ಕರ್ನಾಟಕ ರಾಜ್ಯವು ಹಿಪ್ಪುನೇರಳೆ ರೇಷ್ಮೆಗೆ ಅತೀ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ವಿವಿಧ ಬಗೆಯ ರೇಷ್ಮೆ ಸೀರೆಗಳನ್ನು ನಾವು ಕಡಿಮೆ ದರದಲ್ಲಿ ಖರೀದಿ ಮಾಡಲು ಸಾಧ್ಯವಿದೆ. ಆದರೆ ನೀವು ಕಾಂಚಿಪುರಂ ಸೀರೆಯನ್ನು ರಿಟೇಲ್ ಬೆಲೆಗೆ ಖರೀದಿ ಮಾಡಬೇಕೇ?
ಹಾಗಿದ್ದರೆ, ನೀವು ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಸುತ್ತು ಬರಲೇಬೇಕು ನೋಡಿ. ಬೆಂಗಳೂರಿನಲ್ಲಿ ಅಧಿಕೃತ ರೇಷ್ಮೆ ಸೀರೆ ರಿಟೇಲ್ ವ್ಯಾಪಾರಿಗಳು ಇದ್ದಾರೆ. ನೀವು ಬೆಂಗಳೂರಿನಲ್ಲಿದ್ದರೆ ಮತ್ತು ನಿಜವಾದ ಕಾಂಚಿಪುರಂ ಸೀರೆಗಳನ್ನು ಖರೀದಿಸಲು ಬಯಸಿದರೆ, ಈ ಕೆಳಗಿರುವ ಮಾರುಕಟ್ಟೆಗಳಿಗೆ ಹೋಗಿ, ಇಲ್ಲಿದೆ ವಿವರ ಮುಂದೆ ಓದಿ...

ಚಿಕ್ಕಪೇಟೆ ಮಾರುಕಟ್ಟೆ
ಉತ್ತಮ ಗುಣಮಟ್ಟದ, ಬೆಲೆಗಳ ರೇಷ್ಮೆ ಸೀರೆಗಳ ವಿಚಾರಕ್ಕೆ ಬಂದಾಗ ಬೆಂಗಳೂರು ಅತ್ಯುತ್ತಮ ಮಾರುಕಟ್ಟೆಯಾಗಿದೆ. ಮಾರುಕಟ್ಟೆಯು ನಗರದ ಹೃದಯಭಾಗದಲ್ಲಿದೆ. ಅತೀ ಅಧಿಕ ಅಂಗಡಿಗಳನ್ನು ಹೊಂದಿದೆ. ನೀವು ಯಾವುದು ಉತ್ತಮ ಎಂದು ಹೋಲಿಕೆ ಮಾಡಿಕೊಂಡು, ಚೌಕಾಸಿ ಮಾಡಿಕೊಂಡು ಕಾಂಚಿಪುರಂ ಸೀರೆ ಅಥವಾ ಮೈಸೂರು ಸಿಲ್ಕ್ ಸೀರೆಯನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.
ಎಂಜಿ ರಸ್ತೆ ಮಾರುಕಟ್ಟೆ
ಹಲವಾರು ರಿಟೇಲ್ ಶಾಪ್‌ಗಳು ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಹೊಂದಿರುವ ಈ ಮಾರುಕಟ್ಟೆಯಲ್ಲಿ ಯಾವಾಗಲೂ ಕೂಡಾ ಜನರು ಹೆಚ್ಚು. ಇಲ್ಲಿ ನೀವು ಬೇರೆ ಬೇರೆ ಶ್ರೇಣಿಯ ಕಾಂಚಿಪುರಂ ಸೀರೆಗಳು ಮತ್ತು ಹಲವಾರು ರೀತಿಯ ರೇಷ್ಮೆ ಸಾಮಗ್ರಿಗಳನ್ನು ಖರೀದಿ ಮಾಡಬಹುದು. ಬೆಲೆಗಳನ್ನು ನೀವು ಕಡಿಮೆ ಮಾಡಲು ಬಾರ್ಗೆನಿಂಗ್ ಮಾಡಿಕೊಳ್ಳಬಹುದು. ಬೇರೆ ಬೇರೆ ಮಳಿಗೆಗಳಿಗೆ ಹೋಗಿ ಬೆಲೆ ಹೋಲಿಕೆ ಮಾಡಿ, ಖರೀದಿಸಬಹುದು.
