ನಾವು ಹೂಡಿಕೆಯನ್ನು ಮಾಡುವ ವಿಚಾರಕ್ಕೆ ಬಂದಾಗ ನಾವು ಮಾಡಿದ ಹೂಡಿಕೆಯು ನಮಗೆ ಕಷ್ಟಕಾಲದಲ್ಲಿ ಎಷ್ಟು ಸಹಾಯಕವಾಗಲಿದೆ ಎಂದು ನೋಡುತ್ತೇವೆ. ಹಾಗಿದ್ದಾಗ ನಮಗೆ ಉತ್ತಮ ಆಯ್ಕೆಯು ಜೀವ ವಿಮೆ ಆಗಿದೆ. ಈ ಜೀವ ವಿಮೆಯು ಡೆತ್ ಬೆನಿಫಿಟ್ ಮಾತ್ರ ನೀಡುತ್ತದೆ ಎಂಬ ಸಾಮಾನ್ಯ ತಪ್ಪು ಕಲ್ಪನೆಯು ಜನರಲ್ಲಿದೆ.
ಜೀವ ವಿಮೆಯು ಕೇವಲ ರಕ್ಷಣೆಗಿಂತ ಅಧಿಕ ಲಾಭವನ್ನು ಹೂಡಿಕೆದಾರರಿಗೆ ನೀಡುತ್ತದೆ. ಈ ಬಗ್ಗೆ ಜನರು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇದು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ನಿರ್ಣಾಯಕ ಸಾಧನವಾಗಿದೆ. ಈ ಲೇಖನದಲ್ಲಿ ನಾವು ಜೀವ ವಿಮೆಯು ಹೇಗೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಹಾಯಕವಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ, ಮುಂದೆ ಓದಿ....

ಪರಿಣಾಮಕಾರಿ ಹೂಡಿಕೆ ಸಾಧನವಾದ ಜೀವ ವಿಮೆ
ಜೀವ ವಿಮೆಯು ಕೇವಲ ಒಬ್ಬರ ಜೀವವನ್ನು ಕಾಪಾಡುವುದಲ್ಲ. ಇದು ಒಂದು ದೃಢವಾದ ಆರ್ಥಿಕ ಸಾಧನವಾಗಿದೆ. ಈ ಹೂಡಿಕೆಯು ಬೆಳವಣಿಗೆಯನ್ನು ಕೂಡಾ ಕಾಣುತ್ತದೆ. ಅಂದರೆ ಹೂಡಿಕೆ ಮಾಡಿದ ಹಣಕ್ಕಿಂತ ಅಧಿಕ ಹಣ ನಮಗೆ ರಿಟರ್ನ್ ಸಿಗುತ್ತದೆ. ದತ್ತಿ ಯೋಜನೆಗಳು ಮತ್ತು ಯುನಿಟ್-ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್‌ಗಳು (ಯುಲಿಪ್‌ಗಳು) ನಂತಹ ವಿವಿಧ ಜೀವ ವಿಮಾ ಉತ್ಪನ್ನಗಳಿವೆ.
ಇಂತಹ ಜೀವ ವಿಮೆಗಳು ನಮಗೆ ಜೀವ ರಕ್ಷಣೆಯ ಜೊತೆಗೆ ಉತ್ತಮ ಆದಾಯವನ್ನು ನೀಡುತ್ತದೆ. ಆದಾಯವು ಮಾರುಕಟ್ಟೆಯ ಏರಿಳಿತದೊಂದಿಗೆ ಸಂಬಂಧ ಹೊಂದಿಲ್ಲ, ಆದ್ದರಿಂದ ಇವುಗಳು ಸುರಕ್ಷಿತ ಮತ್ತು ಸ್ಥಿರವಾಗಿದೆ. ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸ್ಥಿರ ವೇದಿಕೆ ರೂಪಿಸುತ್ತದೆ.
ಜೀವ ವಿಮೆ ಮೂಲಕ ಸಾಲ ಪರಿಹಾರ
ಆರ್ಥಿಕ ಸ್ವಾತಂತ್ರ್ಯವೆಂದರೆ ಸಂಪತ್ತು ಕ್ರೋಢೀಕರಣ ಮಾತ್ರವಲ್ಲ, ಸಾಲದಿಂದ ಮುಕ್ತವಾಗುವುದು ಆಗಿದೆ. ಜೀವ ವಿಮಾ ಸೇವೆಗಳು ಸಾಲ, ಅಡಮಾನದಿಂದ ದೂರವಾಗಲು ಒಂದು ಅವಕಾಶವನ್ನು ನೀಡುತ್ತದೆ. ಇದು ಹಣಕಾಸಿನ ಹೊರೆಯನ್ನು ಗಣನೀಯವಾಗಿ ಇಳಿಸುತ್ತದೆ.
