ನಾಲ್ಕು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಇತ್ತೀಚೆಗೆ ತನ್ನ ಗ್ರಾಹಕರಿಗೆ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಬಡ್ಡಿದರ ಪರಿಷ್ಕರಿಸಿದ ಪ್ರಮುಖ ಬ್ಯಾಂಕ್‌ಗಳಾಗಿದೆ.
ಫಿಕ್ಸಿಡ್ ಡೆಪಾಸಿಟ್‌ಗಳು ಭಾರತದಲ್ಲಿ ಹಲವಾರು ಹೂಡಿಕೆದಾರರಿಗೆ ಅತ್ಯಂತ ಜನಪ್ರಿಯ ಹೂಡಿಕೆ ಸಾಧನಗಳಾಗಿವೆ. ಇವುಗಳು ಅಪಾಯ ಮುಕ್ತವಾದ ಹೂಡಿಕೆ ಆಯ್ಕೆಗಳು ಮಾತ್ರವಲ್ಲದೆ, ಆಕರ್ಷಕ ಬಡ್ಡಿಯೊಂದಿಗೆ ಅಂತಿಮವಾಗಿ ಮೆಚ್ಯೂರಿಟಿ ವೇಳೆ ಉತ್ತಮ ಬಡ್ಡಿದರವನ್ನು ನೀಡುತ್ತದೆ. ಪರಿಷ್ಕರಣೆ ಬಳಿಕ ಈ ಪ್ರಮುಖ ಬ್ಯಾಂಕ್‌ಗಳ ಬಡ್ಡಿದರ ಎಷ್ಟಿದೆ ಎಂಬ ವಿವರ ಇಲ್ಲಿದೆ. ಮುಂದೆ ಓದಿ....

1. ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಬಡ್ಡಿದರ
ಬ್ಯಾಂಕ್ ಆಫ್ ಬರೋಡಾ ತನ್ನ ಬಡ್ಡಿದರಗಳನ್ನು ಅಕ್ಟೋಬರ್ 30, 2023 ರಂದು ಪರಿಷ್ಕರಿಸಿದೆ. ಬ್ಯಾಂಕ್ 1 ವರ್ಷಕ್ಕಿಂತ ಕಡಿಮೆ ಎಫ್‌ಡಿಗೆ ಶೇಕಡ 6.25 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಗ್ರಾಹಕರು 1-2 ವರ್ಷಗಳ ಅವಧಿಗೆ ಎಫ್‌ಡಿಗಳಿಗೆ ಶೇಕಡ 7.15, 2-3 ವರ್ಷಗಳಲ್ಲಿ ಮೆಚ್ಯೂರಿಟಿಯಾಗುವ ಎಫ್‌ಡಿಗಳಿಗೆ ಶೇಕಡ 7.25 ಮತ್ತು 3-5 ವರ್ಷಗಳ ಅವಧಿ ಎಫ್‌ಡಿಗೆ ಶೇಕಡ 6.50 ಬಡ್ಡಿದರವನ್ನು ಪಡೆಯಬಹುದು.
ಇನ್ನು ಹಿರಿಯ ನಾಗರಿಕರು 2-3 ವರ್ಷಗಳ ಅವಧಿ ಎಫ್‌ಡಿ ಮೇಲೆ ಗರಿಷ್ಠ ಶೇಕಡ 7.75 ಬಡ್ಡಿಯನ್ನು ಪಡೆಯಬಹುದು. ಸಾಮಾನ್ಯ ನಾಗರಿಕರು ಅದೇ ಅವಧಿಗೆ ಗರಿಷ್ಠ ಶೇಕಡ 7.25 ಬಡ್ಡಿದರವನ್ನು ಪಡೆಯಬಹುದು. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎನ್‌ಆರ್‌ಒ ಡೆಪಾಸಿಟ್‌ಗಳ ಮೇಲೆ ಈ ಬಡ್ಡಿದರವು ಅನ್ವಯವಾಗುತ್ತದೆ.
2. ಬ್ಯಾಂಕ್ ಆಫ್ ಮಹಾರಾಷ್ಟ್ರ ಎಫ್‌ಡಿ ಬಡ್ಡಿ ದರ
ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನ ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿದರಗಳನ್ನು ಅಕ್ಟೋಬರ್ 12 ರಂದು ಪರಿಷ್ಕರಿಸಿತು. ಪರಿಷ್ಕರಣೆಯ ನಂತರ, ಬ್ಯಾಂಕ್ 1 ವರ್ಷದ ಎಫ್‌ಡಿ ಮೇಲೆ ಶೇಕಡ 7, 1-2 ವರ್ಷಗಳ ಎಫ್‌ಡಿ ಮೇಲೆ ಶೇಕಡ 6.75 ಬಡ್ಡಿದರ, 2-3 ವರ್ಷಗಳ ಎಫ್‌ಡಿ ಮೇಲೆ ಶೇಕಡ 6.25 ಬಡ್ಡಿದರವನ್ನು ನೀಡುತ್ತಿದೆ.
