ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲಿಲ್ಲಾಧರ್ ಡೈವರ್ಸಿಫೈಡ್ ಸ್ಟಾಕ್ (ವೈವಿಧ್ಯ ಸ್ಟಾಕ್) ಆದ ಅಪಾರ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಖರೀದಿ ಮಾಡಲು ಶಿಫಾರಸು ಮಾಡಿದ್ದಾರೆ. ಹಾಗೆಯೇ 5,418 ರೂಪಾಯಿ ಟಾರ್ಗೆಟ್ ದರ ನಿಗದಿ ಮಾಡಿದೆ. ಅಪಾರ್ ಇಂಡಸ್ಟ್ರೀಸ್ ಷೇರಿನ ನಿನ್ನೆಯ ಮಾರುಕಟ್ಟೆ ಬೆಲೆಯು ಪ್ರತಿ ಷೇರಿಗೆ 5804.70 ರೂಪಾಯಿ ಆಗಿದ್ದು, ಇಂಟ್ರಾಡೇನಲ್ಲಿ ಶೇಕಡ 6.90 ರಷ್ಟು ಲಾಭ ಪಡೆದಿದೆ.
ನಿನ್ನೆ (ಸೆಪ್ಟೆಂಬರ್ 26) ವಹಿವಾಟಿನಲ್ಲಿ ಅಪಾರ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು ಹೊಸ 52 ವಾರಗಳ ಗರಿಷ್ಠ ವಹಿವಾಟು ನಡೆಸಿವೆ. ಈ ನಡುವೆ ಫಂಡ್ ರೈಸ್ ಮಾಡುವ ನಿಟ್ಟಿನಲ್ಲಿ ಅಪಾರ್ ಇಂಡಸ್ಟ್ರೀಸ್‌ನ ನಿರ್ದೇಶಕರ ಮಂಡಳಿಯು ಸೆಪ್ಟೆಂಬರ್ 28, 2023 ರಂದು ಸಭೆಯನ್ನು ನಡೆಸಲು ನಿರ್ಧರಿಸಿದೆ. ಅಪಾರ್ ಇಂಡಸ್ಟ್ರೀಸ್ ಷೇರುಗಳು ಸೆಪ್ಟೆಂಬರ್ 20 ರಂದು ತಲುಪಿದ್ದ ಅದರ ಗರಿಷ್ಠ ಮಟ್ಟವನ್ನು 5,740 ರೂಪಾಯಿಗಿಂತ ಮೇಲೆ ಜಿಗಿಯುವಲ್ಲಿ ಯಶಸ್ವಿಯಾಗಿದೆ. ಸ್ಟಾಕ್ ಬಗ್ಗೆ ಅಧಿಕ ವಿವರ ಇಲ್ಲಿದೆ ಮುಂದೆ ಓದಿ....

ಅಪಾರ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ
ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲೀಲಾಧರ್ ಪ್ರೈವೇಟ್ ಲಿಮಿಟೆಡ್‌ನ ಸಂಶೋಧನಾ ವಿಶ್ಲೇಷಕ ಅಮಿತ್ ಅನ್ವಾನಿ, "ಮುಂದಿನ ಕ್ಯಾಪೆಕ್ಸ್ ಯೋಜನೆಗೆ (ಸಂಸ್ಥೆಯು ಉತ್ಪನ್ನಗಳ ಖರೀದಿ, ನಿರ್ವಹಣೆ ಅಥವಾ ವಿಸ್ತರಿಸಲು ಬಳಸುವ ಹಣ) ಈ ಫಂಡ್ ರೈಸ್ ಹಣವನ್ನು ಬಳಸಿಕೊಳ್ಳಬಹುದು ಎಂದು ನಾವು ನಂಬುತ್ತೇವೆ. ಇದು ಪ್ರಸ್ತುತ ಕ್ಯಾಪೆಕ್ಸ್ ಪ್ಲಾನ್ 3.5 ಬಿಲಿಯನ್ ರೂಪಾಯಿಗಿಂತ ಅಧಿಕವಾಗಿರುತ್ತದೆ. ಷೇರು 37.3x/30x FY24/25Eಯ ಪಿಇ ರೆಷಿಯೋದಲ್ಲಿ ವಹಿವಾಟು ನಡೆಸುತ್ತಿದೆ. ನಾವು 5,418 ರೂಪಾಯಿ ಟಾರ್ಗೆಟ್ ದರದೊಂದಿಗೆ ಈ ಸ್ಟಾಕ್ ಖರೀದಿಸಲು ಸಲಹೆ ನೀಡುತ್ತೇವೆ," ಎಂದು ಹೇಳಿದ್ದಾರೆ.
