ಬೆಂಗಳೂರು, ಸೆಪ್ಟೆಂಬರ್ 5: ಇಪಿಎಸ್ ಪಿಂಚಣಿದಾರರಿಗೆ ಸಿಹಿಸುದ್ದಿ ಬಂದಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರು ಮತ್ತು ಅಧ್ಯಕ್ಷರು, ಟ್ರಸ್ಟಿಗಳ ಕೇಂದ್ರೀಯ ಮಂಡಳಿ, ಎಪಿಎಫ್ ನೌಕರರ ಪಿಂಚಣಿ ಯೋಜನೆ, 1995ಕ್ಕಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಕೇಂದ್ರೀಕೃತ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಸಿಪಿಪಿಎಸ್ ಪ್ರಮುಖ ಬದಲಾವಣೆಯಾಗಿದ್ದು ಇದು ಭಾರತದಾದ್ಯಂತ ಯಾವುದೇ ಬ್ಯಾಂಕ್ ಮತ್ತು ಯಾವುದೇ ಶಾಖೆಯಿಂದಾದರೂ ತಮ್ಮ ಪಿಂಚಣಿ ಪಡೆಯಲು ಅವಕಾಶ ಇನ್ಮುಂದೆ ದೊರೆಯಲಿದೆ.

ಈ ಮಹತ್ವದ ನಿರ್ಧಾರದ ಕುರಿತು ಮಾತನಾಡಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, " ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಅನುಮೋದನೆಯು ಇಪಿಎಫ್ಒ ನ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲು ಸೂಚಿಸುತ್ತದೆ. ಇದು ಇಪಿಎಸ್ ಪಿಂಚಣಿದಾರರಿಗೆ ಮುಂದಿನ ವರ್ಷದ ಜನವರಿ 1ರಿಂದ ದೇಶದ ಯಾವುದೇ ಭಾಗದಲ್ಲಿ, ಯಾವುದೇ ಬ್ಯಾಂಕ್ ಮತ್ತು ಯಾವುದೇ ಶಾಖೆಯಿಂದಾದರೂ ತಮ್ಮ ಪಿಂಚಣಿ ಪಡೆಯಲು ಅವಕಾಶ ಸಿಗುವುದರಿಂದ ಪಿಂಚಣಿದಾರರು ಎದುರಿಸುತ್ತಿರುವ ದೀರ್ಘಕಾಲೀನ ಸವಾಲುಗಳನ್ನು ಪರಿಹರಿಸುತ್ತದೆ ಮತ್ತು ತಡೆರಹಿತ ಮತ್ತು ಪರಿಣಾಮಕಾರಿ ವಿತರಣಾ ಕಾರ್ಯವಿಧಾನ ಈ ಮೂಲಕ ಉಂಟಾಗುತ್ತದೆ. ಇಪಿಎಫ್ ಒ ಅನ್ನು ಹೆಚ್ಚು ದೃಢವಾದ, ಸ್ಪಂದಿಸುವ ಮತ್ತು ತಂತ್ರಜ್ಞಾನದಿಂದ ಶಕ್ತಗೊಂಡ ಸಂಸ್ಥೆಯಾಗಿ ಪರಿವರ್ತಿಸುವ ನಮ್ಮ ನಿರಂತರ ಪ್ರಯತ್ನಗಳಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ ಹಾಗು ಅದರ ಸದಸ್ಯರು ಮತ್ತು ಪಿಂಚಣಿದಾರರ ಅಗತ್ಯಗಳನ್ನು ಉತ್ತಮವಾಗಿ ಪೂರೈಸಲು ಬದ್ಧವಾಗಿದೆ: ಎಂದು ಹೇಳಿದ್ದಾರೆ.
ಈ ಹೊಸ ಯೋಜನೆಯನ್ನು 2025ರ ಜನವರಿ 1ರಿಂದ ಇಪಿಎಫ್ಒ ನ ನಡೆಯುತ್ತಿರುವ ಐಟಿ ಆಧುನೀಕರಣ ಯೋಜನೆಯ ಕೇಂದ್ರೀಕೃತ ಐಟಿ ಸಕ್ರಿಯಗೊಳಿಸಿದ ವ್ಯವಸ್ಥೆಯ(CITES 2.01) ಭಾಗವಾಗಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗುವುದು. ಮುಂದಿನ ಹಂತದಲ್ಲಿ, ಸಿಪಿಪಿಎಸ್ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ (ಎಬಿಪಿಎಸ್) ಸುಗಮವಾದ ಪರಿವರ್ತನೆಯನ್ನು ಸಕ್ರಿಯಗೊಳಿಸಲು ಸರ್ಕಾರ ಯೋಜಿಸಿದೆ.