ಇನ್ನು 3-5 ವರ್ಷಗಳ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 6 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನ ಗ್ರಾಹಕರಿಗೆ ವಿಶೇಷ ಯೋಜನೆಗಳನ್ನು ನೀಡುತ್ತಿದ್ದು, ಇದರಲ್ಲಿ 200 ದಿನಗಳ ಎಫ್‌ಡಿ ಮೇಲೆ ಶೇಕಡ 7 ರಷ್ಟು ಬಡ್ಡಿದರ ನೀಡಲಾಗುತ್ತದೆ. 400 ದಿನಗಳ ಎಫ್‌ಡಿ ಮೇಲೆ ಶೇಕಡ 6.7 ರಷ್ಟು ಬಡ್ಡಿದರವನ್ನು ಪಡೆಯಬಹುದು.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಪ್ರಕಾರ, "ಭಾರತೀಯ ಹಿರಿಯ ನಾಗರಿಕರಿಗೆ 91 ದಿನಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಎಲ್ಲಾ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಶೇಕಡ 0.50 ರಷ್ಟು ಹೆಚ್ಚುವರಿ ಬಡ್ಡಿದರವನ್ನು ನೀಡಲಾಗುತ್ತದೆ," ಎಂದು ಬ್ಯಾಂಕ್ ಮಾಹಿತಿ ನೀಡಿದೆ.
3. ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ ಬಡ್ಡಿ ದರ
ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿ ದರಗಳನ್ನು ನವೆಂಬರ್ 1, 2023 ರಂದು ಪರಿಷ್ಕರಿಸಿದೆ. 1 ವರ್ಷದ ಅವಧಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 5.75, 1-2 ವರ್ಷಗಳ ಎಫ್‌ಡಿ ಮೇಲೆ ಶೇಕಡ 7.25, 2-3 ವರ್ಷಗಳ ಎಫ್‌ಡಿ ಶೇಕಡ 6.75, 3-5 ವರ್ಷಗಳ ಎಫ್‌ಡಿ ಮೇಲೆ ಶೇಕಡ 6.50 ಬಡ್ಡಿದರವನ್ನು ನೀಡಲಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಹೆಚ್ಚುವರಿಗಾಗಿ 50 ಬಿಪಿಎಸ್ ಬಡ್ಡಿದರವನ್ನು ನೀಡಲಾಗುತ್ತದೆ.
4. ಕೆನರಾ ಬ್ಯಾಂಕ್ ಎಫ್‌ಡಿ ಬಡ್ಡಿ ದರ
ಕೆನರಾ ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರಗಳನ್ನು ಅಕ್ಟೋಬರ್ 27, 2023 ರಂದು ಪರಿಷ್ಕರಿಸಿದೆ. ಪರಿಷ್ಕರಣೆಯ ನಂತರ, ಕೆನರಾ ಬ್ಯಾಂಕ್ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 6.25 ಬಡ್ಡಿದರವನ್ನು ನೀಡುತ್ತಿದೆ. 1-2 ವರ್ಷಗಳ ಅವಧಿಯ ಎಫ್‌ಡಿಗಳಿಗೆ ಶೇಕಡ 7.25, 2-3 ವರ್ಷಗಳ ಎಫ್‌ಡಿ ಮೇಲೆ ಶೇಕಡ 6.85, 3-5 ವರ್ಷಗಳ ಎಫ್‌ಡಿ ಮೇಲೆ ಶೇಕಡ 6.8 ಬಡ್ಡಿದರವನ್ನು ಈ ಬ್ಯಾಂಕ್ ನೀಡುತ್ತದೆ.
ಇನ್ನು ಕಾಲೇಬಲ್ ಡೆಪಾಸಿಟ್‌ಗಳಿಗೆ ಸಾಮಾನ್ಯ ನಾಗರಿಕರು ಶೇಕಡ 7.25 ಮತ್ತು ಹಿರಿಯ ನಾಗರಿಕರು ಶೇಕಡ 7.75 ಬಡ್ಡಿದರ ಪಡೆಯಬಹುದು. ಈ ಬಡ್ಡಿದರ 444 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಅನ್ವಯವಾಗುತ್ತದೆ. ಇನ್ನು ನಾನ್ ಕಾಲೇಬಲ್ (ಒಂದು ಕೋಟಿ ರೂಪಾಯಿಗಿಂತ ಅಧಿಕ) ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರು ಶೇಕಡ 7.40 ರಷ್ಟು, ಹಿರಿಯ ನಾಗರಿಕರು ಶೇಕಡ 7.90 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಇದು ಕೂಡಾ 444 ದಿನಗಳ ಎಫ್‌ಡಿಯಾಗಿದೆ.


Click it and Unblock the Notifications