For Quick Alerts
ALLOW NOTIFICATIONS  
For Daily Alerts

ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ: ಟಾಪ್ 5 ಬ್ಯಾಂಕುಗಳ ಮಾಹಿತಿ

|

ಭಾರತೀಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಹೀಗಾಗಿಯೇ ಜಗತ್ತಿನಲ್ಲಿ ಅತಿ ಹೆಚ್ಚಿನ ಚಿನ್ನದ ಆಮದುದಾರ ರಾಷ್ಟ್ರಗಳಲ್ಲಿ ಭಾರತವು ಕೂಡ ಪ್ರಮುಖವಾಗಿದೆ. ಚಿನ್ನವು ಕೇವಲ ಮದುವೆ ಸಮಾರಂಭಗಳಿಗೆ ಅಷ್ಟೇ ಬಳಕೆಯಾಗದೆ, ಹೂಡಿಕೆಯ ಜೊತೆಗೆ ಕಷ್ಟ ಕಾಲದಲ್ಲಿ ನೆರವಾಗುವಂತಹ ಸ್ವತ್ತಾಗಿದೆ.

 

ಹೀಗೆ ಖರೀದಿಸಿದ ಚಿನ್ನದ ಮೇಲೆ ಕಷ್ಟ ಕಾಲದಲ್ಲಿ ಸಾಲ ಕೂಡ ಪಡೆಯಬಹುದು. ಬಹುಪಾಲು ಭಾರತೀಯರಿಗೆ, ವಿಶೇಷವಾಗಿ ಕೃಷಿ ಮತ್ತು ಇತರೆ ಅನೌಪಚಾರಿಕ ವಿಭಾಗಗಳಿಂದ ಆದಾಯ ಗಳಿಸುವ ಕುಟುಂಬಗಳಿಗೆ ಸಾಲ ತೆಗೆದುಕೊಳ್ಳಲು ಚಿನ್ನ ಪ್ರಮುಖ ಮೂಲವಾಗಿದೆ.

ಯಾವುದೇ ಹೆಚ್ಚಿನ ಆದಾಯ ಬರದೆ ಇರುವ ಜನರು, ಸ್ವಂತ ಉದ್ಯೋಗ ಮಾಡುತ್ತಿರುವವರು , ಗೃಹಿಣಿಯರು ನಿರಂತರ ಆದಾಯ ಮೂಲದ ಕೊರತೆಯನ್ನ ಅನುಭವಿಸುತ್ತಿರುತ್ತಾರೆ. ಇವರಿಗೆ ದೊಡ್ಡ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆಯುವುದು ತುಂಬಾ ಕಷ್ಟಸಾಧ್ಯ. ಇದರ ಪರಿಣಾಮ ಇವರು ಬ್ಯಾಂಕುಗಳಲ್ಲಿ ಮನೆಯಲ್ಲಿದ್ದ ಚಿನ್ನವನ್ನಿಟ್ಟು ಸಾಲಗಳನ್ನು ಪಡೆಯುತ್ತಾರೆ.

ಚಿನ್ನದ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲ

ಚಿನ್ನದ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲ

ಹೌದು, ಚಿನ್ನದ ಸಾಲವನ್ನು ಪಡೆಯಲು ನಿಮಗೆ ಉತ್ತಮ ಕ್ರೆಡಿಟ್ ಸ್ಕೋರ್ ಅಥವಾ ಯಾವುದೇ ಆದಾಯದ ಪುರಾವೆ ಅಗತ್ಯವಿಲ್ಲ. 18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಚಿನ್ನದ ಸಾಲವನ್ನು ತೆಗೆದುಕೊಳ್ಳಬಹುದು.

ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಚಿನ್ನದ ಸಾಲವನ್ನು ನೀಡುತ್ತವೆ. ಕಡಿಮೆ ಬಡ್ಡಿದರದ ಚಿನ್ನದ ಸಾಲ ಲಭ್ಯವಿರುವ 5 ಬ್ಯಾಂಕುಗಳ ಬಗ್ಗೆ ತಿಳಿಯಲು ಮುಂದೆ ಓದಿ

ಗೃಹ ಸಾಲ: ಟಾಪ್‌ ಅಪ್‌ ಮೂಲಕ ಹೆಚ್ಚಿನ ಸಾಲ ತೆಗೆದುಕೊಳ್ಳುವುದು ಹೇಗೆ?

ಚಿನ್ನದ ಸಾಲ ಪಡೆಯುವುದಕ್ಕೂ ಮೊದಲು ಈ ಮಾಹಿತಿ ಓದಿ
 

ಚಿನ್ನದ ಸಾಲ ಪಡೆಯುವುದಕ್ಕೂ ಮೊದಲು ಈ ಮಾಹಿತಿ ಓದಿ

* ಚಿನ್ನದ ಸಾಲಗಳನ್ನು ಸಾಮಾನ್ಯವಾಗಿ 2 ವರ್ಷಗಳವರೆಗೆ ನೀಡಲಾಗುತ್ತದೆ ಮತ್ತು ಆ ಅವಧಿಯ ನಂತರ ನೀವು ಸಾಲವನ್ನು ನವೀಕರಿಸಬಹುದು.

* ಚಿನ್ನದ ಸಾಲದ ಸಂದರ್ಭದಲ್ಲಿ, ನೀವು ಚಿನ್ನವನ್ನು (ಆಭರಣ, ಬಾರ್ ಅಥವಾ ನಾಣ್ಯ) ಮೇಲಾಧಾರ ರೂಪದಲ್ಲಿ ಇಟ್ಟುಕೊಳ್ಳಬೇಕು. ಬ್ಯಾಂಕುಗಳು ಚಿನ್ನದ ಮೌಲ್ಯದ ಶೇಕಡಾ 80ರವರೆಗೆ ಸಾಲ ನೀಡುತ್ತವೆ.

