ದೀಪಾವಳಿಯು ಆರಂಭವಾಗಲು ಇನ್ನು ಕೆಲವೇ ದಿನಗಳು ಇದೆ. ಇದಕ್ಕೂ ಮುನ್ನವೇ ಕೆಲವು ಜನಪ್ರಿಯ ಮಾರ್ಗಗಳ ವಿಮಾನ ದರಗಳು ಗಗನಕ್ಕೇರುತ್ತಿವೆ. ಏರ್‌ಲೈನ್‌ಗಳ ಹೆಚ್ಚಿನ ಬೇಡಿಕೆ ಮತ್ತು ಕಡಿಮೆ ಲಭ್ಯತೆಯಿಂದಾಗಿ ವಿಮಾನ ದರಗಳಲ್ಲಿ ಹಠಾತ್ ಏರಿಕೆ ಉಂಟಾಗುತ್ತಿದೆ ಎಂದು ವರದಿಯಾಗಿದೆ.
ಈ ವರ್ಷದ ದಾಖಲೆಯ ಅಂಕಿಅಂಶಗಳ ಪ್ರಕಾರ, ಈ ಹಬ್ಬದ ಸೀಸನ್‌ನಲ್ಲಿ ಸಾಮಾನ್ಯ ವಿಮಾನಗಳ ದರವು ಶೇಕಡ 282 ವರೆಗೆ ಹೆಚ್ಚಳವಾಗಿದೆ. ಅಹಮದಾಬಾದ್‌ನಿಂದ ಕೊಚ್ಚಿಗೆ ನೇರ ವಿಮಾನದ ರಿಟರ್ನ್ ಟಿಕೆಟ್‌ಗೆ ಪ್ರತಿ ವ್ಯಕ್ತಿಗೆ ನಂಬಲಾಗದಷ್ಟು ವೆಚ್ಚವಾಗುತ್ತದೆ.

ಅಂದರೆ 57,000 ರೂಪಾಯಿ ವೆಚ್ಚವಾಗುತ್ತದೆ. ಇನ್ನು ಬಾಗ್ಡೋಗ್ರಾಕ್ಕೆ ಟಿಕೆಟ್‌ಗೆ ಪ್ರತಿ ವ್ಯಕ್ತಿಗೆ 45,000 ರೂಪಾಯಿ ವೆಚ್ಚವಾಗುತ್ತದೆ. ಒಂದು ವಾರ ಮುಂಚಿತವಾಗಿ ಕಾಯ್ದಿರಿಸುವಾಗ, ಚಂಡೀಗಢದ ಟಿಕೆಟ್‌ನ ವೆಚ್ಚವು 10,000 ರೂಪಾಯಿ ಬದಲಾಗಿ 35,000 ರೂಪಾಯಿ ಆಗುವ ಸಾಧ್ಯತೆಯಿದೆ.
ದೀಪಾವಳಿ ವಾರದಲ್ಲಿ ಮುಂಬೈನಿಂದ ಶ್ರೀನಗರ, ಬಾಗ್ಡೋಗ್ರಾ ಮತ್ತು ಪಾಟ್ನಾದಂತಹ ಸ್ಥಳಗಳಿಗೆ ತಡೆರಹಿತ ವಿಮಾನಗಳಲ್ಲಿ ಪ್ರಯಾಣಿಸಲು ಲಭ್ಯವಿರುವ ಅಗ್ಗದ ವಾಪಸಾತಿ ದರವು 35 ಸಾವಿ ರೂಪಾಯಿ ಮತ್ತು ಅದಕ್ಕಿಂತ ಅಧಿಕವಾಗಿದೆ.
ರಾಂಚಿ, ಪ್ರಯಾಗ್‌ರಾಜ್, ಜೋಧ್‌ಪುರ, ರಾಯ್‌ಪುರ್ ಮತ್ತು ಕೊಚ್ಚಿಯಂತಹ ಇತರ ಸ್ಥಳಗಳಿಗೆ ವಿಮಾನಗಳಲ್ಲಿ ಹಿಂದಿರುಗುವ ದರವು 20,000 ರೂಪಾಯಿ ಅಥವಾ ಅದಕ್ಕಿಂತ ಅಧಿಕವಾಗಿರುತ್ತದೆ. ದೆಹಲಿಯಿಂದಾದರೆ, 20,000 ರೂಪಾಯಿ ಮತ್ತು ಬಾಗ್ಡೋಗ್ರಾ, ಮಂಗಳೂರು, ಕೊಚ್ಚಿ ಮತ್ತು ಪಾಟ್ನಾಗೆ ಟಿಕೆಟ್ ದರವು ಅದಕ್ಕಿಂತ ಅಧಿಕವಾಗಿದೆ.
ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಟಿಎಎಐ) ಅಧ್ಯಕ್ಷ ವೀರೇಂದ್ರ ಶಾ ಪ್ರಕಟಣೆಯಲ್ಲಿ ಈ ಬಗ್ಗೆ ವಿವರಿಸಿದ್ದಾರೆ. "ಈ ಬಾರಿ, ದೀಪಾವಳಿ ಪ್ರಯಾಣದ ಒಟ್ಟಾರೆ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ. ಯುರೋಪ್‌ಗೆ ವೀಸಾ ಸಮಸ್ಯೆಗಳು ಇನ್ನೂ ಮುಂದುವರಿದಂತೆ, ಅನೇಕ ಜನರು ಬೇರೆ ಪ್ರದೇಶಕ್ಕೆ ಪ್ರಯಾಣದ ಪ್ಲ್ಯಾನ್ ಮಾಡುತ್ತಿದ್ದಾರೆ. ಹೆಚ್ಚಾಗಿ ದೇಶೀಯ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಟಿಕೆಟ್ ಬೇಡಿಕೆ ಅಧಿಕವಾಗಿ, ಬೆಲೆ ಏರಿಕೆಯಾಗಿದೆ," ಎಂದು ತಿಳಿಸಿದರು.
ಶ್ರೇಣಿ 1, 2, 3 ನಗರಗಳಲ್ಲಿನ ವಿಮಾನ ದರಗಳು
ಅಕ್ಟೋಬರ್ 21-27, 2022 ರ ಅವಧಿಯಲ್ಲಿ ದೆಹಲಿ-ಶ್ರೀನಗರ ಮಾರ್ಗದ ವಿಮಾನಯಾನ ಬೆಲೆ 3,794 ರೂಪಾಯಿ ಆಗಿತ್ತು. ಆದರೆ ನವೆಂಬರ್ 10 ರಿಂದ 16, 2023ರವೆಗೆ ಬೆಲೆ 7,175 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ, ದೆಹಲಿ-ಅಹಮದಾಬಾದ್ ಮಾರ್ಗದ ವಿಮಾನ ದರಗಳು 3,311 ರೂಪಾಯಿಯಿಂದ 5,688 ರೂಪಾಯುಗೆ ಏರಿಕೆಯಾಗಿದೆ.
ಈ ಅಂಕಿಅಂಶಗಳು ಮುಂಗಡ ಖರೀದಿ ದರಗಳನ್ನು ಅಂದರೆ 80 ದಿನಗಳಿಗಿಂತ ಮುನ್ನ ಖರೀದಿ ಮಾಡುವ ದರಗಳನ್ನು ಕೂಡಾ ಹೊಂದಿದೆ. ನವೆಂಬರ್ 19 ರಂದು ವಿಶ್ವಕಪ್ ಫೈನಲ್‌ನ ಕಾರಣ, ಪ್ರಮುಖ ನಗರಗಳು ಮತ್ತು ಜನಪ್ರಿಯ ಸ್ಥಳಗಳಿಂದ ಅಹಮದಾಬಾದ್‌ಗೆ ಒಳಬರುವ ವಿಮಾನಗಳ ದರವು ಗಮನಾರ್ಹವಾಗಿ ಹೆಚ್ಚಿವೆ.
ಬೆಲೆ ಏರಿಕೆಯು ಕೇವಲ ಮೆಟ್ರೋ ಮಾರ್ಗಗಳಿಗೆ ಸೀಮಿತವಾಗಿಲ್ಲ. ಭುವನೇಶ್ವರ, ಇಂದೋರ್, ಲಕ್ನೋ ಮತ್ತು ಜೈಪುರದಂತಹ ಶ್ರೇಣಿ 2-3 ನಗರಗಳಲ್ಲಿಯೂ ನಾವು ಕಾಣಬಹುದಾಗಿದೆ. ಈ ನಗರಗಳಲ್ಲಿ ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ಪ್ರಮುಖ ಕೇಂದ್ರಗಳಿಂದ ವಿಮಾನಯಾನ ದರವು ಶೇಕಡ 5-15 ರಷ್ಟು ಜಿಗಿತವನ್ನು ಕಂಡಿದೆ. ಈ ಕೇಂದ್ರಗಳಲ್ಲಿ ಜನರು ದೀಪಾವಳಿಗಾಗಿ ತಮ್ಮ ಊರಿಗೆ ಪ್ರಯಾಣ ಮಾಡುತ್ತಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications