For Quick Alerts
ALLOW NOTIFICATIONS  
For Daily Alerts

Bank Strike : 2 ದಿನ ಬ್ಯಾಂಕ್ ಮುಷ್ಕರ: ಯಾವೆಲ್ಲ ಬ್ಯಾಂಕ್ ಬಂದ್ ನೋಡಿ

|

ನೀವು ಬ್ಯಾಂಕ್‌ ಕಚೇರಿಗೆ ಹೋಗಿ ಯಾವುದೇ ವಹಿವಾಟು ನಡೆಸಬೇಕಾಗಿದೆಯೇ? ಅದಕ್ಕೂ ಮುಂಚೆ ಯಾವ ದಿನ ಬ್ಯಾಂಕ್ ಸೇವೆ ಇರಲಿದೆ, ಇರುವುದಿಲ್ಲ ಎಂದು ತಿಳಿಯುವುದು ಉತ್ತಮ. ಯಾಕೆಂದರೆ ಈ ತಿಂಗಳಲ್ಲಿ ಈಗಾಗಲೇ ತಿಳಿಸಲಾಗಿರುವ, ಆರ್‌ಬಿಐ ಪ್ರಕಟಿಸಿರುವ ರಜಾದಿನಗಳನ್ನು ಹೊರತುಪಡಿಸಿ ಹೆಚ್ಚಿಗೆ ಎರಡು ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬ್ಯಾಂಕ್ ನೌಕರರ ಸಂಘವಾದ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ರಾಷ್ಟ್ರವ್ಯಾಪ್ತಿಯಾಗಿ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರವನ್ನು ಘೋಷಿಸಿದೆ. ಇದರಿಂದಾಗಿ ಜನವರಿ 30 ಮತ್ತು ಜನವರಿ 31ರಂದು ಬ್ಯಾಂಕ್‌ಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಪ್ರಮುಖವಾಗಿ 11ನೇ ವೇತನ ಒಪ್ಪಂದಕ್ಕೆ ಸಂಬಂಧಿಸಿ ಈ ಮುಷ್ಕರವನ್ನು ಮಾಡಲಾಗುತ್ತಿದೆ.

Bank Strike : ಗ್ರಾಹಕರೇ ಗಮನಿಸಿ: ನವೆಂಬರ್ 19ರಂದು ಬ್ಯಾಂಕ್ ನೌಕರರ ಮುಷ್ಕರBank Strike : ಗ್ರಾಹಕರೇ ಗಮನಿಸಿ: ನವೆಂಬರ್ 19ರಂದು ಬ್ಯಾಂಕ್ ನೌಕರರ ಮುಷ್ಕರ

ಒಟ್ಟು ಒಂಬತ್ತು ಬ್ಯಾಂಕ್‌ಗಳ ಬ್ಯಾಂಕ್‌ಗಳ ಒಕ್ಕೂಟವಾದ ಯುಎಫ್‌ಬಿಯು ಈ ನಿರ್ಧಾರವನ್ನು ಕೈಗೊಂಡಿದೆ. ಈ ಹಿಂದಿನ ವಾರ ಮುಂಬೈನಲ್ಲಿ ಸಭೆಯನ್ನು ನಡೆಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ ಯಾವೆಲ್ಲ ಕಾರಣಕ್ಕಾಗಿ ಈ ಮುಷ್ಕರವನ್ನು ಮಾಡಲಾಗುತ್ತಿದೆ, ಎಷ್ಟು ದಿನ ಬ್ಯಾಂಕ್ ಬಂದ್ ಆಗಿರುತ್ತದೆ, ತಿಳಿಯೋಣ ಮುಂದೆ ಓದಿ.....

 2 ದಿನ ಬ್ಯಾಂಕ್ ಮುಷ್ಕರ: ಯಾವೆಲ್ಲ ಬ್ಯಾಂಕ್ ಬಂದ್ ನೋಡಿ

ಯಾವೆಲ್ಲ ಕಾರಣಕ್ಕಾಗಿ ಬ್ಯಾಂಕ್ ಮುಷ್ಕರ ನಡೆಯುತ್ತಿದೆ?

ಪ್ರಮುಖವಾಗಿ ವಾರದಲ್ಲಿ 5 ದಿನಗಳ ಕಾಲ ಬ್ಯಾಂಕ್ ರಜೆ ಇರಬೇಕು ಎಂಬುವುದು ಬೇಡಿಕೆಯಾಗಿದೆ. ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಬೇಕು. ಹಳೆಯ ಪಿಂಚಣಿ ಯೋಜನೆ ಪರಿಷ್ಕರಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಬ್ಯಾಂಕ್ ಯೂನಿಯನ್ ಹೊಂದಿದೆ.

ಈ ಹಿಂದೆ ನವೆಂಬರ್‌ನಲ್ಲಿಯೂ ಬ್ಯಾಂಕ್ ನೌಕರರ ಮೇಲೆ ನಡೆಯುವ ದಾಳಿಯ ವಿರುದ್ಧ ನಡೆಸಲಾಗಿತ್ತು. ಅದಕ್ಕೂ ಮೊದಲು ಬ್ಯಾಂಕ್ ಕೆಲಸದ ದಿನ ಇಳಿಕೆಯ ಬೇಡಿಕೆಯನ್ನು ಮುಂದಿಡಲಾಗಿತ್ತು.

ಬ್ಯಾಂಕ್‌ಗಳಲ್ಲಿ ವಾರದಲ್ಲಿ 5 ದಿನಗಳ ಕೆಲಸದ ಅವಧಿಯನ್ನು ಜಾರಿಗೆ ತರಬೇಕು ಎಂದು ಈ ಹಿಂದೆಯೇ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಒತ್ತಾಯಿಸಿದೆ. ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬೇಕು. ಉಳಿದ ದಿನಗಳು ರಜಾ ದಿನವಾಗಿರಬೇಕು ಎಂಬ ಬೇಡಿಕೆ ವ್ಯಕ್ತಪಡಿಸಿದ್ದಾರೆ. ಖಾಸಗಿ ವಲಯದ ಬಹುತೇಕ ದೊಡ್ಡ ಕಂಪನಿಗಳಲ್ಲಿ ಈ ನಿಯಮ ಅನ್ವಯವಾಗಲಿದೆ.

ಎಲ್ಲಾ ಪಿಂಚಣಿದಾರರಿಗೆ ಪಿಂಚಣಿ ನವೀಕರಣ ಮಾಡುವುದು, ಪರಿಷ್ಕರಣೆ ಮಾಡುವುದು, ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದುಹಾಕುವುದು, ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು ನೌಕರರ ಬೇಡಿಕೆಯಾಗಿದೆ ಎಂದು ಕಳೆದ ಯುಎಫ್‌ಬಿಯು ಸಭೆಯ ನಂತರ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ಹೇಳಿದ್ದರು.

English summary

Bank unions call nationwide strike on January 30, 31; Banking services to be affected, Know details

The United Forum of Bank Unions (UFBU), a prominent trade union federation in the banking sector, has called for a two-day nationwide strike on January 30 and 31, reason and other details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X