ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಯಾವ ಹೂಡಿಕೆ ಉತ್ತಮ, ಅಧಿಕ ರಿಟರ್ನ್ ಪಡೆಯಲು ಸಾಧ್ಯವಿದೆ ಮತ್ತು ಯಾವ ಹೂಡಿಕೆಯು ಅತೀ ಸುರಕ್ಷಿತ ಎಂದು ಕೂಡಾ ನಾವು ನೋಡುತ್ತೇವೆ. ಹೀಗೆ ಇರುವಾಗ ನಾವು ಎಂದಿಗೂ ಕೂಡಾ ಸರ್ಕಾರದ ಯೋಜನೆಗಳನ್ನು ಆಯ್ಕೆ ಮಾಡುವುದು ಉತ್ತಮ. ಅಂತಹ ಆಯ್ಕೆಗಳಲ್ಲಿ ನಮ್ಮ ಮುಂದೆ ಬರುವುದು ಪಿಪಿಎಫ್ ಮತ್ತು ಇಪಿಎಫ್.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತಮ್ಮ ನಿವೃತ್ತಿ ಸಂದರ್ಭಕ್ಕೆ ಸಹಾಯವಾಗಲು ಜನರು ಹಣವನ್ನು ಉಳಿತಾಯ ಮಾಡಲೆಂದು ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಲ್ಲಿ ಸ್ಥಳೀಯವಾಗಿ ಹಾಗೂ ವಿದೇಶಿ ಸಂಸ್ಥೆಗಳಿಗೆ ಉದ್ಯೋಗ ಮಾಡುವವರು ಹೂಡಿಕೆ ಮಾಡುವ ಅವಕಾಶವಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಎರಡರ ಪೈಕಿ ಯಾವುದು ಉತ್ತಮ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಉದ್ಯೋಗಿಗಳ ಭವಿಷ್ಯ ನಿಧಿ: ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ಕಾಯಿದೆ 1952ರ ಅಡಿಯಲ್ಲಿ ಇರುವ ಯೋಜನೆಯೇ ಇಪಿಎಫ್ ಆಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಈ ಯೋಜನೆಯನ್ನು ನಿರ್ವಹಣೆ ಮಾಡುತ್ತದೆ. ಇಪಿಎಫ್‌ನಲ್ಲಿ ಉದ್ಯೋಗಿಗಳ ವೇತನದ ಶೇಕಡ 12ರಷ್ಟು ಮತ್ತು ಉದ್ಯೋಗ ನೀಡಿದ ಸಂಸ್ಥೆಯ ಪಾಲು ಇರುತ್ತದೆ.
ಈ ಯೋಜನೆಯಲ್ಲಿ ಉದ್ಯೋಗಿಗಳು ನಿವೃತ್ತಿಯನ್ನು ಪಡೆದ ಬಳಿಕ, ಭಾರೀ ಪ್ರಮಾಣದ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ಉದ್ಯೋಗಿಗಳು ಮತ್ತು ಉದ್ಯೋಗ ನೀಡಿದ ಸಂಸ್ಥೆ ಮಾಡುವ ಹೂಡಿಕೆಗೆ ಹೆಚ್ಚುವರಿಯಾಗಿ ಬಡ್ಡಿದರವು ಲಭ್ಯವಾಗುತ್ತದೆ. ಈ ಯೋಜನೆಯ ಬಡ್ಡಿದರವು ಶೇಕಡ 8.15ರಷ್ಟಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅತೀ ಜನರು ಹೂಡಿಕೆ ಮಾಡಲು ಇಷ್ಟ ಪಡುವ ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಾವು ಮಾಡಿದ ಹೂಡಿಕೆ ಅತೀ ಸುರಕ್ಷಿತವಾಗಿದೆ. ಹಾಗೆಯೇ ಉತ್ತಮ ರಿಟರ್ನ್ ಲಭ್ಯವಾಗುತ್ತದೆ. ಇನ್ನು ತೆರಿಗೆ ಪ್ರಯೋಜನ ಕೂಡಾ ಈ ಯೋಜನೆಯಲ್ಲಿ ಲಭ್ಯವಾಗುತ್ತದೆ.
ಇಪಿಎಫ್ ಮತ್ತು ಪಿಪಿಎಫ್ ನಡುವಿನ ವ್ಯತ್ಯಾಸವೇನು?