ಸುಧಾರಿತ ಐಟಿ ಮತ್ತು ಬ್ಯಾಂಕಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ, ಪಿಂಚಣಿದಾರರಿಗೆ ಹೆಚ್ಚು ಪರಿಣಾಮಕಾರಿ ಮತ್ತು ಬಳಕೆದಾರ-ಸ್ನೇಹಿ ಅನುಭವವನ್ನು ಒದಗಿಸುವ ಮೂಲಕ ಇಪಿಎಫ್‌ಒದ 78 ಲಕ್ಷಕ್ಕೂ ಹೆಚ್ಚು ಇಪಿಎಸ್ ಪಿಂಚಣಿದಾರರಿಗೆ ಸಿಪಿಪಿಎಸ್ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ . ಹೆಚ್ಚುವರಿಯಾಗಿ, ಸುಧಾರಿತ ಐಟಿ ಮತ್ತು ಬ್ಯಾಂಕಿಂಗ್ ತಂತ್ರಜ್ಞಾನಗಳು ನಿಧಿಗಳಿಗೆ ತಡೆರಹಿತ ಮತ್ತು ಸುಲಭ ಪ್ರವೇಶವನ್ನು ಒದಗಿಸುವ ನಿರೀಕ್ಷೆಯಿದೆ.
ಪಿಂಚಣಿದಾರರು ಒಂದು ಕಡೆಯಿಂದ ಮತ್ತೊಂದು ಕಡೆ ಸ್ಥಳಾಂತರವಾದಾಗ ಅಥವಾ ಅವರ ಬ್ಯಾಂಕ್ ಅಥವಾ ಶಾಖೆಯನ್ನು ಬದಲಾಯಿಸಿದಾಗಲೂ ಸಹ ಪಿಂಚಣಿ ಪಾವತಿ ಆದೇಶಗಳನ್ನು (ಪಿಪಿಒ) ಒಂದು ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಗತ್ಯವಿಲ್ಲದೇ ಭಾರತದಾದ್ಯಂತ ಪಿಂಚಣಿ ವಿತರಣೆಯನ್ನು ಸಿಪಿಪಿಎಸ್ ಖಚಿತಪಡಿಸುತ್ತದೆ. ನಿವೃತ್ತಿಯ ನಂತರ ಸ್ವಗ್ರಾಮಕ್ಕೆ ತೆರಳುವ ಪಿಂಚಣಿದಾರರಿಗೆ ಇದು ಉತ್ತಮ ಪರಿಹಾರವಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಪಿಪಿಎಸ್ ವ್ಯವಸ್ಥೆಯು ಅಸ್ತಿತ್ವದಲ್ಲಿರುವ ಇಪಿಎಫ್ಒದ ಪ್ರತಿಯೊಂದು ವಲಯ ಮತ್ತು ಪ್ರಾದೇಶಿಕ ಕಚೇರಿಯು ಕೇವಲ 3-4 ಬ್ಯಾಂಕ್ ಗಳೊಂದಿಗೆ ಪ್ರತ್ಯೇಕ ಒಪ್ಪಂದಗಳಿಂದ ನಿರ್ವಹಿಸುತ್ತಿರುವ ವಿಕೇಂದ್ರೀಕೃತವಾಗಿರುವ ಪಿಂಚಣಿ ವಿತರಣಾ ವ್ಯವಸ್ಥೆಯಿಂದ ಒಂದು ಮಹತ್ತರ ಬದಲಾವಣೆಯಾಗಿದೆ. ಪಿಂಚಣಿ ಪ್ರಾರಂಭವಾಗುವ ಸಮಯದಲ್ಲಿ ಪಿಂಚಣಿದಾರರು ಯಾವುದೇ ಪರಿಶೀಲನೆಗಾಗಿ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ ಮತ್ತು ಬಿಡುಗಡೆಯಾದ ತಕ್ಷಣ ಪಿಂಚಣಿಯನ್ನು ಜಮಾ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಹೊಸ ವ್ಯವಸ್ಥೆಗೆ ಬದಲಾದ ನಂತರ ಪಿಂಚಣಿ ವಿತರಣೆಯಲ್ಲಿ ಗಮನಾರ್ಹ ವೆಚ್ಚದಲ್ಲಿ ಕಡಿತವನ್ನು ಇಪಿಎಫ್ ಒ ನಿರೀಕ್ಷಿಸುತ್ತಿದೆ.


Click it and Unblock the Notifications