ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಾವು ಪಾವತಿ ಮಾಡಲು ಕರೆನ್ಸಿಗಳನ್ನು ಬಲಸುವ ಬದಲಾಗಿ ಡಿಜಿಟಲ್ ಪಾವತಿಗಳಿಗೆ ಸಾಗಿದ್ದೇವೆ. ನೀವು ಏನನ್ನಾದರೂ ಖರೀದಿಸಿದಾಗ ಹಣಕಾಸಿನ ವಹಿವಾಟುಗಳನ್ನು ಮಾಡುವ ಒಂದು ಸಾಮಾನ್ಯ ವಿಧಾನವೆಂದರೆ ನಿಮ್ಮ ಕಾರ್ಡ್ ಅನ್ನು ಸ್ವೈಪ್ ಮಾಡುವುದು ಅಥವಾ ಟ್ಯಾಪ್ ಮಾಡುವುದು ಆಗಿದೆ.
ಇದನ್ನು ಹೊರತುಪಡಿಸಿ ಗೂಗಲ್ ಪೇ ಅಥವಾ ಪೇಟಿಎಂ, ಫೋನ್‌ಪೇನಂತಹ ಮೊಬೈಲ್ ಪಾವತಿಗಳನ್ನು ಬಳಸುವುದು. ನಗದು ರಹಿತ ವಹಿವಾಟುಗಳು ಕೆಲವು ರೀತಿಯಲ್ಲಿ ನಮಗೆ ವಿಷಯಗಳನ್ನು ಸುಲಭವಾಗಿಸಿದೆ. ಆದರೂ ವಂಚಕರ ಜಾಲವೂ ಕೂಡಾ ಅಧಿಕವಾಗುತ್ತಾ ಸಾಗುತ್ತಿದೆ.

ವಂಚಕರು ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳು ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಕದಿಯುತ್ತಾರೆ. ಇದರಿಂದಲೇ ಹಣಕಾಸು ವಂಚನೆಗಳನ್ನು ಮಾಡಲಾಗುತ್ತದೆ. ಈ ನಡುವೆ ನಾವು ಮುಖ್ಯವಾಗಿ ಫೋನ್ ಮೂಲಕ ಕಾರ್ಡ್ ವಿವರಗಳನ್ನು ನೀಡುವುದನ್ನು ನಿಲ್ಲಿಸಬೇಕಾಗುತ್ತದೆ.
ಫೋನ್‌ನಲ್ಲಿ ನಿಮ್ಮ ಕ್ರೆಡಿಟ್‌ನ ವಿವರಗಳನ್ನು ಹಂಚಿಕೊಂಡರೆ ಅದು ವಂಚಕರಿಗೆ ಕೂಡಾ ಲಭ್ಯವಾಗಬಹುದು. ಇನ್ನು ಈ ಕ್ರೆಡಿಟ್ ಕಾರ್ಡ್ ವಂಚನೆಯಿಂದ ಜನರನ್ನು ರಕ್ಷಣೆ ಮಾಡಲು ಸರ್ಕಾರವು ಕೆಲವು ಕನಿಷ್ಠ ಮಾನದಂಡಗಳು ಮತ್ತು ಸುರಕ್ಷತೆಗಳನ್ನು ಸಹ ಇರಿಸಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ನೀವು ಅಪಾಯಗಳನ್ನು ಹೇಗೆ ಕಡಿಮೆ ಮಾಡಬಹುದು?
ಸಾಮಾನ್ಯವಾಗಿ ನಾವು ನಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಇನ್ನೊಬ್ಬರಿಗೆ ನೀಡುವುದೇ ತಪ್ಪು. ಆದರೆ ನಾವು ನಂಬಿಕೆಯ ಆಧಾರದಲ್ಲಿ ಇನ್ನೊಬ್ಬರಿಗೆ ಕ್ರೆಡಿಟ್ ಕಾರ್ಡ್ ನೀಡಿದ್ದೇವೆ ಅಂದುಕೊಳ್ಳಿ, ಆಗ ಆದರೆ ನೀವು ಆಗ ಮೊಬೈಲ್ ಫೋನ್ ಮೂಲಕ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವುದು ಎಂದಿಗೂ ಅಪಾಯಕಾರಿಯಾಗಿದೆ. ಆದರೆ ನೀವು ಅಪಾಯಗಳನ್ನು ಹೇಗೆ ಕಡಿಮೆ ಮಾಡಬಹುದು ಎಂದು ತಿಳಿದಿರಬೇಕು.
