ನವರಾತ್ರಿಯು ಭಾರತದಲ್ಲಿ ಹಬ್ಬದ ಸೀಸನ್‌ನ ಆರಂಭದ ಸೂಚನೆಯಾಗಿದೆ. ಹಬ್ಬದ ಸೀಸನ್ ಈಗಾಗಲೇ ಪ್ರಾರಂಭವಾಗಿದ್ದು, ನಿಮ್ಮ ರಜಾದಿನದ ಪ್ರಯಾಣವನ್ನು ಆಯೋಜನೆ ಮಾಡಲು ಇದೇ ಸೂಕ್ತ ಕ್ಷಣವಾಗಿದೆ. ವರ್ಷದ ಈ ಸಮಯಕ್ಕಾಗಿ ಎಲ್ಲರೂ ಕಾಯುತ್ತಿರುತ್ತಾರೆ.
ಹಬ್ಬದ ಸಮಯದಲ್ಲಿ ದೈನಂದಿನ ತಲೆಬಿಸಿಯಿಂದ ಸ್ವಲ್ಪ ರಿಲಾಕ್ಸ್ ಪಡೆಯಲು ಅದ್ಭುತವಾದ ಅವಕಾಶವೇ ಈ ರಜಾದಿನಗಳ ಪ್ರವಾಸವಾಗಿದೆ. ನಿಮ್ಮ ಆತ್ಮೀಯರೊಂದಿಗೆ ಸಮಯ ಕಳೆಯಲು ಇದು ಒಂದು ಉತ್ತಮ ಅವಕಾಶವಾಗಿದೆ. ಆದರೆ ನಮ್ಮ ಕೈಗೆಟಕುವ ದರದಲ್ಲಿಯೇ ಪ್ರವಾಸ ಮಾಡಬೇಕಲ್ಲವೇ?.
ಹಾಗಿರುವಾಗ ಇಲ್ಲಿರುವ ಪ್ರಶ್ನೆ ಹೆಚ್ಚು ಖರ್ಚು ಮಾಡದೆ ನಿಮ್ಮ ರಜಾದಿನವನ್ನು ಹೇಗೆ ಸದುಪಯೋಗ ಮಾಡುವುದು?. ನಿಮ್ಮ ಬಜೆಟ್ ಸ್ನೇಹಿ ಪ್ರವಾಸವನ್ನು ಯೋಜಿಸಲು ಎಂಟು ಸಲಹೆಗಳು ಇಲ್ಲಿದೆ ಮುಂದೆ ಓದಿ...

1) ನಿಮ್ಮ ಯೋಜನೆಗಳನ್ನು ಮುಂಚಿತವಾಗಿ ಪ್ಲ್ಯಾನ್ ಮಾಡಿ
ಹಬ್ಬದ ಸಮಯದಲ್ಲಿ ನೀವು ಬುದ್ಧಿವಂತಿಕೆಯಿಂದ ಪ್ಲ್ಯಾನ್ ಮಾಡಿಕೊಂಡರೆ, ಕಡಿಮೆ ಬಜೆಟ್‌ನಲ್ಲಿಯೇ ರಜಾದಿನವನ್ನು ಕಳೆಯಬಹುದಾಗಿದೆ. "ಉತ್ತಮ ರಿಯಾಯಿತಿಯನ್ನು ಪಡೆಯಲು ನಿಮ್ಮ ಪ್ರವಾಸವನ್ನು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಿ. ಉತ್ತಮ ವ್ಯವಹಾರಗಳಿಗಾಗಿ ನಿಮ್ಮ ಪ್ರಯಾಣದ ದಿನಾಂಕಗಳೊಂದಿಗೆ ಹೊಂದಿಕೊಳ್ಳಿ," ಎಂದು ಈಸಿಮೈಟ್ರಿಪ್‌ನ ಸಹ-ಸಂಸ್ಥಾಪಕ ರಿಕಾಂತ್ ಪಿಟ್ಟಿ ಹೇಳಿದರು.