* ಚಿನ್ನದ ಸಾಲದ ಸಂದರ್ಭದಲ್ಲಿ, ನೀವು ಅನುಕೂಲಕರ ಮರುಪಾವತಿ ಆಯ್ಕೆಯನ್ನು ಪಡೆಯುತ್ತೀರಿ. ನೀವು ಇಎಂಐ ಆಯ್ಕೆ ಅಥವಾ ಬುಲೆಟ್ ಮರುಪಾವತಿಯನ್ನು ಆರಿಸಿಕೊಳ್ಳಬಹುದು. ಚಿನ್ನದ ಸಾಲದ ಸಂದರ್ಭದಲ್ಲಿ ಭಾಗಶಃ ಮರುಪಾವತಿ ಸಹ ಲಭ್ಯವಿದೆ.

* ಈ ಮೊದಲೇ ತಿಳಿಸಿದಂತೆ ಚಿನ್ನದ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲ. ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ನೀವು ಚಿನ್ನದ ಸಾಲವನ್ನು ಅಗ್ಗದ ದರದಲ್ಲಿ ತೆಗೆದುಕೊಳ್ಳಬಹುದು.

* ಚಿನ್ನದ ಮೇಲಿನ ಸಾಲವು ವೈಯಕ್ತಿಕ ಸಾಲಕ್ಕಿಂತ ಕಡಿಮೆ ಬಡ್ಡಿ ದರವನ್ನು ಹೊಂದಿರುತ್ತದೆ.

ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ ಈ 5 ಅಂಶ ಗಮನದಲ್ಲಿರಲಿ

ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ ನೀಡುವ ಬ್ಯಾಂಕ್‌ಗಳು

ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ ನೀಡುವ ಬ್ಯಾಂಕ್‌ಗಳು

ಚಿನ್ನದ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಾಗುತ್ತದೆ. ಚಿನ್ನದ ಸಾಲದ ಬಡ್ಡಿದರಗಳು 7% ರಿಂದ ಪ್ರಾರಂಭವಾಗುತ್ತವೆ. ಟಾಪ್ 5 ಬ್ಯಾಂಕುಗಳ ಜೊತೆಗೆ ಬಡ್ಡಿದರವನ್ನು ಈ ಕೆಳಗೆ ನೀಡಲಾಗಿದೆ.

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 7%

ಬ್ಯಾಂಕ್ ಆಫ್ ಇಂಡಿಯಾ 7.35%

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7.5%

ಕೆನರಾ ಬ್ಯಾಂಕ್ 7.65%

ಯೂನಿಯನ್ ಬ್ಯಾಂಕ್ 8.2%

ಸಾಲ ಪಡೆಯಲು ಬೇಕಿರುವ ದಾಖಲೆಗಳು ಮತ್ತು ಅವಧಿ

ಸಾಲ ಪಡೆಯಲು ಬೇಕಿರುವ ದಾಖಲೆಗಳು ಮತ್ತು ಅವಧಿ

ನೀವು ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ, ಇದಕ್ಕಾಗಿ ಮತದಾರರ ಚೀಟಿ, ಆಧಾರ್ ಕಾರ್ಡ್ ಅಥವಾ ಪ್ಯಾನ್ ಅನ್ನು ಗುರುತಿನ ಚೀಟಿಯಾಗಿ ನೀಡಬೇಕು. ಅದೇ ಸಮಯದಲ್ಲಿ, ವಿಳಾಸ ಪುರಾವೆಗಾಗಿ ನೀವು ವಿದ್ಯುತ್ ಅಥವಾ ದೂರವಾಣಿ ಬಿಲ್‌ಗಳನ್ನು ಪಾವತಿಸಬಹುದು. ಇದಲ್ಲದೆ, ನಿಮ್ಮ ಫೋಟೋ ಸಹ ನೀಡಬೇಕಾಗುತ್ತದೆ.

ಇನ್ನು ಬ್ಯಾಂಕಿನ ಬೇಡಿಕೆಯ ಮೇರೆಗೆ ಆದಾಯ ಪುರಾವೆಗಳನ್ನು ಸಹ ನೀಡಬೇಕಾಗಬಹುದು. ನೀವು ಕನಿಷ್ಠ 20,000 ರೂಪಾಯಿಯಿಂದ 25 ಲಕ್ಷ ರೂಪಾಯಿಗಳವರೆಗೆ ಚಿನ್ನದ ಸಾಲವನ್ನು ಪಡೆಯಬಹುದು. ಸಾಲ ಮರುಪಾವತಿ ಅವಧಿ ಮೂರು ತಿಂಗಳಿಂದ ಮೂರು ವರ್ಷಗಳವರೆಗೆ ಇರಬಹುದು. ಜೊತೆಗೆ ಇತರ ಸಾಲಗಳಿಗೆ ಹೋಲಿಸಿದರೆ ಚಿನ್ನದ ಸಾಲವು ಕಡಿಮೆ ಸಂಸ್ಕರಣಾ ಶುಲ್ಕವನ್ನು ಹೊಂದಿದೆ.

English summary

Gold Loan: These 5 Banks Providing The Lowest Interest Rates On Gold Loan

Here the details and key advantages of a gold loan you need to consider while applying for a gold loan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X