ಪಾಲಿಸಿಗಳು ಸಾಮಾನ್ಯವಾಗಿ ಡೆತ್ ಬೆನಿಫಿಟ್ ಷರತ್ತನ್ನು ಹೊಂದಿರುತ್ತವೆ. ಪಾಲಿಸಿದಾರರು ಸಾವನ್ನಪ್ಪಿದರೆ, ವಿಮೆ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ. ಈ ಮೊತ್ತವನ್ನು ಯಾವುದೇ ಸಾಲ ಬಾಕಿ ಇದ್ದರೂ ಅದನ್ನು ಪಾವತಿಸಲು ಬಳಸಬಹುದಾಗಿದೆ. ಜೀವ ವಿಮೆಯು ಕುಟುಂಬವನ್ನು ಆರ್ಥಿಕ ಸ್ಥಿರತೆಯಿಂದ ಕಾಪಾಡುತ್ತದೆ.
ಜೀವ ವಿಮೆ ಮೂಲಕ ನಿವೃತ್ತಿ ಯೋಜನೆ
ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಮಹತ್ವದ ಹೆಜ್ಜೆಗಳಲ್ಲಿ ಒಂದು ನಿವೃತ್ತಿಯ ತಯಾರಿಯಾಗಿದೆ. ಜೀವ ವಿಮಾ ಯೋಜನೆಗಳು, ಈ ಅಗತ್ಯವನ್ನು ಅದ್ಭುತವಾಗಿ ಪೂರೈಸುತ್ತವೆ. ಪಿಂಚಣಿ ಅಥವಾ ವರ್ಷಾಶನ ಯೋಜನೆಗಳಂತಹವುಗಳು ನಿವೃತ್ತಿಯ ನಂತರ ಆದಾಯ ಪಡೆಯಲು ಸಹಾಯಕವಾಗುತ್ತದೆ. ಹೀಗಾಗಿ ನಿಮಗೆ ವಯಸ್ಸಾದಾಗಲೂ ಆರ್ಥಿಕ ಸ್ವಾತಂತ್ರ್ಯವಿರುತ್ತದೆ.
ಜೀವ ವಿಮೆಯ ತೆರಿಗೆ ಪ್ರಯೋಜನಗಳು
ಜೀವ ವಿಮೆಯ ಮತ್ತೊಂದು ಗಣನೀಯ ಆರ್ಥಿಕ ಪ್ರಯೋಜನವೆಂದರೆ ಅದರ ತೆರಿಗೆ ಪ್ರಯೋಜನಗಳು ಆಗಿದೆ. ಪಾವತಿಸಿದ ಪ್ರೀಮಿಯಂಗಳು ಮತ್ತು ಜೀವ ವಿಮಾ ಪಾಲಿಸಿಗಳಲ್ಲಿ ಗಳಿಸಿದ ಆದಾಯ ಎರಡೂ ಆದಾಯ ತೆರಿಗೆ ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ. ನಿಮ್ಮ ಉಳಿತಾಯವನ್ನು ಇನ್ನಷ್ಟು ಹೆಚ್ಚಿಸಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಹಾದಿಯಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತದೆ.
ಜೀವ ವಿಮೆ, ಅದರ ಪ್ರಯೋಜನದೊಂದಿಗೆ ನಿಸ್ಸಂದೇಹವಾಗಿ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಒಂದು ಮೆಟ್ಟಿಲು ಆಗಿರಬಹುದು. ಇದು ಆರ್ಥಿಕ ರಕ್ಷಣೆಯನ್ನು ಒದಗಿಸುವ, ಸಾಲದಿಂದ ತಪ್ಪಿಸಲು ಸಹಾಯವಾಗುವ, ನಿವೃತ್ತಿ ಯೋಜನೆಯಲ್ಲಿ ಸಹಾಯ ಮಾಡುವ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ಸಮರ್ಥ ಸಾಧನವಾಗಿದೆ.


Click it and Unblock the Notifications