ಪ್ರಸ್ತುತ ಈ ದುಬಾರಿ ದುನಿಯಾದಲ್ಲಿ ಭವಿಷ್ಯದ ಸುರಕ್ಷತೆಗಾಗಿ ಈಗಲೇ ಹೂಡಿಕೆ ಮಾಡುವುದು ಉತ್ತಮ. ಹಲವಾರು ಮಂದಿ ಯುವಕರು ಈಗ ಹೂಡಿಕೆಯನ್ನು ಮಾಡುತ್ತಾರೆ. ಕೆಲವರು ಸಣ್ಣ ಪ್ರಮಾಣದ ಹೂಡಿಕೆಯನ್ನು ಮಾಡಿದರೂ ಕೂಡ ಈ ಸಣ್ಣ ಹೂಡಿಕೆಯೇ ಭವಿಷ್ಯದಲ್ಲಿ ಅವರ ಸಹಾಯಕ್ಕೆ ಬರುತ್ತದೆ. ಚಿನ್ನದ ಮೇಲೆ, ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳಲ್ಲಿ, ಸರ್ಕಾರದ ಹೂಡಿಕೆ ಯೋಜನೆಗಳಲ್ಲಿ ಅಥವಾ ಚೀಟಿಯಲ್ಲಿ ಹೂಡಿಕೆ ಮಾಡುವ ಅಭ್ಯಾಸವನ್ನು ಇಂದಿನ ಕೆಲವು ಯುವಜನರು ಕೂಡಾ ಹೊಂದಿದ್ದಾರೆ.
ಆದರೆ ಹೂಡಿಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವಾಗ ಅಥವಾ ಹೂಡಿಕೆ ಮಾಡುವ ಸಂದರ್ಭದಲ್ಲಿ ಇಂದಿನ ಯುವಜನತೆ ಹಲವಾರು ತಪ್ಪುಗಳನ್ನು ಮಾಡುತ್ತಾರೆ. ಮಾನಸಿಕವಾಗಿ ಕೆಲವು ಭಾವನಗಳಿಗೆ ಒಳಗಾಗಿ, ಸ್ನೇಹಿತರ ಒತ್ತಾಯದ ಮೇರೆಗೆ ಅಪಾಯಕಾರಿ ಹೂಡಿಕೆಯನ್ನು ಮಾಡಿ ಕೈಸುಟ್ಟುಕೊಂಡ ಅದೇಷ್ಟು ಯುವಕರು ಇಂದು ಇದ್ದಾರೆ.
ಸಾಮಾನ್ಯವಾಗಿ ನಾವು ಎಷ್ಟು ಸಣ್ಣ ವಯಸ್ಸಿನಲ್ಲಿ ಹೂಡಿಕೆ ಮಾಡಲು ಆರಂಭ ಮಾಡುತ್ತೇವೋ ವಯಸ್ಸಾದಂತೆ ಅಧಿಕ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ಹಾಗೆಯೇ ನಾವು ಸುರಕ್ಷಿತ ಹೂಡಿಕೆಯನ್ನು ಮಾಡಿದರೆ ನಮ್ಮ ಹಣವು ಕೂಡಾ ಉಳಿತಾಯವಾಗಲಿದೆ. ಆದರೆ ಇದಕ್ಕೆಲ್ಲ ಹಣಕಾಸು ಜ್ಞಾನವು ಕೂಡಾ ಅತೀ ಮುಖ್ಯ. ಹಣಕಾಸು ಸಂಬಂಧಿತ ವಿಚಾರಗಳ ಜ್ಞಾನ ಇದ್ದರೆ ಹೂಡಿಕೆ ಮಾಡುವುದು ಸುಲಭವಾಗಲಿದೆ, ಸುರಕ್ಷಿತವಾಗಲಿದೆ. ಆದರೆ ಹೂಡಿಕೆ ಮಾಡುವಾಗ ಯುವಜನತೆ ಮಾಡುವ ಪ್ರಮುಖ ಐದು ತಪ್ಪನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ....
ಹಣಕಾಸು ಜ್ಞಾನವಿಲ್ಲದೆಯೇ ಹೂಡಿಕೆ
ಇನ್ನು ಹೂಡಿಕೆ ವಿಚಾರಕ್ಕೆ ಬಂದಾಗ ಯುವಜನತೆ ಮಾಡುವ ಪ್ರಮುಖ ತಪ್ಪು ಹಣಕಾಸು ಜ್ಞಾನವಿಲ್ಲದೆಯೇ ಹೂಡಿಕೆ ಮಾಡುವುದು ಆಗಿದೆ. ಯಾರೇ ಆದರೂ ಪ್ರಸ್ತುತ ಹಣಕಾಸು ಸ್ಥಿತಿ ಹೇಗಿದೆ?, ಹಣಕಾಸು ವಿಚಾರದಲ್ಲಿ ಯಾವೆಲ್ಲ ಬೆಳವಣಿಗೆಯಾಗಿದೆ, ಎಲ್ಲಿ ಹೂಡಿಕೆ ಸುರಕ್ಷಿತ ಎಂಬುವುದನ್ನು ತಿಳಿಯದೆಯೇ ಹೂಡಿಕೆ ಮಾಡುವುದು ಸುರಕ್ಷಿತವಲ್ಲ. ಆದರೆ ಇಂದಿನ ಯುವಜನತೆ ಯಾವುದೇ ಹಣಕಾಸು ಜ್ಞಾನ ಇಲ್ಲದೆಯೇ ಹೂಡಿಕೆಯನ್ನು ಮಾಡಿ ಆ ಬಳಿಕ ನಷ್ಟವನ್ನು ಕಾಣುತ್ತಾರೆ. ಆದ್ದರಿಂದ ಹಣಕಾಸು ಜ್ಞಾನ ಹೊಂದುವುದು ಅತೀ ಮುಖ್ಯವಾಗಿದೆ. ವೈಯಕ್ತಿಕ ಹಣಕಾಸು, ಹೂಡಿಕೆ ಮೊದಲಾದ ವಿಚಾರದಲ್ಲಿ ಸಾಮಾನ್ಯ ಜ್ಞಾನವಾದರೂ ನಿಮಗೆ ಇರುವುದು ಅತೀ ಮುಖ್ಯವಾಗಿದೆ. ಹಾಗೆಯೇ ನೀವು ಇದಕ್ಕಾಗಿ ತಜ್ಞರ ಸಲಹೆಯನ್ನು ಕೂಡಾ ಪಡೆಯಬಹುದು. ನಿಮಗೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿಯೇ ಈ ಬಗ್ಗೆ ಮಾಹಿತಿಗಳು ಲಭ್ಯವಾಗಲಿದೆ. ಹೂಡಿಕೆ ಸಂಬಂಧಿತ ಹಲವಾರು ಪುಸ್ತಕಗಳು ಇದೆ. ಇದನ್ನು ನೋಡಿಕೊಂಡು ನೀವು ಜ್ಞಾನವನ್ನು ಬೆಳೆಸಬಹುದು.
ಯಾವುದೇ ಗುರಿ, ಹೂಡಿಕೆ ಯೋಜನೆ ಇಲ್ಲದಿರುವುದು?
