For Quick Alerts
ALLOW NOTIFICATIONS  
For Daily Alerts

ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ: ತಿಂಗಳಿಗೆ EMI ಎಷ್ಟು ಪಾವತಿಸಬೇಕು?

|

ಜಗತ್ತಿನಲ್ಲಿ ಅತಿ ಹೆಚ್ಚಿನ ಚಿನ್ನದ ಆಮದುದಾರ ರಾಷ್ಟ್ರಗಳಲ್ಲಿ ಭಾರತವು ಕೂಡ ಒಂದು. ಚಿನ್ನವು ಕೇವಲ ಮದುವೆ ಸಮಾರಂಭಗಳಿಗೆ ಅಷ್ಟೇ ಬಳಕೆಯಾಗದೆ, ಹೂಡಿಕೆಯ ಜೊತೆಗೆ ಕಷ್ಟ ಕಾಲದಲ್ಲಿ ನೆರವಾಗುವಂತಹ ಸ್ವತ್ತಾಗಿದೆ.

ಹೀಗೆ ಖರೀದಿಸಿದ ಚಿನ್ನದ ಮೇಲೆ ಕಷ್ಟ ಕಾಲದಲ್ಲಿ ಸಾಲ ಕೂಡ ಪಡೆಯಬಹುದು. ಬಹುಪಾಲು ಭಾರತೀಯರಿಗೆ, ವಿಶೇಷವಾಗಿ ಕೃಷಿ ಮತ್ತು ಇತರೆ ಅನೌಪಚಾರಿಕ ವಿಭಾಗಗಳಿಂದ ಆದಾಯ ಗಳಿಸುವ ಕುಟುಂಬಗಳಿಗೆ ಸಾಲ ತೆಗೆದುಕೊಳ್ಳಲು ಚಿನ್ನ ಪ್ರಮುಖ ಮೂಲವಾಗಿದೆ.

ಯಾವುದೇ ಹೆಚ್ಚಿನ ಆದಾಯ ಬರದೆ ಇರುವ ಜನರು, ಸ್ವಂತ ಉದ್ಯೋಗ ಮಾಡುತ್ತಿರುವವರು , ಗೃಹಿಣಿಯರು ನಿರಂತರ ಆದಾಯ ಮೂಲದ ಕೊರತೆಯನ್ನ ಅನುಭವಿಸುತ್ತಿರುತ್ತಾರೆ. ಇವರಿಗೆ ದೊಡ್ಡ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆಯುವುದು ತುಂಬಾ ಕಷ್ಟಸಾಧ್ಯ. ಇದರ ಪರಿಣಾಮ ಇವರು ಬ್ಯಾಂಕುಗಳಲ್ಲಿ ಮನೆಯಲ್ಲಿದ್ದ ಚಿನ್ನವನ್ನ ಅಡವಿಟ್ಟು ಸಾಲಗಳನ್ನು ಪಡೆಯುತ್ತಾರೆ.

ಚಿನ್ನದ ಮೇಲೆ ತ್ವರಿತ ಸಾಲ ಸಿಗುವುದು

ಚಿನ್ನದ ಮೇಲೆ ತ್ವರಿತ ಸಾಲ ಸಿಗುವುದು

ನೀವು ತ್ವರಿತ ಸಾಲವನ್ನು ಪಡೆಯುವ ಆಯ್ಕೆಗಳಲ್ಲಿ ಚಿನ್ನದ ಸಾಲ ಕೂಡ ಒಂದಾಗಿದೆ. ಬ್ಯಾಂಕೇತರ ಹಣಕಾಸು ಕಂಪನಿಗಳಾದ ಮುತ್ತೂಟ್ ಮತ್ತು ಮಣಪ್ಪುರಂ ಫೈನಾನ್ಸ್ ಕೋವಿಡ್-19 ಸಾಂಕ್ರಾಮಿಕ ವರ್ಷದಲ್ಲಿ ಶೇಕಡಾ 20 ರಿಂದ 24ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹೀಗಾಗಿಯೇ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಚಿನ್ನದ ಸಾಲಗಳ ಬಗ್ಗೆ ಹೆಚ್ಚು ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿವೆ.

ಯಾವ ಬ್ಯಾಂಕುಗಳು ಅಗ್ಗದ ಚಿನ್ನದ ಸಾಲವನ್ನು ನೀಡುತ್ತಿವೆ. ಅಲ್ಲದೆ, ನಿಮ್ಮ ಸಾಲದ ಇಎಂಐ ಎಷ್ಟು ಎಂದು ಮುಂದೆ ತಿಳಿಯಿರಿ.

 

ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ

ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ

ಪ್ರಸ್ತುತ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ 5 ಲಕ್ಷ ರೂ.ವರೆಗಿನ ಅಗ್ಗದ ಬಡ್ಡಿದರದಲ್ಲಿ ಚಿನ್ನದ ಸಾಲ ಲಭ್ಯವಿದೆ. ಈ ಬ್ಯಾಂಕಿನಲ್ಲಿ ಚಿನ್ನದ ಸಾಲವು ಕೇವಲ ಶೇಕಡಾ 7ರಷ್ಟು ಬಡ್ಡಿದರದಲ್ಲಿ ಲಭ್ಯವಿದೆ. ಸಾಲದ ಮರುಪಾವತಿ ಅವಧಿಯನ್ನು 3 ವರ್ಷಗಳಲ್ಲಿ ಇರಿಸಲಾಗಿದೆ.

ಆದರೆ ನೀವು ಇದೇ ಅವಧಿಯಲ್ಲಿ ಮತ್ತು ಬಡ್ಡಿದರಕ್ಕೆ 5 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. 3 ವರ್ಷಗಳ ಅವಧಿಗೆ 5 ಲಕ್ಷ ರೂ.ಗಳ ಸಾಲಕ್ಕೆ ನಿಮ್ಮ ಮಾಸಿಕ ಇಎಂಐ 15,439 ರೂ. ಇರಲಿದೆ.

