For Quick Alerts
ALLOW NOTIFICATIONS  
For Daily Alerts

ಸಾರ್ವಕಾಲಿಕ ದಾಖಲೆ ಎತ್ತರಕ್ಕೆ ಚಿನ್ನದ ಬೆಲೆ; ಗ್ರಾಮ್ ಗೆ 5 ಸಾವಿರದತ್ತ

|

ಸತತವಾಗಿ ಎರಡನೇ ದಿನ ಏರಿಕೆ ಕಂಡ ಚಿನ್ನವು ಭಾರತದಲ್ಲಿ ಸೋಮವಾರ (ಮೇ 18, 2020) ಹೊಸ ದಾಖಲೆ ಬರೆಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಯ ಪ್ರಭಾವ ಆಗಿದೆ. ಚೀನಾ- ಅಮೆರಿಕ ಮಧ್ಯದ ವಾಣಿಜ್ಯ ಸಮರ ಹಾಗೂ ಕೊರೊನಾದ ವೈರಾಣು ಆರ್ಥಿಕತೆ ಮೇಲೆ ಮಾಡುತ್ತಿರುವ ದಾಳಿಯ ಕಾರಣಕ್ಕೆ ಹೂಡಿಕೆದಾರರು ಚಿಂತೆಗೆ ಈಡಾಗಿದ್ದಾರೆ.

 

ಕಳೆದ ಮಾರ್ಚ್ ನಲ್ಲಿ 10 ಗ್ರಾಂ ಚಿನ್ನದ ಬೆಲೆ 38,500 ರುಪಾಯಿ ಇತ್ತು. ಅಲ್ಲಿಂದ 24.45 ಪರ್ಸೆಂಟ್ ಏರಿಕೆಯಾಗಿ, 47,929 ರುಪಾಯಿಯನ್ನು ತಲುಪಿದೆ. 2020ನೇ ಇಸವಿಯಲ್ಲಿ ಅತ್ಯುತ್ತಮ ಆಸ್ತಿ ಎಂಬ ಕಿರೀಟ ಹೊತ್ತುಕೊಂಡಿದೆ ಚಿನ್ನ. ಈ ವರ್ಷದಲ್ಲಿ ಹದಿನೈದು ಪರ್ಸೆಂಟ್ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ಎತ್ತರವನ್ನು ಮುಟ್ಟಿದೆ ಚಿನ್ನ ಎಂದು ತಜ್ಞರು ತಿಳಿಸಿದ್ದಾರೆ.

ಪ್ರತಿ 10 ಗ್ರಾಮ್ ಗೆ 47,860 ರುಪಾಯಿಗೆ ವಹಿವಾಟು

ಪ್ರತಿ 10 ಗ್ರಾಮ್ ಗೆ 47,860 ರುಪಾಯಿಗೆ ವಹಿವಾಟು

ಕೊರೊನಾದ ಕಾರಣಕ್ಕೆ ಆರ್ಥಿಕ ಕುಸಿತ ಉಂಟಾಗುವ ಭೀತಿ ಎದುರಾಗಿದೆ. ಆದ್ದರಿಂದ 2020ರಲ್ಲಿ ಚಿನ್ನ ಖರೀದಿ ಮುಂದುವರಿದಿದೆ ಎನ್ನುತ್ತಿದ್ದಾರೆ ಹೂಡಿಕೆ ತಜ್ಞರು. ಎಂಸಿಎಕ್ಸ್ ನಲ್ಲಿ ಚಿನ್ನದ ಜೂನ್ ತಿಂಗಳ ಫ್ಯೂಚರ್ಸ್ ಪ್ರತಿ 10 ಗ್ರಾಮ್ ಗೆ 47,860 ರುಪಾಯಿಗೆ ವಹಿವಾಟು ನಡೆಸಿತ್ತು. ಆ ಮೂಲಕ 479 ರುಪಾಯಿ ಏರಿಕೆ ದಾಖಲಿಸಿತು.

