ನೀವು ಹೊಸದಾಗಿ ಕೆಲಸಕ್ಕೆ ಸೇರಿದ್ದರೆ ನಾಮಿನಿ ಸೇರ್ಪಡೆ ಅಥವಾ ಹಣ ಪಡೆಯಲು ಕ್ಲೈಮ್ ಅಥವಾ ಇತರ ಕಾರಣಗಳಿಗೆ ನಿಮ್ಮ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ನೀವು ಸರಿಯಾದ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಇಪಿಎಫ್ ಯುಎಎನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ.
ಇಪಿಎಫ್‌ಒ ಚಂದಾದಾರರು ಪ್ರತಿಯೊಬ್ಬರಿಗೆ ಯುನಿವರ್ಸಲ್ ಅಕೌಂಟ್ ನಂಬರ್ (ಸಾರ್ವತ್ರಿಕ ಖಾತೆ ಸಂಖ್ಯೆ) ಅಥವಾ ಯುಎಎನ್ ಸಂಖ್ಯೆ ಇರುತ್ತದೆ. ಇದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯಡಿ ದಾಖಲಾದ ಪ್ರತಿಯೊಬ್ಬ ಸದಸ್ಯರಿಗೆ ನೀಡಿದ 12- ಅಂಕಿಯ ಸಂಖ್ಯೆಯಾಗಿದೆ.

ಎಲ್ಲಾ EPF ಸಂಬಂಧಿತ ವಹಿವಾಟುಗಳಿಗೆ UAN ಸಂಖ್ಯೆ ಕಡ್ಡಾಯವಾಗಿದೆ ಮತ್ತು ಉದ್ಯೋಗಿ ನೀಡಿದ ಬಹು ಸದಸ್ಯರ ಐಡಿಗಳು ಒಂದು UAN ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇಪಿಎಫ್ ಪಾಸ್‌ಬುಕ್‌ನ ಬ್ಯಾಲೆನ್ಸ್ ಚೆಕ್ ಮಾಡಲು ಅಥವಾ ಮುಂಗಡವಾಗಿ ಹಣ ವಿದ್‌ಡ್ರಾ ಮಾಡಲು ಅಥವಾ ನಿವೃತ್ತಿಯ ನಂತರದ ಫೈನಲ್ ಸೆಟಲ್‌ಮೆಂಟ್‌ನಂತಹ ಇಪಿಎಫ್‌ಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳಿಗೆ ಯುನಿವರ್ಸಲ್ ಅಕೌಂಟ್ ನಂಬರ್ ಮಹತ್ವದಾಗಿರುತ್ತದೆ.
ಇಪಿಎಫ್‌ಒ ಮಾರ್ಗಸೂಚಿಗಳ ಪ್ರಕಾರ, ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಯುಎಎನ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಮ್ಮೆ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಯುಎಎನ್‌ನೊಂದಿಗೆ ಲಿಂಕ್ ಮಾಡಿದರೆ, ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಭವಿಷ್ಯ ನಿಧಿ ಖಾತೆಯ ಬಗ್ಗೆ ಎಲ್ಲಾಅಪ್ ಡೇಟ್ಸ್ ಗಳು ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಹೊಸ ಮೆಂಬರ್ ನೀವು ಆಗಿದ್ರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಅದಷ್ಟು ಬೇಗ ಲಿಂಕ್ ಮಾಡಬೇಕಾಗುತ್ತದೆ. ಅಥವಾ ನೀವು ಮೊಬೈಲ್ ಸಂಖ್ಯೆ ಬದಲಾಗಿದ್ದರೂ ಅದನ್ನು ತಕ್ಷಣವೇ ನಿಮ್ಮ EPFO ಪ್ರೊಫೈಲ್‌ನಲ್ಲಿ ಅಪ್ ಡೇಟ್ ಮಾಡುವುದು ಅವಶ್ಯಕ.
ನೆನಪಿಡಿ , EPFಸದಸ್ಯರು EPFO ವೆಬ್‌ಸೈಟ್‌ನಲ್ಲಿ ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಮಾತ್ರ ನೋಂದಾಯಿಸಿಕೊಳ್ಳಬೇಕು. ಇಪಿಎಫ್ ನಲ್ಲಿ ಯುಎಎನ್ ಜೊತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಹೇಗೆ ಎಂದು ಈ ಕೆಳಗೆ ನಾವು ವಿವರಿಸಿದ್ದೇವೆ.
ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು ಹೇಗೆ?
ಹಂತ 1: ಮೊದಲಿಗೆ, ನೀವು EPFO ಅಧಿಕೃತ ವೆಬ್‌ಸೈಟ್ https://www.epfindia.gov.in/site_en/index.php ಗೆ ಭೇಟಿ ನೀಡಿ.
ಹಂತ 2: ಈ ವೆಬ್ ಸೈಟ್ ತೆರೆದು ಹೋಮ್‌ಪೇಜ್‌ನಲ್ಲಿ , 'For Employees' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ
ಹಂತ 3: ಬಳಿಕ ಲಾಗಿನ್ ಪೇಜ್ ಅನ್ನು ತೆರೆಯಲು 'Member UAN/Online services' ಆಯ್ಕೆಮಾಡಿ.
ಹಂತ 4: ನಂತರ ನೀವು ಲಾಗಿನ್ ಆಗಲು ನಿಮ್ಮ ಯುಎಎನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಒಟಿಪಿ ಅನ್ನು ನಮೂದಿಸಬೇಕಾಗುತ್ತದೆ.
ಹಂತ 5: ಇದರ ನಂತರ, 'Contact details' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 6: ಬಳಿಕ, ನೀವು "verify option" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಮತ್ತು ಇದಾದ ನಂತರ ಇಲ್ಲಿ ನೀವು ಮೊಬೈಲ್ ಸಂಖ್ಯೆ ಬದಲಾಯಿಸಿ/ ನಮೂದಿಸಿ
ಹಂತ 7: ನಂತರ, ನೀವು ನಿಮ್ಮ ಆಧಾರ್-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು 'Get OTP' ಕ್ಲಿಕ್ ಮಾಡಿ. ಒಟಿಪಿ ನಮೂದಿಸಿ Submit ಕ್ಲಿಕ್ ಮಾಡಿದರೆ, ಪ್ರಕ್ರಿಯೆ ಕೊನೆಯಾಗುತ್ತದೆ.


Click it and Unblock the Notifications