ಹೂಡಿಕೆ ವಿಚಾರದಲ್ಲಿ ಯುವಕರು ಮಾಡುವ ಮತ್ತೊಂದು ಪ್ರಮುಖ ತಪ್ಪು ಯಾವುದೇ ಹಣಕಾಸು ಗುರಿ ಅಥವಾ ಯೋಜನೆ ಇಲ್ಲದೆ ಇರುವುದು. ಯಾವುದೇ ಒಂದು ಸರಿಯಾದ ಗುರಿ ಇಲ್ಲದೆ ಹೂಡಿಕೆ ಮಾಡಿದರೆ ಅದು ಯಾವುದೇ ಪ್ರಯೋಜನವಿಲ್ಲದ ಹೂಡಿಕೆ ಆಗಲಿದೆ. ಹೂಡಿಕೆ ಯಾವ ಉದ್ದೇಶದಿಂದ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಯಾವುದೇ ಒಂದು ನಿರ್ಧಾರವನ್ನು ಮಾಡಿರುವುದಿಲ್ಲ. ಅಂತಿಮವಾಗಿ ಹೂಡಿಕೆ ಮಾಡಿದ ಹಣ ಕೈಗೆ ಬಂದಾಗ ಹಣವನ್ನು ದುಂದುವೆಚ್ಚ ಮಾಡಿಬಿಡುತ್ತಾರೆ ಅಥವಾ ಹೂಡಿಕೆ ಮಾಡುವ ಸಂದರ್ಭದಲ್ಲೇ ಅಸುರಕ್ಷಿತ, ಅಪಾಯಕಾರಿ ಹೂಡಿಕೆ ಮಾಡುತ್ತಾರೆ. ಸರಿಯಾದ ಹೂಡಿಕೆ ಪ್ಲ್ಯಾನ್ ಇಲ್ಲದೆ ಉತ್ತಮ ಹೂಡಿಕೆಯನ್ನು ಆಯ್ಕೆ ಮಾಡಲು ಕಷ್ಟವಾಗಲಿದೆ. ನೀವು ಹೂಡಿಕೆ ವಿಚಾರದಲ್ಲಿ ಗಂಭೀರವಾಗಿದ್ದರೆ, ಹೂಡಿಕೆ ಮಾಡುವ ಮುನ್ನವೇ ಸರಿಯಾದ ಪ್ಲ್ಯಾನ್ ಅನ್ನು ಮಾಡಿಕೊಳ್ಳಿ. ಅದಕ್ಕೂ ಮುಖ್ಯವಾಗಿ ನಿಮ್ಮ ಯೋಜನೆಗೆ ಬದ್ಧರಾಗಿರಿ. ಮನಸ್ಸು ಚಂಚಲ ಮಾಡಿಕೊಂಡು ಯೋಜನೆಯನ್ನೇ ಬದಲಾವಣೆ ಮಾಡಿಕೊಳ್ಳಬೇಡಿ.
ಕಡಿಮೆ ಅವಧಿಯಲ್ಲೇ ಲಾಭ ಪಡೆಯುವ ಉದ್ದೇಶ
ಕಡಿಮೆ ಅವಧಿಯಲ್ಲೇ ಲಾಭವನ್ನು ಪಡೆಯುವುದು ಉತ್ತಮ. ಆದರೆ ಈ ಲಾಭ ತಾತ್ಕಾಲಿಕವಾಗಿದೆ. ಯುವಜನರು ತಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರು ಹೂಡಿಕೆ ಮಾಡಿ ಶೀಘ್ರ ಲಾಭವನ್ನು ಪಡೆಯುವುದನ್ನು ಗಮನಿಸುತ್ತಾರೆ. ತಾವು ಕೂಡಾ ಶೀಘ್ರವಾಗಿ ಲಾಭವನ್ನು ಗಳಿಸಬೇಕು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಆದರೆ ಈ ಶೀಘ್ರ ಲಾಭ ಗಳಿಸುವ ಹೂಡಿಕೆ ಅಪಾಯಕಾರಿಯಾಗಿರಬಹುದು. ಹೂಡಿಕೆ ಎಂದಿಗೂ ದೀರ್ಘಾವಧಿಯಾಗಿದ್ದರೆ ಲಾಭವು ಕೂಡಾ ಅಧಿಕ ಲಭ್ಯವಾಗಲಿದೆ. ಷೇರು ಮಾರುಕಟ್ಟೆಯಲ್ಲಾದರೆ ನೀವು ಷೇರು ಬೆಲೆ ಹೆಚ್ಚಾದಾಗ ಷೇರು ಮಾರಾಟ ಮಾಡಿ ಲಾಭವನ್ನು ಗಳಿಸಬಹುದು. ಆದರೆ ಅದುವೇ ಪ್ರಾಥಮಿಕ ಉದ್ದೇಶವಾಗಿರಬಾರದು. ನೀವು ಮಾಡುವ ಹೂಡಿಕೆ ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗಬೇಕು.
ಒಂದೇ ಕಡೆ ಹೂಡಿಕೆ ಅಪಾಯಕಾರಿಯೇ?