ಅಪಾರ್ ಇಂಡಸ್ಟ್ರೀಸ್ ಸ್ಟಾಕ್ ರಿಟರ್ನ್
ಅಪಾರ್ ಇಂಡಸ್ಟ್ರೀಸ್ ಷೇರಿನ ಕೊನೆಯ ವಹಿವಾಟಿನ ಬೆಲೆ ಬಿಎಸ್‌ಇಯಲ್ಲಿ ಪ್ರತಿ ಷೇರಿಗೆ ನಿನ್ನೆ 5804.70 ರೂಪಾಯಿ ಆಗಿದೆ. ಈ ಸಮಯಕ್ಕೆ (ಸೆಪ್ಟೆಂಬರ್ 27, ಬೆಳಿಗ್ಗೆ 9:30) ಪ್ರತಿ ಷೇರಿನ ಬೆಲೆಯು ಶೇಕಡ 2.07ರಷ್ಟು ಏರಿಕೆಯಾಗಿ 5,924.95 ರೂಪಾಯಿಗೆ ತಲುಪಿದೆ. ಎನ್‌ಎಸ್‌ಇಯಲ್ಲಿ ಪ್ರಸ್ತುತ ಷೇರಿನ 52 ವಾರಗಳ ಗರಿಷ್ಠ ಬೆಲೆಯು ಪ್ರತಿ ಷೇರಿಗೆ 6,019.85 ರೂಪಾಯಿ ಆಗಿದೆ. 52 ವಾರಗಳ ಕನಿಷ್ಠ ಬೆಲೆಯು 1200.00 ರೂಪಾಯಿ ಆಗಿದೆ. ಇದರ ಮಾರುಕಟ್ಟೆ ಬಂಡವಾಳ ನಿನ್ನೆ 22,213.79 ಕೋಟಿ ರೂಪಾಯಿ ಆಗಿದೆ.
ಅಪಾರ್ ಇಂಡಸ್ಟ್ರೀಸ್ ಷೇರುಗಳು ಕಳೆದ 1 ತಿಂಗಳಲ್ಲಿ ಶೇಕಡ 73ರಷ್ಟು, ಕಳೆದ 6-ತಿಂಗಳಲ್ಲಿ ಶೇಕಡ 150ರಷ್ಟು ಏರಿಕೆಯಾಗಿದೆ. ಕಳೆದ 1-ವರ್ಷದಲ್ಲಿ ಶೇಕಡ 357 ರಷ್ಟು ಜಿಗಿತ ಕಂಡಿದೆ. ಕಳೆದ 3 ವರ್ಷಗಳಲ್ಲಿ ಶೇಕಡ 1906 ರಷ್ಟು ಲಾಭವನ್ನು ನೀಡಿದೆ. ಕಳೆದ 10 ವರ್ಷಗಳಲ್ಲಿ, ಅಪಾರ್ ಇಂಡಸ್ಟ್ರೀಸ್ ಷೇರುಗಳು ಶೇಕಡ 6602 ರಷ್ಟು ಜಿಗಿದಿದೆ.
ತ್ರೈಮಾಸಿಕ ವರದಿ
ಜೂನ್ 30, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ಆದಾಯವನ್ನು 3773 ಕೋಟಿ ರೂಪಾಯಿ ಎಂದು ಘೋಷಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡ 22ರಷ್ಟು ಜಿಗಿತ ಕಂಡಿದೆ. ಕಂಪನಿಯು ತನ್ನ ತ್ರೈಮಾಸಿಕ ನಿವ್ವಳ ಲಾಭವನ್ನು ಜೂನ್ 2023 ರಲ್ಲಿ 197.43 ಕೋಟಿ ರೂಪಾಯಿ ಎಂದು ಘೋಷಿಸಿದೆ. ಜೂನ್ 2022 ರಲ್ಲಿ ನಿವ್ವಳ ಲಾಭ 122.46 ಕೋಟಿ ರೂಪಾಯಿ ಆಗಿದೆ. ಇದಕ್ಕೆ ಹೋಲಿಸಿದರೆ ಈ ವರ್ಷದ ಲಾಭ ಶೇಕಡ 61.22 ರಷ್ಟು ಹೆಚ್ಚಾಗಿದೆ.
ಅಪಾರ್ ಇಂಡಸ್ಟ್ರೀಸ್ ಬಗ್ಗೆ ತಿಳಿಯಿರಿ
ಎಪಿಎಆರ್ ಇಂಡಸ್ಟ್ರೀಸ್ ಭಾರತದಲ್ಲಿ 1958 ರಲ್ಲಿ ಪ್ರಾರಂಭವಾಯಿತು. 60 ವರ್ಷಗಳ ನಂತರ, ಇದು ಡೈವರ್ಸಿಫೈಡ್ ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆದಿದೆ. ಅದರ ಅಧಿಕೃತ ವೆಬ್‌ಸೈಟ್ ಪ್ರಕಾರ, ಸಂಸ್ಥೆಯು ಕಂಡಕ್ಟರ್ಸ್ (ವಾಹಕ), ವಿವಿಧ ರೀತಿಯ ಕೇಬಲ್‌ಗಳು, ವಿಶೇಷ ತೈಲಗಳು, ಪಾಲಿಮರ್‌ಗಳು ಮತ್ತು ಲೂಬ್ರಿಕಂಟ್‌ಗಳ ತಯಾರಕ ಮತ್ತು ಪೂರೈಕೆದಾರ ಆಗಿದೆ. ಹಾಗೆಯೇ 140 ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ.
ಇಲ್ಲಿ ಗಮನಿಸಿ:ಈ ಸ್ಟಾಕ್ ಅನ್ನು ಪ್ರಭುದಾಸ್ ಲಿಲ್ಲಾಧರ್ ಬ್ರೋಕರೇಜ್ ವರದಿಯಿಂದ ಆಯ್ಕೆ ಮಾಡಲಾಗಿದೆ. ಲೇಖನದ ಆಧಾರದ ಮೇಲೆ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಮತ್ತು ಸಂಬಂಧಿತ ಬ್ರೋಕರೇಜ್ ಹೌಸ್ ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.

Click it and Unblock the Notifications