ನಿನ್ನೆ ಅಂದರೆ ಅಕ್ಟೋಬರ್ 10 ರಂದು, ಬೆಂಚ್‌ಮಾರ್ಕ್ ಸೂಚ್ಯಂಕಗಳು ಲಾಭದೊಂದಿಗೆ ವಹಿವಾಟು ಮಾಡಿದೆ. ನಿಫ್ಟಿ ಸುಮಾರು 19,690 ಕ್ಕೆ ತಲುಪಿ ವಹಿವಾಟು ಕೊನೆ ಮಾಡಿದರೆ, ನಿಫ್ಟಿ ಬ್ಯಾಂಕ್ ಕೂಡ 44,360 ತಲುಪಿ ವಹಿವಾಟು ನಿಲ್ಲಿಸಿದೆ. ನಿಫ್ಟಿಯಲ್ಲಿ ಕೋಲ್ ಇಂಡಿಯಾ, ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್ಸ್, ಟಾಟಾ ಮೋಟಾರ್ಸ್ ಮತ್ತು ಅದಾನಿ ಎಂಟರ್‌ಪ್ರೈಸಸ್ ಸೇರಿದಂತೆ ಹಲವಾರು ಸ್ಟಾಕ್‌ಗಳು ಲಾಭವನ್ನು ಗಳಿಸಿದೆ.
ಇನ್ನು ಇಂಡಸ್‌ಇಂಡ್ ಬ್ಯಾಂಕ್, ಸಿಪ್ಲಾ, ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಟಿಸಿಎಸ್, ಮತ್ತು ಏಷ್ಯನ್ ಪೇಂಟ್ ಸ್ಟಾಕ್‌ಗಳು ನಿನ್ನೆ ನಷ್ಟವನ್ನು ಕಂಡ ಸ್ಟಾಕ್‌ಗಳು ಆಗಿದೆ. ಇಂದಿನ ವಹಿವಾಟನ್ನು ನಾವು ನೋಡಿದಾಗ ಭಾರತೀಯ ರೂಪಾಯಿ ಮಂಗಳವಾರದ ಮುಕ್ತಾಯದ ಅವಧಿಯಲ್ಲಿದ್ದ 83.25 ರಿಂದ ಪ್ರತಿ ಡಾಲರ್‌ಗೆ 5 ಪೈಸೆ ಬಲಗೊಂಡು 83.20 ಕ್ಕೆ ವಹಿವಾಟು ಪ್ರಾರಂಭಿಸಿದೆ.

ಇಂದು ಮಾರುಕಟ್ಟೆ ಆರಂಭದಲ್ಲಿ ಸೆನ್ಸೆಕ್ಸ್ 352.29 ಪಾಯಿಂಟ್ ಅಥವಾ ಶೇಕಡ 0.53 ರಷ್ಟು ಏರಿಕೆಯಾಗಿ 66,431.65 ಕ್ಕೆ ತಲುಪಿದೆ. ನಿಫ್ಟಿ 107.00 ಪಾಯಿಂಟ್ ಅಥವಾ ಶೇಕಡ 0.54 ರಷ್ಟು ಏರಿಕೆಯಾಗಿ 19,796.80 ಕ್ಕೆ ತಲುಪಿದೆ. ಸುಮಾರು 1705 ಷೇರುಗಳು ಏರಿಕೆಯಾಗಿದ್ದರೆ, 304 ಷೇರುಗಳು ಕುಸಿದಿದೆ, 85 ಷೇರುಗಳು ಸ್ಥಿರವಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಇಂದಿನ ಸ್ವಿಂಗ್ ಮತ್ತು ದಿನದ ಟ್ರೇಡಿಂಗ್ ಸ್ಟಾಕ್‌ಗಳು
ಇಂದಿನ ಇಂಟ್ರಾಡೇ ಮತ್ತು ಸ್ವಿಂಗ್ ಸ್ಟಾಕ್‌ಗಳಲ್ಲಿ, ಸ್ಟಾಕ್ ಮಾರುಕಟ್ಟೆ ತಜ್ಞರು ವಿಎಲ್‌ಎ ಅಂಬಾಲಾ (ಸೆಬಿ ನೋಂದಾಯಿತ ಸಂಶೋಧನಾ ವಿಶ್ಲೇಷಕ) ಇಂಟ್ರಾಡೇ ಮತ್ತು ಸ್ವಿಂಗ್ ಟ್ರೇಡಿಂಗ್‌ಗಾಗಿ ಇಂದು ಖರೀದಿಸಲು ಮೂರು ಷೇರುಗಳನ್ನು ಶಿಫಾರಸು ಮಾಡಿದ್ದಾರೆ. ಇಂದಿನ 3 ಟ್ರೆಂಡಿಂಗ್ ಸ್ಟಾಕ್‌ಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ.
