ಗ್ರಾಹಕರಿಗಾಗಿ ಎಲ್‌ಐಸಿ ಇತ್ತೀಚೆಗೆ ಹೊಸದಾದ ಅದ್ಭುತವಾದ ಕೊಡುಗೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಭವಿಷ್ಯವನ್ನು ನೀವು ಸುರಕ್ಷಿತಗೊಳಿಸಬಹುದು. ನಾವು ಹೂಡಿಕೆ ಮಾಡುವ ಸಂದರ್ಭದಲ್ಲಿ ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡಬೇಕು ಎಂದು ಬಯಸಿದರೆ ಅದಕ್ಕೆ ಎಲ್‌ಐಸಿ ಸುರಕ್ಷಿತವಾಗಿದೆ.
ಷೇರು ಮಾರುಕಟ್ಟೆ ನಿಮಗೆ ಉತ್ತಮವಾದ ರಿಟರ್ನ್ ಅನ್ನು ನೀಡುತ್ತದೆ. ಆದರೆ ಅಲ್ಲಿ ಅಪಾಯ ನಿಮ್ಮ ಬೆನ್ನ ಹಿಂದೆಯೇ ನಿಂತಿರುತ್ತದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಎಷ್ಟು ಅಧಿಕ ರಿಟರ್ನ್ ಸಿಗುತ್ತದೋ ಅಷ್ಟೇ ಅಧಿಕ ರಿಸ್ಕ್ ಇದೆ. ಈ ನಡುವೆ ನೀವು ನಿಮ್ಮ ಹಣ ಸುರಕ್ಷಿತವಾಗಿರಬೇಕು ಹಾಗೂ ಅಧಿಕ ರಿಟರ್ನ್ ಪಡೆಯಬೇಕು ಎಂದು ಬಯಸಿದರೆ, ನಿಮಗೆ ಉತ್ತಮ ಆಯ್ಕೆ ಇದೆ. ಎಲ್‌ಐಸಿಯ ಯೋಜನೆಗಳು ಆಗಿದೆ.
ಎಲ್‌ಐಸಿಯ ಜೀವನ್ ಉಮಂಗ್ ಪಾಲಿಸಿ ಎಂಬ ವಿಶೇಷ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿ ಉತ್ತಮ ರಿಟರ್ನ್ ಅನ್ನು ಪಡೆಯಬಹುದು. ಎಲ್‌ಐಸಿಯು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಜೀವನ್ ಉಮಾಂಗ್ ಪಾಲಿಸಿಯು ಹಲವು ವಿಧಗಳಲ್ಲಿ, ಈ ಹಿಂದಿನ ಎಲ್ಲಾ ಯೋಜನೆಗಳಿಗಿಂತ ಭಿನ್ನವಾಗಿದೆ.
ಏನಿದು ಎಲ್‌ಐಸಿ ಜೀವನ್ ಉಮಂಗ್ ಪಾಲಿಸಿ
ಎಲ್‌ಐಸಿ ಜೀವನ್ ಉಮಂಗ್ ಪಾಲಿಸಿಯು 90 ದಿನಗಳ ಮಗುವಿನಿಂದ 55 ವರ್ಷ ವಯಸ್ಸಿನವರಿಗೆ ಲಭ್ಯವಿದೆ. ಇದು ದೀರ್ಘಾವಧಿಯ ಹೂಡಿಕೆಯ ಯೋಜನೆ ಆಗಿದೆ. ನಿಮ್ಮ ಜೀವ ವಿಮೆಯ ಜೊತೆಗೆ ಈ ಯೋಜನೆ ಕೊನೆಯಾಗುವ ವೇಳೆ ಅಂದರೆ ಮೆಚ್ಯೂರಿಟಿ ವೇಳೆ ದೊಡ್ಡ ಮೊತ್ತವನ್ನು ನೀವು ಪಡೆಯಬಹುದು. ಮೆಚ್ಯೂರಿಟಿ ಬಳಿಕ ವಾರ್ಷಿಕ ಸ್ಥಿರ ಆದಾಯವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
100 ವರ್ಷಗಳ ಸುರಕ್ಷತೆ ನೀಡುವ ಯೋಜನೆ
ಈ ಎಲ್‌ಐಸಿ ಜೀವನ್ ಉಮಂಗ್ ಪಾಲಿಸಿಯ ಮತ್ತೊಂದು ಪ್ರಯೋಜನವೆಂದರೆ ಈ ಯೋಜನೆತು ನಿಮಗೆ 100 ವರ್ಷಗಳವರೆಗೆ ರಕ್ಷಣೆ ನೀಡುತ್ತದೆ. ಅಂದರೆ ಪಾಲಿಸಿಯ ಮುಕ್ತಾಯದ ಅವಧಿಯು 100 ವರ್ಷಗಳು ಆಗಿದೆ. ಮೂರು ವರ್ಷಗಳವರೆಗೆ ಪಾಲಿಸಿಯ ಪ್ರಿಮಿಯಂ ಅನ್ನು ಪಾವತಿ ಮಾಡಿದರೆ ಯಾವುದೇ ಸಂದರ್ಭದಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಬಹುದು. ಹಾಗೆಯೇ ಈ ಪಾಲಿಸಿಯ ಅಡಿಯಲ್ಲಿ ಸಾಲವನ್ನು ಕೂಡಾ ಪಡೆಯಬಹುದು. ಪಾಲಿಸಿದಾರನ ಮರಣದ ನಂತರ ಪಾಲಿಸಿದಾರನ ಕುಟುಂಬದ ಸದಸ್ಯರಿಗೆ ಮತ್ತು ನಾಮಿನಿಗೆ ಏಕರೂಪದ ಪಾವತಿಯನ್ನು ಪಾವತಿಸಲಾಗುತ್ತದೆ.