ಕೆಲವು ಯುವ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಒಂದೇ ಸಂಸ್ಥೆಯ ಷೇರನ್ನು ಖರೀದಿ ಮಾಡಿ, ಅದನ್ನೇ ನಂಬಿಕೊಂಡಿರುತ್ತಾರೆ. ನಾವು ಒಂದೇ ಸಂಸ್ಥೆ, ಒಂದೇ ವಲಯ, ಒಂದೇ ಹಣಕಾಸು ಉತ್ಪನ್ನದ ಮೇಲೆ ಹೂಡಿಕೆ ಮಾಡುವುದು ಅತೀ ಅಪಾಯಕಾರಿಯಾಗಿದೆ. ನಮ್ಮ ಹೂಡಿಕೆಯನ್ನು ಬೇರೆ ಬೇರೆ ವಲಯ, ಬೇರೆ ಬೇರೆ ಸಂಸ್ಥೆ ಹಾಗೂ ಬೇರೆ ಬೇರೆ ಉತ್ಪನ್ನದ ಮೇಲೆ ಮಾಡುವುದು ಎಂದಿಗೂ ಸುರಕ್ಷಿತ. ನಾವು ಒಂದೇ ಕಡೆ ಹೂಡಿಕೆ ಮಾಡಿದರೆ ನಷ್ಟವಾದರೆ ಎಲ್ಲ ಹೂಡಿಕೆಯು ನಷ್ಟವಾಗಲಿದೆ. ಬೇರೆ ಬೇರೆ ಕಡೆ ಹೂಡಿಕೆ ಮಾಡಿದರೆ ಒಂದರಲ್ಲಿ ನಷ್ಟವಾದರೂ ಇನ್ನೊಂದರಲ್ಲಿ ಲಾಭವಾಗಬಹುದು.
ಭಾವನೆ ಆಧಾರದಲ್ಲಿ ಹೂಡಿಕೆ ಬಹಳ ಅಪಾಯ
ಹಲವಾರು ಯುವಜನರು ತಾವು ಯಾವ ಉತ್ಪನ್ನವನ್ನು ಹೆಚ್ಚು ಇಷ್ಟಪಡುತ್ತಾರೋ ಅಥವಾ ಯಾವ ಸಂಸ್ಥೆ ತಮ್ಮ ನೆಚ್ಚಿನ ಸಂಸ್ಥೆಯಾಗಿರುತ್ತದೋ ಆ ಭಾವನೆಗೆ ಜೋತು ಬಿದ್ದು ಹೂಡಿಕೆ ಮಾಡುತ್ತಾರೆ. ಅದರಲ್ಲಿ ಹೂಡಿಕೆ ಮಾಡುವುದು ಉತ್ತಮವೇ ಸುರಕ್ಷಿತವೇ ಎಂದು ನೋಡಿಕೊಳ್ಳದೆಯೇ ಹೂಡಿಕೆ ಮಾಡಿಬಿಡುತ್ತಾರೆ. ಇದು ಹಣ ನಷ್ಟವಾಗಲು ಕಾರಣವಾಗಬಹುದು. ನಾವು ಎಂದಿಗೂ ಭಾವನೆಯ ಆಧಾರದಲ್ಲಿ ಹೂಡಿಕೆ ಮಾಡಬಾರದು. ಹೂಡಿಕೆ ಎಂದಿಗೂ ನಮಗೆ ಲಾಭ ನೀಡುವುದೇ ಎಂದು ಆಲೋಚನೆ ಮಾಡಿಕೊಂಡು ಮಾಡಬೇಕಾಗುತ್ತದೆ. ಹೂಡಿಕೆ ಬಗ್ಗೆ ನಿರ್ಧಾರ ಮಾಡುವುದು ಸುಲಭವೇನಲ್ಲ. ನೀವು ಹೂಡಿಕೆಯ ಬಗ್ಗೆ ತಜ್ಞರ ಬಳಿ ಮಾಹಿತಿ ಪಡೆದು, ಪುಸ್ತಕಗಳನ್ನು ಓದಿ, ಪ್ರಸ್ತುತ ಹಣಕಾಸು ಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಬಹುದು.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications