ಹಬ್ಬ ಹರಿದಿನಗಳು ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಹಬ್ಬದ ಆಚರಣೆಗಳು ಕೇವಲ ಸಾಂಪ್ರದಾಯಿಕ ಪದ್ಧತಿಗಳು ಮತ್ತು ಆಚರಣೆಗಳಿಗೆ ಸೀಮಿತವಾಗಿಲ್ಲ. ವರ್ಷದ ಈ ಸಮಯದಲ್ಲಿ ಲಭ್ಯವಿರುವ ಬಹು ಆಫರ್‌ಗಳಿಂದಾಗಿ ಹೊಸ ಕಾರುಗಳನ್ನು ಖರೀದಿ ಮಾಡಲು ಅತೀ ಉತ್ತಮ ಸಮಯವಾಗಿದೆ. ಹಲವಾರು ಇತರ ವಸ್ತುಗಳನ್ನು ಕೂಡಾ ಆಫರ್ ಮೂಲಕ ಖರೀದಿಸಬಹುದಾಗಿದೆ.
ಹಬ್ಬದ ಸೀಸನ್‌ನಲ್ಲಿ, ದೀಪಾವಳಿ, ದಸರಾ ಮತ್ತು ನವರಾತ್ರಿಯಂತಹ ಹಬ್ಬಗಳ ಸಮಯದಲ್ಲಿ, ಹೊಸ ಕಾರನ್ನು ಖರೀದಿಸಲು ಪ್ಲ್ಯಾನ್ ಮಾಡುವಾಗ ಕುಟುಂಬದಲ್ಲಿಯೇ ಉತ್ಸಾಹ ಮನೆ ಮಾಡಿರುತ್ತದೆ. ಹಬ್ಬದ ಸೀಸನ್ ಹೊಸ ಕಾರನ್ನು ಖರೀದಿಸಲು ಯಾಕೆ ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ?, ಇದಕ್ಕೆ ಕಾರಣವೇನು? ಇಲ್ಲಿದೆ ವಿವರ ಮುಂದೆ ಓದಿ...

ಹಬ್ಬದ ಆಫರ್‌ಗಳು ಇರುತ್ತದೆ ನೋಡಿ
ಹಬ್ಬದ ಸೀಸನ್‌ನಲ್ಲಿ ಎಲ್ಲಾ ರೀತಿಯ ಕಾರಿನ ಮಾಡೆಲ್‌ಗಳ ಮೇಲೆ ಉತ್ತಮ ರಿಯಾಯಿತಿಗಳು ಮತ್ತು ಆಫರ್‌ಗಳು ಇರುತ್ತದೆ. ಖರೀದಿದಾರರನ್ನು ಆಕರ್ಷಿಸಲು ವಿಶೇಷ ಪ್ರಚಾರ, ಕ್ಯಾಶ್‌ಬ್ಯಾಕ್ ಯೋಜನೆ, ಕಡಿಮೆ ಅಥವಾ ಶೂನ್ಯ-ಬಡ್ಡಿ ಹಣಕಾಸು, ಇತರ ಆಕರ್ಷಕ ಡೀಲ್‌ಗಳನ್ನು ನೀಡಲಾಗುತ್ತದೆ. ಈ ಆಫರ್‌ಗಳು ಹೆಚ್ಚುವರಿ ಪ್ರಯೋಜನವನ್ನು ಪಡೆಯಲು ಅವಕಾಶವಾಗಿದೆ.
ಶುಭ ಸಂದರ್ಭವೆಂದು ಪರಿಗಣನೆ
ಭಾರತದಲ್ಲಿ ಹಬ್ಬದ ಸೀಸನ್ ಅನ್ನು ಯಾವುದೇ ಖರೀದಿಗಳಿಗೆ ಹೆಚ್ಚು ಮಂಗಳಕರ ಸಮಯ ಎಂದು ಪರಿಗಣಿಸಲಾಗುತ್ತದೆ. ಕಾರು ಕೂಡಾ ಈ ಸಂದರ್ಭದಲ್ಲೇ ಖರೀದಿ ಮಾಡಲಾಗುತ್ತದೆ. ಹಬ್ಬದ ಸಮಯದಲ್ಲಿ ಕಾರು ಖರೀದಿ, ಹೊಸ ಉದ್ಯಮವನ್ನು ಪ್ರಾರಂಭಿಸುವುದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುವುದು ಹಲವರ ನಂಬಿಕೆಯಾಗಿದೆ.
ಹೊಸ ಮಾಡೆಲ್‌ಗಳು, ಅಪ್‌ಗ್ರೇಡ್‌ಗಳು
ಸಾಮಾನ್ಯವಾಗಿ ಕಾರು ಕಂಪನಿಗಳು ವರ್ಷ ಕೊನೆಯಾಗುತ್ತಿರುವಂತೆ ಯಾರಿಸಿದ ಕಾರುಗಳ ಮೇಲೆ ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಮೂಲಕ ತಮ್ಮ ದಾಸ್ತಾನುಗಳನ್ನು ಖಾಲಿ ಮಾಡಲು ಹಳೆಯ ಮಾಡೆಲ್‌ಗಳನ್ನು ಮಾರಾಟ ಮಾಡುತ್ತವೆ. ಅದೇ ಸಮಯದಲ್ಲಿ, ಕಾರು ತಯಾರಕರು ಹೆಚ್ಚಾಗಿ ಹೊಸ ಮಾಡೆಲ್‌ಗಳ ಬಿಡುಗಡೆ ಮತ್ತು ಹಬ್ಬದ ಸೀಸನ್‌ಗೆ ಹೊಂದಿಕೆಯಾಗುವಂತೆ ಅಪ್‌ಡೇಟ್‌ಗಳನ್ನು ಮಾಡುತ್ತಾರೆ.
ಈ ಹಬ್ಬದ ಸಂದರ್ಭದಲ್ಲಿ ಖರೀದಿ ಮಾಡಿದರೆ, ಹೊಸ ಹೊಸ ಮಾಡೆಲ್ ಲಭ್ಯವಾಗುತ್ತದೆ. ಅತ್ಯಾಧುನಿಕ ವಾಹನಗಳನ್ನು ಪಡೆಯಲು ಈ ಸಂದರ್ಭ ಉತ್ತಮವಾಗಿದೆ. ಹೊಸ ಮಾಡೆಲ್‌ಗಳು ಸಾಮಾನ್ಯವಾಗಿ ಸುಧಾರಿತ ಫೀಚರ್‌ಗಳು, ಉತ್ತಮ ಇಂಧನ ದಕ್ಷತೆ, ಸುರಕ್ಷತಾ ಫೀಚರ್‌ಗಳನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮರುಮಾರಾಟ ಮೌಲ್ಯ
ನಿಮ್ಮ ಕಾರು ಖರೀದಿಯ ಸಮಯವು ಅದರ ಮರುಮಾರಾಟ ಮೌಲ್ಯದ ಮೇಲೆ ಪರಿಣಾಮ ಬೀರಬಹುದು. ಖರೀದಿಯ ಸಮಯದಲ್ಲಿ, ಕಾರು ವಿತರಕರು ನಿಮಗೆ ಎರಡು ಆಯ್ಕೆಗಳನ್ನು ನೀಡಬಹುದು. ಅಸ್ತಿತ್ವದಲ್ಲಿರುವ ವರ್ಷದ ಕಾರು ಮಾಡೆಲ್‌ಗಳನ್ನು ಖರೀದಿಸಲು ಅಥವಾ ಕಾರನ್ನು ಬುಕ್ ಮಾಡಲು ಮತ್ತು ಹೊಸ ವರ್ಷದಲ್ಲಿ ತಯಾರಿಸಲಾಗುವ ಮಾಡೆಲ್‌ಗಳನ್ನು ಖರೀದಿಸಲು ಆಯ್ಕೆಗಳನ್ನು ನೀಡಲಾಗುತ್ತದೆ.
ಹಳೆಯ ವರ್ಷದ ಮಾಡೆಲ್ ನಿಮಗೆ ಹೆಚ್ಚಿನ ರಿಯಾಯಿತಿಯನ್ನು ನೀಡಬಹುದು. ಆದರೆ ಹೊಸ ವರ್ಷದ ಮಾಡೆಲ್ ಹಬ್ಬದ ಸಮಯದ ಖರೀದಿಯ ಸಮಯದಲ್ಲಿ ಕಡಿಮೆ ರಿಯಾಯಿತಿಯನ್ನು ಹೊಂದಿರಬಹುದು. ನಿಮ್ಮ ಕಾರಿನ ವಯಸ್ಸನ್ನು ಲೆಕ್ಕಹಾಕಿ ಮರುಮಾರಾಟದ ಮೌಲ್ಯವನ್ನು ನಿರ್ಧರಿಸಲು ನೀವು ಕಾರನ್ನು ಖರೀದಿಸಿದ ವರ್ಷವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ವರ್ಷಗಳ ನಂತರ ಹೊಸ ವಾಹನ ಖರೀದಿಸಲು ಬಯಸುವವರಿಗೆ ಇದು ಉತ್ತಮವಾಗಿದೆ.