ಎಲ್‌ಐಸಿ 27.60 ಲಕ್ಷ ನಿಮಗೆ ಸಿಗಲಿದೆ!
ಈ ಎಲ್‌ಐಸಿ ಜೀವನ್ ಉಮಂಗ್ ಪಾಲಿಸಿಯಲ್ಲಿ ನೀವು ಪ್ರತಿ ದಿನ 44 ರೂ. ಗಿಂತ ಕಡಿಮೆ ಠೇವಣಿ ಮಾಡಿದರೆ ಅಂದರೆ ತಿಂಗಳಿಗೆ 1302 ರೂ ಪ್ರೀಮಿಯಂ ಪಾವತಿಸಿಬೇಕು. ಇದು ವರ್ಷಕ್ಕೆ 15,298 ರೂಪಾಯಿ ಪಾವತಿ ಆಗಲಿದೆ. 30 ವರ್ಷಗಳ ಕಾಲ ಈ ಪಾಲಿಸಿ ಇಟ್ಟುಕೊಂಡರೆ ಹಣ ಸುಮಾರು 4.58 ಲಕ್ಷ ರೂಪಾಯಿ ಆಗಲಿದೆ. 31 ನೇ ವರ್ಷದಿಂದ, ಕಂಪನಿಯು ನಿಮ್ಮ ಹೂಡಿಕೆಯ ಮೇಲೆ ಪ್ರತಿ ವರ್ಷ 40,000 ರೂಪಾಯಿ ರಿಟರ್ನ್ ಆಗಿ ನೀಡಲಿದೆ. ನೀವು 31 ನೇ ವರ್ಷದಿಂದ 100 ವರ್ಷಗಳವರೆಗೆ ರೂ 40,000 ವಾರ್ಷಿಕ ಆದಾಯವನ್ನು ತೆಗೆದುಕೊಂಡರೆ, ನೀವು ಸುಮಾರು ರೂ 27.60 ಲಕ್ಷವನ್ನು ಸಂಗ್ರಹ ಆಗಲಿದೆ.
ಟರ್ಮ್‌ನ ನಾಮಿನಿಗೂ ಸಿಗಲಿದೆ ಯೋಜನೆಯ ಪ್ರಯೋಜನ
ಹೂಡಿಕೆದಾರರ ಆಕಸ್ಮಿಕ ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಈ ಪಾಲಿಸಿಯ ಅಡಿಯಲ್ಲಿ ನಾಮಿನಿದಾರರಿಗೆ ಈ ಪ್ರಯೋಜನವು ಲಭಿಸಲಿದೆ. ಹಣವು ನಾಮಿನಿದಾರರಿಗೆ ಲಭ್ಯವಾಗಲಿದೆ. ಮಾರುಕಟ್ಟೆಯ ಅಪಾಯವು ಈ ಪಾಲಿಸಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಲ್‌ಐಸಿಯ ಆದಾಯ ಮತ್ತು ನಷ್ಟಗಳು ಈ ಪಾಲಿಸಿಯ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತವೆ. ಯಾರಾದರೂ ಎಲ್‌ಐಸಿ ಜೀವನ್ ಉಮಂಗ್ ಪಾಲಿಸಿಯನ್ನು ಪಡೆಯಲು ಬಯಸಿದರೆ, ಅವರು ಕನಿಷ್ಠ 2 ಲಕ್ಷ ರೂಪಾಯಿಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂಬ ನಿಯಮವೂ ಕೂಡಾ ಇದೆ.


Click it and Unblock the Notifications