2) ದಿನಾಂಕಗಳಲ್ಲಿ ಹೊಂದಾಣಿಕೆಯಿರಲಿ
ನಿಮ್ಮ ಪ್ರವಾಸದ ದಿನಾಂಕಗಳನ್ನು ಆಯ್ಕೆಮಾಡುವಾಗ ನೀವು ಯಾವ ದಿನಾಂಕಕ್ಕೂ ಹೊಂದಿಕೊಳ್ಳುವಂತಿರಿ. ನೀವು ಒಂದು ಅಥವಾ ಎರಡು ದಿನಗಳ ಹಿಂದೆ ಬುಕ್ ಮಾಡುವುದಕ್ಕೂ ಹಲವಾರು ದಿನಗಳ ಮುಂಚೆಯೇ ಬುಕ್ ಮಾಡುವುದಕ್ಕೂ ಬೆಲೆಗಳಲ್ಲಿ ಸಾಕಷ್ಟು ವ್ಯತ್ಯಾಸವಿರಬಹುದು. "ಬೆಳಿಗ್ಗೆ ಅಥವಾ ವಾರದ ಮಧ್ಯದಲ್ಲಿ ಪ್ರಯಾಣ ಮಾಡುವುದು ಬೆಲೆ ಕಡಿಮೆ ಮಾಡಲು ಸಹಾಯಕವಾಗಲಿದೆ," ಎಂದು ಸೌಮಿತ್ರ ಸಿಂಗ್ ಹೇಳಿದರು.
3) ಯಾವಾಗಲೂ ಬೆಲೆಗಳನ್ನು ಹೋಲಿಕೆ ಮಾಡಿ
ವಿವಿಧ ಮೂಲಗಳಿಂದ ಬೆಲೆಗಳನ್ನು ಹೋಲಿಸುವುದು ಅತೀ ಮುಖ್ಯವಾಗುತ್ತದೆ. ವೆಚ್ಚವನ್ನು ಕಡಿಮೆ ಮಾಡಲು ಲಾಯಲ್ಟಿ ಪಾಯಿಂಟ್‌ಗಳು, ಇತರೆ ಪಾಯಿಂಟ್‌ಗಳನ್ನು ಬಳಸಲು ಮರೆಯದಿರಿ ಎಂದು ರಿಕಾಂತ್ ಪಿಟ್ಟಿ ಸಲಹೆ ನೀಡಿದ್ದಾರೆ. "ಕಡಿಮೆ ಪ್ಯಾಕ್ ಮಾಡುವುದು ನಿಮಗೆ ಶುಲ್ಕವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಬೇರೆ ಬೇರೆ ವಿಮಾನ ಸಂಸ್ಥೆಗಳ ದರವನ್ನು ನೀವು ಪರಿಶೀಲಿಸಿದರೆ, ಕಡಿಮೆ ದರ ನೋಡಿಕೊಂಡು ಟಿಕೆಟ್ ಬುಕ್ ಮಾಡಿಕೊಳ್ಳಿ," ಎಂದು ರಿಕಾಂತ್ ಸೇರಿಸಿದ್ದಾರೆ.
4) ಉತ್ತಮ ಡೀಲ್‌ಗಳನ್ನು ಪರಿಶೀಲಿಸಿ
ವಿಶೇಷ ಕೊಡುಗೆಗಳು, ಕಡಿತಗಳು ಮತ್ತು ಏರ್‌ಲೈನ್ಸ್ ಮತ್ತು ಟ್ರಾವೆಲ್ ಕಂಪನಿಗಳ ಆಫರ್‌ಗಳಿಗಾಗಿ ಜನರು ಯಾವಾಗಲೂ ಸೇಲ್ಸ್ ಮತ್ತು ಪ್ರೊಮೋಷನ್ಸ್‌ಗಳ ಮೇಲೆ ಗಮನಹರಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.
