ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಈ ಬ್ಯಾಂಕ್ ಸುಮಾರು 47 ಕೋಟಿ ಗ್ರಾಹಕರನ್ನು ಹೊಂದಿದೆ. ಅಂದರೆ ಭಾರತದ ಅಧಿಕ ಜನರು ಈ ಬ್ಯಾಂಕ್‌ನಲ್ಲಿ ತಮ್ಮ ಖಾತೆಯನ್ನು ಹೊಂದಿದ್ದಾರೆ. ಆದರೆ ಈ ಬ್ಯಾಂಕ್ ಮೂಲಕ ವಹಿವಾಟು ನಡೆಸುವ ಮೂಲಕ ಮನೆಯಲ್ಲಿಯೇ ಕೂತು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಲು ಸಾಧ್ಯವಾಗಲಿದೆ.
ಎಸ್‌ಬಿಐ ಬ್ಯಾಂಕ್ ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಬ್ಯಾಂಕ್ ಆಗಿದ್ದು, ಈ ಬ್ಯಾಂಕ್ ಇತ್ತೀಚೆಗೆ ಅತೀ ಹೆಚ್ಚಿನ ಲಾಭವನ್ನು ಕಂಡಿದೆ. ಮುಂದಿನ ದಿನಗಳಲ್ಲಿಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತೀ ಹೆಚ್ಚು ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಇದರಿಂದಾಗಿ ಉತ್ತಮ ಆಫರ್‌ಗಳು ಕೂಡಾ ನಮಗೆ ಇದೆ.
ಎಸ್‌ಬಿಐ ವ್ಯಾಪಾರವನ್ನು ಆರಂಭ ಮಾಡಲು ತಮ್ಮ ಗ್ರಾಹಕರಿಗೆ ಆಫರ್ ನೀಡುತ್ತದೆ. ಈ ವ್ಯಾಪಾರದ ಮೂಲಕ ನೀವು ಮನೆಯಲ್ಲಿಯೇ ಕೂತು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಲು ಸಾಧ್ಯವಾಗಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಏನಿದು ಎಸ್‌ಬಿಐ ವ್ಯಾಪಾರ ಯೋಜನೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಒಟ್ಟು 28,000 ಬ್ರಾಂಚ್‌ಗಳು ಇದೆ. ಆದರೆ ಎಸ್‌ಬಿಐ ಈ ಎಲ್ಲಾ ಆಸ್ತಿಗಳನ್ನು ಹೊಂದಿಲ್ಲ ಎಂದು ನಿಮಗೆ ತಿಳಿದಿದೆಯೇ?. ಏಕೆಂದರೆ ಈ ಪೈಕಿ ಹಲವಾರು ಬ್ರಾಂಚ್‌ಗಳು ಗುತ್ತಿಗೆ ಅಥವಾ ಬಾಡಿಗೆಯಲ್ಲಿದೆ. ಎಸ್‌ಬಿಐ ಬ್ರಾಂಚ್ ಅನ್ನು ಆಗಾಗೇ ಬದಲಾವಣೆ ಮಾಡಬೇಕಾದ ಸ್ಥಿತಿಯೂ ಉಂಟಾಗುತ್ತದೆ. ಆದ್ದರಿಂದ ಎಸ್‌ಬಿಐ ಲೀಸ್ / ಬಾಡಿಗೆಗೆ ಹೊಸ ಸ್ಥಳ ಬೇಕಾದಾಗ ಆಸ್ತಿಯ ಮಾಲೀಕರಿಗೆ ಟೆಂಡರ್ ಅನ್ನು ಕರೆಯುತ್ತದೆ. ಆಸ್ತಿ ಮಾಲೀಕರು ತಮ್ಮ ಆಸ್ತಿಯ ಬಿಡ್‌ಗಾಗಿ ಪ್ರತ್ಯೇಕ ಸೀಲ್ ಮಾಡಿದ ಕವರ್‌ಗಳಲ್ಲಿ ಮಾಹಿತಿಯನ್ನು ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ. ಕಡಿಮೆ ಬಿಡ್‌ದಾರರನ್ನು ಬ್ಯಾಂಕ್ ಸಂಪರ್ಕ ಮಾಡುತ್ತದೆ.
ಎಸ್‌ಬಿಐಗೆ ಲೀಸ್ ನೀಡುವುದರಿಂದ ಲಾಭವೇನು?
ನೋಬ್ರೋಕರ್ಸ್ ಮತ್ತು ಇತರೆ ವೆಬ್‌ಸೈಟ್ ಪ್ರಕಾರ ನೀವು ಆಸ್ತಿಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ನೀಡುವ ಮೂಲಕ ಸಂಪಾದನೆಯನ್ನು ಮಾಡಲು ಸಾಧ್ಯವಾಗಲಿದೆ. ಆದರೆ ಬಾಡಿಗೆಯು ಆಸ್ತಿಯ ಗಾತ್ರದ ಮೇಲೆ ನಿರ್ಧಾರವಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರ ಪ್ರದೇಶದಲ್ಲಿ ರೂ 20,000 ರಿಂದ ರೂ 6 ಲಕ್ಷದವರೆಗೆ ಬಾಡಿಗೆಯನ್ನು ನೀಡುತ್ತದೆ, ಗ್ರಾಮೀಣ ಪ್ರದೇಶಗಳಲ್ಲಿ ರೂ 5,000 ರಿಂದ ರೂ 40,000 ವರೆಗೆ ಬಾಡಿಗೆಯನ್ನು ನೀಡುತ್ತದೆ. ಬಾಡಿಗೆ ಮೌಲ್ಯವು ಬದಲಾಗಬಹುದು.
