ಪ್ರಮುಖ ಬ್ರೋಕರೇಜ್ ಸಂಸ್ಥೆಯಾದ ಶೇರ್‌ಖಾನ್, ಎನ್‌ಎಂಡಿಸಿ ಲಿಮಿಟೆಡ್ ಸ್ಟಾಕ್ ಅನ್ನು 175 ರೂಪಾಯಿಗಳ ಟಾರ್ಗೆಟ್ ಪ್ರೈಸ್‌ನೊಂದಿಗೆ ಖರೀದಿ ಮಾಡಲು ಶಿಫಾರಸು ಮಾಡಿದೆ. ಶುಕ್ರವಾರ ಎನ್‌ಎಂಡಿಸಿ ಷೇರುಗಳು ಬಿಎಸ್‌ಇಯಲ್ಲಿ ಶೇಕಡ 4 ರಷ್ಟು ಏರಿಕೆಯಾಗಿ 149 ರೂಪಾಯಿಗೆ ತಲುಪಿದೆ. ಇದು ದಿನದ ಗರಿಷ್ಠಮಟ್ಟವಾಗಿದೆ.
ನಿಗದಿಪಡಿಸಿದ ಟಾರ್ಗೆಟ್ ಪ್ರೈಸ್ ಅನ್ನು ಪರಿಗಣಿಸಿ, ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಿದರೆ ಸ್ಟಾಕ್ ಶೇಕಡ 19ರಷ್ಟು ಲಾಭವನ್ನು ನೀಡುವ ಸಾಧ್ಯತೆಯಿದೆ. ಎನ್‌ಎಂಡಿಸಿ ಪಿಎಸ್‌ಯು ಸ್ಟಾಕ್ ಆಗಿದೆ. ಸೆಪ್ಟೆಂಬರ್ 2023 ರಲ್ಲಿ ಕಬ್ಬಿಣದ ಅದಿರು ಪ್ರತಿ ಟನ್‌ಗೆ 300 ರೂಪಾಯಿಗೆ ಎನ್‌ಎಂಡಿಸಿ ಬೆಲೆ ಏರಿಕೆ ಮಾಡಿದೆ. ಇದು ಅಂತಾರಾಷ್ಟ್ರೀಯ ಕಬ್ಬಿಣದ ಅದಿರು ಬೆಲೆಯಲ್ಲಿ ಚೇತರಿಗೆ ಸಾಕ್ಷಿಯಾಗಿದೆ ಎಂದು ಬ್ರೋಕರೇಜ್ ವರದಿಯಲ್ಲಿ ತಿಳಿಸಿದೆ.

ಇದಲ್ಲದೆ, ಹಣಕಾಸು ವರ್ಷ 2024ರ 5ನೇ ತಿಂಗಳಿನಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆ/ಮಾರಾಟದ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 23/ 32 ರಷ್ಟು ಬೆಳವಣಿಗೆ ದಾಖಲಾಗಿದೆ. "ನಾವು ಹಣಕಾಸು 23-26ರಲ್ಲಿ ಬಲವಾದ ಶೇಕಡ 12 ರಷ್ಟು ಕಬ್ಬಿಣದ ಅದಿರು ಮಾರಾಟದ ಪ್ರಮಾಣ ಏರಿಕೆ ನೋಡಬಹುದು. ಮುಂದಿನ ಐದು ವರ್ಷಗಳಲ್ಲಿ 100 ಮೆಟ್ರಿಕ್ ಟನ್ ಮಾರಾಟದ ಆಕಾಂಕ್ಷೆಯಿದೆ," ಎಂದು ಬ್ರೋಕರೇಜ್ ಹೇಳಿದೆ.
175 ರೂಪಾಯಿಗಳ ಟಾರ್ಗೆಟ್ ಪ್ರೈಸ್‌ನೊಂದಿಗೆ ಖರೀದಿಸಿ
ಎನ್‌ಎಂಡಿಸಿ ಲಿಮಿಟೆಡ್ ಸ್ಟಾಕ್ ಅನ್ನು 175 ರೂಪಾಯಿಗಳ ಟಾರ್ಗೆಟ್ ಪ್ರೈಸ್‌ನೊಂದಿಗೆ ಖರೀದಿಸಿ ಎಂದು ಬ್ರೋಕರೇಜ್ ಸಂಸ್ಥೆ ಶೇರ್‌ಖಾನ್ ಶಿಫಾರಸು ಮಾಡಿದೆ. "ನಾವು ಈ ವರದಿಯಲ್ಲಿ ನಮ್ಮ ಹಣಕಾಸು ವರ್ಷ 2026 ರ ಗಳಿಕೆಯ ಅಂದಾಜುಗಳನ್ನು ತಿಳಿಸಿದ್ದೇವೆ. ಬಲವಾದ ದೇಶೀಯ ಉಕ್ಕಿನ ಬೇಡಿಕೆಯು ಎನ್‌ಎಂಡಿಸಿಯ ಪರಿಮಾಣದ ಬೆಳವಣಿಗೆಗೆ ಉತ್ತಮವಾಗಿದೆ. ಹಣಕಾಸು ವರ್ಷ 2024-26ರಲ್ಲಿ ಅಧಿಕ ಗಳಿಕೆಯ ನಿರೀಕ್ಷೆಯಿದೆ," ಎಂದು ಬ್ರೋಕರೇಜ್ ತಿಳಿಸಿದೆ.
