ಇಂದಿನಿಂದ ಎಲ್‌ಐಸಿ ಐಪಿಒ ಆರಂಭವಾಗಿದೆ. ಚಂದಾದಾರಿಕೆ ಆರಂಭವಾದ ಹತ್ತು ನಿಮಿಷದಲ್ಲೇ ಶೇಕಡ 1ರಷ್ಟು ಚಂದಾದಾರಿಕೆಗೆ ಅರ್ಜಿ ಸಲ್ಲಿಸಲಾಗಿದೆ. ಬಿಡ್ಡಿಂಗ್ ಆರಂಭವಾದ ಅರ್ಧ ಗಂಟೆಯಲ್ಲೇ ಶೇಕಡ 4ರಷ್ಟು ಮಂದಿ ಚಂದಾದಾರಿಕೆ ಮಾಡಿಕೊಂಡಿದ್ದಾರೆ. ಹೆಚ್ಚಿನ ಬ್ರೋಕರೇಜ್ ಸಂಸ್ಥೆಗಳು ಎಲ್‌ಐಸಿ ಐಪಿಒಗೆ ಚಂದಾದಾರಗಲು ಸೂಚನೆ ನೀಡುತ್ತಿದೆ.
ಇನ್ನು ಒಂದು ಗಂಟೆಯಲ್ಲೇ ಶೇಕಡ 12ರಷ್ಟು ಚಂದಾದಾರಿಕೆಗೆ ಅರ್ಜಿಗಳು ಸಲ್ಲಿಕೆಯಾಗಿದೆ. ಇನ್ನು ರಿಲಯನ್ಸ್ ಸೆಕ್ಯುರಿಟೀಸ್, ನಿರ್ಮಲ್ ಬ್ಯಾಂಗ್, ಏಂಜೆಲ್ ಒನ್, ರೆಲಿಗೇರ್ ಬ್ರೋಕಿಂಗ್, ಚಾಯ್ಸ್ ಬ್ರೋಕಿಂಗ್, ಜಿಇ ಕ್ಯಾಪಿಟಲ್, ಜಿಯೋಜಿತ್ ಫಿನಾನ್ಶಿಯಲ್, ಮಾರ್ವಾಡಿ ಫಿನಾನ್ಶಿಯಲ್ ಸರ್ವಿಸ್, ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್, ವೆಂಚುರಾ ಸೆಕ್ಯುರಿಟೀಸ್ ಎಲ್‌ಐಸಿ ಐಪಿಒಗೆ ಚಂದಾದಾರರಾಗುವಂತೆ ಸಲಹೆ ನೀಡಿದೆ.
ಈ ಪೈಕಿ ಜಿಯೋಜಿತ್ ಫಿನಾನ್ಶಿಯಲ್ ಎಲ್‌ಐಸಿ ಐಪಿಒಗೆ ಅಲ್ಪಾವಧಿಯ ಚಂದಾದಾರಗಲು ತಿಳಿಸಿದರೆ, ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್ ಎಲ್‌ಐಸಿ ಐಪಿಒಗೆ ದೀರ್ಘಾವಧಿಯ ಚಂದಾದಾರಾಗಿ ಎಂದು ಹೇಳಿದೆ. ಉಳಿದ ಸಂಸ್ಥೆಗಳು ಎಲ್‌ಐಸಿ ಐಪಿಒಗೆ ಚಂದಾದಾರಗುವಂತೆ ಸೂಚನೆ ನೀಡಿದೆ.
ಅಲ್ಪಾವಧಿಗೆ ಚಂದಾದಾರರಾಗಿ: ಜಿಯೋಜಿತ್ ಫೈನಾನ್ಶಿಯಲ್
ಜಿಯೋಜಿತ್ ಫೈನಾನ್ಶಿಯಲ್ ಎಲ್‌ಐಸಿ ಐಪಿಒ ಅನ್ನು ಅಲ್ಪಾವಧಿಗೆ ಚಂದಾದಾರಿಕೆ ಮಾಡುವಂತೆ ಸಲಹೆ ನೀಡಿದೆ. ರೂ.949 ರ ಮೇಲಿನ ಬೆಲೆಯಯಲ್ಲಿ ಎಲ್‌ಐಸಿ ಐಪಿಒ ಲಭ್ಯವಿದೆ. ಖಾಸಗಿ ಜೀವ ವಿಮಾ ಕಂಪನಿಗಳಿಗೆ ಹೋಲಿಕೆ ಮಾಡಿದಾಗ ಎಲ್‌ಐಸಿ ಷೇರು ಶೇಕಡ 65ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಆದರೆ ಮಾರುಕಟ್ಟೆಯಲ್ಲಿ ಕುಸಿತ ಮೊದಲಾದ ಕಾರಣಗಳು ಇರುವ ಹಿನ್ನೆಲೆ ಎಲ್‌ಐಸಿ ಐಪಿಒಗೆ ಅಲ್ಪಾವಧಿಯಿಂದ ಮಧ್ಯಮ ಅವಧಿಯ ಆಧಾರದ ಮೇಲೆ ಚಂದಾದಾರರಾಗಿ ಎಂದು ಜಿಯೋಜಿತ್ ಫೈನಾನ್ಶಿಯಲ್ ಹೇಳಿದೆ.