ಅಶೋಕ್ ನಗರ ಮಾರುಕಟ್ಟೆ
ಈ ಮಾರುಕಟ್ಟೆಯು ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳಿಗೆ ಮತ್ತೊಂದು ಹಾಟ್‌ಸ್ಪಾಟ್ ಆಗಿದೆ. ನೀವು ಇಲ್ಲಿ ಹಲವಾರು ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಕಾಂಚಿಪುರಂ ಸೀರೆ ಅಥವಾ ಮೈಸೂರು ಸಿಲ್ಕ್ ಸೀರೆಯನ್ನು ಖರೀದಿ ಮಾಡಬಹುದಾಗಿದೆ.
ಕಮರ್ಷಿಯಲ್ ಸ್ಟ್ರೀಟ್
ನಗರದಲ್ಲಿ ಅತ್ಯಂತ ಪ್ರಿಯವಾದ ಶಾಪಿಂಗ್ ಸ್ಪಾಟ್‌ಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್ ಕೂಡಾ ಒಂದಾಗಿದೆ. ಇಲ್ಲಿ ನೀವು ಸ್ಟ್ರೀಟ್ ಬ್ರ್ಯಾಂಡೆಡ್ ಮತ್ತು ಬ್ರ್ಯಾಂಡೆಡ್ ಅಲ್ಲದ ಬೇರೆ ಬೇರೆ ಶ್ರೇಣಿಯ ಬಟ್ಟೆ ಅಂಗಡಿಗಳನ್ನು ಕಾಣಬಹುದಾಗಿದೆ. ಕಡಿಮೆ ಬೆಲೆಯಲ್ಲಿ ರೇಷ್ಮೆ ಸೀರೆಗಳ ಪಡೆಯಬಹುದು.
ಅವೆನ್ಯೂ ರೋಡ್
ಜವಳಿ ಉತ್ಪನ್ನಗಳ ಬೇರೆ ಬೇರೆ ಬ್ರ್ಯಾಂಡ್‌ಗಳನ್ನು ಹೊಂದಿರುವ ವೋಲ್‌ಸೇಲ್ ಮತ್ತು ರಿಟೇಲ್ ಅಂಗಡಿಗಳಿಗೆ ಮತ್ತೊಂದು ಜನಪ್ರಿಯ ಕೇಂದ್ರವಾಗಿದೆ. ಖರೀದಿಸುವ ಮೊದಲು ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸಬೇಕು.
ಜಯನಗರ ಮಾರುಕಟ್ಟೆ
ಜಯನಗರ ಮಾರುಕಟ್ಟೆಯ 4 ನೇ ಬ್ಲಾಕ್ ಬೆಂಗಳೂರಿನಲ್ಲಿ ಶಾಪಿಂಗ್ ಹಾಟ್‌ಸ್ಪಾಟ್ ಆಗಿದೆ. ಹಾಗೆಯೇ ಹಲವಾರು ರೇಷ್ಮೆ ಸೀರೆ ಅಂಗಡಿಗಳನ್ನು ಹೊಂದಿದೆ. ಮಾರುಕಟ್ಟೆಯನ್ನು ಲೆಕ್ಕಿಸದೆ, ರೇಷ್ಮೆ ಸೀರೆಗಳ ಗುಣಮಟ್ಟವನ್ಮು ನೀವು ಪರಿಶೀಲನೆ ಮಾಡುವುದು ಉತ್ತಮ.
ನಿಜವಾದ ರೇಷ್ಮೆಯನ್ನು ಗುರುತಿಸುವುದು ಹೇಗೆ?
ಯಾವುದೇ ಸೀರೆಯ ಮೂಲೆಯಿಂದ ಕೆಲವು ಎಳೆಗಳನ್ನು ತೆಗೆದುಕೊಂಡು ಅವುಗಳನ್ನು ಸುಟ್ಟು ನೋಡಿ. ಸುಟ್ಟ ಕೂದಲಿನಂತೆ ವಾಸನೆ ಬಂದರೆ ಅದು ಉತ್ತಮ ಗುಣಮಟ್ಟದ ಸೀರೆಯಾಗಿದೆ. ಇನ್ನು ಯಾವ ಅಂಗಡಿಯಲ್ಲಿ ಉತ್ತಮ ಗುಣಮಟ್ಟದ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ನೀವು ತಿಳಿಯಲು ಬಯಸಿದರೆ, ಕೆಎಸ್‌ಐಸಿ ಔಟ್‌ಲೆಟ್‌ಗಳಿಗೆ ಹೋಗಿ. ಅವರು ಮೈಸೂರು ರೇಷ್ಮೆಯ ಕಾನೂನುಬದ್ಧ ಮಾರಾಟಗಾರರು ಮತ್ತು ಇದು ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದೆ. ಗುಣಮಟ್ಟದ ಪರೀಕ್ಷೆ ಮಾಡಿಯೇ ವ್ಯವಹಾರವನ್ನು ಮಾಡಿ.


Click it and Unblock the Notifications