ಭಾರತೀಯ ಅಂಚೆಯು ದೇಶದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಒಂದು ಪ್ರಮುಖ ಸಂಪನ್ಮೂಲವಾಗಿದ್ದು, ಸರ್ಕಾರಿ ಬೆಂಬಲಿತ ಈ ಸಂಸ್ಥೆಯು ಜನರಿಗೆ ಹಣ ಉಳಿತಾಯ ಮಾಡುವುದಕ್ಕೆ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಭಾರತೀಯ ಅಂಚೆಯು ರಿಸ್ಕ್ ಇಲ್ಲದ ಹಲವು ಉಳಿತಾಯ ಯೋಜನೆಗಳನ್ನು ಸ್ಥಾಪಿಸಿದ್ದು, ಇದು ದೇಶದ ಹಿಂದುಳಿದ ಪ್ರದೇಶದಲ್ಲಿ ವಾಸಿಸುವ ಜನರಿಗೆ ಹೆಚ್ಚಿನ ರಿಟರ್ನ್ಸ್ ನೀಡುವ ಜತೆಗೆ ಅವರ ಭವಿಷ್ಯವನ್ನು ಭದ್ರಪಡಿಸುತ್ತಿದೆ.
ಅಂಚೆ ಕಚೇರಿಯು ಪರಿಚಯಿಸಿರುವ ಹಲವಾರು ಗ್ರಾಮೀಣ ಅಂಚೆ ವಿಮಾ ಯೋಜನೆಗಳ ಪೈಕಿ ಗ್ರಾಮ ಸುರಕ್ಷಾ ಯೋಜನೆಯು ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಭಾರತೀಯ ಅಂಚೆ ಪಾಲಿಸಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ಕೆಳಗಿನ ಅಂಶಗಳನ್ನು ಗಮನಿಸಿ.

* ಕನಿಷ್ಠ ಹಾಗೂ ಗರಿಷ್ಠ ನೋಂದಣಿ ವಯಸ್ಸು ಕ್ರಮವಾಗಿ 19 ಹಾಗೂ 55.
* ಭರವಸೆ ನೀಡುವ ಕನಿಷ್ಠ ಹಾಗೂ ಗರಿಷ್ಠ ಮೊತ್ತ ಕ್ರಮವಾಗಿ 10,000 ರೂ. ಹಾಗೂ 10 ಲಕ್ಷ ರೂ.
* ನಾಲ್ಕು ವರ್ಷಗಳ ಬಳಿಕ ಸಾಲ ಪಡೆಯುವ ಸೌಲಭ್ಯ ದೊರೆಯುತ್ತದೆ. ಒಂದುವೇಳೆ ಯೋಜನೆಯನ್ನು ಐದು ವರ್ಷದ ಮೊದಲೇ ಮುಕ್ತಾಯಗೊಳಿಸಿದರೆ, ಅದು ಬೋನಸ್ ಪಡೆಯಲು ಅನರ್ಹವಾಗಿರುತ್ತದೆ.
* ಪ್ರೀಮಿಯಂ ನಿಲುಗಡೆ ಅಥವಾ ಮುಕ್ತಾಯದ ದಿನಾಂಕದ ಬಳಿಕ ಪರಿವರ್ತನೆ ದಿನಾಂಕವು ಒಂದು ವರ್ಷದೊಳಗೆ ಇಲ್ಲದಿದ್ದರೆ 59 ವರ್ಷದವರೆಗೆ ಎಂಡೋಮೆಂಟ್ ಅಶ್ಯೂರೆನ್ಸ್ ಪಾಲಿಸಿಯಾಗಿ ಬದಲಿಸಬಹುದು.
* ಪ್ರೀಮಿಯಂ ಪಾವತಿ ವಯಸ್ಸು 55, 58 ಅಥವಾ 60 ವರ್ಷ ಆಗಿರುತ್ತದೆ.
* ಒಂದುವೇಳೆ ವಿಮೆಯನ್ನು ಬಿಟ್ಟುಬಿಟ್ಟರೆ ಆಗ ಕಡಿಮೆಯಾದ ಖಾತ್ರಿಯಿಲ್ಲದ ಒಟ್ಟು ಮೊತ್ತದ ಮೇಲೆ ಅನುಪಾತದ ಬೋನಸ್‌ನ್ನು ಪಾವತಿಸಬೇಕಾಗುತ್ತದೆ.
* ಪ್ರಸ್ತುತ ಪ್ರತಿ ವರ್ಷವೂ 1000ರೂ. ಹಣಕ್ಕೆ 60ರೂ. ಪ್ರೋತ್ಸಾಹಧನದ ಭರವಸೆಯನ್ನು ನೀಡುತ್ತದೆ.
1995ರಲ್ಲಿ ಗ್ರಾಮೀಣ ಭಾರತೀಯರ ಅಗತ್ಯತೆಗಳನ್ನು ಪೂರೈಸಲು ಗ್ರಾಮೀಣ ಅಂಚೆ ಜೀವ ವಿಮೆ(ಆರ್‌ಪಿಎಲ್‌ಐ) ಯೋಜನೆಯನ್ನು ಸ್ಥಾಪಿಸಲಾಯಿತು. ಭಾರತೀಯ ಅಂಚೆ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವಂತೆ, ಈ ಯೋಜನೆಯ ಮೂಲ ಉದ್ದೇಶವೆಂದರೆ ಗ್ರಾಮೀಣ ಜನರಿಗೆ ವಿಮಾ ರಕ್ಷಣೆಯನ್ನು ಒದಗಿಸುವುದಾಗಿದೆ. ಅಲ್ಲದೆ, ಗ್ರಾಮೀಣ ಭಾಗದ ಮಹಿಳಾ ಉದ್ಯೋಗಿಗಳಿಗೆ ಸಹಾಯ ಮಾಡುವ ಮೂಲಕ ಗ್ರಾಮೀಣ ಜನತೆಯಲ್ಲಿ ವಿಮಾ ಜಾಗೃತಿಯನ್ನು ಮೂಡಿಸುವುದಾಗಿದೆ.
ಭಾರತದಲ್ಲಿ ಗ್ರಾಮ ಸುರಕ್ಷಾ ಯೋಜನೆಯು ದಿನಕ್ಕೆ ಕೇವಲ 50ರೂ. ಪ್ರೀಮಿಯಂಗೆ 35ಲಕ್ಷ ರೂ.ವರೆಗೆ ಪಾವತಿಯ ವಿಮಾ ಪಾಲಿಸಿಯನ್ನು ಒದಗಿಸುತ್ತದೆ. ಒಂದುವೇಳೆ ತಿಂಗಳಿಗೆ 1,515 ಅಥವಾ ದಿನಕ್ಕೆ 50ರೂ.ನಂತೆ ಹೂಡಿಕೆ ಮಾಡಿದರೆ ಪಾಲಿಸಿ ಮೆಚ್ಯುರ್ ಆದಾಗ ಪಾಲಿಸಿದಾರರು 34.60 ಲಕ್ಷ ರೂ. ಪಡೆಯುತ್ತಾರೆ. 55 ವರ್ಷಕ್ಕೆ ಮೆಚ್ಯುರಿಟಿ ಲಾಭ 31,60,000ರೂ. ಆಗಿದ್ದು, 58 ವರ್ಷಕ್ಕೆ 33,40,000ರೂ. ಹಾಗೂ 60 ವರ್ಷಕ್ಕೆ 34,60,000 ಲಕ್ಷ ರೂ. ಲಾಭ ದೊರೆಯುತ್ತದೆ.


Click it and Unblock the Notifications