"ಎನ್‌ಎಂಡಿಸಿ ಹೆಚ್ಚಿನ ನಗದುಹೆಚ್ಚಿನ ನಗದು 11200 ಕೋಟಿ ರೂಪಾಯಿ (ಜೂನ್ 2023 ರಂತೆ) ಹೊಂದಿದೆ. ಇದು ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಶೇಕಡ 26 ಆಗಿದೆ. ಇದು ಹೂಡಿಕೆದಾರರಿಗೆ ಉತ್ತಮವಾಗಿದೆ. ಆದ್ದರಿಂದ, ನಾವು ಪರಿಷ್ಕೃತ ಟಾರ್ಗೆಟ್ ಪ್ರೈಸ್‌ನೊಂದಿಗೆ ಎನ್‌ಎಂಡಿಸಿಯ ಸ್ಟಾಕ್ ಖರೀದಿ ಮಾಡಬಹುದು. 2025ಕ್ಕೆ ಮೌಲ್ಯ ದುಪ್ಪಟ್ಟಾಗಲಿದೆ," ಎಂದು ಸಂಸ್ಥೆ ಮಾಹಿತಿ ನೀಡಿದೆ.
ಎನ್‌ಎಂಡಿಸಿ ಸ್ಟಾಕ್ ಹೇಗಿದೆ?
ಶುಕ್ರವಾರ ಎನ್‌ಎಂಡಿಸಿಯ ಷೇರು ಬೆಲೆಯು ಬಿಎಸ್‌ಇಯಲ್ಲಿ ಶೇಕಡ 4.19 ರಷ್ಟು ಜಿಗಿದು 147.85 ರೂಪಾಯಿಗೆ ತಲುಪಿದೆ. ಈ ಸ್ಟಾಕ್ 1 ವಾರದಲ್ಲಿ ಶೇಕಡ 3.36 ರಷ್ಟು ಗಳಿಸಿದರೆ, 1 ತಿಂಗಳಲ್ಲಿ ಶೇಕಡ 20.30 ರಷ್ಟು ಗಳಿಸಿದೆ. 1 ವರ್ಷದಲ್ಲಿ ಶೇಕಡ 44.78 ರಷ್ಟು ಮತ್ತು 3 ವರ್ಷಗಳಲ್ಲಿ ಶೇಕಡ 118.84 ರಷ್ಟು ಈ ಸ್ಟಾಕ್ ಗಳಿಸಿದೆ.
ಎನ್‌ಎಂಡಿಸಿ ಸ್ಟಾಕ್‌ನ 52-ವಾರದ ಗರಿಷ್ಠವು ಪ್ರತಿ ಸ್ಟಾಕ್‌ಗೆ 154.15 ರೂಪಾಯಿ ಆಗಿದೆ. 52 ವಾರಗಳ ಕನಿಷ್ಠ ಬೆಲೆಯು ಬಿಎಸ್‌ಇಯಲ್ಲಿ 93.60 ರೂಪಾಯಿ ಆಗಿದೆ. ಈ ಸ್ಟಾಕ್‌ನ ಒಟ್ಟು ಮಾರುಕಟ್ಟೆ ಮೌಲ್ಯ 43,329.01 ಕೋಟಿ ರೂಪಾಯಿ ಆಗಿದೆ. ಈ ಸಮಯಕ್ಕೆ ಸ್ಟಾಕ್ ಸುಮಾರು ಶೇಕಡ 0.91 ರಷ್ಟು ಏರಿಕೆಯಾಗಿ, 149.30 ರೂಪಾಯಿಗೆ ತಲುಪಿದೆ.
ಎನ್‌ಎಂಡಿಸಿ ಲಿಮಿಟೆಡ್ ಬಗ್ಗೆ ಮಾಹಿತಿ
ಸರ್ಕಾರಿ ಸ್ವಾಮ್ಯದ ಕಂಪನಿ ಎನ್‌ಎಂಡಿಸಿ ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕವಾಗಿದೆ. ಎನ್‌ಎಂಡಿಸಿ ನಾಲ್ಕು ಕಬ್ಬಿಣದ ಅದಿರು ಗಣಿಗಳನ್ನು ನಿರ್ವಹಿಸುತ್ತಿದೆ. ಬೈಲಾಡಿಲ ಕಬ್ಬಿಣದ ಅದಿರು ಗಣಿಗಳು - ಕಿರಂಡುಲ್ ಕಾಂಪ್ಲೆಕ್ಸ್, ಬೈಲಾಡಿಲಾ ಕಬ್ಬಿಣದ ಅದಿರು ಗಣಿ - ಬಾಚೆಲಿ ಕಾಂಪ್ಲೆಕ್ಸ್ ಛತ್ತೀಸ್‌ಗಢ, ಕರ್ನಾಟಕದ ದೋಣಿಮಲೈ ಕಬ್ಬಿಣದ ಅದಿರು ಗಣಿ ಮತ್ತು ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ ಈ ನಾಲ್ಕು ಗಣಿಗಳಾಗಿದೆ. ಕಂಪನಿಯು ವಜ್ರಗಳು, ಸ್ಪಾಂಜ್ ಕಬ್ಬಿಣ ಮತ್ತು ಗಾಳಿ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.
ಇಲ್ಲಿ ಗಮನಿಸಿ: ಈ ಮೇಲಿನ ಲೇಖನವನ್ನು ಬ್ರೋಕರೇಜ್ ಸಂಸ್ಥೆ ಶೇರ್‌ಖಾನ್ ಸ್ಟಾಕ್ ಶಿಫಾರಸು ವರದಿ ಆಧಾರದಲ್ಲಿ ಬರೆಯಲಾಗಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಆಗಲಿ, ಬ್ರೋಕರೇಜ್ ಸಂಸ್ಥೆಯಾಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications