗ್ರಾಹಕರ ಕೆವೈಸಿ ಸಂಬಂಧಿತ ಮಾಹಿತಿಯನ್ನು ಮಾತ್ರ ಪಡೆಯಬಹುದು.
ಅನಾನುಕೂಲತೆ ಅಥವಾ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳಿಸುವುದನ್ನು ತಪ್ಪಿಸಲು ಕೇಂದ್ರ ಕೆವೈಸಿಯನ್ನು ಪೂರ್ಣಗೊಳಿಸಲು ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರನ್ನು ಒತ್ತಾಯಿಸಿದೆ. ಮಾರ್ಚ್ 24, 2023 ರ ಮೊದಲು ಕೇಂದ್ರ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರು ತಮ್ಮ ಖಾತೆಯ ಸೇವೆಯನ್ನು ಪಡೆಯಲು ತೊಂದರೆ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದಾಗಿ ತಮ್ಮ ಕೇಂದ್ರ ಕೆವೈಸಿಯನ್ನು ಇನ್ನೂ ಪೂರ್ಣಗೊಳಿಸದ ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗಬಾರದು ಎಂದರೆ ಶ್ರೀಘ್ರವೇ ಕೇಂದ್ರ ಕೆವೈಸಿ ನಡೆಸಬೇಕಾಗುತ್ತದೆ.


Click it and Unblock the Notifications