ಬೆಳ್ಳಿ ಕೇಜಿಗೆ 1,580 ರುಪಾಯಿ ಏರಿಕೆ

ಬೆಳ್ಳಿ ಕೇಜಿಗೆ 1,580 ರುಪಾಯಿ ಏರಿಕೆ

ಇನ್ನು ಬೆಳ್ಳಿಯು ಜುಲೈ ಫ್ಯೂಚರ್ಸ್ 1,580 ರುಪಾಯಿ ಏರಿಕೆ ದಾಖಲಿಸಿ, ಕೇಜಿಗೆ 48,298 ರುಪಾಯಿ ಮುಟ್ಟಿದೆ. ಮಾರ್ಚ್ ನಲ್ಲಿ ಕನಿಷ್ಠ ಮಟ್ಟವಾದ 33,580/kg ತಲುಪಿದ್ದ ಬೆಳ್ಳಿಯು 44 ಪರ್ಸೆಂಟ್ ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಏಳು ವರ್ಷದ ಗರಿಷ್ಠಕ್ಕಿಂತ ಹೆಚ್ಚಿನ ಮೊತ್ತದಲ್ಲಿ ವಹಿವಾಟು ನಡೆಸುತ್ತಿದೆ. ಹೂಡಿಕೆಗೆ ಚಿನ್ನವೇ ಅತ್ಯುತ್ತಮ ಎಂಬ ನಂಬಿಕೆ ಈ ವಿಚಾರದಲ್ಲಿ ಬೆಲೆಯನ್ನು ಎತ್ತರಕ್ಕೆ ಒಯ್ದಿದೆ.

ಜಾಗತಿಕ ಮಟ್ಟದಲ್ಲಿ ಗ್ರಾಮ್ ಗೆ 4,710 ರುಪಾಯಿ
 

ಜಾಗತಿಕ ಮಟ್ಟದಲ್ಲಿ ಗ್ರಾಮ್ ಗೆ 4,710 ರುಪಾಯಿ

ಜಾಗತಿಕ ಮಟ್ಟದಲ್ಲಿ ಒಂದು ಔನ್ಸ್ ಸ್ಪಾಟ್ ಗೋಲ್ಡ್ ಬೆಲೆ 1,756.79 ಅಮೆರಿಕನ್ ಡಾಲರ್ ಇದೆ. ಒಂದು ಔನ್ಸ್ ಅಂದರೆ 28.3495 ಗ್ರಾಮ್ ಆಗುತ್ತದೆ. ಇನ್ನು ಡಾಲರ್ ವಿರುದ್ಧ ರುಪಾಯಿ ಮೌಲ್ಯದ ಲೆಕ್ಕ ಹಿಡಿದು ಹೇಳುವುದಾದರೆ, ಪ್ರತಿ ಗ್ರಾಮ್ ಗೆ 4,710 ಇದೆ. ಇನ್ನು ಯು.ಎಸ್. ಗೋಲ್ಡ್ ಫ್ಯೂಚರ್ಸ್ 1765.70 ಡಾಲರ್ ಇದೆ. ಭಾರತದ ರುಪಾಯಿ ಲೆಕ್ಕದಲ್ಲಿ ಪ್ರತಿ ಗ್ರಾಮ್ ಗೆ 4,734 ಆಗುತ್ತದೆ.

2020ರಲ್ಲಿ ಗ್ರಾಮ್ ಗೆ 5 ಸಾವಿರ ತಲುಪುವ ಸಾಧ್ಯತೆ

2020ರಲ್ಲಿ ಗ್ರಾಮ್ ಗೆ 5 ಸಾವಿರ ತಲುಪುವ ಸಾಧ್ಯತೆ

ಜಾಗತಿಕ ಮಟ್ಟದಲ್ಲೇ ಆರ್ಥಿಕ ತಲ್ಲಣ, ಅನಿಶ್ಚಿತತೆ ಇರುವುದರಿಂದ ಚಿನ್ನ ಖರೀದಿಯತ್ತ ಹೂಡಿಕೆದಾರರು ಆಕರ್ಷಿತರಾಗುತ್ತಿದ್ದಾರೆ. ಸದ್ಯಕ್ಕೆ ಚಿನ್ನದ ಬೆಲೆ ಇನ್ನೂ ಏರಿಕೆ ಕಾಣುವ ಸಾಧ್ಯತೆಗಳಿವೆ. 2020ನೇ ಇಸವಿಯಲ್ಲಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಮ್ ಗೆ 50 ಸಾವಿರ ರುಪಾಯಿ ಮುಟ್ಟುವ ಎಲ್ಲ ಸಾಧ್ಯತೆ ಇದೆ ಎನ್ನುತ್ತಾರೆ ಆರ್ಥಿಕ ತಜ್ಞರು.

English summary

Gold Price Hit All Time High: Price May Touch 5 Thousand Per Gram

Gold price hit all time high on May 18, 2020. Gold per gram may touch 5000 rupees this year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X