ಸ್ವಿಂಗ್ ಟ್ರೇಡಿಂಗ್ ಎಂದರೇನು?
ಸ್ವಿಂಗ್ ಟ್ರೇಡಿಂಗ್ ಎನ್ನುವುದು ಟ್ರೇಡಿಂಗ್‌ನ ಒಂದು ರೂಪವಾಗಿದೆ. ಇಲ್ಲಿ ಒಂದು ನಿರ್ದಿಷ್ಟ ಸ್ಟಾಕ್ ಅನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ಹೋಲ್ಡ್ ಮಾಡಿರುವುದು ಆಗಿದೆ. ಸ್ಟಾಕ್‌ಗಳನ್ನು ಕೆಲವು ದಿನಗಳವರೆಗೆ ಅಥವಾ ಕೆಲವು ವಾರಗಳವರೆಗೆ ಹೋಲ್ಡ್ ಮಾಡಲಾಗುತ್ತದೆ. ಈ ರೀತಿಯ ವ್ಯಾಪಾರವು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ. ಇದು ಕೆಲವು ದಿನಗಳಿಂದ ಹಲವಾರು ವಾರಗಳವರೆಗೆ ಈ ಸ್ಟಾಕ್‌ನ ಲಾಭವನ್ನು ಪಡೆಯುವ ಪ್ರಯತ್ನವಾಗಿದೆ.
ಸಿಟಿ ಯೂನಿಯನ್ ಬ್ಯಾಂಕ್: ಸಿಯುಬಿ 135 ಕ್ಕಿಂತ ಅಧಿಕ ಬೆಲೆಯಲ್ಲಿ ಖರೀದಿಸುವುದು ಉತ್ತಮ. 125 ಸ್ಟಾಕ್ ಲಾಸ್‌ನೊಂದಿಗೆ ಖರೀದಿಸಿ. 145/160 ಗುರಿಯ ನಿರೀಕ್ಷೆಯನ್ನು ಈ ಸ್ಟಾಕ್ ಹೊಂದಿದೆ.
ಹೆಮಿಸ್ಪಿಯರ್ ಪ್ರಾಟರ್ಟೀಸ್ ಇಂಡಿಯಾ: ಎಚ್‌ಇಎಂಪಿಆರ್‌ಒಪಿ ಸ್ಟಾಕ್ ಅನ್ನು 119 ರ ಶ್ರೇಣಿಯಲ್ಲಿ ಖರೀದಿಸುವುದು ಉತ್ತಮ. 109 ಸ್ಟಾಪ್ ಲಾಸ್‌ನೊಂದಿಗೆ ಈ ಸ್ಟಾಕ್ ಖರೀದಿಸಿಬಹುದು. 125/130 ಗುರಿಯ ನಿರೀಕ್ಷೆಯನ್ನು ಈ ಸ್ಟಾಕ್ ಹೊಂದಿದೆ. ಅದರ ಪ್ರಮುಖ ಮಟ್ಟಕ್ಕಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ.
ಕ್ರಿಸಿಲ್(CRISIL): ಕ್ರಿಸಿಲ್ ಸ್ಟಾಕ್ ಅನ್ನು 4100 ಬೆಲೆಯಲ್ಲಿ ಖರೀದಿಸುವುದು ಉತ್ತಮ. 3800 ರ ಸ್ಟಾಪ್ ಲಾಸ್‌ನೊಂದಿಗೆ ಈ ಸ್ಟಾಕ್ ಖರೀದಿಸಿಬಹುದು. ಈ ಸ್ಟಾಕ್ 4300 ಕ್ಕೆ ತಲುಪುವ ನಿರೀಕ್ಷೆಯಿದೆ.
ಈ ಎಲ್ಲ ಸ್ಟಾಕ್‌ಗಳನ್ನು ಬೆಲೆಯ ಒಟ್ಟಾರೆ ಚಲನೆ, ಈ ಹಿಂದೆ ಸ್ಟಾಕ್ ಹೇಗಿತ್ತು, ಮತ್ತು ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ ಶಿಫಾರಸುಗಳನ್ನು ಒದಗಿಸಲಾಗಿದೆ ಎಂದು ಸೆಬಿ ನೋಂದಾಯಿತ ವಿಎಲ್‌ಎ ಅಂಬಾಲಾ ತಿಳಿಸಿದೆ.
ಇಲ್ಲಿ ಗಮನಿಸಿ: ಈ ಮೇಲಿನ ಲೇಖನವು ಮಾರುಕಟ್ಟೆ ತಜ್ಞರ ಸಲಹೆ, ಶಿಫಾರಸಿನ ಆಧಾರದಲ್ಲಿ ಪ್ರಕಟಿಸಲಾಗಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications