ಹೂಡಿಕೆ ಮಾಡಿ ಬಡ್ಡಿಯಿಂದ ಉತ್ತಮ ಆದಾಯವನ್ನು ಪಡೆಯಲು ಬಯಸುತ್ತೀರಾ? ಅಥವಾ ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡಲು ಬಯಸುತ್ತೀರಾ?. ಹಾಗಿದ್ದಾರೆ ನಿಮಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಉತ್ತಮ ಆಯ್ಕೆಯಾಗಿದೆ. ಇಲ್ಲಿ ಉತ್ತಮ ರಿಟರ್ನ್ ಜೊತೆಗೆ ಸುರಕ್ಷತೆಯಿದೆ.
ಭಾರತದ ಯಾವುದೇ ನಾಗರಿಕರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ನಾವು ಈ ಯೋಜನೆಯ ಖಾತೆಯನ್ನು ತೆರೆಯಬಹುದಾಗಿದೆ. ಉತ್ತಮ ಬಡ್ಡಿದರ, ತೆರಿಗೆಮುಕ್ತ ಹೂಡಿಕೆಯೊಂದಿಗೆ ನೀವು ಹೂಡಿಕೆ ಮಾಡಿದ ಸಂಪೂರ್ಣ ಮೊತ್ತವು ಮೆಚ್ಯೂರಿಟಿ ವೇಳೆ ನಿಮ್ಮ ಕೈ ಸೇರುತ್ತದೆ.

ಮೆಚ್ಯೂರಿಟಿ ಅವಧಿ 15 ವರ್ಷವಾಗಿದ್ದು, 15 ವರ್ಷಗಳ ಬಳಿಕ ನಾವು ಅವಧಿ ವಿಸ್ತರಣೆ ಮಾಡುವ ಆಯ್ಕೆಯಿದೆ. ನೀವು ಅವಧಿ ವಿಸ್ತರಣೆ ಮಾಡಿದರೆ ನೀವು ಹೂಡಿಕೆ ಮಾಡಿದ ಮೊತ್ತವು ರಾಕೆಟ್ ವೇಗದಲ್ಲಿ ಹೆಚ್ಚಳವಾಗಲಿದೆ. ನೀವು ಆರಂಭದಲ್ಲಿ ಮಾಡಿದ ಐದು ಸಾವಿರ ರೂಪಾಯಿ ಹೂಡಿಕೆಯು 26 ಲಕ್ಷ ರೂಪಾಯಿ ಆಗುತ್ತದೆ.
ಮೆಚ್ಯೂರಿಟಿ ಸಂದರ್ಭದಲ್ಲಿ ಮೂರು ಆಯ್ಕೆಗಳು ಲಭ್ಯವಿರುತ್ತದೆ. ಈ ಮೂರು ಆಯ್ಕೆಗಳನ್ನು ನಾವು ತಿಳಿದಿರುವುದು ಅತೀ ಮುಖ್ಯವಾಗಿದೆ. ಒಂದನೆಯದಾಗಿ ಮೆಚ್ಯೂರಿಟಿ ಬಳಿಕ ಹಣ ವಿತ್‌ಡ್ರಾ ಮಾಡುವುದು, ಎರಡನೆಯದರು ನೀವು ವಿತ್‌ಡ್ರಾ ಮಾಡದಿದ್ದರೂ ಬಡ್ಡಿದರ ಜಮೆ ಮುಂದುವರಿಯುವುದು, ಮೂರನೆಯದಾಗಿ ಐದು ವರ್ಷಗಳ ಅವಧಿಗೆ ಹೂಡಿಕೆ ವಿಸ್ತರಣೆಯಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ.....
1. ಮೆಚ್ಯೂರಿಟಿ ಬಳಿಕ ಹಣ ವಿತ್‌ಡ್ರಾ
ಮೊದಲನೆಯ ಆಯ್ಕೆಯ ಪ್ರಕಾರ ನೀವು ಮೆಚ್ಯೂರಿಟಿ ಸಂದರ್ಭದಲ್ಲಿ ಬಡ್ಡಿ ಹಾಗೂ ಸಂಪೂರ್ಣ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಖಾತೆ ಮುಚ್ಚಿ ಸಂಪೂರ್ಣ ಮೊತ್ತ ನೀಡಲಾಗುತ್ತದೆ. ಬಡ್ಡಿ ಹಾಗೂ ಹೂಡಿಕೆ ಮೊತ್ತ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಇದಲ್ಲದೆ 1.5 ಲಕ್ಷ ರೂಪಾಯಿವರೆಗಿನ ಹೂಡಿಕೆಗೆ ಪ್ರತಿ ವರ್ಷ ತೆರಿಗೆ ವಿನಾಯಿತಿ ಇರುತ್ತದೆ.
2. ಐದು ವರ್ಷಗಳ ವಿಸ್ತರಣೆ
ಎರಡನೇ ಆಯ್ಕೆಯಲ್ಲಿ ಮೆಚ್ಯೂರಿಟಿ ಬಳಿಕ ಹೂಡಿಕೆ ಹೆಚ್ಚಿಸುವುದು ಆಗಿದೆ. ಈ ಆಯ್ಕೆಯಲ್ಲಿ 5-5 ವರ್ಷಗಳ ಅವಧಿಗೆ ವಿಸ್ತರಣೆ ಮಾಡುವ ಅವಕಾಶವಿದೆ. ಆದರೆ ನೀವು ವಿಸ್ತರಣೆ ಮಾಡಲು ಬಯಸಿದರೆ ಮೆಚ್ಯೂರಿಟಿಗೂ ಒಂದು ವರ್ಷಕ್ಕೂ ಮುನ್ನ ಬ್ಯಾಂಕ್ ಅಥವಾ ಕಂಚೆ ಕಚೇರಿಗೆ ಮಾಹಿತಿ ನೀಡಬೇಕಾಗುತ್ತದೆ. ನೀವು ಅವಧಿ ವಿಸ್ತರಣೆ ಮಾಡಿದ ಬಳಿಕ ಯಾವುದೇ ಸಂದರ್ಭದಲ್ಲಿ ಹಣ ವಿತ್‌ಡ್ರಾ ಮಾಡಬಹುದು. ಅದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.
3. ಹೂಡಿಕೆ ಹೆಚ್ಚಿಸದೆ ಮೆಚ್ಯೂರಿಟಿ ಬಳಿಕವೂ ಯೋಜನೆ ವಿಸ್ತರಣೆ
ನೀವು ಮೇಲಿನ ಎರಡು ಆಯ್ಕೆಯನ್ನು ಮಾಡದಿದ್ದರೂ ಕೂಡಾ ಮೂರನೇ ಆಯ್ಕೆಯ ಆಧಾರದಲ್ಲಿ ಮೆಚ್ಯೂರಿಟಿ ಬಳಿಕವೂ ನಿಮ್ಮ ಪಿಎಫ್ ಖಾತೆ ಮುಂದುವರಿಯಲಿದೆ. ನೀವು ಈ ಖಾತೆಗೆ ಹೊಸದಾಗಿ ಹೂಡಿಕೆ ಮಾಡುವ ಅಗತ್ಯವಿರುವುದಿಲ್ಲ. ಮೆಚ್ಯೂರಿಟಿ ಅವಧಿಯು ಆಟೋಮ್ಯಾಟಿಕ್ ಆಗಿ 5 ವರ್ಷಗಳ ಅವಧಿಗೆ ವಿಸ್ತರಣೆಯಾಗುತ್ತದೆ. ಇದರಲ್ಲಿ ನಿಮಗೆ ಬಡ್ಡಿ ಮುಂದುವರಿಯುತ್ತದೆ. ಐದು ವರ್ಷ ಮುಗಿದ ಬಳಿಕ ಮತ್ತೆ ಐದು ವರ್ಷ ವಿಸ್ತರಣೆಯಾಗುತ್ತದೆ.
26.63 ಲಕ್ಷ ರೂಪಾಯಿ ಪಡೆಯುವುದು ಹೇಗೆ?
ಪ್ರಸ್ತುತ ಪಿಪಿಎಫ್ ಬಡ್ಡಿದರ ಶೇಕಡ 7.1 ಆಗಿದ್ದು, ವಾರ್ಷಿಕವಾಗಿ ಬಡ್ಡಿದರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ ಇದನ್ನು ತ್ರೈಮಾಸಿಕವಾಗಿ ನಿರ್ಧರಿಸಲಾಗುತ್ತದೆ. ಕೆಲವು ಸಮಯದವರೆಗೂ ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ನೀವು ಇದೇ ಬಡ್ಡಿದರದಲ್ಲಿ ನೀವು 15-20 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ನಿಮಗೆ ಈ ಅಗಾಧ ಮೊತ್ತ ಲಭ್ಯವಾಗಲಿದೆ.
| ಮಾಸಿಕ ಹೂಡಿಕೆ | 15 ವರ್ಷ ಅವಧಿ (ಲಕ್ಷ) | 20 ವರ್ಷ ಅವಧಿ (ಲಕ್ಷ) | 25 ವರ್ಷ ಅವಧಿ (ಲಕ್ಷ) |
| 1000 | 3.18 | 5.24 | 8.17 |
| 2000 | 6.37 | 10.49 | 16.35 |
| 3000 | 9.55 | 15.73 | 24.52 |
| 5000 | 15.92 | 26.23 | 44.88 |
| 10,000 | 31.85 | 52.45 | 81.76 |
| 12,500 | 39.82 | 65.57 | ₹1.02 ಕೋಟಿ |


Click it and Unblock the Notifications