5) ಅಗ್ಗದ ವಸತಿ ಆಯ್ಕೆಗಳು
ಹಾಸ್ಟೆಲ್‌ಗಳು ಅಥವಾ ರಜೆಯ ಆಫರ್‌ಗಳು ನೋಡಿಕೊಂಡು ಅಗ್ಗದ ವಸತಿ ಆಯ್ಕೆಗಳನ್ನು ಗಣನೆಗೆ ತೆಗೆದುಕೊಳ್ಳಿ ಎಂದು ಸೌಮಿತ್ರಾ ಸಿಂಗ್ ಸಲಹೆ ನೀಡಿದ್ದಾರೆ. ಕೆಲವು ಹಾಸ್ಟೆಲ್‌ಗಳು ಹೋಟೆಲ್‌ಗಳಿಗಿಂತ ಕಡಿಮೆ ದರವನ್ನು ಹೊಂದಿರುತ್ತದೆ. "ವೆಚ್ಚವನ್ನು ವಿಭಜಿಸಲು ಸ್ನೇಹಿತರು ಅಥವಾ ಕುಟುಂಬದೊಂದಿಗೆ ರೂಮ್ ಹಂಚಿಕೊಳ್ಳಿ," ಎಂದು ರಿಕಾಂತ್ ಹೇಳಿದರು.
6) ಸ್ಥಳೀಯ ಆಯ್ಕೆ ಮಾಡಿಕೊಳ್ಳಿ
ಆಹಾರದ ವೆಚ್ಚವನ್ನು ಉಳಿಸಲು ಸ್ಥಳೀಯ ಊಟದ ಆಯ್ಕೆಗಳನ್ನು ಆರಿಸಿಕೊಳ್ಳಬೇಕು. "ಪ್ರವಾಸ ಹೋದಾಗ ಅಲ್ಲಿಯ ರುಚಿ ಸವಿಯದಿದ್ದರೆ ಹೇಗೆ?. ಇದರಿಂದ ಖರ್ಚು ಕೂಡಾ ಕಡಿಮೆಯಾಗುತ್ತದೆ. ನೆರೆಹೊರೆಯ ರೆಸ್ಟೋರೆಂಟ್‌ಗಳನ್ನು ಆರಿಸಿಕೊಳ್ಳಿ," ಮಿತ್ರ ಸಿಂಗ್ ಸಲಹೆ ನೀಡುತ್ತಾರೆ.
7) ಪೀಕ್ ಇಲ್ಲದ ಸಮಯದಲ್ಲಿ ಪ್ರಯಾಣ
ಎಲ್ಲರೂ ಪ್ರಯಾಣ ಮಾಡುವ ಸಂದರ್ಭದಲ್ಲೇ ನೀವು ಪ್ರಯಾಣ ಮಾಡಿದರೆ ಬೇಡಿಕೆಗೆ ಅನುಗುಣವಾಗಿ ಪ್ರಯಾಣ ವೆಚ್ಚವು ಅಧಿಕವಾಗುತ್ತದೆ. ಅದಕ್ಕಾಗಿ ಖರ್ಚು ಕಡಿಮೆ ಮಾಡಲು ಯಾವುದು ಪ್ರಯಾಣ ಸೀಸನ್ ಅಲ್ಲವೋ ಆ ಸಂದರ್ಭದಲ್ಲಿ ಪ್ರಯಾಣ ಮಾಡಿದರೆ ಉತ್ತಮ.
8) ಹೆಚ್ಚುವರಿ ಉಳಿತಾಯ
ಕೊನೆಯದಾಗಿ, ಹೆಚ್ಚುವರಿ ಉಳಿತಾಯಕ್ಕಾಗಿ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲು ಮರೆಯಬೇಡಿ ಎಂದು ರಿಕಾಂತ್ ಪಿಟ್ಟಿ ಹೇಳುತ್ತಾರೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ, ಹಬ್ಬದ ಸೀಸನ್‌ನಲ್ಲಿ ಕಡಿಮೆ ದರದಲ್ಲಿ ಪ್ರವಾಸ ಮಾಡಬಹುದಾಗಿದೆ.


Click it and Unblock the Notifications