ನೀವು ಬಳಸುವ ಪಾವತಿ ಕಾರ್ಡ್ ಡೇಟಾ ಭದ್ರತಾ ಮಾನದಂಡವನ್ನು ಅನುಸರಿಸುತ್ತಿದೆಯೇ ಎಂದು ನೀವು ಖಚಿತಪಡಿಸಿಕೊಳ್ಳಲು, ಕಾರ್ಡ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ನಿಮಗೆ ಕರೆ ಬಂದರೆ ಅದು ಕಾನೂನುಬಾಹಿರವಲ್ಲ ಎಂದು ತಿಳಿದಿರಬೇಕು. ಆದರೆ ಅಗತ್ಯಕ್ಕಿಂತ ಅಧಿಕ ಮಾಹಿತಿ ಕೇಳಿದರೆ ವಂಚಕರ ಜಾಲವಾಗಿರಬಹುದು ಎಂದು ಮರೆಯಬೇಡಿ.
ಹೌದು, ಯಾರಾದರೂ ನಿಮಗೆ ಕರೆ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳುತ್ತಿದ್ದರೆ, ಆಗ ನೀವು ಎಚ್ಚರದಿಂದಿರಬೇಕು. ವಂಚನೆಗೆ ಬಲಿಯಾಗುವ ಅಪಾಯವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಈ ಕೆಳಗಿದೆ.
1. ಕರೆ ಮಾಡಿದರವು ಯಾರೆಂದು ತಿಳಿಯಿರಿ: ಕರೆ ಮಾಡಿದವರು ಕಾನೂನುಬದ್ಧವಾಗಿ ಕರೆ ಮಾಡಿರುವವರೆ ಮತ್ತು ಕರೆಯ ಉದ್ದೇಶವು ನಿಜವಾಗಿದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಿ.
2. ಆಕರ್ಷಕವಾಗಿ ಮಾತನಾಡಿ ಯಾವುದೇ ಆಫರ್‌ಗಳ ಆಮಿಷ ಒಡ್ಡಿದ್ದರೆ ಅದಕ್ಕೆ ಬಲಿಯಾಗಬೇಡಿ.
3. ಯಾವಾಗಲೂ ಸುರಕ್ಷಿತ ಪಾವತಿ ವಿಧಾನಗಳನ್ನು ಬಳಸಲು ಪ್ರಯತ್ನಿಸಿ.
4. ಕಂಪನಿ, ನಿಮಗೆ ಕರೆ ಮಾಡಿದ ಪ್ರತಿನಿಧಿ, ಮತ್ತು ವಿಧಿಸಲಾಗುತ್ತಿರುವ ಮೊತ್ತದ ದಾಖಲೆ ವಿವರಗಳನ್ನು ಇರಿಸಿ.
ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳು ಕಳುವಾಗಿದ್ದರೆ ನೀವು ಏನು ಮಾಡಬೇಕು?
ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳು ಸೋರಿಕೆಯಾಗಿದೆ ಎಂದು ನೀವು ತಿಳಿದ ನಂತರ ನೀವು ಗಾಬರಿಯಾಗಬಾರದು. ಬದಲಾಗಿ, ಯಾವುದೇ ಹಣಕಾಸಿನ ನಷ್ಟವನ್ನು ತಪ್ಪಿಸಲು ತಕ್ಷಣ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
1. ತಕ್ಷಣವೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿ. ಇದರಿಂದ ನೀವು ಹಣವನ್ನು ಕಳೆದುಕೊಳ್ಳುವುದಿಲ್ಲ. ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ನೀವು ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು.
2. ಸಮಸ್ಯೆಯನ್ನು ಹತ್ತಿರದ ಪೊಲೀಸ್ ಠಾಣೆ ಅಥವಾ ಇತರ ಅಧಿಕೃತ ಸಂಸ್ಥೆಗೆ ರಿಪೋರ್ಟ್ ಮಾಡಿ ಅಥವಾ ತಿಳಿಸಿ.
3. ಯಾವುದೇ ಅಸಾಮಾನ್ಯ ವಹಿವಾಟುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಖಾತೆಯನ್ನು ಪರಿಶೀಲನೆ ಮಾಡಿ.
4. ನಿಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್/ವೆಬ್‌ಸೈಟ್‌ನಲ್ಲಿ ಕಾರ್ಡ್ ಸೆಟ್ಟಿಂಗ್‌ಗಳನ್ನು ನೋಡಿ. ಅನೇಕ ಸೇವಾ ಪೂರೈಕೆದಾರರು ಮೌಲ್ಯದ ಆಧಾರದ ಮೇಲೆ ವಹಿವಾಟುಗಳನ್ನು ಮಿತಿಗೊಳಿಸಲು ಅವಕಾಶ ನೀಡುತ್ತಾರೆ. ಅದನ್ನು ಮಾಡಿ.
5. ಕ್ರೆಡಿಟ್ ಮಾನಿಟರಿಂಗ್ ಸೇವೆಗಳಿಗೆ ನೋಂದಾಯಿಸಬಹುದು. ವಂಚನೆ ಎಚ್ಚರಿಕೆಯನ್ನು ಕೂಡಾ ಸಕ್ರಿಯಗೊಳಿಸಬಹುದು.


Click it and Unblock the Notifications