ನೀವು ಇಪಿಎಫ್‌ನಲ್ಲಿ ಹೂಡಿಕೆ ಮಾಡಿದಾಗ ನೀವು ವೃತ್ತಿಯನ್ನು ತೊರೆದ ಬಳಿಕ ಅಥವಾ ನಿವೃತ್ತಿ ಆದಾಗ ಹೂಡಿಕೆಯನ್ನು ವಿತ್‌ಡ್ರಾ ಮಾಡಬಹುದಾಗಿದೆ. ಹಾಗೆಯೇ ತೀರಾ ಅಗತ್ಯ ಸಂದರ್ಭದಲ್ಲಿಯೂ ಹೂಡಿಕೆಯನ್ನು ಮಾಡಬಹುದಾಗಿದೆ. ಆದರೆ ಪಿಪಿಎಫ್‌ನಲ್ಲಿ ನಾವು ಹೂಡಿಕೆಯನ್ನು ಮೆಚ್ಯೂರಿಟಿವರೆಗೂ ವಿತ್‌ಡ್ರಾ ಮಾಡುವ ಅವಕಾಶವಿಲ್ಲ. ನಾವು ಹೂಡಿಕೆ ಮಾಡಿದ 15 ವರ್ಷದವರೆಗೆ ಹೂಡಿಕೆ ವಿತ್‌ಡ್ರಾ ಮಾಡುವ ಆಯ್ಕೆಯಿಲ್ಲ.
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಪ್ರಯೋಜನಗಳು:
* ಗ್ಯಾರಂಟಿ ರಿಟರ್ನ್
* ತೆರಿಗೆ ಪ್ರಯೋಜನ
* ದೀರ್ಘಾವಧಿಯ ಉಳಿತಾಯ ಯೋಜನೆ
* ಇಪಿಎಫ್ ಕಾರ್ಪಸ್‌ನಲ್ಲಿ ಗಳಿಸಿದ ಬಡ್ಡಿಯನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆ.
* ಆರ್ಥಿಕ ಭದ್ರತೆಯ ಅರ್ಥವನ್ನು ನೀಡುತ್ತದೆ
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅನಾನುಕೂಲತೆ
* ರಿಟರ್ನ್ಸ್ ಸೀಮಿತವಾಗಿದೆ
* ಆರಂಭಿಕ ವಾಪಸಾತಿ ದಂಡ ಇದೆ.
* ಇಪಿಎಫ್ ಕೊಡುಗೆಯು ಕಠಿಣವಾಗಿದೆ
* ಇಪಿಎಫ್ ದೊಡ್ಡ ಕಂಪನಿಯಿಂದ ಸಣ್ಣ ಕಂಪನಿಗೆ ಸ್ಥಳಾಂತರಗೊಂಡ ನಂತರ ಬಡ್ಡಿ ಗಳಿಸುವುದನ್ನು ನಿಲ್ಲಿಸುತ್ತದೆ
* ಇಪಿಎಫ್ ಎಂಎಫ್‌ಗಳು ಅಥವಾ ಎನ್‌ಪಿಎಸ್‌ಗಳ ದೀರ್ಘಾವಧಿಯ ಆದಾಯಕ್ಕೆ ಹೊಂದಿಕೆಯಾಗುವುದಿಲ್ಲ
* ಲಾಕ್-ಇನ್ ಅವಧಿ
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಪ್ರಯೋಜನ
* ಸರ್ಕಾರ ಬೆಂಬಲಿತ ಉಳಿತಾಯ ಯೋಜನೆ
* ಖಾತರಿಪಡಿಸಿದ ಲಾಭವನ್ನು ನೀಡುತ್ತದೆ
* ಫ್ಲೆಕ್ಸಿಬಿಲಿಟಿ
* ತೆರಿಗೆಗಳು ಬಡ್ಡಿ ಅಥವಾ ಗಳಿಸಿದ ಮೆಚ್ಯೂರಿಟಿ ಮೊತ್ತಕ್ಕೆ ಅನ್ವಯವಾಗುವುದಿಲ್ಲ
* ಭಾಗಶಃ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಅನಾನುಕೂಲತೆ
* ಇಪಿಎಫ್‌ಗಿಂತ ಕಡಿಮೆ ಬಡ್ಡಿ ದರ
* 15 ವರ್ಷಗಳ ಲಾಕ್-ಇನ್ ಅವಧಿ
* ಗರಿಷ್ಠ ಠೇವಣಿ ಮಿತಿ ಇದೆ, ಅದು 15 ಲಕ್ಷ ರೂಪಾಯಿ ಆಗಿದೆ
* ಕಟ್ಟುನಿಟ್ಟಾದ ಅಕಾಲಿಕ ವಿತ್‌ಡ್ರಾ ನಿಯಮ
* ಅಕಾಲಿಕವಾಗಿ ವಿತ್‌ಡ್ರಾ ಮಾಡಲು ಅವಕಾಶವಿಲ್ಲ


Click it and Unblock the Notifications