ಅಂತಾರಾಷ್ಟೀಯ ಮಾರುಕಟ್ಟೆಯ ವಹಿವಾಟನ್ನು ನೋಡಿಕೊಂಡು ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆ ಹೆಚ್ಚು ಏರಿಳಿತ ಕಾಣದು ಎಂದು ಅಂದಾಜು ಮಾಡಲಾಗಿತ್ತು. ಆದರೆ ಶುಕ್ರವಾರ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಕೊಂಚ ಜಿಗಿತ ಕಂಡಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 78.22 ಪಾಯಿಂಟ್ ಅಥವಾ 0.12% ನಷ್ಟು ಇಳಿದು 65,945.47ಕ್ಕೆ ವಹಿವಾಟು ಕೊನೆ ಮಾಡಿದೆ.
ಇನ್ನು ನಿಫ್ಟಿ 50 ಸುಮಾರು 9.85 ಪಾಯಿಂಟ್‌ಗಳು ಅಥವಾ 0.05% ನಷ್ಟು ಕುಸಿದು 19,664.70 ಕ್ಕೆ ವಹಿವಾಟು ನಿಲ್ಲಿಸಿದೆ. ಬ್ಯಾಂಕ್ ನಿಫ್ಟಿ 141 ಅಂಕ ಕಳೆದುಕೊಂಡು 44,624.20ಕ್ಕೆ ತಲುಪಿದೆ. ನಿಫ್ಟಿ ಸ್ಮಾಲ್‌ಕ್ಯಾಪ್ 100 ಸುಮಾರು 0.41% ರಷ್ಟು ಕುಸಿದು 12,623.75 ಕ್ಕೆ ಸ್ಥಿರವಾಗಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಸುಮಾರು 1.32% ರಷ್ಟು ಕುಸಿದು 40,104.05 ಕ್ಕೆ ತಲುಪಿದೆ.

ಶುಕ್ರವಾರ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 175.37 ಪಾಯಿಂಟ್ ಅಥವಾ ಶೇಕಡ 0.27 ರಷ್ಟು ಏರಿಕೆಯಾಗಿ 65,683.69 ಕ್ಕೆ ತಲುಪಿದೆ. ನಿಫ್ಟಿ 60.90 ಪಾಯಿಂಟ್ ಅಥವಾ ಶೇಕಡ 0.31 ರಷ್ಟು ಏರಿಕೆಯಾಗಿ 19,584.40 ಕ್ಕೆ ತಲುಪಿದೆ. ಸುಮಾರು 1470 ಷೇರುಗಳು ಜಿಗಿದಿದ್ದರೆ, 462 ಷೇರುಗಳು ಕುಗ್ಗಿದೆ. 88 ಷೇರುಗಳು ಸ್ಥಿರವಾಗಿದೆ.
ಇಂದು ನೀವು ಖರೀದಿಸಬಹುದಾದ ಸ್ಟಾಕ್‌ಗಳಿವು
ಬ್ರೋಕರೇಜ್ ಸಂಸ್ಥೆಗಳು ಪ್ರತಿ ದಿನವು ನಾವು ಯಾವ ಸ್ಟಾಕ್‌ಗಳನ್ನು ಖರೀದಿ ಮಾಡಬಹುದು ಎಂಬ ಬಗ್ಗೆ ಸಲಹೆಯನ್ನು ನೀಡುತ್ತದೆ. ಟಿಪ್ಸ್2ಟ್ರೇಡ್ಸ್‌ನ ಎಆರ್ ರಾಮಚಂದ್ರನ್ ಸೆಪ್ಟೆಂಬರ್ 29 ರಂದು ನೀವು ಖರೀದಿ ಮಾಡಬಹುದಾದ ಮೂರು ಸ್ಟಾಕ್‌ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಟಾಟಾ ಇನ್‌ವೆಸ್ಟ್‌ಮೆಂಟ್ ಕಾರ್ಪೊರೇಷನ್: ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್ ಸ್ಟಾಕ್ ಅನ್ನು ಇಂದು ಖರೀದಿಸಲು ಟಿಪ್ಸ್2ಟ್ರೇಡ್ಸ್‌ನ ಎಆರ್ ರಾಮಚಂದ್ರನ್ ಸಲಹೆ ನೀಡಿದ್ದಾರೆ. 3279 ಕ್ಕಿಂತ ಕೆಳಕ್ಕೆ ಇಳಿಯುವ ಮುನ್ನ ಈ ಸ್ಟಾಕ್‌ನ ಲಾಭವನ್ನು ಹೂಡಿಕೆದಾರರು ಪಡೆಯಬೇಕು. ಸ್ಟಾಕ್ 3666ಕ್ಕೆ ತಲುಪುವ ನಿರೀಕ್ಷೆಯಿದೆ. ಈ ಸಮಯಕ್ಕೆ ಸ್ಟಾಕ್ ಶೇಕಡ 3.08 ರಷ್ಟು ಇಳಿದು, 3,334.80ಕ್ಕೆ ತಲುಪಿದೆ.