7 ವರ್ಷಗಳ ಅವಧಿ 10 ಲಕ್ಷ ಕಾರು ಸಾಲ ಇಎಂಐ, ಬಡ್ಡಿದರ
* ಯುಸಿಒ ಬ್ಯಾಂಕ್: ಶೇಕಡ 8.70 ಬಡ್ಡಿದರ, 15937 ರೂಪಾಯಿ ಇಎಂಐ
* ಬ್ಯಾಂಕ್ ಆಫ್ ಮಹಾರಾಷ್ಟ್ರ: ಶೇಕಡ 8.70 ಬಡ್ಡಿದರ, 15937 ರೂಪಾಯಿ ಇಎಂಐ
* ಎಸ್‌ಬಿಐ: ಶೇಕಡ 8.75 ಬಡ್ಡಿದರ, 15962 ರೂಪಾಯಿ ಇಎಂಐ
* ಐಡಿಬಿಐ ಬ್ಯಾಂಕ್: ಶೇಕಡ 8.75 ಬಡ್ಡಿದರ, 15962 ರೂಪಾಯಿ ಇಎಂಐ
* ಬ್ಯಾಂಕ್ ಆಫ್ ಬರೋಡಾ: ಶೇಕಡ 8.75 ಬಡ್ಡಿದರ, 15962 ರೂಪಾಯಿ ಇಎಂಐ
* ಸೌತ್ ಇಂಡಿಯಾ ಬ್ಯಾಂಕ್: ಶೇಕಡ 8.75 ಬಡ್ಡಿದರ, 15962 ರೂಪಾಯಿ ಇಎಂಐ
* ಪಿಎನ್‌ಬಿ: ಶೇಕಡ 8.80 ಬಡ್ಡಿದರ, 15988 ರೂಪಾಯಿ ಇಎಂಐ
* ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡ 8.85 ಬಡ್ಡಿದರ, 16013 ರೂಪಾಯಿ ಇಎಂಐ
* ಬಿಒಐ: ಶೇಕಡ 8.85 ಬಡ್ಡಿದರ, 16013 ರೂಪಾಯಿ ಇಎಂಐ
* ಯೂನಿಯನ್ ಬ್ಯಾಂಕ್: ಶೇಕಡ 8.85 ಬಡ್ಡಿದರ, 16013 ರೂಪಾಯಿ ಇಎಂಐ
* ಐಬಿಒ: ಶೇಕಡ 8.85 ಬಡ್ಡಿದರ, 16013 ರೂಪಾಯಿ ಇಎಂಐ
* ಫೆಡರಲ್ ಬ್ಯಾಂಕ್: ಶೇಕಡ 8.85 ಬಡ್ಡಿದರ, 16013 ರೂಪಾಯಿ ಇಎಂಐ
* ಪಂಜಾಬ್ & ಸಿಂಧ್ ಬ್ಯಾಂಕ್: ಶೇಕಡ 8.90 ಬಡ್ಡಿದರ, 16038 ರೂಪಾಯಿ ಇಎಂಐ
* ಐಸಿಐಸಿಐ ಬ್ಯಾಂಕ್: ಶೇಕಡ 8.95 ಬಡ್ಡಿದರ, 16064 ರೂಪಾಯಿ ಇಎಂಐ
* ಆಕ್ಸಿಸ್ ಬ್ಯಾಂಕ್: ಶೇಕಡ 9.15 ಬಡ್ಡಿದರ, 16165 ರೂಪಾಯಿ ಇಎಂಐ
* ಸೆಂಟ್ರಲ್ ಬ್ಯಾಂಕ್: ಶೇಕಡ 9.25 ಬಡ್ಡಿದರ, 16216 ರೂಪಾಯಿ ಇಎಂಐ
* ಕೆನರಾ ಬ್ಯಾಂಕ್: ಶೇಕಡ 9.25 ಬಡ್ಡಿದರ, 16216 ರೂಪಾಯಿ ಇಎಂಐ
* ಕರೂರ್ ವೈಶ್ಯ ಬ್ಯಾಂಕ್: ಶೇಕಡ 9.35 ಬಡ್ಡಿದರ, 16267 ರೂಪಾಯಿ ಇಎಂಐ
* ಕರ್ನಾಟಕ ಬ್ಯಾಂಕ್: ಶೇಕಡ 9.38 ಬಡ್ಡಿದರ, 16283 ರೂಪಾಯಿ ಇಎಂಐ
* ಧನಲಕ್ಷ್ಮೀ ಬ್ಯಾಂಕ್: ಶೇಕಡ 9.60 ಬಡ್ಡಿದರ, 16395 ರೂಪಾಯಿ ಇಎಂಐ
* ಜೆ&ಕೆ ಬ್ಯಾಂಕ್: ಶೇಕಡ 10.20 ಬಡ್ಡಿದರ, 16705 ರೂಪಾಯಿ ಇಎಂಐ


Click it and Unblock the Notifications