ನಮ್ಮ ಜೀವನದಲ್ಲಿ ಹೂಡಿಕೆ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದರೆ ಹೂಡಿಕೆ ಮಾಡುವಾಗ ನಮ್ಮ ಹಣದ ಸುರಕ್ಷತೆ ಕೂಡಾ ಮುಖ್ಯ ಅಲ್ವ?. ಹಾಗಿರುವಾಗ ನಮ್ಮ ಮುಂದೆ ಇರುವ ಸುರಕ್ಷಿತ ಆಯ್ಕೆ ಅಂಚೆ ಕಚೇರಿ ಮತ್ತು ಎಲ್‌ಐಸಿ ಆಗಿದೆ. ನೀವು ಕೆಲವು ಎಲ್‌ಐಸಿ ಹೂಡಿಕೆಗಳಿಂದ ಅತೀ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
ಪ್ರತಿಯೊಬ್ಬರ ಜೀವನದಲ್ಲಿ ಉಳಿತಾಯ ಮುಖ್ಯ. ಸಾಮಾನ್ಯ ವ್ಯಕ್ತಿ ಶ್ರೀಮಂತನಾಗುವುದು ಸುಲಭವಲ್ಲ. ಇದಕ್ಕೆ ಪೂರ್ವಭಾವಿಯಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಸರಿಯಾದ ತಂತ್ರದ ಅಗತ್ಯವಿದೆ. ಅಂತಹ ಒಂದು ಯೋಜನೆಯ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಈ ಎಲ್‌ಐಸಿಯ ಯೋಜನೆಯು ನಿಮಗೆ ಮೂರು ಪಟ್ಟು ಆದಾಯವನ್ನು ನೀಡುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಎಲ್ಐಸಿಯ ಈ ಯೋಜನೆ ನಿಮ್ಮನ್ನು ಮಿಲಿಯನೇರ್ ಅನ್ನಾಗಿಸುತ್ತೆ
ಎಲ್ಐಸಿ ಹಲವು ರೀತಿಯ ಯೋಜನೆಗಳನ್ನು ನಡೆಸುತ್ತದೆ. ಅದರಲ್ಲಿ ಒಂದು ನಿಯಮಿತ ಪ್ರೀಮಿಯಂ ಯುನಿಟ್ ಲಿಂಕ್ಡ್ ಪ್ಲಾನ್ ಎಸ್‌ಐಐಪಿ ಆಗಿದೆ. ಇದು ಸುರಕ್ಷಿತ ಆದಾಯ ಮತ್ತು ಪ್ರಯೋಜನಗಳನ್ನು ಕೂಡಾ ನೀಡುತ್ತದೆ. ನೀವು ಉಳಿತಾಯ ಮಾಡುವ ಮೂಲಕ ಮಿಲಿಯನೇರ್ ಆಗಲು ಯೋಜಿಸುತ್ತಿದ್ದರೆ ಎಲ್‌ಐಸಿಯ ಎಸ್‌ಐಐಪಿ ಉತ್ತಮ ಆಯ್ಕೆಯಾಗಿದೆ.
ಈ ಯೋಜನೆಯಲ್ಲಿ, 21 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಮುಕ್ತಾಯದ ನಂತರ, ನೀವು ಮೊತ್ತದ 3 ಪಟ್ಟು ಹೆಚ್ಚು ರಿಟರ್ನ್ ಪಡೆಯಬಹುದಾಗಿದೆ.
ಯೋಜನೆಯ ಬಗ್ಗೆ ಮಾಹಿತಿ
ಈ ಯೋಜನೆಯಡಿಯಲ್ಲಿ, ಮಾಸಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪ್ರೀಮಿಯಂ ಪಾವತಿಯ ಆಯ್ಕೆಯು ಲಭ್ಯವಿದೆ. ಹೂಡಿಕೆದಾರರು ತಮ್ಮ ಇಚ್ಛೆಯಂತೆ ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಲ್ಲಿ ವಾರ್ಷಿಕ 40 ಸಾವಿರ ರೂಪಾಯಿ ಠೇವಣಿ ಇಡಬೇಕು.
ಪ್ರತಿ ತಿಂಗಳು ನೀವು 4000 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದರ ಅಡಿಯಲ್ಲಿ 4,80,000 ರೂಪಾಯಿ ವಿಮಾ ರಕ್ಷಣೆಯೂ ಲಭ್ಯವಿದೆ. ಯೋಜನೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಡೆಯಬಹುದು.
ಲೆಕ್ಕಾಚಾರ ಇಲ್ಲಿದೆ ನೋಡಿ
ಒಬ್ಬ ವ್ಯಕ್ತಿಯು ಪ್ರತಿ ತಿಂಗಳು 4000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 21 ವರ್ಷಗಳಲ್ಲಿ ಹೂಡಿಕೆಯ ಮೊತ್ತವು 10,08,000 ರೂಪಾಯಿ ಆಗಿದೆ. ಅದರಂತೆ ಪ್ರತಿದಿನ 134 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ನೀವು ಮೆಚ್ಯೂರಿಟಿ ಸಂದರ್ಭದಲ್ಲಿ 35 ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ. ಇದು ನೀವು ಹೂಡಿಕೆ ಮಾಡಿದ ಮೊತ್ತಕ್ಕಿಂತ ಮೂರು ಪಟ್ಟು ಅಧಿಕವಾಗಿರುತ್ತದೆ.


Click it and Unblock the Notifications