ಅದಾನಿ ಪವರ್: ಕಾರ್ಪೊರೇಟ್ ಆಡಳಿತದ ಸಮಸ್ಯೆಗಳ ಹೊರತಾಗಿ, ಅದಾನಿ ಪವರ್ ಲಾಭದ ಬೆಳವಣಿಗೆ ಮತ್ತು ಆದಾಯದ ಲೆಕ್ಕಾಚಾರದಲ್ಲಿ ಟಾಟಾ ಪವರ್‌ಗಿಂತ ಉತ್ತಮವಾಗಿ ಕಾಣುತ್ತದೆ. ದಿನದ ವಹಿವಾಟಿನಲ್ಲಿ 390ಕ್ಕೆ ಏರುವ ನಿರೀಕ್ಷೆಯಿದೆ. 309 ರ ಸಮೀಪದಲ್ಲಿ ಇಳಿಕೆಯಾದವರೆ ಮಾತ್ರ ಈ ಸ್ಟಾಕ್ ಅನ್ನು ಖರೀದಿಸಬೇಕು. ಈ ಸಮಯಕ್ಕೆ ಅದಾನಿ ಪವರ್ ಶೇಕಡ 0.60 ರಷ್ಟು ಏರಿಕೆಯಾಗಿ, 377.65 ರೂಪಾಯಿಗೆ ತಲುಪಿದೆ.
ಜೆಎಸ್‌ಡಬ್ಲ್ಯೂ ಸ್ಟೀಲ್: ಜೆಎಸ್‌ಡಬ್ಲ್ಯೂ ಸ್ಟೀಲ್ ಡೈಲಿ ಚಾರ್ಟ್‌ನಲ್ಲಿ ಕುಸಿದು 793ಕ್ಕೆ ತಲುಪುವಂತೆ ಸೂಚಿಸಲಾಗಿದೆ. ದಿನದ ವಹಿವಾಟಿನಲ್ಲಿ 766ರಿಂದ ಕೆಳಕ್ಕೆ ಇಳಿಯಬಹುದು, 750ರವರೆಗೆ ತಲುಪಬಹುದು. ಟಾಟಾ ಸ್ಟೀಲ್ಸ್‌ಗೆ ತುಲನೆ ಮಾಡಿದಾಗ ಜೆಎಸ್‌ಡಬ್ಲ್ಯೂ ಸ್ಟೀಲ್ ದೀರ್ಘಾವಧಿ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಈ ಸಮಯಕ್ಕೆ ಜೆಎಸ್‌ಡಬ್ಲ್ಯೂ ಸ್ಟೀಲ್ ಶೇಕಡ 1.03 ರಷ್ಟು ಏರಿಕೆಯಾಗಿ, 776 ರೂಪಾಯಿಗೆ ತಲುಪಿದೆ.
ಇಲ್ಲಿ ಗಮನಿಸಿ: ಈ ಮೇಲಿನ ಲೇಖನವು ತಜ್ಞರ ಆಧಾರದಲ್ಲಿ ಪ್ರಕಟಿಸಲಾಗಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಮತ್ತು ಸಂಬಂಧಿತ ಬ್ರೋಕರೇಜ್ ಹೌಸ್ ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications