ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಜನವರಿ 22 ರಂದು ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ದಿನದ ವಿಮಾನಯಾನ ಟಿಕೆಟ್‌ಗಳು ಈಗಲೇ ಫುಲ್ ಸೇಲ್ ಆಗಿದೆ. ಐಟಿ ಹಬ್‌ನಿಂದ ಸಾವಿರಾರು ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಈ ನಡುವೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೌದು, ಜನವರಿ 20 ರಂದು ಬೆಂಗಳೂರಿನಿಂದ ಅಯೋಧ್ಯೆಗೆ ಏಕಮುಖ ವಿಮಾನಕ್ಕೆ ಅಗ್ಗದ ಟಿಕೆಟ್ ದರ 24,000 ರೂಪಾಯಿ ಆಗಿದೆ. ಇದು ಕಡಿಮೆಯೇ ಇದಕ್ಕಿಂತಲೂ ಭಾರೀ ದರ ಏರಿಕೆಯಾಗಿದೆ. ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಆ ವಾರಾಂತ್ಯದ ಬಹುತೇಕ ವಿಮಾನ ಟಿಕೆಟ್‌ಗಳು ಬಹುತೇಕ ಮಾರಾಟವಾಗಿದೆ. ಈ ಲೇಖನ ಪ್ರಕಟವಾಗುವ ಸಮಯದಲ್ಲಿ ಬೆರಳೆಣಿಕೆಯ ಸೀಟುಗಳು ಮಾತ್ರ ಲಭ್ಯವಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜನವರಿ 20 ರಂದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡುವ ಮತ್ತು ಅಹಮದಾಬಾದ್‌ನಲ್ಲಿ ಐದು ಗಂಟೆಗಳ ರೆಸ್ಟ್ ಟೈಮ್ ನಂತರ ರಾತ್ರಿ 11 ಗಂಟೆಗೆ ಅಯೋಧ್ಯೆಗೆ ತಲುಪುವ ವಿಮಾನಕ್ಕೆ ಟಿಕೆಟ್ ದರವು ಶೇಕಡ 395 ರಷ್ಟು ಹೆಚ್ಚಳವಾಗಿ, ಬೆಲೆಯು 29,700 ರೂಪಾಯಿಗೆ ತಲುಪಿದೆ. ಅಂದರೆ 30 ಸಾವಿರಕ್ಕೆ ಬರೀ 300 ರೂಪಾಯಿ ಕಡಿಮೆಯಷ್ಟೆ!
ಈ ಮಹಾಮಸ್ತಕಾಭಿಷೇಕವು ಕೇವಲ ಆಹ್ವಾನಿತರನ್ನು ಒಳಗೊಂಡಿರುವ ಸಮಾರಂಭವಾಗಿದ್ದರೂ ಸಹ, ಸಾಮಾನ್ಯ ಜನರು ತಮ್ಮ ಅಯೋಧ್ಯೆ ಪ್ರವಾಸವನ್ನು ಸವಿಯಲು ಎಲ್ಲ ಪ್ಲ್ಯಾನ್ ಮಾಡಿಕೊಂಡು, ಈಗಾಗಲೇ ಅಯೋಧ್ಯೆಗೆ ಧಾವಿಸುತ್ತಿದ್ದಾರೆ.
ಟಿಕೆಟ್ ದರ ಯಾವ ದಿನ ಎಷ್ಟಿದೆ?
ಟಿಕೆಟಿಂಗ್ ಏಜೆನ್ಸಿಗಳ ಪ್ರಕಾರ, ಬೆಂಗಳೂರು-ಅಯೋಧ್ಯೆ ವಿಮಾನ ಟಿಕೆಟ್‌ಗಳು ಶನಿವಾರ, ಜನವರಿ 20, ನಂತರ ಶುಕ್ರವಾರ, ಜನವರಿ 19 ಮತ್ತು ಜನವರಿ 21 ರ ಭಾನುವಾರದಂದು ಅತ್ಯಂತ ದುಬಾರಿಯಾಗಿದೆ. ಜನವರಿ 19 ಕ್ಕೆ, ವಿಮಾನ ಟಿಕೆಟ್ ದರ 21,500 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಜನವರಿ 21ಕ್ಕೆ ಟಿಕೆಟ್ ದರಗಳು 10,000 ರೂಪಾಯಿಯಿಂದ ಪ್ರಾರಂಭವಾಗುತ್ತದೆ.
