ದುರ್ಬಲ ಜಾಗತಿಕ ಸೂಚನೆಗಳ ಕಾರಣ ಗುರುವಾರ ಭಾರತೀಯ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಬಹುದು ಎಂದು ತಜ್ಞರ ಊಹೆಯಾಗಿದೆ. ಗುರುವಾರ, ಗಿಫ್ಟ್ ನಿಫ್ಟಿ ಬೆಂಚ್‌ಮಾರ್ಕ್ ಏರಿಕೆಯಾಗಿದೆ. ಆದರೆ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆಗಳು ಏರಿದ್ದರಿಂದ ಏಷ್ಯಾದ ಮಾರುಕಟ್ಟೆಗಳು ಕುಸಿದಿದೆ.
ಬುಧವಾರ ಸೆಪ್ಟೆಂಬರ್ 27 ರಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 173.22 ಪಾಯಿಂಟ್ ಅಥವಾ 0.26% ರಷ್ಟು ಏರಿಕೆಯಾಗಿ 66,118.69 ಕ್ಕೆ ಕೊನೆಗೊಂಡಿತು. ನಿಫ್ಟಿ 50 ಸುಮಾರು 51.75 ಪಾಯಿಂಟ್ ಅಥವಾ 0.26% ಏರಿಕೆಯಾಗಿ 19,716.45 ಕ್ಕೆ ವಹಿವಾಟು ಕೊನೆ ಮಾಡಿದೆ. ಬ್ಯಾಂಕ್ ನಿಫ್ಟಿ 35.90 ಅಂಕಗಳನ್ನು ಕಳೆದುಕೊಂಡು 44,588.30 ಕ್ಕೆ ಮುಕ್ತಾಯವಾಗಿದೆ.

ಗುರುವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 125.35 ಪಾಯಿಂಟ್ ಅಥವಾ ಶೇಕಡ 0.19 ರಷ್ಟು ಏರಿಕೆಯಾಗಿ 66,244.04 ಕ್ಕೆ ತಲುಪಿದೆ. ನಿಫ್ಟಿ 28.40 ಪಾಯಿಂಟ್ ಅಥವಾ ಶೇಕಡ 0.14 ರಷ್ಟು ಏರಿಕೆಯಾಗಿ 19,744.90 ಕ್ಕೆ ತಲುಪಿದೆ. ಸುಮಾರು 1,502 ಷೇರುಗಳು ಜಿಗಿದಿದ್ದರೆ, 489 ಷೇರುಗಳು ಇಳಿದಿದೆ. 75 ಷೇರುಗಳು ಸ್ಥಿರತೆ ಕಾಯ್ದುಕೊಂಡಿದೆ.
ಇಂದು ಮಾರುಕಟ್ಟೆ ಔಟ್‌ಲುಕ್
"ಜಾಗತಿಕ ಬಡ್ಡಿದರಗಳು ಮತ್ತು ಹೆಚ್ಚಿದ ತೈಲ ಬೆಲೆಗಳ ಬಗ್ಗೆ ಕಾಳಜಿಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತದೆ. ಎಫ್‌ಎಂಸಿಜಿ ಮತ್ತು ಫಾರ್ಮಾ ವಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸಿದವು. ಜಾಗತಿಕ ಸವಾಲುಗಳನ್ನು ತಿಳಿಯಲು ಹೂಡಿಕೆದಾರರು ರಕ್ಷಣಾತ್ಮಕ ವಿಧಾನವನ್ನು ಅಳವಡಿಸಿಕೊಂಡರು," ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.