 

ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಸ್‌ಬಿಐ

ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಸ್‌ಬಿಐ

ಸರ್ಕಾರಿ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ ಶೇಕಡಾ 7.35 ದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿದೆ. ಮೂರು ವರ್ಷಗಳ ಅವಧಿಯ ನಿಮ್ಮ ಸಾಲದ ಇಎಂಐ 15,519 ರೂ. ರಷ್ಟಿದೆ. ಇದರ ನಂತರದಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಮೂರನೇ ಸ್ಥಾನದಲ್ಲಿದೆ. ಎಸ್‌ಬಿಐ ಶೇ. 7.5ರಷ್ಟು ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿದೆ. ಈ ಬಡ್ಡಿದರದಲ್ಲಿ ನಿಮ್ಮ ಇಎಂಐ 15,553 ರೂಪಾಯಿ ಆಗಿರುತ್ತದೆ.

ಕೆನರಾ ಬ್ಯಾಂಕ್‌ನಲ್ಲಿ ಚಿನ್ನದ ಸಾಲ

ಕೆನರಾ ಬ್ಯಾಂಕ್‌ನಲ್ಲಿ ಚಿನ್ನದ ಸಾಲ

ಅಗ್ಗದ ಚಿನ್ನದ ಸಾಲವನ್ನು ನೀಡುವ ಬ್ಯಾಂಕುಗಳಲ್ಲಿ, ನಾಲ್ಕನೇ ಸ್ಥಾನದಲ್ಲಿ ಕೆನರಾ ಬ್ಯಾಂಕ್‌ ಇದೆ. ಈ ಬ್ಯಾಂಕ್ ಶೇ 7.65 ರಷ್ಟು ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತಿದೆ. ಮೂರು ವರ್ಷಗಳ ಅವಧಿಗೆ ನಿಮ್ಮ ಸಾಲದ ಮಾಸಿಕ ಇಎಂಐ 15,588 ರೂ.

ಕರ್ನಾಟಕ ಬ್ಯಾಂಕ್‌

ಕರ್ನಾಟಕ ಬ್ಯಾಂಕ್‌

ಕರ್ನಾಟಕ ಬ್ಯಾಂಕ್‌ನಲ್ಲಿ ಶೇ .8.49 ರಷ್ಟು ಬಡ್ಡಿ ದರದಲ್ಲಿ ಚಿನ್ನದ ಸಾಲ ಲಭ್ಯವಿದೆ. ನಿಮ್ಮ ಮಾಸಿಕ ಇಎಂಐ 15,781 ರೂ. ನಷ್ಟಿದೆ. ಅದೇ ಸಮಯದಲ್ಲಿ, ಇಂಡಿಯನ್ ಬ್ಯಾಂಕ್ ಶೇ .8.50 ರಷ್ಟು ಬಡ್ಡಿದರವನ್ನು ಹೊಂದಿದೆ. ಅದರಂತೆ, 5 ಲಕ್ಷ ರೂ.ಗಳ ಸಾಲಕ್ಕಾಗಿ, ನೀವು 3 ವರ್ಷಗಳ ಅವಧಿಗೆ ಮಾಸಿಕ 15,784 ರೂ.ಗಳ ಇಎಂಐ ಪಾವತಿಸಬೇಕಾಗುತ್ತದೆ.

ಇನ್ಯಾವ ಬ್ಯಾಂಕುಗಳಲ್ಲಿ ಎಷ್ಟು ಬಡ್ಡಿದರವಿದೆ

ಇನ್ಯಾವ ಬ್ಯಾಂಕುಗಳಲ್ಲಿ ಎಷ್ಟು ಬಡ್ಡಿದರವಿದೆ

ಈ ಮೇಲ್ಕಂಡ ಬ್ಯಾಂಕುಗಳಷ್ಟೇ ಅಲ್ಲದೆ ಯುಕೋ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿದರವು ಅಗ್ಗವಿದೆ. ಈ ಬ್ಯಾಂಕುಗಳು ಕ್ರಮವಾಗಿ ಶೇ .8.50, ಶೇ 8.50 ಮತ್ತು ಶೇ .8.75 ಬಡ್ಡಿದರ ಹೊಂದಿವೆ. ಈ ಬ್ಯಾಂಕುಗಳ ಇಎಂಐ ಕ್ರಮವಾಗಿ 15,784 ರೂ., 15,784 ಮತ್ತು 15,842 ರೂ. ನಷ್ಟಿದೆ.

ಎನ್‌ಬಿಎಫ್‌ಸಿಗಳಲ್ಲಿ ಐಐಎಫ್‌ಎಲ್ ಫೈನಾನ್ಸ್ ಶೇ. 9.24 ರಷ್ಟು ಚಿನ್ನದ ಸಾಲವನ್ನು ನೀಡುತ್ತಿದೆ. ನಂತರದ ಸ್ಥಾನದಲ್ಲಿ ಮುತ್ತೂಟ್ ಫೈನಾನ್ಸ್‌ (ಶೇ 11.9), ಮಣಪ್ಪುರಂ ಗೋಲ್ಡ್‌ ಲೋನ್ (ಶೇ. 12) ಮತ್ತು ಬಜಾಜ್ ಫೈನಾನ್ಸ್ (ಶೇ. 12) ಬಡ್ಡಿದರವಿದೆ.

 

English summary

Gold Loan: Lower Interest Rates And EMI Details Here

Here the details of lower interest rates On Gold loan and EMI details here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X