For Quick Alerts
ALLOW NOTIFICATIONS  
For Daily Alerts

ಮನೆ ಬಾಗಿಲಿಗೆ SBI ಬ್ಯಾಂಕಿಂಗ್ ಸೇವೆ:ಕ್ಯಾಶ್ ಡೆಲಿವರಿ ಸೇರಿ ಎಲ್ಲವೂ ಸಾಧ್ಯ

|

ಕೊರೊನಾವೈರಸ್‌ನಿಂದಾಗಿ ದೇಶವು ಏಪ್ರಿಲ್ 14ರವರೆಗೆ 21 ದಿನಗಳ ಲಾಕ್‌ಡೌನ್ ಅಡಿಯಲ್ಲಿದೆ. ಈ ಸಂದರ್ಭದಲ್ಲಿ ಜನರು ಸುಖಾಸುಮ್ಮನೆ ಆಚೆ ಓಡಾಡುವಂತಿಲ್ಲ. ಅನೇಕ ಬ್ಯಾಂಕ್‌ನ ಗ್ರಾಹಕರಿಗೆ ಬ್ಯಾಂಕ್‌ಗೆ ಹೋಗಿ ಬರುವುದು ಹಾಗೂ ಎಟಿಎಂಗೆ ತೆರಳಿ ಹಣ ವಿತ್‌ಡ್ರಾ ಮಾಡುವುದು ಒಂದು ರೀತಿಯಲ್ಲಿ ಸವಾಲಿನ ಸಂಗತಿಯಾಗಿದೆ.

ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ತುರ್ತು ಅಗತ್ಯವಿದ್ದವರಿಗೆ ಅವರ ಮನೆ ಬಾಗಿಲಿಗೆ ಹಣವನ್ನು ತಲುಪಿಸುವ ಸೇವೆಯನ್ನು ನೀಡಲಿದೆ. ಈ ಸೌಲಭ್ಯವು ಪ್ರಸ್ತುತ ಹಿರಿಯ ನಾಗರಿಕರಿಗೆ ಮತ್ತು ದಿವ್ಯಾಂಗರಿಗೆ(ವಿಶೇಷ ಚೇತನರಿಗೆ) ಲಭ್ಯವಿದೆ. ಎಸ್‌ಬಿಐ ಖಾತೆದಾರರು ಈ ಸೇವೆಗಳನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಎಸ್‌ಬಿಐ ವಿಶೇಷ ಬ್ಯಾಂಕಿಂಗ್ ಸೇವೆಯಲ್ಲಿ ಏನೇನಿದೆ?

ಎಸ್‌ಬಿಐ ವಿಶೇಷ ಬ್ಯಾಂಕಿಂಗ್ ಸೇವೆಯಲ್ಲಿ ಏನೇನಿದೆ?

ದೇಶದ ಲಾಕ್‌ಡೌನ್‌ ವೇಳೆಯಲ್ಲಿ ಎಸ್‌ಬಿಐ ನೀಡುತ್ತಿರುವ ಈ ವಿಶೇಷ ಡೋರ್‌ಸ್ಟೆಪ್ ಬ್ಯಾಂಕಿಗ್ ಸೇವೆಯಲ್ಲಿ ನಗದು ಪಿಕಪ್, ನಗದು ವಿತರಣೆ, ಚೆಕ್ ಪಿಕಪ್, ಚೆಕ್ ರಿಕ್ವೈಸೇಶನ್ ಸ್ಲಿಪ್ ಪಿಕಪ್, ಫಾರ್ಮ್ 15 ಹೆಚ್ ಪಿಕಪ್, ಡ್ರಾಫ್ಟ್‌ಗಳ ವಿತರಣೆ, ಟರ್ಮ್ ಠೇವಣಿ ಸಲಹೆ, ಲೈಫ್ ಸರ್ಟಿಫಿಕೇಟ್ ಪಿಕಪ್ ಮತ್ತು ಕೆವೈಸಿ ಡಾಕ್ಯುಮೆಂಟ್ಸ್ ಪಿಕಪ್ ಸೇರಿವೆ.

ಈ ಸೇವೆಯನ್ನು ಪಡೆಯಲು ಬ್ಯಾಂಕ್‌ ಕಾರ್ಯ ನಿರ್ವಹಣಾ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಟೋಲ್ ಫ್ರೀ ಸಂಖ್ಯೆ 1800111103 ಗೆ ಕರೆ ಮಾಡಬಹುದು.

 

ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಸಂಪೂರ್ಣ ಕೆವೈಸಿ ಹೊಂದಿದ್ದ ಗ್ರಾಹಕರಿಗೆ ಮಾತ್ರ

ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಸಂಪೂರ್ಣ ಕೆವೈಸಿ ಹೊಂದಿದ್ದ ಗ್ರಾಹಕರಿಗೆ ಮಾತ್ರ

ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆ ಸಂಪೂರ್ಣ ಕೆವೈಸಿ ಪೂರೈಸಿದ್ದ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ನೋಂದಣಿಗಾಗಿ ಸೇವಾ ವಿನಂತಿಯನ್ನು ಹೋಂ್ ಬ್ರ್ಯಾಂಚ್‌ಗಳಲ್ಲಿ ಮಾಡಲಾಗುತ್ತದೆ.