ಎಸ್‌ಬಿಐ ನಿರ್ಧಾರ ಮಾಡಿದಂತೆ ಬಾಡಿಗೆ ಅವಧಿ
ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿರುವಂತೆ ಬ್ಯಾಂಕ್ ಬಾಡಿಗೆ ಅವಧಿಯನ್ನು ನಿರ್ಧಾರ ಮಾಡುತ್ತದೆ. ಸಾಮಾನ್ಯವಾಗಿ ಬಾಡಿಗೆ ಅವಧಿಯು 5 ವರ್ಷದಿಂದ 15 ವರ್ಷದವರೆಗೆ ಇರುತ್ತದೆ. ಬಳಿಕ ಬ್ಯಾಂಕ್ ಹಾಗೂ ಆಸ್ತಿಯ ಮಾಲೀಕರ ಮಾತುಕತೆಯ ಬಳಿಕ ಬ್ಯಾಂಕ್ ಬಾಡಿಗೆ ಅವಧಿಯನ್ನು ವಿಸ್ತರಣೆ ಮಾಡಬಹುದು. ಆದರೆ ಬ್ಯಾಂಕ್ 30ರಿಂದ 45 ದಿನಗಳವರೆಗೆ ಕೆಲವು ಬಾಡಿಗೆ ಒಪ್ಪಂದ, ಬ್ಯಾಂಕ್‌ಗೆ ಬೇಕಾದ ವ್ಯವಸ್ಥೆ ಮಾಡುವ ಹಿನ್ನೆಲೆ ಬಾಡಿಗೆಯನ್ನು ಪಾವತಿ ಮಾಡುವುದಿಲ್ಲ. ಎಲ್ಲ ಕೆಲಸ ಸಂಪೂರ್ಣವಾಗಲು 30-45 ದಿನಗಳು ಆಗಲಿದೆ.
ಎಸ್‌ಬಿಐಗೆ ಬೇಕಾದ ಸೌಲಭ್ಯಗಳು
ಬಿಡ್ ಸೂಚನೆಯ ಪ್ರಕಾರ ಎಸ್‌ಬಿಐ ಕೆಲವು ವ್ಯವಸ್ಥೆಗಳು ಇದೆಯೇ ಎಂದು ನೋಡಿಕೊಳ್ಳುತ್ತದೆ. ಪಾರ್ಕಿಂಗ್, ನೆಲ ಮಹಡಿಯಲ್ಲಿನ ಆಸ್ತಿ, 24 ಗಂಟೆಗಳ ನೀರಿನ ಸೌಲಭ್ಯ, ಜನರೇಟರ್ ಪವರ್ ಬ್ಯಾಕ್-ಅಪ್, ವಿದ್ಯುತ್ ಸಂಪರ್ಕ ಇರಬೇಕಾಗುತ್ತದೆ. ಈ ಎಲ್ಲ ವ್ಯವಸ್ಥೆಗಳು ಇದ್ದರೆ ಮಾತ್ರ ಬ್ಯಾಂಕ್ ಬಿಡ್ ಅನ್ನು ಅನುಮೋದಿಸುತ್ತದೆ.
ಎಸ್‌ಬಿಐ ವ್ಯಾಪಾರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ನೀವು ಅರ್ಜಿ ಸಲ್ಲಿಸಲು sbi.co.in ಅಥವಾ bank.sbi ಗೆ ಭೇಟಿ ನೀಡಬೇಕಾಗುತ್ತದೆ. ಬಳಿಕ 'procurement news' ಸೆಕ್ಷನ್‌ಗೆ ಹೋಗಿ. ಎಲ್ಲ ಟೆಂಡರ್‌ಗಳು ಈ ಪೇಜ್‌ನಲ್ಲಿ ಇರಲಿದೆ. ನೀವು ಲೀಸ್ ಹಾಗೂ ಬಾಡಿಗೆ ಬಗ್ಗೆ ಸರ್ಚ್ ಮಾಡಬಹುದು. ಬಿಡ್ ನೋಟಿಸ್ ಹಾಗೂ ಟೆಂಡರ್ ಮಾಹಿತಿಯನ್ನು ನೀವು ಡೌನ್‌ಲೋಡ್ ಮಾಡಬಹುದು. ಮಾಹಿತಿಯನ್ನು ಸರಿಯಾಗಿ ಓದಿ. ಬ್ಯಾಂಕ್ ಉಲ್ಲೇಖ ಮಾಡಿದ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿ. ದಾಖಲೆಗಳನ್ನು ಲಗತ್ತಿಸಿ. ಎಸ್‌ಬಿಐಗೆ ಯಾವುದೇ ಅರ್ಜಿಯನ್ನು ಅನುಮೋದಿಸಲು, ರಿಜೆಕ್ಟ್ ಮಾಡಲು ಅವಕಾಶವಿದೆ. ನೀವು ಪ್ರಾಪರ್ಟಿ ವರ್ಕ್‌ಗಾಗಿ ಒಂದು ಪೈಸೆ ಕೂಡಾ ಖರ್ಚು ಮಾಡಬೇಕಾಗಿಲ್ಲ. ಲೀಸ್ ಆದ ಬಳಿಕ ಲಕ್ಷಾಂತರ ರೂಪಾಯಿ ಲಭ್ಯವಾಗಲಿದೆ.


Click it and Unblock the Notifications