ಪ್ರಸ್ತುತ ಒಂದು ಊರಿಂದ ಇನ್ನೊಂದು ಊರಿಗೆ ಹೋಗಿ ಉದ್ಯೋಗ ಮಾಡಿ ಜೀವನ ಸಾಗಿಸುವುದು ಅಧಿಕವಾಗಿದೆ. ಅದರಲ್ಲೂ ದೇಶದ ಪ್ರಮುಖ ನಗರಗಳಿಗೆ ಜನರು ಉದ್ಯೋಗ ಹುಡುಕಿ ಸಾಗುತ್ತಾರೆ. ಹಾಗೆಯೇ ಕೆಲವು ಸ್ಟೋರ್‌ಗಳನ್ನು ಬಾಡಿಗೆ ಪಡೆದು ತಮ್ಮದೇ ವ್ಯಾಪಾರವನ್ನು ಆರಂಭಿಸುತ್ತಾರೆ. ಆದರೆ ಈಗ ಬೆಂಗಳೂರು ಸೇರಿ ಹಲವಾರು ನಗರಗಳಲ್ಲಿ ಬಾಡಿಗೆ ಮೊತ್ತವು ಕೋವಿಡ್ ಸಾಂಕ್ರಾಮಿಕಕ್ಕಿಂತ ಅಧಿಕವಾಗಿದೆ.
ಭಾರತದ ಟಾಪ್ 10 ಹೈ ಸ್ಟ್ರೀಟ್‌ಗಳಲ್ಲಿ ಬಾಡಿಗೆ ದರವು ಸೆಪ್ಟೆಂಬರ್‌ನಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ ಎಷ್ಟಿತ್ತೋ ಅದಕ್ಕೂ ಅಧಿಕವಾಗಿದೆ. ಪ್ರತಿ ಸ್ಕ್ವೇರ್ ಫೀಟ್‌ಗೆ ಬಾಡಿಗೆ ದರವು ಬರೋಬ್ಬರಿ 1600 ರೂಪಾಯಿಗೆ ತಲುಪಿದೆ. ಇದು ಈವರೆಗೆ ಅತೀ ಅಧಿಕ ದರವಾಗಿದೆ.

ಮುಂಬೈ ಹಾಗೂ ಬೆಂಗಳೂರಿನಲ್ಲಿ ಬಾಡಿಗೆ ದರವು ನಾಲ್ಕು ಪಟ್ಟು ಅದಿಕವಾಗಿದೆ. ವೃತ್ತಿಪರ ರಿಯಲ್ ಎಸ್ಟೇಟ್ ಸೇವೆ ನೀಡುವ ಸಂಸ್ಥೆಯಾದ ಕುಷ್‌ಮ್ಯಾನ್ & ವೇಕ್ ಫೀಲ್ಡ್ ಪ್ರಕಾರ, ದೆಹಲಿ, ಮುಂಬೈನ ಲಿಂಕಿಂಗ್ ರೋಡ್, ಬ್ರೀಚ್ ಕ್ಯಾಂಡಿ, ಕೊಲಾಬಾದಲ್ಲಿ, ಬೆಂಗಳೂರಿನ ಬ್ರಿಗೇಡ್ ರೋಡ್‌ನಲ್ಲಿ ಬಾಡಿಗೆ ದರವು 2019 ರ ದರಕ್ಕಿಂತ ಅಧಿಕವಾಗಿದೆ.
ಯಾವ ನಗರದಲ್ಲಿ ಎಷ್ಟು ಏರಿಕೆ?
ಇತ್ತೀಚೆಗೆ ಟೈಟಾನ್ ದೆಹಲಿಯ ಹೈಸ್ಟ್ರೀಟ್‌ನಲ್ಲಿ 17000 ಸ್ಕ್ವೇರ್ ಫೀಟ್ ಅನ್ನು ಲೀಸ್‌ಗೆ ಪಡೆದುಕೊಂಡಿದೆ. ಹೀಗೆ ಹಲವಾರು ಬ್ರ್ಯಾಂಡ್‌ಗಳು ಹೈಸ್ಟ್ರೀಟ್ ಪ್ರದೇಶದಲ್ಲಿ ಬಾಡಿಗೆಗೆ ಸ್ಟೋರ್‌ಗಳನ್ನು ಪಡೆಯುತ್ತಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮುಂಬೈನಲ್ಲಿ ಬಾಡಿಗೆ ದರವು ಶೇಕಡ 2-10 ರಷ್ಟು ಜಿಗಿತ ಕಂಡಿದೆ.
ಪುಣೆಯಲ್ಲಿ ಶೇಕಡ 5-6 ರಷ್ಟು ಬಾಡಿಗೆ ದರ ಹೆಚ್ಚಳವಾಗಿದೆ. ಇದು ಬರೀ ಪ್ರಮುಖ ರಸ್ತೆಗಳಲ್ಲಿ ಆಗಿದೆ. ಅಹಮದಾಬಾದ್‌ನಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 7-10 ರಷ್ಟು ಬಾಡಿಗೆ ದರ ಹೆಚ್ಚಾಗಿದ್ದರೆ, ವರ್ಷದಿಂದ ವರ್ಷಕ್ಕೆ ಶೇಕಡ 15-20 ರಷ್ಟು ಹೆಚ್ಚಳ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಎಷ್ಟು ದರ ಹೆಚ್ಚಳ?
ಇನ್ನು ಬೆಂಗಳೂರಿನ ಇಂದಿರಾನಗರ, ಸರ್ಜಾಪುರ ರಸ್ತೆ, ಕಾಮನಹಳ್ಳಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಾಡುಗೆ ದರವು ಭಾರೀ ಪ್ರಮಾಣದಲ್ಲಿ ಜಿಗಿದಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಬಾಡಿಗೆ ಪ್ರಮಾಣ ಶೇಕಡ 9-10 ರಷ್ಟು ಹೆಚ್ಚಳವಾಗಿದೆ. ಕೋರಮಂಗಲ ಹಾಗೂ ಜಯನಗರದಲ್ಲಿ ಶೇಕಡ 4-6 ರಷ್ಟು ಬಾಡಿಗೆ ದರ ಹೆಚ್ಚಾಗಿದೆ.
ಬ್ರಿಗೇಡ್ ರಸ್ತೆ ಬಾಡಿಗೆ 2019 ರಲ್ಲಿ ಪ್ರತಿ ಚದರಕ್ಕೆ 280 ರೂಪಾಯಿ ಆಗಿತ್ತು, 2022 ರಲ್ಲಿ 380 ರೂಪಾಯಿಗೆ ತಲುಪಿತು ಮತ್ತು ಪ್ರಸ್ತುತ ಪ್ರತಿ ಚದರ ಅಡಿಗೆ 400 ರೂಪಾಯಿ ಆಗಿದೆ. ಜಯನಗರ ಬಾಡಿಗೆ 2019 ರಲ್ಲಿ ಪ್ರತಿ ಚದರಕ್ಕೆ 330 ರೂಪಾಯಿ ಆಗಿತ್ತು. 2022 ರಲ್ಲಿ 370 ರೂಪಾಯಿ ಆಗಿತ್ತು. ಪ್ರಸ್ತುತ ಪ್ರತಿ ಚದರ ಅಡಿಗೆ 405 ರೂಪಾಯಿ ಆಗಿದೆ.


Click it and Unblock the Notifications