ಹಣಕಾಸಿನ/ಹಣಕಾಸಿನೇತರ ವ್ಯವಹಾರಗಳಿಗೆ ಸೇವಾ ಶುಲ್ಕ

ಹಣಕಾಸಿನ/ಹಣಕಾಸಿನೇತರ ವ್ಯವಹಾರಗಳಿಗೆ ಸೇವಾ ಶುಲ್ಕ

ಹಣಕಾಸಿನೇತರ ವಹಿವಾಟುಗಳುಗಳಿಗೆ ಸೇವಾ ಶುಲ್ಕ 60 ರುಪಾಯಿ + ಜಿಎಸ್‌ಟಿ ಮತ್ತು ಹಣಕಾಸಿನ ವಹಿವಾಟಿಗೆ 100 ರುಪಾಯಿ + ಜಿಎಎಸ್‌ಟಿ ವಿಧಿಸಲಾಗುವುದು. ಕ್ಯಾಶ್ ವಿತ್‌ಡ್ರಾ ಮಿತಿಯು ದಿನಕ್ಕೆ 20,000 ರುಪಾಯಿಗೆ ಸೀಮಿತಗೊಳಿಸಲಾಗಿದೆ.

ಹೋಮ್ ಬ್ರ್ಯಾಂಚ್‌ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ

ಹೋಮ್ ಬ್ರ್ಯಾಂಚ್‌ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ

ತಮ್ಮ ಹೋಮ್‌ ಬ್ರ್ಯಾಂಚ್‌ನ 5 ಕಿ.ಮೀ ವ್ಯಾಪ್ತಿಯಲ್ಲಿ ಮಾನ್ಯ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಖಾತೆದಾರರು ಈ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜಂಟಿಯಾಗಿ ಕಾರ್ಯನಿರ್ವಹಿಸುವ ಖಾತೆಗಳನ್ನು ಹೊಂದಿರುವ ಗ್ರಾಹಕರು ಈ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೂ ಮೈನರ್ ಅಕೌಂಟ್‌ಗಳ ವ್ಯವಹಾರಕ್ಕೂ ಈ ಸೇವೆ ಲಭ್ಯವಿಲ್ಲ.

ಚೆಕ್‌ ಮೂಲಕ ಇಲ್ಲವೆ ವಿತ್‌ಡ್ರಾ ಫಾರ್ಮ್‌ ಮೂಲಕವಷ್ಟೇ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಸಾಧ್ಯ. ಇದಕ್ಕೂ ಮೊದಲು ಟೋಲ್ ಫ್ರೀ ನಂಬರ್ ಕರೆ ಮಾಡಿ ನಿಮ್ಮ ಖಾತೆಯ ಕೊನೆಯ ನಾಲ್ಕು ಸಂಖ್ಯೆಗಳನ್ನು ತಿಳಿಸಬೇಕಾಗುತ್ತದೆ. ವೆರಿಫಿಕೇಶನ್ ಬಳಿಕ ಬೆಳಗ್ಗೆ 9 ರಿಂದ 5 ಗಂಟೆಯೊಳಗೆ ಯಾವ ಸಂದರ್ಭದಲ್ಲಿ ಸೇವೆ ನೀಡಬೇಕು ಎಂದು ತಿಳಿಸಬೇಕು. ಒಂದು ಬಾರಿ ನಿಮ್ಮ ಮನವಿ ಸ್ವೀಕರಿಸಿದ ಬಳಿಕ ಗ್ರಾಹಕರಿಗೆ SMS ಬರುತ್ತದೆ. ಈ ಮೆಸೇಜ್ ಬ್ಯಾಂಕಿಂಗ್ ಏಜೆಂಟ್‌ಗೂ ಫಾರ್ವಡ್ ಮಾಡಲಾಗುತ್ತದೆ. ಆತ ಬ್ಯಾಂಕಿಂಗ್ ಸೇವೆಗೆ ಬಂದಾಗ ಅಧಿಕೃತ ಐಡಿ ಪ್ರೂಫ್ ತೋರಿಸಬೇಕಾಗುತ್ತದೆ.

 

ಎಸ್‌ಬಿಐ ಅಲ್ಲದೆ ಇತರೆ ಬ್ಯಾಂಕುಗಳಲ್ಲೂ ಈ ಸೇವೆ ಲಭ್ಯ

ಎಸ್‌ಬಿಐ ಅಲ್ಲದೆ ಇತರೆ ಬ್ಯಾಂಕುಗಳಲ್ಲೂ ಈ ಸೇವೆ ಲಭ್ಯ

ಎಸ್‌ಬಿಐ ಹೊರತುಪಡಿಸಿ, ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್ ಮತ್ತು ಕೊಟಕ್‌ನಂತಹ ಬ್ಯಾಂಕುಗಳು ಸಹ ತಮ್ಮ ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತವೆ.

English summary

Corona Lockdown SBI Doorstep Banking Facility

During This Lockdown period State Bank of India (SBI) provides doorstep banking services to its customers
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X