ಈ ಹಿಂದೆ ಟಿಕೆಟ್ ದರ ಎಷ್ಟಿತ್ತು?
ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ತಿಂಗಳು ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಏಕಮುಖ ವಿಮಾನ ಟಿಕೆಟ್‌ಗಳ ಬೆಲೆ ಸುಮಾರು 6,000 ರೂಪಾಯಿ ಆಗಿತ್ತು. ದೇವಸ್ಥಾನ ತೆರೆದ ನಂತರವೂ ಒಂದು ತಿಂಗಳವರೆಗೆ ವಿಮಾನ ಟಿಕೆಟ್ ದರ ಸುಮಾರು 6,000 ರೂಪಾಯಿ ಆಗಿದೆ. ಆದರೆ ಜನವರಿ 19-21 ರಿಂದ ಪ್ರಾರಂಭವಾಗುವ ವಾರಾಂತ್ಯದ ಟಿಕೆಟ್ ದರಗಳು ಭಾರೀ ಏರಿಕೆಯನ್ನು ಕಂಡಿದೆ.
ಪ್ರಸ್ತುತ ಬೆಂಗಳೂರು ಮತ್ತು ಅಯೋಧ್ಯೆ ನಡುವೆ ಯಾವುದೇ ನೇರ ವಿಮಾನಗಳಿಲ್ಲದಿದ್ದರೂ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 17 ರಿಂದ ಪ್ರತಿ ಸೋಮವಾರ, ಬುಧವಾರ ಮತ್ತು ಗುರುವಾರದಂದು ಮೂರು ಬಾರಿ ವಾರಕ್ಕೊಮ್ಮೆ ನೇರ ವಿಮಾನಗಳನ್ನು ನಿರ್ವಹಿಸಲಿದೆ.
ಹೆಚ್ಚಿನ ಪ್ರಯಾಣಿಕರು ಅಯೋಧ್ಯೆಯನ್ನು ತಲುಪುವ ಮಾರ್ಗದಲ್ಲಿ ಕನಿಷ್ಠ ಆರು-ಎಂಟು ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಕನಿಷ್ಠ ಒಂದು ನಿಲುಗಡೆ ಹೊಸ ದೆಹಲಿ, ಅಥವಾ ಗ್ವಾಲಿಯರ್, ಅಥವಾ ಮುಂಬೈ, ಅಥವಾ ಅಹಮದಾಬಾದ್‌ನಲ್ಲಿ ಇರುತ್ತದೆ.
ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕವನ್ನು ಒದಗಿಸುವ ವಿಮಾನಯಾನ ಸಂಸ್ಥೆಗಳಾಗಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗಾರ್ಗ್, "ನಮ್ಮ ನೆಟ್‌ವರ್ಕ್‌ನಲ್ಲಿ ಪ್ರಮುಖ ಕೇಂದ್ರಗಳಾಗಿ, ಬೆಂಗಳೂರು ಅಯೋಧ್ಯೆಗೆ ಸಂಪರ್ಕ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ದಕ್ಷಿಣ ಭಾರತದ ಯಾತ್ರಾರ್ಥಿಗಳಿಗೆ ಅನುಕೂಲಕರ ಏಕ ನಿಲುಗಡೆ ಪ್ರವಾಸವನ್ನು ಒದಗಿಸುತ್ತದೆ," ಎಂದು ಹೇಳಿದರು.


Click it and Unblock the Notifications