ಚಂದಾದಾರರಾಗಿ: ಐಸಿಐಸಿಐ ಡೈರೆಕ್ಟ್
ಭಾರತೀಯ ಜೀವ ವಿಮಾ ಉದ್ಯಮದಲ್ಲಿ ಮಾರುಕಟ್ಟೆ ನಾಯಕ ಸ್ಥಾನದಲ್ಲಿ ಎಲ್‌ಐಸಿ ಇದೆ. ಸೆಪ್ಟೆಂಬರ್ 30, 2021 ರಂತೆ ಎಲ್‌ಐಸಿ ಎಂಬೆಡೆಡ್ ಮೌಲ್ಯವು 5.4 ಲಕ್ಷ ಕೋಟಿ ರೂಪಾಯಿ ಆಗಿದೆ. ಐಸಿಐಸಿಐ ಡೈರೆಕ್ಟ್ ಹಣಕಾಸಿನ ಸ್ಥಿತಿ ಮತ್ತು ಬಡ್ಡಿದರದ ಏರಿಳಿತಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಳವಳ ವ್ಯಕ್ತಪಡಿಸಿದೆ.
ಚಂದಾದಾರರಾಗಿ: ವೆಂಚುರಾ ಸೆಕ್ಯುರಿಟೀಸ್
ಎಲ್‌ಐಸಿಯು 2048 ಶಾಖೆಗಳು, 113 ವಿಭಾಗೀಯ ಕಚೇರಿಗಳು ಮತ್ತು 1,554 ಉಪ ಕಚೇರಿಗಳನ್ನು ಹೊಂದಿದೆ. ಎಲ್‌ಐಸಿ ಜಾಗತಿಕವಾಗಿ ಫಿಜಿ, ಮಾರಿಷಸ್, ಬಾಂಗ್ಲಾದೇಶ, ನೇಪಾಳ, ಸಿಂಗಾಪುರ, ಶ್ರೀಲಂಕಾ, ಯುಎಇ, ಬಹ್ರೇನ್, ಕತಾರ್, ಕುವೈತ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಎಲ್‌ಐಸಿ ವಿಮೆ ಹಾಗೂ ಹೂಡಿಕೆ ಕೇಂದ್ರಿತೆ ಕಂಪನಿಯಾಗಿದೆ. ಎಲ್‌ಐಸಿ ಹಣಕಾಸು ವರ್ಷ 2026ರಲ್ಲಿ 3.8 ಶೇಕಡಾವನ್ನು ತಲುಪುತ್ತದೆ ಎಂದು ವೆಂಚುರಾ ಸೆಕ್ಯುರಿಟೀಸ್ ನಿರೀಕ್ಷಿಸಿದೆ.
ಚಂದದಾರಿಕೆ ಮಾಡಿ: ರಿಲಯನ್ಸ್ ಸೆಕ್ಯುರಿಟೀಸ್
ರಿಲಯನ್ಸ್ ಸೆಕ್ಯುರಿಟೀಸ್ 'ಚಂದಾದಾರಿಕೆ' ಮಾಡುವಂತೆ ಶಿಫಾರಸ್ಸು ಮಾಡಿದೆ. ಖಾಸಗಿ ಜೀವ ವಿಮಾ ಸಂಸ್ಥೆಗಳ ಬೆಲೆಯ ಒಂದು ಭಾಗದಲ್ಲಿ ಐಪಿಒ ಮೌಲ್ಯಯುತವಾಗಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ ಹೇಳಿದೆ. 1.33 ಮಿಲಿಯನ್ ಏಜೆಂಟ್‌ಗಳು, ಹಲವಾರು ಪಾಲುದಾರರು ಮತ್ತು ಪರ್ಯಾಯ ಚಾನೆಲ್‌ಗಳನ್ನು ಒಳಗೊಂಡಿರುವ ಎಲ್‌ಐಸಿ ಉತ್ತಮ ಸ್ಥಾನದಲ್ಲಿದೆ. ಕಂಪನಿಯು ಉತ್ತಮ ಆರ್ಥಿಕ ದಾಖಲೆಯನ್ನು ಸಹ ಹೊಂದಿದೆ.


Click it and Unblock the Notifications