ಇಂದು ಖರೀದಿಸಬಹುದಾದ ಸ್ಟಾಕ್‌ಗಳಿವು
ಬ್ರೋಕರೇಜ್ ಸಂಸ್ಥೆಗಳು ಪ್ರತಿ ದಿನವು ನಾವು ಯಾವ ಸ್ಟಾಕ್‌ಗಳನ್ನು ಖರೀದಿ ಮಾಡಬಹುದು ಎಂಬ ಬಗ್ಗೆ ಸಲಹೆಯನ್ನು ನೀಡುತ್ತದೆ. ಟಿಪ್ಸ್2ಟ್ರೇಡ್ಸ್‌ನ ಎಆರ್ ರಾಮಚಂದ್ರನ್ ಸೆಪ್ಟೆಂಬರ್ 28 ರಂದು ನೀವು ಖರೀದಿ ಮಾಡಬಹುದಾದ ಮೂರು ಸ್ಟಾಕ್‌ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಸುಜ್ಲಾನ್ ಎನರ್ಜಿ: ಸುಜ್ಲಾನ್ ಎನರ್ಜಿಯು ಡೈಲಿ ಚಾರ್ಟ್‌ಗಳಲ್ಲಿ ನಾವು ನೋಡಿದಾಗ ನಿರಂತರವಾಗಿ ಕುಸಿತುತ್ತಾ ಬಂದಿದೆ. ಹೂಡಿಕೆದಾರರು ಪ್ರಸ್ತುತ ಮಾರುಕಟ್ಟೆ ಸ್ಥಿತಿಯಿಂದ ಲಾಭವನ್ನು ಪಡೆದುಕೊಳ್ಳಬೇಕು, ಈ ಸ್ಟಾಕ್ ಖರೀದಿ ಮಾಡಬೇಕು. ಲಾಭ ಮುಂದಿನ ದಿನಗಳಲ್ಲಿ ಬರಬಹುದು. 24.5 ರ ಮಟ್ಟದವರೆಗೆ ನಾವು ಸ್ಟಾಕ್ ಅನ್ನು ಹೋಲ್ಡ್ ಮಾಡಿಟ್ಟುಕೊಳ್ಳಬಹುದು. ಅದಾದ ಬಳಿಕ ಮಾರಾಟ ಮಾಡಬೇಕು. ಈ ಸಮಯಕ್ಕೆ ಸ್ಟಾಕ್ ಶೇಕಡ 0.58ರಷ್ಟು ಏರಿಕೆಯಾಗಿ, 25.80 ರೂಪಾಯಿಗೆ ತಲುಪಿದೆ.
ಬ್ರೈಟ್‌ಕಾಮ್ ಗ್ರೂಪ್: ಬ್ರೈಟ್‌ಕಾಮ್ ಗ್ರೂಪ್ ಸ್ಟಾಕ್ ಬೆಲೆಯು ಡೈಲಿ ಚಾರ್ಟ್‌ಗಳಲ್ಲಿ ಈಗ 21.2 ರಲ್ಲಿದೆ. 16.7 ರ ದೈನಂದಿನ ಬೆಂಬಲದ ಆಧಾರದವರೆಗೆ ನಾವು ಈ ಸ್ಟಾಕ್ ಅನ್ನು ಹೋಲ್ಡ್ ಮಾಡಿಟ್ಟುಕೊಳ್ಳಬಹುದು. ಈ ಸಮಯಕ್ಕೆ ಸ್ಟಾಕ್ ಸುಮಾರು ಶೇಕಡ 0.79 ರಷ್ಟು ಇಳಿಕೆಯಾಗಿ, 18.75 ರೂಪಾಯಿಗೆ ತಲುಪಿದೆ.
ಜುಪಿಟರ್ ವ್ಯಾಗನ್ಸ್: ಡೈಲಿ ಚಾರ್ಟ್‌ಗಳಲ್ಲಿ ನಾವು ನೋಡಿದಾಗ ಜುಪಿಟರ್ ವ್ಯಾಗನ್ಸ್ 349.9 ರಲ್ಲಿದ್ದು, ಏರಿಕೆ ಕಾಣುತ್ತಾ ಬಂದಿದೆ. 274 ರ ದೈನಂದಿನ ಬೆಂಬಲದ ಆಧಾರದಲ್ಲಿ ನಾವು ಈ ಸ್ಟಾಕ್ ಅನ್ನು ಹೋಲ್ಡ್ ಮಾಡಿಕೊಳ್ಳಬಹುದು ಅಥವಾ ಖರೀದಿ ಮಾಡಬಹುದು. ಈ ಸಮಯಕ್ಕೆ ಷೇರು ಸುಮಾರು ಶೇಕಡ 4.99 ರಷ್ಟು ಏರಿಕೆಯಾಗಿ, 333.75 ರೂಪಾಯಿಗೆ ತಲುಪಿದೆ.
ಇಲ್ಲಿ ಗಮನಿಸಿ: ಈ ಮೇಲಿನ ಲೇಖನವು ತಜ್ಞರ ಆಧಾರದಲ್ಲಿ ಪ್ರಕಟಿಸಲಾಗಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಮತ್ತು ಸಂಬಂಧಿತ ಬ್ರೋಕರೇಜ್ ಹೌಸ್ ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications