ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಇತ್ತೀಚಿಗೆ ತನ್ನ ಆ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಎರಡನೇ ಸ್ಥಾನಕ್ಕೆ ಬಂದಿರುವ ಎಲಾನ್ ಮಸ್ಕ್ 200 ಬಿಲಿಯನ್ ಡಾಲರ್ ಅನ್ನು ಕಳೆದುಕೊಂಡ ಮೊದಲ ವ್ಯಕ್ತಿಯಾಗಿದ್ದಾರೆ. ವಿಶ್ವದ ಅತೀ ಶ್ರೀಮಂತ ವ್ಯಕ್ತಿಯ ಸ್ಥಾನದಲ್ಲಿ ಪ್ರಸ್ತುತ ಬರ್ನಾರ್ಡ್ ಅರ್ನೌಲ್ಟ್ ಇದ್ದಾರೆ.
ಹೌದು, ಟೆಸ್ಲಾ ಹಾಗೂ ಟ್ವಿಟ್ಟರ್ ಸಂಸ್ಥೆಯ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 200 ಮಿಲಿಯನ್ ಡಾಲರ್ ನಿವ್ವಳ ಆದಾಯವನ್ನು ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. 51 ವರ್ಷದ ಎಲಾನ್ ಮಸ್ಕ್ ಆದಾಯವು ಇತ್ತೀಚೆಗೆ ಟೆಸ್ಲಾ ಷೇರು ಕುಗ್ಗಿದ ಬಳಿಕ ಭಾರೀ ನಷ್ಟವನ್ನು ಕಂಡಿದ್ದಾರೆ. ಮಂಗಳವಾರ ಶೇಕಡ 11ರಷ್ಟು ಆದಾಯ ಕುಗ್ಗಿದ ಬಳಿಕ ಸುಮಾರು 137 ಬಿಲಿಯನ್ ಡಾಲರ್ ಆದಾಯ ಇಳಿಕೆಯಾಗಿದೆ.
2021ರ ನವೆಂಬರ್ ತಿಂಗಳಿನಲ್ಲಿ ಎಲಾನ್ ಮಸ್ಕ್ ಆದಾಯವು ಸುಮಾರು 340 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಈ ಹಿಂದೆ ಎಲ್‌ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಆಗುವುದಕ್ಕೂ ಮುನ್ನ ಎಲಾನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ಶೇಕಡ 65ರಷ್ಟು ಕುಸಿದ ಟೆಸ್ಲಾ ಷೇರು
ಈ ಹಿಂದೆ ಎಲಾನ್ ಮಸ್ಕ್ ಆದಾಯ ನಿರಂತರವಾಗಿ ಏರಿಕೆಯನ್ನು ಕಂಡಿತ್ತು. ಅಕ್ಟೋಬರ್ 2021ರಲ್ಲಿ ಟೆಸ್ಲಾ ಮಾರುಕಟ್ಟೆ ಮೌಲ್ಯ ಸುಮಾರು 1 ಟ್ರಿಲಿಯನ್ ಡಾಲರ್‌ಗೆ ಮೊದಲ ಬಾರಿಗೆ ಏರಿಕೆಯಾಗಿತ್ತು. ಆದರೆ ಟೆಸ್ಲಾ ಷೇರುಗಳು ಭಾರೀ ಇಳಿಕೆಯಾಗಿದೆ. 2022ರಲ್ಲಿ ಟೆಸ್ಲಾ ಷೇರು ಸುಮಾರು ಶೇಕಡ 65ರಷ್ಟು ಇಳಿಕೆಯಾಗಿದೆ. ಪ್ರಸ್ತುತ ಮಸ್ಕ್ ಕೇವಲ ಶೇಕಡ 42.2ರಷ್ಟು ಷೇರನ್ನು ಮಾತ್ರ ಹೊಂದಿದ್ದಾರೆ.
ಈ ಎಲ್ಲ ಬೆಳವಣಿಗೆಯು ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಮಾಡಿದ ಬಳಿಕ ನಡೆದಿದೆ. ಹಲವಾರು ಗೊಂದಲ, ಕೋರ್ಟ್ ವಿವಾದಗಳ ಬಳಿಕ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ. ಆದರೆ ಅದಾದ ಬಳಿಕ ಟ್ವಿಟ್ಟರ್ ಭಾರೀ ನಷ್ಟವನ್ನು ಕಂಡಿದೆ. ಇದರಿಂದಾಗಿ ಮಸ್ಕ್ ಟೆಸ್ಲಾ ಷೇರುಗಳನ್ನು ಕೂಡಾ ಮಾರಾಟ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಹಾಗೆಯೇ ಟ್ವಿಟ್ಟರ್‌ನಲ್ಲಿ ಉದ್ಯೋಗ ಕಡಿತವನ್ನು ಕೂಡಾ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 200 ಬಿಲಿಯನ್ ಡಾಲರ್ ಕಳೆದುಕೊಂಡ ಓರ್ವ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.


Click it and Unblock the Notifications